ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣದೆಡೆಗಿನ ಹೆಜ್ಜೆಗಳು -3

ಇಂಗ್ಲೀಷ್ : ಡೊಗ್ಲಸ್ ಕೆಲ್ನರ್ ಅನುವಾದ : ಬಿ.ಶ್ರೀಪಾದ ಭಟ್

ಹೆಗೆಲಿಯನ್ – ಮಾಕ್ರ್ಸಿಸಂನ ವಿಮರ್ಶಾತ್ಮಕ ಸಿದ್ಧಾಂತಗಳ ಕೆಲವು ತಾತ್ಪರ್ಯಗಳು ವಿಪರೀತ ಏಕಾಧಿಪತ್ಯದ, ಸರಳೀಕೃತಗೊಂಡ, ಅಂತಿಮಕಾರಣ ಸಿದ್ದಾಂತಗಳು ಮತ್ತು ಐಡಿಯಾಲಜಿಗಳ ಸ್ವರೂಪದಲ್ಲಿರುವುದು ನಿಜ. ಆದರೆ ಹೆಗೆಲಿಯನ್/ ಮಾಕ್ರ್ಸಿಸಂ/ ರಾಚನಿಕೋತ್ತರವಾದದ ಆಧುನಿಕ ತತ್ವಗಳ ನಡುವೆ ನಿಖರವಾದ ಅನುಸಂಧಾನ ನಡೆಸುವುದರ ಮೂಲಕವೂ ಮತ್ತು ಗತಕಾಲದ ಕಲಿಕೆಯರಿಮೆ ಮತ್ತು ಶಿಕ್ಷಣದ ಫಿಲಾಸಫಿಗಳನ್ನು ಪ್ರಶ್ನಿಸುವ ಆಧುನಿಕೋತ್ತರವಾದವನ್ನು ವಿಶ್ಲೇಷಿಸುವುದರ ಮೂಲಕವೂ ಈ ಕೊರತೆಗಳನ್ನು ನಿವಾರಿಸಿಕೊಳ್ಳಬಹುದು. ಅದೂ ಅಲ್ಲದೆ ಶಿಕ್ಷಣವನ್ನು ಪುನರಚಿಸಿ ಸಮಾನತೆ ಸಾಧಿಸಲು ಆಧುನಿಕ ಮತ್ತು ಆಧುನಿಕೋತ್ರರದ ದೃಷ್ಟಿಕೋನವನ್ನು, ಸಿದ್ಧಾಂತ ಮತ್ತು ಆಚರಣೆಯನ್ನು ಪರಸ್ಪರ ಬೆರೆಸಬೇಕಿದೆ. ನಾನು ಈ ಪ್ರಬಂಧದಲ್ಲಿ ಇದನ್ನೇ ಪ್ರಯತ್ನಿಸಿದ್ದೇನೆ.

ವಿಮರ್ಶಾತ್ಮಕ ಸಿದ್ಧಾಂತವು ಅಂತರಶಿಸ್ತೀಯ, ಅಕಡೆಮಿಕ್ ಶಿಸ್ತಿನ ವಿಮರ್ಶೆ ಮತ್ತು ವರ್ಗೀಕರಣವನ್ನು ಒಳಗೊಂಡ ಪಠ್ಯವಾಗಿದ್ದು ಅದು ಸಮಕಾಲೀನ ಸಮಾಜದ ಮೇಲೆ ವಿಭಿನ್ನ ಕ್ಷೇತ್ರಗಳಿಗೆ ಸೇರಿದ ದ್ರವ್ಯವನ್ನು ಜೋಡಿಸಿ ಬಹುಮುಖೀ ದೃಷ್ಟಿಕೋನಗಳ ನೋಟವನ್ನು ನೇಯುತ್ತದೆ. ವಿಮರ್ಶಾತ್ಮಕ ಸಿದ್ಧಾಂತವು ಗಡಿಯನ್ನು ದಾಟುವ ಮತ್ತು ಮಧ್ಯಸ್ಥಿಕೆ ವಹಿಸುವ ಆ ಮೂಲಕ ಸಾಮಾಜಿಕ ಬದುಕಿನ ವಿವಿಧ ಆಯಾಮಗಳನ್ನು ಒಟ್ಟುಗೂಡಿಸುವ ವಿಸ್ತಾರವಾದ ಐತಿಹಾಸಿಕ ಚಿಂತನೆಯಾಗಿದೆ. ಅದರ meta-theory ಯು ಅಂತಶುದ್ದಿಯುಳ್ಳ ಶಿಕ್ಷಣವನ್ನು ಒಳಗೊಂಡಿದ್ದು ವಸ್ತುವನ್ನು ಶಿಸ್ತುಬದ್ಧ ಜ್ಞಾನವನ್ನಾಗಿ ಪ್ರತ್ಯೇಕಿಸದೆಯೇ ಇಂದಿನ ಯುಗದ ಜನಪ್ರಿಯ ಬಳಕೆಗಳಾದ ಅನೇಕ ವಿವಿಧ ವಸ್ತುಸಂಬಂದಿತ ವಿಷಯವನ್ನು ಪರಸ್ಪರ ಹತ್ತಿರಕ್ಕೆ ತರುತ್ತದೆ.

ಸಮಕಾಲೀನ ಜಗತ್ತಿನಲ್ಲಿ ಶಿಕ್ಷಣದ ಪುನರಚನೆ ಮತ್ತು ಪುನರಾಲೋಚನೆಗಳಿಗೆ ಅವಶ್ಯಕವಾದ ಮಹತ್ವದ ಆಯಾಮಗಳು ಪ್ರಮುಖ ಬದಲಾವಣೆಯ ಸಾಧನಗಳೆಂದು ನನ್ನ ಅಭಿಪ್ರಾಯಗಳನ್ನು ಹೇಳಿದ್ದೇನೆ.
1) ಬದಲಾಗುತ್ತಿರುವ ದಿನನಿತ್ಯ ಬದುಕಿನ ಪರಿಸ್ಥಿತಿಯನ್ನು, ವ್ಯಕ್ತಿನಿಷ್ಠತೆಯನ್ನು, ತರುಣ ಪೀಳಿಗೆಯ ಐಡೆಂಟಿಟಿಯನ್ನು ಸ್ಪಷ್ಟಗೊಳಿಸಿಕೊಳ್ಳುವುದು
2) ವೇಗವಾಗಿ ಬೇಳೆಯುತ್ತಿರುವ, ಪ್ರಭಾವಶಾಲಿ ತಂತ್ರಜ್ಞಾನಗಳಿಗೆ, ಜಾಗತೀಕರಣದ ಸವಾಲುಗಳಿಗೆ ಬಹುಮುಖೀ ಸಾಹಿತ್ಯವು ಸೂಕ್ತವಾಗಿ ಪ್ರತಿಸ್ಪಂದಿಸುವಂತೆ ವಿಕಾಸಗೊಳಿಸುವುದು
3) ಮೇಲಿನ ವಿಶ್ಲೇಷಣೆಗಳ ಆಧಾರದ ಮೇಲೆ ಶಿಕ್ಷಣದಲ್ಲಿ ತೀವ್ರ ಸುಧಾರಣವಾದದ, ಪ್ರಜಾತಾಂತ್ರಿಕವಾದ ಪುನರಚನೆಯನ್ನು ಶಿಫಾರಸ್ಸು ಮಾಡುತ್ತಿದ್ದೇನೆ

ಬದಲಾಗುತ್ತಿರುವ ಬದುಕಿನ ನಿಯಮಗಳು, ವ್ಯಕ್ತಿನಿಷ್ಠತೆಗಳು ಮತ್ತು ಐಡೆಂಟಿಟಿಗಳು

ಪ್ರಸ್ತುತ ಆರ್ಥಿಕ, ಸಾಮಾಜಿಕ, ಸಾಂಸ್ಕøತಿಕ ವ್ಯವಸ್ಥೆಯಲ್ಲಿ ಇಂದಿನ ಶಿಕ್ಷಣ ಪದ್ಧತಿ, ಪಠ್ಯಕ್ರಮಗಳು, ಕಲಿಕೆಯರಿಮೆಯು “ಅಪಾಯಕಾರಿ ತಳಿಗಳನ್ನು” ಉತ್ಪಾದಿಸುವಂತೆಯೇ ರೂಪಿಗೊಂಡಿವೆ ಎಂದು ಲೂಕ್ ಮತ್ತು ಲೂಕ್ (2001) ವಾದಿಸಿದರು. ಸದಾ ಗೊಣಗಾಟ, ಧಾವಂತದಲ್ಲಿರುವ ಕೆಲಸಗಾರರು ಮಾತ್ರ ರೂಪಿತಗೊಳ್ಳುವಂತೆ ಆಧುನಿಕ ಶಿಕ್ಷಣವನ್ನು ಕಟ್ಟಲಾಗಿದೆ. ಈ ಕೆಲಸಗಾರರು ಮುದ್ರಿತ ಪಠ್ಯವನ್ನು, ಸಾಹಿತ್ಯವನ್ನು ಮಾತ್ರ ಓದಿಕೊಂಡು ಅದರ ಮೂಲಕ ಗಳಿಸಿದ ಕೌಶಲ್ಯ ಮತ್ತು ಶಿಸ್ತನ್ನು ಬಳಸಿಕೊಂಡು ಆಧುನಿಕ ಕಾರ್ಪೋರೇಟ್‍ನ ನವಉದಾರೀಕರಣದ ಆರ್ಥಿಕನೀತಿಯ ಮೂಲಭೂತ ತತ್ವಗಳಾದ ಓರಣ ತಪ್ಪಿದ, ಮುಚ್ಚುಮರೆಯಿಲ್ಲದ ಆಚರಣೆಗಳಿಗೆ ಅನುಗುಣವಾಗಿಯೇ ಕೆಲಸ ಮಾಡುವಂತೆ ತಯಾರಾಗಿರುತ್ತಾರೆ. ಇವರ ಜೀವನದ ಗ್ರಾಫ್ ಸದಾ ಸುಸ್ಥಿರಾವಸ್ಥೆಯಲ್ಲಿರುತ್ತದೆ. ಸ್ಥಿರವಾದ ಐಡೆಂಟಿಟಿಗಳನ್ನು ತಂದುಕೊಟ್ಟಿರುತ್ತದೆ.

ಆದರೆ ಮುಕ್ತ ಜಾಗತಿಕರಣದ ಆರ್ಥಿಕನೀತಿಯ ಸಂದರ್ಭದಲ್ಲಿ ಶಾಲೆಗೆ ಬರುವ ವಿದ್ಯಾರ್ಥಿಗಳನ್ನು ವರ್ಷಗಳ ಕಾಲ ಕಂಪ್ಯೂಟರ್, ಟಿವಿ, ವಿವಿಧ ಬಗೆಯ ಸಂಗೀತ ತಂತ್ರಜ್ಞಾನ, ಹೊಸತನದ ಮಲ್ಟಿಮೀಡಿಯ ಮತ್ತು ಸೈಬರ್ ಕೆಫೆಗಳು ಮತ್ತು ವಿಡಿಯೋ ಆಟಗಳ ಮೂಲಕ ರೂಪಿಸಲಾಗುತ್ತದೆ. ಅದೂ ಅಲ್ಲದೆ ಶಿಸ್ತುಬದ್ಧ ಮತ್ತು ಉತ್ತಮ ಕಲಿಕೆಯನ್ನುಳ ಹಿಂದಿನ ತಲೆಮಾರಿನವರಿಗೆ ಸುಲುಭವಾಗಿ ಲಭಿಸುತ್ತಿದ್ದ್ದ ಸ್ಥಿರವಾದ ಉದ್ಯೋಗಗಳು ಇಂದು ಕಣ್ಮರೆಯಾಗುತ್ತಿವೆ, ಬದಲಾಗಿ ಹೈಟೆಕ್ ವಲಯಗಳಲ್ಲಿ ದೈತ್ಯ ಆವೇಶದ, ಮನೋವೈಕಲ್ಯದ ಬೂಮ್‍ಗಳ, ಪ್ರತಿಮೆಗಳ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಜಾಗತಿಕ ಸಮಾಜ ಮತ್ತು ಹೈಟೆಕ್ ಸಮಾಜದಲ್ಲಿ ಮತ್ತಷ್ಟು ಸಂಕೀರ್ಣಗೊಂಡ, ನಾಜೂಕಾದ, ನಾಟಕೀಯ ಅಡಚಣೆಗಳ ಬದುಕು ರೂಪುಗೊಳ್ಳುತ್ತಿದೆ.

ಈ ಪ್ರಕಾರವಾಗಿ ತರುಣ ಪೀಳಿಗೆಯ ವಿದ್ಯಾಭ್ಯಾಸ ಮತ್ತು ಜೀವನದ ಅನುಭವ ವiತ್ತು ಇಂದಿನ ಸಂಸ್ಕøತಿ ಮತ್ತು ಹೈಬ್ರಿಡ್ ಗುಣದ ಜಾಗತೀಕರಣದ ಆರ್ಥಿಕ ಪದ್ಧತಿಯಲ್ಲಿ ಹುಟ್ಟಿಕೊಂಡ ಹೊಸ ಡಿಜಿಟಲ್, ಮಲ್ಟಿಮೀಡಿಯ ಸಂಸ್ಕøತಿಗೆ ವಿರೋಧಾಭಾಸವಾಗಿ ವ್ಯವಸ್ಥಿತವಾದ ಆರ್ಥಿಕ ನೀತಿಯಡಿ ಬೆಳೆದುಬಂದ ಹಳೆ ತಲೆಮಾರಿನ ನಡುವೆ ಮೂಲಭೂತ ಕಂದಕವೇ ಏರ್ಪಟ್ಟಿದೆ. ಮೇಲಿನ ಮುರಿಯುವಿಕೆ, ಛಿದ್ರಗೊಳ್ಳುವಿಕೆಯನ್ನು ಸಿದ್ಧಾಂತೀಕರಣಗೊಳಿಸಿ ಸಾಂಸ್ಕøತಿಕ ಬಂಡವಾಳವನ್ನು ಒಟ್ಟುಗೂಡಿಸಿಕೊಂಡ ಆಧುನಿಕೋತ್ತರವಾದಿಗಳು ವಿದ್ಯಾಭ್ಯಾಸದ ಪದ್ಧತಿಗಳನ್ನು ಮರಳಿ ಪುನರಚಿಸುವದರ ಕುರಿತಾಗಿ ಕೆಲವು ಸಕರಾತ್ಮಕ (ಆದಾಗ್ಯೂ ಶಾಲೆಗಳಲ್ಲಿನ ಲೈಬ್ರೆರಿಯಲ್ಲಿ ಹೊಸ ಆರ್ಥಿಕನೀತಿಯಲ್ಲಿ ವ್ಯಕ್ತಿಯಾಗಿ ಹೇಗೆ ಗೆಲ್ಲಬೇಕು ಎನ್ನುವ ಕಿಮ್ಮತ್ತಿಲ್ಲದ ಪುಸ್ತಕಗಳನ್ನು ಪೇರಿಸಿಟ್ಟಿದ್ದರೂ ಸಹ) ಸಲಹೆಗಳನ್ನು ನೀಡಿದ್ದಾರೆ. ವಾಸ್ತವವಾಗಿ ಇಂದಿನ ಬಿಕ್ಕಟ್ಟಿನ ಸಂದರ್ಭದಲ್ಲಿ ನವ ಉದಾರೀಕರಣದ ವ್ಯಾಪಾರದ ಮಾದರಿಗಳನ್ನೊಳಗೊಂಡ ಶಿಕ್ಷಣವನ್ನು ಬೆಂಬಲಿಸುವವರು ಸಹಜವಾಗಿಯೇ ಇಂದಿನ ತಂತ್ರಜ್ಞಾನದ ಕ್ರಾಂತಿಯನ್ನು ಪ್ರತಿಪಾದಿಸುತ್ತ ಇದನ್ನೇ ಬಳಸಿಕೊಂಡು ಇಂದಿನ ಶಿಕ್ಷಣದಲ್ಲಿನ ಬಿಕ್ಕಟ್ಟು ಮತ್ತು ತೊಂದರೆಗಳಿಗೆ ತಂತ್ರಜ್ಞಾನವನ್ನು ಸಕಲರೋಗ ನಿವಾರಕ ಔಷಧ ಎನ್ನುವಂತೆ ಅದನ್ನು ನ್ಯಾಯಬದ್ಧÀಗೊಳಿಸುತ್ತ ಈ ಕಾರ್ಪೋರೇಟ್ ತಂತ್ರಜ್ಞಾನ ಮತ್ತು ಅದರ ವ್ಯವಹಾರದ ಮಾದರಿಗಳೇ ಶಿಕ್ಷಣದಲ್ಲಿನ ಸಮಸ್ಯೆಗಳಿಗೆ ಪರಿಹಾರಗಳೆಂದು ಪ್ರತಿಪಾದಿಸಿದರು

ಈ ತಂತ್ರಜ್ಞಾನದ ಕ್ರಾಂತಿ ಮತ್ತು ಜಾಗತೀಕರಣದ ಕಾಲದಲ್ಲಿ ಶಿಕ್ಷಣದ ನೀತಿಯನ್ನು ಪುನರಚಿಸುವ ಪ್ರಕ್ರಿಯೆಗೆ ಬದಲಾಗುತ್ತಿರುವ ಜೀವನ ಸ್ಥಿತಿಗತಿಗಳು, ಅನುಭವಗಳು ಮತ್ತು ವ್ಯಕ್ತಿಗತ ಲಹರಿಯ ಹಿನ್ನಲೆಯ ಕಾರಣಗಳು ಪರಿಣಾಮ ಬೀರುತ್ತವೆ ಮತ್ತು ಇದು ಶಿಕ್ಷಣದಲ್ಲಿ ಸಮಾನತೆಯನ್ನು ಸಾಧಿಸಲು ನಮಗೆ ಎದುರಾಗುವ ಮುಖ್ಯ ಸವಾಲುಗಳು. ನವ ಉದಾರೀಕರಣ ಮತ್ತು ಬಂಡವಾಳಶಾಹಿಯ ಕಾರ್ಯಸೂಚಿಗಳನ್ನು ಬೆಂಬಲಿಸದೆ ಹಾಲಿ ತಂತ್ರಜ್ಞಾನವನ್ನು ಬಳಸಿಕೊಂಡು ಸಮಾನತೆಯ ಪರಿಕಲ್ಪನೆಯ ಅಡಿಯಲ್ಲಿ ಶಿಕ್ಷಣವನ್ನು ಪುನರಚಿಸಿ ಪ್ರಗತಿಪರವಾದ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳಿಗೆ ಉತ್ತೇಜನ ಕೊಡಬೇಕು. ಈಗಿನ ಶಾಲಾ ವ್ಯವಸ್ಥೆಯನ್ನು ತೀವ್ರವಾದ ವಿಮರ್ಶೆಗೊಳಪಡಿಸುವುದರ ಮೂಲಕ ಗಳಿಸಿದ ಜ್ಞಾನದ ಮೇಲೆ ಮತ್ತು ಎಪ್ಪತ್ತರ ದಶಕದ ಪ್ರಮುಖ ಶಿಕ್ಷಣ ತಜ್ಞ ಇವಾನ್ ಇಲ್ಲಿಚ್ ಅವರ ಚಿಂತನೆಗಳನ್ನು ಪ್ರಸ್ತುತ ಸಂದರ್ಭದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಈ ಕಾರ್ಯಬಾರವನ್ನು ಕೈಗೆತ್ತಿಕೊಳ್ಳಬೇಕು (ಇಲಿಚ್ ಅವರ ವಿಮರ್ಶಾತ್ಮಕ ಕೆಲಸಗಳು ನಮ್ಮ ನೋಟಗಳಿಂದ ಇಂದು ಮರೆಯಾಗಿದ್ದರೂ ಸಹ)

ಇವಾನ್ ಇಲ್ಲಿಚ್ ಅವರ ಕೈಗಾರಿಕೋತ್ತರ ಮಾದರಿಯ ಶಿಕ್ಷಣದ ಪ್ರಕಾರ “ಆಸ್ತಿತ್ವದಲ್ಲಿರುವ ವಿದ್ಯಬ್ಯಾಸ ಪದ್ಧತಿಗೆ ಪರ್ಯಾಯವಾಗಿ ಕಲಿಕೆಯ ಹೆಣಿಗೆ, ಕಲಿಕೆಯನ್ನು ಸಂಭ್ರಮಿಸಲು ಅಗತ್ಯವಾದ ಹತಾರಗಳು, ಕಲಿಕೆಯನ್ನು, ಪ್ರಜಾಪ್ರಭುತ್ವ, ಸಾಮಾಜಿಕ ಬದುಕನ್ನು ಉತ್ತೇಜಿಸಲು ಶಿಕ್ಷಣವನ್ನು ಕ್ರಿಯಾತ್ಮಕವಾಗಿ, ಗುಣಾತ್ಮಕವಾಗಿ ಪುನರಚಿಸಿವುದನ್ನು” ಒಳಗೊಂಡಿದೆ. ಇಲಿಚ್ “ಆಧುನಿಕ ವಿದ್ಯಬ್ಯಾಸದ ಮಾದರಿಗಳು ಹೇಗೆ ವಿದ್ಯಾರ್ಥಿಗಳನ್ನು ಆಧುನಿಕ ಕೈಗಾರಿಕಾ ವ್ಯವಸ್ಥೆಗೆ ಅನುಗುಣವಾಗಿ ರೂಪಿಸುತ್ತದೆ ಮತ್ತು ಅದರ ಗುಪ್ತ ವ್ಯಾಸಂಗಕ್ರಮಗಳು ಮತ್ತು ಪಠ್ಯಕ್ರಮಗಳು ಬ್ಯೂರೋಕ್ರಸಿಯನ್ನು, ಅನುರೂಪತೆಯನ್ನು, ಶ್ರೇಣೀಕೃತ ವ್ಯವಸ್ಥೆಯನ್ನು, ಮತ್ತು ಸದ್ಯಕ್ಕೆ ಚಲಾವಣೆಯಲ್ಲಿರುವ ಇತರೆ ಸಾಮಾಜಿಕ ಚಹರೆಗಳನ್ನು ಪ್ರೋತ್ಸಾಹಿಸುತ್ತದೆ” ಎಂದು ವಿಶ್ಲೇಷಿಸುತ್ತಾನೆ. ಇಲ್ಲಿಚ್‍ನ ಪ್ರಕಾರ ಆಧುನಿಕ ವಿದ್ಯಬ್ಯಾಸ ವ್ಯವಸ್ಥೆಯು ಕೈಗಾರಿಕೋತ್ತರ ಪರಿಸ್ಥಿತಿಗೆ ಸೂಕ್ತವಾದ ಮಾದರಿ ಅಲ್ಲವೇ ಅಲ್ಲ ಬದಲಾಗಿ ಹೊಸ ನೋಟಗಳ ಕಲಿಕೆಯರಿಮೆಯ, ಕ್ರಾಂತಿಕಾರಿ ಶಿಕ್ಷಣದ ಪುನನಿರ್ಮಾಣದ ಅವಶ್ಯಕತೆ ಇದೆ.

ಇಲ್ಲಿಚ್‍ರವರ “ಕಲಿಕೆಯ ಹೆಣಿಗೆಗಳು (1971) ಮತ್ತು “ಕಲಿಕೆಯ ಸಂಬ್ರಮಕ್ಕೆ ಹತಾರಗಳು (1973) ಅಂತರ್ಜಾಲವು ಸಂಪನ್ಮೂಲಗಳು ಮತ್ತು ಪರಸ್ಪರ ಚರ್ಚೆಗಳು ಮತ್ತು ಸಮುದಾಯಗಳು ಶಿಕ್ಷಣವನ್ನು ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತವೆ ಎಂದು ನಿರೀಕ್ಷಿಸುತ್ತವೆ. ಇಲ್ಲಿಚ್‍ನ ಪ್ರಕಾರ ವಿಜ್ಞಾನ ಮತ್ತು ತಂತ್ರಜ್ಞಾನವು ಪ್ರಭತ್ವದ ಪ್ರಾಬಲ್ಯಕ್ಕೆ ಸಾಧನಗಳಾಗಿ ಬಳಕೆಯಾಗುತ್ತವೆ ಅಥವಾ ಪ್ರಗತಿಪರ ಮಾದರಿಗಳನ್ನು ತಲುಪಲು ಬಳಕೆಯಾಗುತ್ತವೆ. ಹೀಗಾಗಿಯೇ ದೊಡ್ಡದಾದÀ ಕಂಪ್ಯೂಟರ್‍ಗಳು ಆಧುನಿಕ ಬ್ಯೂರೋಕ್ರಸಿ ಮತ್ತು ಉದ್ಯಮಗಳಿಗೆ ಉತ್ತೇಜನ ನೀಡುತ್ತವೆ. ಇಲ್ಲಿಚ್‍ರಂತಹ ಚಿಂತಕರಿಗೆ ಜಾಲತಾಣಗಳು ಸಮತೋಲನದ ಕಲಿಕೆಯಲ್ಲಿ ಯಾವ ಬಗೆಯಲ್ಲಿ ಹೊಂದಿಕೆಯಾಗುತ್ತವೆ ಎನ್ನುವ ಆಧಾರದ ಮೇಲೆ ಕಂಪ್ಯೂಟರ್ ತಂತ್ರಜ್ಞಾನವು ಶಿಕ್ಷಣವನ್ನು ವರ್ಧಿಸುತ್ತದೆ ಇಲ್ಲವೇ ಅವುಗಳನ್ನು ನಾಶಪಡಿಸುತ್ತದೆ ಎಂದು ಚೆನ್ನಾಗಿ ಅರಿವಾಗಿತ್ತು.

ಇಲ್ಲಿಚ್‍ಗೆ ‘ಕಲಿಕೆಯ ಸಂಬ್ರಮಕ್ಕೆ ಹತಾರಗಳು’ ಸೂಕ್ತವಾದ, ಸಮರಸವಾದ ಕಲಿಕೆ ಹಾಗು ಸಮಾಜ ಮತ್ತು ಸಮುದಾಯವನ್ನು ಪ್ರೋತ್ಸಾಹಿಸುತ್ತವೆ, ಸರ್ವಾಧಿಕಾರ ಧೋರಣೆಗಳನ್ನು, ವ್ಯಕ್ತಿಯೊಬ್ಬ ತಂತ್ರಜ್ಞಾನದ ನಿಂತ್ರಣಕ್ಕೆ ಒಳಪಡುವುದನ್ನು ಕೊನೆಗಾಣಿಸುತ್ತವೆ ಎಂದು ನಂಬಿಕೆ ಇತ್ತು. ‘ಕಲಿಕೆಯ ಸಂಬ್ರಮಕ್ಕೆ ಹತಾರಗಳು’ ಪ್ರಜಾಪ್ರಭುತ್ವವಾದಿ, ಸ್ನೇಹಪರ ಸಮಾಜವನ್ನು ನಿರ್ಮಾಣ ಮಾಡುತ್ತವೆ, ಈ ಸ್ನೇಹಪರ ಸಮಾಜದಲ್ಲಿ ವ್ಯಕ್ತಿಯು ಸಾಮಾಜಿಕ, ರಾಜಕೀಯ ವ್ಯವಸ್ಥೆಯಲ್ಲಿ ಸಂವಾದ ನಡೆಸುತ್ತಾನೆ ಮತ್ತು ಅದರ ಸಹಭಾಗಿಯಾಗುತ್ತಾನೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವದರಲ್ಲಿ ಸಹಾಯ ಮಾಡುತ್ತಾನೆ. ಇದು ಪರಾವಲಂಬನೆಯಿಂದ ವ್ಯಕ್ತಿಯನ್ನು ಬಿಡುಗಡೆಗೊಳಿಸುತ್ತದೆ ಮತ್ತು ವ್ಯಕ್ತಿ ಸ್ವಾವಲಂಬನೆಯನ್ನು ಮೈಗೂಡಿಸಿಕೊಳ್ಳುತ್ತಾನೆ. ಇಲ್ಲಿಚ್‍ನ ಪ್ರಕಾರ ‘ಕಲಿಕೆಯ ಸಂಬ್ರಮವು’ ವ್ಯಕ್ತಿಗಳ ನಡುವೆ ಕ್ರಿಯಾತ್ಮಕವಾದ ಸಂಪರ್ಕವನ್ನು ಒಳಗೊಂಡಿರುತ್ತದೆ. “ಅಸ್ತಿತ್ವ, ನ್ಯಾಯ,”ದ ಮೌಲ್ಯಗಳನ್ನು ಬಳಸಿಕೊಂಡು ಪರ್ಯಾಯವನ್ನು ಕಟ್ಟಬಹುದು ಎಂದು ಇಲಿಚ್ ಹೇಳುತ್ತಾನೆ

ಇವರ ಗುರಿಯು ಕೈಗಾರಿಕ ನಾಗರೀಕತೆಯನ್ನು ವಿಮರ್ಶಾತ್ಮಕವಾಗಿ ನೋಡುತ್ತಲೇ ಕೈಗಾರಿಕೋತ್ತರ ಸಂಸ್ಥೆಗಳಾದ ಕಲಿಕೆ, ಪ್ರಜಾತಾಂತ್ರಿಕ ಮತ್ತು ಸಾಮಾಜಿಕ ನ್ಯಾಯವನ್ನು ಒಳನೋಟಗಳ ಮೂಲಕ ಗ್ರಹಿಸುವುದಾಗಿತ್ತು. ಒಂದು ಕಾಲದಲ್ಲಿ ಪ್ರತಿಯೊಬ್ಬರೂ ಶಾಲೆಗಳನ್ನು ಸ್ವಾಯತ್ತತೆಯ ಅಧಿಕಾರ ಕೇಂದ್ರಗಳನ್ನಾಗಿಯೂ, ಎಲ್ಲಾ ಕಟ್ಟುಪಾಡುಗಳಿಂದ ಸಂಪೂರ್ಣ ಮುಕ್ತಿಯ ಕೇಂದ್ರಗಳನ್ನಾಗಿಯೂ ಕಲ್ಪಿಸುತ್ತಾ ಈ ಮಾದರಿಗಳನ್ನು ಬಹುವಾಗಿ ಆದರಿಸುತ್ತಿದ್ದಂತ ಸಂದರ್ಭದಲ್ಲಿ ಇಲ್ಲಿಚ್ ಅವರು ಶಾಲೆಗಳು ಕೈಗಾರಿಕಾ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿಯೇ ರೂಪುಗೊಳ್ಳಬೇಕೆಂದು ಆಶಿಸಿದ್ದರು. ಮತ್ತು ಇದು ತನ್ನ ಸಾಮಾಜಿಕ ಪುನರುತ್ಪತ್ತಿಗೆ ಅತ್ಯಂತ ಮಹತ್ವವಾದದ್ದು ಎಂದು ಪ್ರತಿಪಾದಿಸಿದರು. ಆಧುನಿಕ ಕೈಗಾರಿಕ ಸಂಸ್ಥೆಗಳಾದ ವಿದ್ಯಾಬ್ಯಾಸ, ಉತ್ಪಾದನೆ, ವೈದ್ಯಕೀಯü, ಸಾಕಾಣಿಕೆ, ಪರಿಸರ ಮತ್ತು ಇನ್ನಿತರ ಕೈಗಾರಿಕ ಪ್ರಮುಖ ವಲಯಗಳ ನಡುವೆ ಪರಸ್ಪರ ಅಂತರಸಂಬಂಧ ಕಲ್ಪಿಸಿದ್ದು ಇಲ್ಲಿಚ್‍ರವರ ಪ್ರಮುಖ ಕೊಡುಗೆಯಾಗಿದೆ. ವಿದ್ಯಾಬ್ಯಾಸ ನೀಡುವಂತಹ ಸಂಸ್ಥೆಗಳು ತಮ್ಮ ಚೌಕಟ್ಟಿನೊಳಗೆ ಇರುವಂತಹ ಗುಪ್ತ ವ್ಯಾಸಂಗ ಕ್ರಮಗಳು ಮತ್ತು ಸಾಮಾಜಿಕ ಪುನರುತ್ಪತ್ತಿಯೊಂದಿಗೆ ಹೇಗೆ ಪಾಲ್ಗೊಳ್ಳುತ್ತವೆ ಎಂದು ಅರಿಯಲು ನಮ್ಮೊಳಗೆ ಒಂದು ನಿರ್ದಿಷ್ಟವಾದ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು

ಸಂಸ್ಥೆಗಳ ಭೌತಿಕ ಪರಿಸರದಾಚೆ ಶಿಕ್ಷಣದ ಕುರಿತಾಗಿ ಅರ್ಥ ಮಾಡಿಕೊಳ್ಳಲು ಮಾಧ್ಯಮ ಮತ್ತು ಬೀದಿಯ ಸಾರ್ವಜನಿಕ ಕಲಿಕೆಯರಿಮೆಯೊಂದಿಗೆ ಡಯಲೆಕ್ಟಿಕ್ ಸಂಬಂಧ ಹೊಂದಿರುವ ವಿದ್ಯಾಬ್ಯಾಸವನ್ನೂ ಸಹ ಗ್ರಹಿಸಬೇಕಾಗಿದೆ. ವಿದ್ಯಾಬ್ಯಾಸವು ಆಸ್ತಿತ್ವದಲ್ಲಿರುವ ಸಾಮಾಜಿಕ ಕಟ್ಟಳೆಗಳನ್ನು ಪುನರುತ್ಪತ್ತಿಸುತ್ತದೆ ಎಂದು ಇಲಿಚ್ ಗಟ್ಟಿಯಾದ ವಿಶ್ಲೇಷಣೆಗಳನ್ನು, ವಿಮರ್ಶೆಯನ್ನು ನೀಡುತ್ತಾನೆ. ಕೈಗಾರಿಕೋತ್ತರ ಸಮಾಜವು ನಿರ್ದಿಷ್ಟವಾದ ಸಾಮಥ್ರ್ಯವನ್ನು ಬಯಸುತ್ತದೆ ಮತ್ತು ಶಿಕ್ಷಣ ಮತ್ತು ಸಾಮಾಜಿಕ ಬದುಕನ್ನು ಸುಧಾರಣೆಗೊಳಿಸುವ ಈ ಚೈತನ್ಯಮಯವಾದ ತಂತ್ರಜ್ಞಾನಗಳನ್ನು ನಿರ್ಮಿಸುವುದು ಮುಖ್ಯ ಸವಾಲುಗಳಲ್ಲೊಂದಾಗಿದೆ ಎಂದು ಇಲ್ಲಿಚ್ ಹೇಳಿದ್ದರು. ಇಲ್ಲಿಚ್ ನವಉದಾರೀಕರಣದ ಎಲ್ಲಾ ಬಗೆಯ ಕಾರ್ಯಸೂಚಿಗಳನ್ನು ಖಡಾಖಂಡಿತವಾಗಿ ವಿರೋಧಿಸುತ್ತಾ ಮಾಹಿತಿ ತಂತ್ರಜ್ಞಾನ ಮತ್ತು ಅಂತರ್ಜಾಲವನ್ನು ಕಾರ್ಪೋರೇಟ್ ಪ್ರಭಾವ ವಲಯವು ಆಕ್ರಮಿಸಿಕೊಳ್ಳುವುದನ್ನು ಟೀಕಿಸುತ್ತಾರೆ. ವಿಸ್ತರಿಸಿಕೊಳ್ಳುತ್ತಿರುವ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಸಾಮಾಜಿಕ ಪಾತ್ರಗಳಿಗೆ ಬಹುಮುಖಿ ಸಾಕ್ಷರತೆಯ, ಪಠ್ಯದ ಅಗತ್ಯತೆ ಎಷ್ಟಿದೆ ಎನ್ನುವದನ್ನು ಕಲಿಕೆಯ ಹೆಣಿಗೆ, ಕಲಿಕೆಯ ಸಂದರ್ಭದಲ್ಲಿ ಅಗತ್ಯವಾದ ಕಲಿಕೆಯ ಸಂಬ್ರಮದ ಹತಾರಗಳು ಎನ್ನುವ ಈ ಚೌಕಟ್ಟಿನೊಳಗಡೆಯಲ್ಲಿಯೇ ಚರ್ಚಿಸಬೇಕು

ವಿಸ್ತಾರಗೊಳ್ಳುತ್ತಿರುವ ತಂತ್ರಜ್ಞಾನಗಳು, ಬಹುಮುಖಿ ಸಾಕ್ಷರತೆ ಮತ್ತು ಪಠ್ಯಗಳು

ಆಧುನಿಕ ಪಠ್ಯ ಮತ್ತು ಪಠ್ಯಕ್ರಮಗಳನ್ನು ಸಾಮಾಜಿಕ ವಿಜ್ಞಾನ, ಸಾಹಿತ್ಯ, ದೈಹಿಕ ಶಿಕ್ಷಣ ಎಂದು ವಿವಿಧ ವಿಭಾಗಗಳಾಗಿ ಬೇರ್ಪಡಿಸಿ ಇದರ ಆಧಾರದ ಮೇಲೆ ಕಟ್ಟಿದ ಮುದ್ರಿತ ಪಠ್ಯಗಳ ಸಂವಹನೆ ಮತ್ತು ವಿಂಗಡಿಸಲ್ಪಟ್ಟ ಅಕಡೆಮಿಕ್ ಜ್ಞಾನಗಳ ಸುತ್ತಲೂ ವಿದ್ಯಾಬ್ಯಾಸವನ್ನು ಸಂಯೋಜಿಸಲಾಗುತ್ತದೆ. ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಅದರ ಆಡಳಿತ ವರ್ಗ ವಿದ್ಯಾರ್ಥಿಗಳ ಅಕ್ಷರಜ್ಞಾನಕ್ಕೆ ಮತ್ತು ಅದರ ವಿಸ್ತಾರವಾದ ಕಲಿಕೆಗೆ ಹೆಚ್ಚಿನ ಒತ್ತನ್ನು ಕೊಡದೆ ಸಣ್ಣ ವಯಸ್ಸಿನಲ್ಲೇ ಮಕ್ಕಳು ಅತ್ಯುತ್ತಮ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕೆಂದು ಬಯಸುತ್ತಾರೆÉಂದು ಲೂಕ್ & ಲೂಕ್ ಅಭಿಪ್ರಾಯಪಡುತ್ತಾರೆ(2002). ಇವರ ಪ್ರಕಾರ ಇದು ದುರುದ್ದೇಶಪೂರಿತವಾದದ್ದು. ಏಕೆಂದರೆ ಈ ಶಾಲೆಗಳ ಆಡಳಿತ ಮಂಡಳಿಗಳು ವೇಗವಾಗಿ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ತಂತ್ರಜ್ಞಾನದ ಸಂದರ್ಭದಲ್ಲಿ ಬದಲಾಗುತ್ತಿರು ವ್ಯಕ್ತಿಗತ ಚಹರೆಗಳು, ಸಾಂಸ್ಕøತಿಕ ಸ್ವರೂಪಗಳನ್ನು, ಬಹುಮುಖಿ ಶಿಕ್ಷಣದ ಅಭ್ಯಾಸ, ಅಳ್ಳಕವಾದ ವಿಷಯಗಳು, ಹರಿತವಾದ ಕೌಶಲ್ಯಗಳನ್ನೊಳಗೊಂಡಂತಹ ಹೆಣಿಕೆಗಳ ಸಮಾಜದ ಸಂಸ್ಕøತಿಯನ್ನು ಅರ್ಥೈಸಲು ಸೋಲುತ್ತಾರೆ.

ಇಂತಹ ಸಂದರ್ಭದಲ್ಲಿ ಹಿಂದಿನ ಕಾಲದ ಮುದ್ರಣ ಸಾಹಿತ್ಯವು ಮಧ್ಯಪ್ರವೇಶಿಸಿ ಒಂದು ಬಗೆಯ ಸಮತೋಲನ ಸಾಧಿಸುತ್ತಿತ್ತು. ಆದರೆ ಇಂದು ಹೊರಹೊಮ್ಮುತ್ತಿರುವ ಆರ್ಥಿಕ ಮತ್ತು ಸಾಂಸ್ಕ್ರತಿಕ ಬದಲಾವಣೆಗಳೊಂದಿಗೆ ಹೊಂದಾಣಿಕೆ, ಸಂವಾದ ನಡೆಸಲು ಸಮಂಜಸವಾದ ಮತ್ತು ಅವಶ್ಯಕತೆಗೆ ತಕ್ಕಂತ ಪಠ್ಯಗಳನ್ನು ರೂಪಿಸುವಲ್ಲಿ ಈ ತಂತ್ರಗಳು ವಿಫಲಗೊಂಡವು. ಈ ಎಲ್ಲದರೊಂದಿಗೆ ಅನುಸಂಧಾನ ನಡೆಸಲು ವಿದ್ಯಾರ್ಥಿಗಳಿಗೆ ಸೂಕ್ತವಾದ ತರಬೇತು ನೀಡಲು ಸಹ ಅಸಮರ್ಥವಾದವು ಎಂದು ಲೂಕ್ ವಾದಿಸುತ್ತಾರೆ. ಸಂಪ್ರದಾಯವಾದಿ ಫಿಲಾಸಫಿಯನ್ನಾದರಿಸಿದ ಬಾಯಿ ಪಾಠಗಳು, ಪರೀಕ್ಷೆಗಳು ಮತ್ತು ಸಂಖ್ಯಾತ್ಮಕ ಮಾಕ್ರ್ಸಗಳು ದೋಷಪೂರಿತವಾಗಿದ್ದವು ಮತ್ತು ಅಪ್ರಸ್ತುವಾಗಿದ್ದವು ಎಂದು ಹೇಳುತ್ತಾರೆ

ಆಸ್ತಿತ್ವದಲ್ಲಿರುವ ಬಂಡವಾಳಶಾಹಿಗಳ ಸಮಾಜವನ್ನು ಮರಳಿ ಹುಟ್ಟುಹಕುವಂತಹ ಕಲಿಕೆಯರಿಮೆಯನ್ನು ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣವು ತಿರಸ್ಕರಿಸುತ್ತದೆ. ಬದಲಾಗಿ ಮಾಕ್ರ್ಸಿಸಂ, ಡೇವಿಯನ್ ಮತ್ತು ಫ್ರೇರಿಯನ್ ಚಿಂತನೆಗಳ ವಿಮರ್ಶಾತ್ಮಕ ಕಲಿಕೆಯರಿಮೆಯನ್ನು ಪುನರಚಿಸುವುಲ್ಲಿ ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣವು ಹೆಚ್ಚಿನ ಗಮನ ಹರಿಸುತ್ತದೆ ಮತ್ತು ಇಲಿಯಾನ್ ಇಲ್ಲಿಚ್ ಅವರ ಮಾದರಿಯ ಸಮುದಾಯಗಳು ಮತ್ತು ಹತಾರಗಳನ್ನು ಬೆಳೆಸುವ ಆ ಮೂಲಕ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಸರ್ವರಿಗೂ ಸಮರ್ಪಕವಾದ, ಅರ್ಥಪೂರ್ಣವಾದ ಜೀವನಕ್ರಮವನ್ನು ರೂಪಿಸಲು ಪ್ರತಿಪಾದಿಸುತ್ತದೆ.

ಆಚರಣೆಯಲ್ಲಿರುವ, ರೂಢಿಗತ ಶಿಕ್ಷಣವನ್ನು ಬೋಧಿಸುವದರೊಂದಿಗೆ ಬಹು ಸ್ವರೂಪಿಯಾಗಿರುವ ಕಂಪ್ಯೂಟರ್, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಅವಶ್ಯಕತೆಯ ಅಗತ್ಯತೆ ಇದೆ. ಈ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಶಕ್ತಿ, ಸಾಮಥ್ರ್ಯವನ್ನು ಬೆಳೆಸಿಕೊಳ್ಳಲು, ಸಮುದಾಯ ಕಲಿಕೆಯನ್ನು ಕಟ್ಟಲು ಮತ್ತು ಸಮಾಜವನ್ನು ಪ್ರಜತಾಂತ್ರೀಕರಣಗೊಳಿಸಲು ಸಾಧ್ಯವಾಗುತ್ತದೆ. ಆದರೆ ಯಾವ ವಯಸ್ಸಿನಲ್ಲಿ ಮುದ್ರಿತ ಪಠ್ಯಗಳನ್ನು ಕಲಿಯಬೇಕು, ಯಾವ ವಯಸ್ಸಿನಲ್ಲಿ ಕಂಪ್ಯೂಟರ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂಬುದು ಇಂದಿಗೂ ಚರ್ಚೆಯ ವಿಷಯವಾಗಿದೆ.

ಹೆಗೆಲಿಯನ್ ಪರಿಕಲ್ಪನೆಯ ಗೈಸ್ಟ್ ನಲ್ಲಿ ಸಂಸ್ಕøತಿ ಮತ್ತು ಸಮಾಜದ ಮಧ್ಯಸ್ಥಿಕೆಯಲ್ಲಿ ಮತ್ತು ಕೆಲವು ನಿರ್ದಿಷ್ಟ ಐತಿಹಾಸಿಕ ವಿಧಾನಗಳೊಂದಿಗೆ ವಿಷಯವು ಬೆಳೆಯುತ್ತಾ ಹೋಗುತ್ತದೆ. ಇದು ವಿರೋಧಾಭಾಸಗಳೊಂದಿಗೆ ಮುಖಾಮುಖಿಯಾಗುತ್ತ ಅವುಗಳನ್ನು ತಿರಸ್ಕರಿಸುತ್ತಲೇ ಮೀರಬೇಕಾಗುತ್ತದೆ. ಅಪ್ರಸ್ತುತಗೊಂಡ, ಕಠೋರ ಪರಿಸ್ಥಿತಿಗಳನ್ನು ಸಹ ಮೀರಬೇಕಾಗುತ್ತದೆ. ಹೆಗೆಲಿಯನ್ ಡಯಲೆಕ್ಟಿಕ್ ಸಿದ್ಧಾಂತದ ಸಮಕಾಲೀನ ಅವೃತ್ತಿಯಲ್ಲಿ ಅವಲೋಕಿಸಿದಾಗ ಉದಿಸುತ್ತಿರುವ ತಂತ್ರಜ್ಞಾನ ಮತ್ತು ಆಧುನಿಕೋತ್ತರ ಜೀವನದ ಸ್ಥಿತಿಗತಿಗಳು ವಿದ್ಯಬ್ಯಾಸದೊಂದಿಗೆ ಸಂಘರ್ಷಕ್ಕೆ ಬಂದಂತಹ ಹೊಸಬಗೆಯ ಅನುಭವಗಳನ್ನು ಉಂಟು ಮಾಡುತ್ತಿವೆ. ಹೆಗೆಲಿಯನ್ ಸಿದ್ಧಾಂತದ ಆಶಾವಾದದ ಚಿತ್ರಣವೆಂದರೆ ಈ ತಿಕ್ಕಾಟದೊಳಗಿರುವ ಸಕಾರತ್ಮಕ ಗುಣಗಳು ಹಳತಾದ ಅಂಶಗಳನ್ನು ಜೀರ್ಣಿಸಿಕೊಳ್ಳುತ್ತದೆ.

ಇದನ್ನು ಇನ್ನಷ್ಟು ಸ್ಪಷ್ಟಗೊಳಿಸಬೇಕೆಂದರೆ ಒಂದುವೇಳೆ ಮುದ್ರಿತ ಪಠ್ಯಗಳನ್ನ ಆಧರಿಸಿದ ವ್ಯಾಸಂಗಕ್ರಮ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ವ್ಯಕ್ತಿಗತವಾದಗಳು ಹಾಗೂ ಮುಲ್ಟಿಮೀಡಿಯಾದ ಪ್ರವೇಶದ ನಡುವೆ ವೈರುಧ್ಯಗಳು ಉಂಟಾದಾಗ ಈ ವಿರೋಧಾಭಾಸಗಳನ್ನು ಪರಿಹರಿಸಲು ಮತ್ತೊಂದು ನೆಲೆಯನ್ನು ಹುಡುಕಬೇಕಾಗುತ್ತದೆ. ಉದಾಹರಣೆಗೆ ವಿಸ್ತಾರಗೊಳ್ಳುತ್ತಿರುವ ತಂತ್ರಜ್ಞಾನ ಮತ್ತು ಸಾಮಾಜಿಕ ಮತ್ತು ಸಾಂಸ್ಕøತಿಕ ಗೊತ್ತುಪಾಡುಗಳ ಸವಾಲನ್ನು ಎದುರಿಸುವುದರ ಸಲುವಾಗಿ ವಿದ್ಯಬ್ಯಾಸವನ್ನು ಪುನರೂಪಿಸುವಾಗ ಸೂಕ್ತವಾದ ಬಹುಮುಖೀ ಪಠ್ಯಗಳು, ಕಲಿಕೆಯರಿಮೆ, ಬೋದನ ಉಪಕರಣಗಳು, ಸಾಹಿತ್ಯದ ಕೃಷಿಯ ಅಗತ್ಯವಿರುತ್ತದೆ. ಈ ಸವಾಲಿಗೆ ಪ್ರತಿಕ್ರಯಿಸಲು ಪ್ರಗತಿಪರವಾದ ಕಲಿಕೆಯರಿಮೆಯನ್ನು ರೂಪಿಸುತ್ತಲೇ ಸಮಾನ ಶಿಕ್ಷಣ ನೀತಿ ಮತ್ತು ಜನಪರವಾದ ಸಂಸ್ಕøತಿಯನ್ನು ಕಟ್ಟಬೇಕಾಗುತ್ತದೆ.

ಹೆಗೆಲಿಯನ್ ವಿಮರ್ಶೆಯ ಗ್ರಹಿಕೆಯ ಪ್ರಕಾರ ಜೀವನದ ಕೆಲವು ಸಾಮಾನ್ಯ ಚಟುವಟಿಕೆಗಳಲ್ಲೊಂದಾದ ವಿದ್ಯಬ್ಯಾಸ, ಮುದ್ರಿತ ಪಠ್ಯಗಳು ಇಂದಿನ ಸಂದರ್ಭದ ಹೊಸ ಸಾಹಿತ್ಯ ಮತ್ತು ಅನುಭವಗಳ ಎದುರು ಅಪ್ರಸ್ತುತಗೊಂಡಾಗ ವ್ಯಕ್ತಿ ನೈತಿಕವಾಗಿ ಕಂಗೆಡುತ್ತಾನೆ . ಹೆಗೆಲಿಯನ್ ತರ್ಕದಲ್ಲಿ ಮುಂದುವರೆದ ಸಮಾಜ ಮತ್ತು ಸಂಸ್ಕøತಿಯ ಬೆಳವಣಿಗೆಯೊಂದಿಗೆ ವಿದ್ಯಬ್ಯಾಸವು ಬೆಸೆÀದುಕೊಳ್ಳುವುದಿಲ್ಲ ಮತ್ತು ಈ ಶಾಲಾಬೋಧನೆಯು ಮಲ್ಟಿಮೀಡಿಯಾ ಸಂಸ್ಕ್ರತಿಯೊಂದಿಗೆ ಜಾಲತಾಣಗಳ ಮೂಲಕ ಬೆಸೆದುಕೊಂಡ ಸಮಾಜದೊಂದಿಗೆ ಸಾಮರಸ್ಯ ಸಾಧಿಸಬೇಕಾಗುತ್ತದೆ. ಅದಕ್ಕಾಗಿ ತನ್ನ ಸ್ವರೂಪದಲ್ಲಿ ಪರಿವರ್ತನೆಗೊಳಿಸಬೇಕಾಗುತ್ತದೆ

ಆದರೆ ಒಂದಂತೂ ನಿಜ. ಆರ್ಥಿಕ ಮತ್ತು ಸಾಂಸ್ಕøತಿಕ ನೀತಿಗಳನ್ನು ಜಾಗತಿಕವಾಗಿ ಪುನರೂಪಿಸುವ ಕಾರ್ಯ ಇಂದು ಜಗತ್ತಿನಲ್ಲೆಡೆ ಪ್ರಾರಂಭವಾಗಿದೆ. ಇದನ್ನು ಇಂದಿನ ಅತ್ಯಂತ ಮುಂದುವರೆದ ವಲಯಗಳಾದ ಮಾಹಿತಿ ತಂತ್ರಜ್ಞಾನ ಮತ್ತು ಮಲ್ಟಿಮೀಡಿಯಾ ತಂತ್ರಜ್ಞಾನದ ಬುನಾದಿಯ ಮೇಲೆ ಕಟ್ಟಲಾಗುತ್ತಿದೆ. ಈ ಪ್ರಕ್ರಿಯೆಯು ದಿನಿತ್ಯದ ಬದುಕಿನ ಎಲ್ಲಾ ಕ್ಷೇತ್ರಗಳನ್ನೂ ಭೇದಿಸಿಕೊಂಡು ಅತ್ಯಂತ ವೇಗವಾಗಿಯೇ ಮುನ್ನುಗ್ಗುತ್ತಿದೆ. ಹೀಗಾಗಿಯೇ ಈಗ ಚಾಲ್ತಿಯಲ್ಲಿರುವ ದೊಡ್ಡ ಮಟ್ಟದ ಪರಿವರ್ತನೆಗಳಿಗೆ ಶಿಕ್ಷಣವು ಸಾಮಾಜಿಕ-ಆರ್ಥಿಕ, ಸಾಂಸ್ಕøತಿಕ ಮತ್ತು ದಿನಿತ್ಯದ ಬದುಕಿನ ಹಾಗೂ ವಸ್ತುವಿನ ಸ್ಥಿತಿಗತಿಗಳ ಆಧಾರದ ಮೇಲೆ ಪುನರಚನೆಗೊಳ್ಳುತ್ತಿರುವುದು ವಿವೇಚನೆಯುಳ್ಳಂತಹ ಪ್ರತ್ಯುತ್ತರವೆಂದೇ ಹೇಳಬೇಕು.

ಭಾಷಾ ಪಠ್ಯಗಳನ್ನು ಓದಲು ಮತ್ತು ಬರೆಯುವ ಸಾಮಥ್ರ್ಯಗಳು ಮತ್ತು ಅದನ್ನು ಬೇರೊಬ್ಬರೊಂದಿಗೆ ಸಮರ್ಥವಾಗಿ ಸಂವಹನೆಯಲ್ಲಿ ತೊಡಗುವ ಸಾಮಥ್ರ್ಯವೂ ಸಹ ಇಂದಿನ ಮಲ್ಟಿಮೀಡಿಯಾ ವಾತಾವರಣದಲ್ಲಿ ಹಿಂದೆಂದಿಗಿಂತಲೂ ಪ್ರಾಮುಖ್ಯತೆಯನ್ನು ಪಡೆದಿದೆ. ನಿಜ ಹೇಳಬೇಕೆಂದರೆ ಇಂದಿನ ಯುಗದಲ್ಲಿ ಮುಲ್ಟಿಮೀಡಿಯಾ ಮತ್ತು ಕಂಪ್ಯೂಟರ್ ತಂತ್ರಜ್ಞಾನದ ಅವಶ್ಯಕತೆ ಇದೆ. ಆದರೆ ಈ ತಂತ್ರಜ್ಞಾನಗಳು ಮುದ್ರಿತ ಪಠ್ಯಗಳೊಂದಿಗೆ ಸಮೀಕರಿಸಿಕೊಂಡು, ಸಂಯೋಜನೆಗೊಂಡು ಬೆಳೆಯಬೇಕಾಗಿದೆ. ಇಲ್ಲಿ ಅನೇಕ ಪಠ್ಯಗಳು ಮತ್ತು ಸಾಹಿತ್ಯವು ಶಬ್ದಗಳೊಂದಿಗೆ, ಇಮೇಜ್, ಗ್ರಾಫಿಕ್ಸ್, ವಿಡಿಯೋ ಮತ್ತು ಮಲ್ಟಿಮೀಡಿಯಾ ಸಂಸ್ಕøತಿಯೊಂದಿಗೆ ಸಂಧಾನಗಳನ್ನು ನಡೆಸುತ್ತಲೇ ಅಡೆತಡೆಗಳನ್ನು ದಾಟಿ ಮುನ್ನುಗ್ಗಬೇಕಾಗುತ್ತದೆ.

ಆದರೆ ಈ ತಂತ್ರಜ್ಞಾನದ ಕ್ರಾಂತಿಯ ಸವಾಲನ್ನು ಎದುರಿಸಲು ಶಿಕ್ಷಣವನ್ನು ಸಾಂಧರ್ಬಿಕವಾಗಿ ಪರಿವರ್ತನೆಗೊಳಿಸಬೇಕಾದರೆ ಮೊಟ್ಟ ಮೊದಲು ನಾವು ಇಂದಿನ ಜಾಗತೀಕರಣಗೊಂಡ ಜಗತ್ತು ಬೆಳೆಯುತ್ತಿರುವ ಅಸಮಾನತೆಯಿಂದ, ಸಂಘರ್ಷಣೆಗಳಿಂದ, ಅಪಾಯಗಳಿಂದ ಸಂಪೂರ್ಣವಾಗಿ ತುಂಬಿಹೋಗಿದೆ ಎನ್ನುವ ವಾಸ್ತವನ್ನು ಅರಿಯಬೇಕಾಗಿದೆ. ಈ ಸಂದರ್ಭದಲ್ಲಿ ಶಿಕ್ಷಣವು ಪ್ರಸ್ತುತವಾಗಬೇಕಿದ್ದರೆ ಈ ಶಿಕ್ಷಣವು ಮೇಲಿನ ಸಂಗತಿಗಳನ್ನು ಒಳಗೊಂಡು ಪುನರಚಿತಗೊಳ್ಳಬೇಕಾಗಿದೆ. ಜಾಗತೀಕರಣವು ಉಳ್ಳವರು ಮತ್ತು ನಿರ್ಗತಿಕರ ನಡುವೆ ಹುಟ್ಟುಹಾಕುತ್ತಿರುವ ವಿಭಜನೆಗಳು ಮತ್ತಷ್ಟು ವಿಸ್ತಾರಗೊಳ್ಳುತ್ತಿವೆ. ಶ್ರೀಮಂತರು ಮತ್ತು ಬಡವರ ನಡುವಿನ ಕಂದಕ ದಿನನಿತ್ಯ ಬೆಳೆಯುತ್ತಿದೆ. ಪರಿವರ್ತನೆಗೊಂಡ ಸಮಾನ ಶಿಕ್ಷಣ ನೀತಿಯು ಈ ಸವಾಲುಗಳನ್ನು ಸಂಬೋಧಿಸಬೇಕಾಗುತ್ತದೆ. ಕ್ರಾಂತಿಕಾರಿ ಕಲಿಕೆಯರಿಮೆಯ ಭಾಗವಾಗಿಯೇ ಶಿಕ್ಷಣವನ್ನು ಸಾಮಾಜಿಕ ನ್ಯಾಯಕ್ಕಾಗಿ ರೂಪಿಸಬೇಕಾಗುತ್ತದೆ.

ಸೆ ಪ್ಟೆಂಬರ್ 11 ನಂತರದ ಜಗತ್ತಿನಲ್ಲಿ ರಾಜಕೀಯ ಮತ್ತು ಸಾಂಸ್ಕøತಿಕ ಸಂಘರ್ಷಗಳು, ಭಯೋತ್ಪಾದನೆ ಬೆಳೆಯುತ್ತಿವೆ. ಶಿಕ್ಷಣವು ಈ ವಿಷಯಗಳನ್ನೂ ಸಂಬೋಧಿಸಬೇಕಾಗುತ್ತದೆ. ವಿಮರ್ಶಾತ್ಮಕ ಕಲಿಕೆಯರಿಮೆಯು ಈ ಬಿಕ್ಕಟ್ಟುಗಳನ್ನು ಉದ್ದೇಶಿಸಿ ಸಮಾನ ಶಿಕ್ಷಣದ ಪಠ್ಯಕ್ರಮವನ್ನು ರೂಪಿಸಬೇಕಾಗಿದೆ. ಈ ವಿಮರ್ಶಾತ್ಮಕ ಕಲಿಕೆಯರಿಮೆಯನ್ನು ವಿವಿಧ ವಿಷಯಗಳು ಭಿನ್ನಾಭಿಪ್ರಯಾಗಳನ್ನು ಮೀರಿ ಪರಸ್ಪರ ಪೂರಕವಾಗಿ ಸಂಭಾಷಿಸುವಂತೆ ರೂಢಿಸಬೇಕಾಗಿದೆ. ಬಹುರೂಪಿಯಾದ, ವೈವಿಧ್ಯಮಯ ಸಂಸ್ಕøತಿಗಳನ್ನು ಪರಸ್ಪರ ಅರಿತು ಗೌರವಿಸುವಂತೆ ವಿಮರ್ಶಾತ್ಮಕ ಕಲಿಕೆಯರಿಮೆಯನ್ನು ಕಟ್ಟಬೇಕಾಗಿದೆ. ಅವಕಾಶವಂಚಿತ, ಅಂಚಿನಲ್ಲಿರುವ ಸಮುದಾಯಗಳಿಗಾಗಿಯೇ ಒಳಗೊಳ್ಳುವ ಪ್ರಜಾಪ್ರಭುತ್ವವನ್ನು ರೂಪಿಸಬೇಕಾಗಿದೆ.

ನಿರ್ಧಾರಕವಾಗಿ ವಿಮರ್ಶಾತ್ಮಕ ಸಿದ್ಧಾಂತವು ಬಂಡವಾಳಶಾಹಿ ಮತ್ತು ಹೈಟೆಕ್ ಕೈಗಾರಿಕೆಗಳ ಆಶಯಗಳನ್ನು ಪೂರ್ಣಗೊಳಿಸಲು ಶಿಕ್ಷಣವನ್ನು ಪುನರೂಪಿಸುತ್ತಿಲ್ಲ. ಬದಲಾಗಿ ಶಿಕ್ಷಣದಲ್ಲಿ ಸಮಾನತೆ ಸಾಧಿಸಲು, ಪ್ರಗತಿಪರ ಶಿಕ್ಷಣತಜ್ಞರಾದ ಡೇವೆ, ಫ್ರೈರಿ, ಇಲ್ಲಿಚ್‍ರಂತಹವರ ಚಿಂತನೆಗಳಾದ ಸಾಮಾಜಿಕ ನ್ಯಾಯ, ವ್ಯಕ್ತಿಯ ಬೆಳವಣಿಗೆ, ನಾಗರಿಕತೆ ಮತ್ತು ಸಮುದಾಯ, ಮತ್ತು ಜೀವನದ ಎಲ್ಲಾ ಪ್ರಕಾರಗಳಲ್ಲಿಯೂ ಪ್ರಜಾಪ್ರಭುತ್ವದ ಪಾಲ್ಗೊಳ್ಳುವಿಕೆಯನ್ನು ಸಬಲೀಕರಣಗೊಳಿಸುವುದನ್ನು ಪ್ರೋತ್ಸಾಹಿಸಬೇಕಾಗುತ್ತದೆ. ಕಳೆದ ಕೆಲವು ದಶಕಗಳಿಂದ ನವ ಉದಾರೀಕರಣದ ಅಜೆಂಡಾವನ್ನು ಶಿಕ್ಷಣದ ಮೇಲೆ ಹೇರಲು ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ವ್ಯವಹಾರದ ಮಾಡೆಲ್ ಮೇಲೆ ಶಾಲೆಗಳನ್ನು ಮುನರೂಪಿಸಲಾಗುತ್ತಿದೆ. ಸಿದ್ಧಮಾದರಿಯ ವ್ಯಾಸಂಗಕ್ರಮವನ್ನು ಹೇರಲಾಗುತ್ತಿದೆ. ವಿಮರ್ಶಾತ್ಮಕ ಸಿದ್ದಾಂತದ ಶಿಕ್ಷಣವು ಈ ನವ ಉದಾರೀಕರಣದ ಅಜೆಂಡಗಳನ್ನು ಟೀಕಿಸುತ್ತಲೇ ಪರ್ಯಾಯ ಪರಿಕಲ್ಪನೆಗಳನ್ನು, ಮಾದರಿಗಳನ್ನು ಕಟ್ಟಲೇಬೇಕಾಗುತ್ತದೆ.

ಕ್ರಾಂತಿಕಾರಿ ಪುನನಿರ್ಮಾಣ ಮತ್ತು ಸಮಾನ ಶಿಕ್ಷಣ ನೀತಿಯೆಡೆಗೆ ಹೆಜ್ಜೆಗಳು

ವ್ಯಾಪಿಸಿಕೊಳ್ಳುತ್ತಿರುವ ತಂತ್ರಜ್ಞಾನ ಮತ್ತು ಜಾಗತೀರಣಕ್ಕೆ ಪ್ರತಿಸ್ಪಂದಿಸಲು ಬಹುಮುಖಿ ಪಠ್ಯ ಮತ್ತು ಸಾಹಿತ್ಯಕ್ಕೆ ಉತ್ತೇಜನ, ಪ್ರೋತ್ಸಾಹ ಕೊಡಲು ಸಮಾನ ಶಿಕ್ಷಣ ನೀತಿಯನ್ನು ಪುನರಚಿಸಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ‘ಡಿಜಿಟಲ್ ವಿಂಗಡಣೆ’ಗಳೊಂದಿಗೆ ಮುಖಾಮುಖಿಯಾಗಬೇಕಾಗುತ್ತದೆ. ಶ್ರೇಣೀಕೃತ ವ್ಯವಸ್ಥೆಯಲ್ಲಿ ಕೆಲವು ಮೇಲ್ಜಾತಿ ಸಮುದಾಯಗಳು ಆಧುನಿಕತೆಯ ಎಲ್ಲಾ ಸವಲತ್ತುಗಳಿಗೂ, ಮುಂದುವರೆದ ತಂತ್ರಜ್ಞಾನಗಳಿಗೂ ಕೂಡಲೆ ತೆರೆದುಕೊಂಡು ಮೇಲೇರುತ್ತಿದ್ದರೆ ತಳಸಮುದಾಯಗಳು ಮೇಲಿನ ಎಲ್ಲಾ ಅವಕಾಶಗಳಿಂದ ವಂಚಿತಗೊಂಡಿರುತ್ತವೆ. ಈ ಆಧುನಿಕತೆಯ ವರ್ಗ, ಬಣ್ಣ, ಲಿಂಗ, ಆಧಾರಿತ ಅಸಮಾನತೆಯನ್ನು ಮೀರಲು ಶಿಕ್ಷಣವನ್ನು ಪುನನಿರ್ಮಿಸಬೇಕು. ಆ ಮೂಲಕ ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ಸಮಾನ ಶಿಕ್ಷಣವನ್ನು ಪಡೆಯುವಂತಾಗಬೇಕು.

ಹೆಗೆಲಿಯನ್ ತತ್ವದ ಮಾಲೀಕ / ಗುಲಾಮ ಡಯಲೆಕ್ಟಿಕ್ ಸಿದ್ಧಾಂತವು ಇಂದಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧಗಳನ್ನು ವೈಶಿಷ್ಟಪೂರ್ಣಗೊಳಿಸಲು ಸಹಾಯಕಾರಿಯಾಗುತ್ತದೆ. ತಲೆಮಾರಿನ ನಡುವೆ ಸಾಂಸ್ಕøತಿಕ ಭಿನ್ನತೆಗಳು ಮತ್ತು ಸಾಮಾಜಿಕ ಅನುಭವÀಗಳು ದಟ್ಟವಾಗಿರುವಂತಹ ಹಿನ್ನೆಲೆಯಲ್ಲಿ ಇಂದಿನ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಮೇಲೆ ವ್ಯಾಸಂಗ ಕ್ರಮವನ್ನು ಒತ್ತಾಯಪೂರ್ವವಾಗಿ ಹೇರುತ್ತಾರೆ. ಶಿಕ್ಷಣತಜ್ಞರು, ವಿದ್ಯಾರ್ಥಿಗಳು, ನಾಗರಿಕರು ಈ ತಲೆಮಾರಿನ ಭಿನ್ನತೆಯನ್ನು ಗುರುತಿಸಬೇಕು ಮತ್ತು ಈ ಸಂಘರ್ಷಗಳು ಮತ್ತು ಬಿಕ್ಕಟ್ಟುಗಳನ್ನು ಮೀರುವ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಮತ್ತು ಭಿನ್ನಾಭಿಪ್ರಾಯಗಳು ಫಲದಾಯಕವಾಗಿರುವಂತೆ ಗಮನ ಹರಿಸಬೇಕು. ವಿದ್ಯಾರ್ಥಿಗಳು ತಂತ್ರಜ್ಞಾನದ ಬುದ್ಧಿವಂತಿಕೆಯಲ್ಲಿ ತನ್ನ ಶಿಕ್ಷಕನಿಗಿಂತ ಹೆಚ್ಚು ಪ್ರತಿಭಾಶಾಲಿಯಾಗಿರುತ್ತಾನೆ ಮತ್ತು ಸ್ವತಃ ತಾವೆ ಮುಖ್ಯವಾದ ಕಲಿಕೆಯರಿಮೆಯ ಸಂಪನ್ಮೂಲ ತಂಡವಾಗುತ್ತಾರೆ.

ಸಮಾನ ಶಿಕ್ಷಣನೀತಿಯನ್ನು ಮತ್ತಷ್ಟು ಒಳಗೊಳ್ಳುವಿಕೆಯ ಮೂಲಕ, ಸಂವಾದದ ಮೂಲಕ ಬಲಪಡಿಸಬೇಕಾಗಿದೆ. ಮುದ್ರಣ ಪಠ್ಯಗಳು ಮತ್ತು ಪುಸ್ತಕಗಳು ಮತ್ತು ಮಲ್ಟಿಮೀಡಿಯಾ ಜಾಲತಾಣಗಳು ಪರಸ್ಪರ ಪೂರಕವಾಗಿಯೇ ಕೆಲಸ ಮಾಡಬೇಕೇ ಹೊರತು ವಿರುದ್ಧವಾಗಿಯಂತೂ ಅಲ್ಲ. ಇಲ್ಲಿ ಎರಡೂ ಬಗೆಯ ಸ್ವರೂಪಗಳಿಗೆ ಸಮಾನ ಪ್ರಾತಿನಿಧ್ಯ ಕೊಡಬೇಕಾಗತ್ತದೆ. ವಿಮರ್ಶಾತ್ಮಕ ಸಿದ್ಧಾಂತದ ಶಿಕ್ಷಣದ ಮೂಲಕ ವರ್ಗಾಧಾರಿತ ಸಾಕ್ರಟಿಕ್ ಬೋಧನೆಯು ಕಂಪ್ಯೂಟರ್ ಸಂಶೋಧನೆಯ ಜೊತೆಗೆ ಒಳಗೊಳ್ಳುವಂತಾಗಬೇಕು.

ಸಮಕಾಲೀನ ಶಿಕ್ಷಣ ಸಂಸ್ಥೆಗಳ ಬಲು ದೊಡ್ಡ ಬಿಕ್ಕಟ್ಟೇನೆಂದರೆ ಒಂದೇ ವಿಷಯದ ಕುರಿತಾಗಿ ಸಂಪೂರ್ಣ ಹುಚ್ಚನ್ನು ಬೆಳೆಸಿಕೊಂಡು, ಏಕರೂಪದ ಪಾಠಗಳನ್ನು ಬೋಧಿಸುತ್ತ, ಏಕರೂಪದ ವ್ಯಾಸಂಗ, ಕಲಿಕೆಯರಿಮೆಯನ್ನು ಅಪ್ಪಿಕೊಂಡು ಹೊಸನೀತಿಯ ರಾಜಕೀಯ, ಸಾಂಸ್ಕøತಿಕ, ಪರಿಸರವಾದದ ತೊಂದರೆಗಳನ್ನು, ಬಿಕ್ಕಟ್ಟುಗಳನ್ನು ಅರಿತುಕೊಳ್ಳುವುದಿಲ್ಲ, ಸಂಬೋದಿಸುವುದು ಇಲ್ಲ. ಆದರೆ ಸ್ನೇಹಪರವಾದ ಕಲಿಕೆಯ ಉಪಕರಣಗಳನ್ನು ಬೆಳೆಸುತ್ತಲೇ ಕ್ರಾಂತಿಕಾರಿ ಕಲಿಕೆಯರಿಮೆಯನ್ನು ಬಳಸಿಕೊಂಡು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಮೇಲಿನ ಪರಂಪರಾಗತ ಮಾದರಿಗಳನ್ನು ಒಡೆಯುತ್ತಲೇ ಡೇವಿಯನ್‍ರ ಪ್ರಯೋಗಾತ್ಮಕ ಶಿಕ್ಷಣದ ಕಡೆಗೆ ಪಯಣಿಸಬೇಕು. ಶಿಕ್ಷಣದ ಪುನರಚನೆಯು ಅಸಮಾನತೆಯಿಂದ, ಸಂಘರ್ಷಣೆಗಳಿಂದ, ಅಪಾಯಗಳಿಂದ ಸಂಕೀರ್ಣಗೊಳ್ಳುತ್ತಿರುವ ಬದುಕಿನಿಂದ ಹೊರಬರಲು ಸಹಕಾರಿಯಾಗಬೇಕಾಗಿದೆ. ಮತ್ತಷ್ಟು ಸಹಬಾಳ್ವೆನೀತಿ, ಸಂವಾದ ಮತ್ತು ಪರಸ್ಪರ ಸಂವಹನದ ಕ್ರಿಯೆಗಳು ಪ್ರಜಾಪ್ರಭುತ್ವದ ಮತ್ತು ಸಕರಾತ್ಮಕ ಸಾಮಾಜಿಕ ಮೌಲ್ಯಗಳನ್ನು ಬೆಳೆಸುತ್ತವೆ.

ಆಧುನಿಕ ಸಮೂಹ ಶಿಕ್ಷಣವು ಜೀವನವನ್ನು ಒಂದು ಸರಳರೇಖೆಯನ್ನಾಗಿಯೇ ಪರಿಭಾವಿಸುತ್ತದೆ. ಆದರೆ ಡೇವಿಯನ್ ಶಿಕ್ಷಣವು ತೊಡಕುಗಳನ್ನು, ಸಮಸ್ಯೆಗಳನ್ನು ಪರಿಹರಿಸುವುದರ ಕಡೆಗೆ, ಗುರಿಯನ್ನು ಆಧರಿಸಿದ ಯೋಜನೆಗಳ ಕಡೆಗೆ, ಪ್ರಯೋಗಗಳನ್ನು ನಡೆಸುವ ಎದೆಗಾರಿಕೆಯ ಕಡೆಗೆ ತನ್ನ ಗಮನವನ್ನು ಕೇಂದ್ರೀಕರಿಸಿದ್ದರೆ, ಫ್ರೈರಿ ಶಿಕ್ಷಣವು ಪರ್ಯಾಯ ಕಲಿಕೆಯರಿಮೆಯನ್ನು ಬೆಳೆಸಿತು ಮತ್ತು ಇಲ್ಲಿಚ್ ಶಿಕ್ಷಣವು ಪ್ರತಿರೋಧಾತ್ಮಕ ತತ್ವಗಳನ್ನಾಧರಿಸಿದ ಶಿಕ್ಷಣ, ಕಲಿಕೆ, ಶಾಲಾಬೋಧನೆಯ ಕುರಿತಾದ ವಿಮರ್ಶೆಯ ಕಡೆಗೆ ತನ್ನ ಗಮನವನ್ನು ಕೇಂದ್ರೀಕರಿಸಿತು.
ಈ ಬಗೆಯ ವಿಮರ್ಶಾತ್ಮಕ ಹುಮ್ಮಸ್ಸು ಮತ್ತು ಕಾಣ್ಕೆಗಳು ಶಿಕ್ಷಣದ ಪುನರಚನೆಗೆ ಮತ್ತು ಹೊಸ ಕಲಿಕೆಯರಿಮೆಯನ್ನು ಉತ್ತೇಜಿಸುವ ಸಮಾಜಕ್ಕೆ ಸಹಾಯಕವಾಗುತ್ತವೆ. ಈ ಹೊಸ ಸಮಾಜವು ಕಲಿಕೆಗೆ ಉಪಕರಣಗಳನ್ನು, ಇಂದಿನ ತಲೆಮಾರಿಗೆ ಸಾಮಾಜಿಕ ನ್ಯಾಯವನ್ನು ಕಲ್ಪಿಸಿಕೊಡುತ್ತದೆ.

Leave a Reply

Your email address will not be published.