ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣದೆಡೆಗಿನ ಹೆಜ್ಜೆಗಳು : ಭಾಗ -1

ಇಂಗ್ಲೀಷ್ : ಡೊಗ್ಲಸ್ ಕೆಲ್ನರ್ ಅನುವಾದ : ಬಿ.ಶ್ರೀಪಾದ ಭಟ್

ನಮ್ಮ ಕಾಲಘಟ್ಟವು ಹೊಸ ಯುಗದ ಹುಟ್ಟು ಮತ್ತು ಹೊಸ ಕಾಲಮಾನಕ್ಕೆ ಪರಿವರ್ತನೆಗೊಳ್ಳುವ ಸಂಕ್ರಮಣದ ಕ್ಷಣಗಳು ಎಂದು ಅರಿಯಲು ಕಷ್ಟಪಡಬೇಕಿಲ್ಲ. ಹೊಸ ಚೈತನ್ಯದ ಹುಟ್ಟಿನ ಮೂಲಕ ಈ ಜಗತ್ತು ಇದುವರೆಗೆ ಚಾಲ್ತಿಯಲ್ಲಿದ್ದ ತನ್ನ ಅಸ್ತಿತ್ವ ಮತ್ತು ಭ್ರಮೆಗಳನ್ನು ಗತಕಾಲದಲ್ಲಿ ಹುದುಗಿಸುವುದರಲ್ಲಿ ಯಶಸ್ವಿಯಾಗಿದೆ. ತನಗೆ ತಾನು ಹೊಸ ಸ್ವರೂಪವನ್ನು ಕಟ್ಟಿಕೊಳ್ಳಲು ನಿರತವಾಗಿದೆ. ಖಚಿತವಾಗಿ ಹೇಳಬೇಕೆಂದರೆ ಎಂದಿಗೂ ನಿಷ್ಕಿಯವಾಗದ ಈ ಚೈತನ್ಯವು ಪ್ರಗತಿಯ ಪಥದೊಂದಿಗೆ ಸದಾ ತೊಡಗಿಸಿಕೊಂಡಿರುತ್ತದೆ. ತನಗೆ ತಾನು ಸ್ವತಃ ತರಬೇತಿಗೊಳ್ಳುವ ಈ ಚೈತನ್ಯವು ಹೊಸ ಸ್ವರೂಪದೆಡೆಗೆ ನಿಧಾನವಾಗಿ, ನಿಶ್ಚಲವಾಗಿ ಮಾಗುತ್ತ ಗತಕಾಲದ ತನ್ನ ಮಹಾಸೌಧದ ಪ್ರತಿ ಕಿರು ತುಣುಕನ್ನು ಒಂದರ ನಂತರ ಮತ್ತೊಂದರಂತೆ ವಿಸರ್ಜಿಸಿಕೊಳ್ಳುತ್ತಾ ಸಾಗುತ್ತದೆ. ಹಂತಹಂತವಾಗಿ ಚೂರು ಚೂರಾಗುವ ಈ ಪ್ರಕ್ರಿಯೆಯ ನಡುವೆ ಮಿಂಚಿನಂತೆ ಮಧ್ಯಪ್ರವೇಶಿಸುವ ದಿನವೊಂದರ ಹುಟ್ಟು ಹೊಸ ಜಗತ್ತಿನ ಮಹಾಸೌಧವನ್ನು ಹೊರಗೆಡಹುತ್ತದೆ
— ( ಹೆಗೆಲ್,ಚೈತನ್ಯದ ಲೋಕೋತ್ತರವಾದ, 1807)

ಹೊಸ ಶತಮಾನ ಬಿಚ್ಚಿಕೊಳ್ಳುತ್ತಿರುವಂತಹ ಈ ಸಂದರ್ಭದಲ್ಲಿ ತಂತ್ರಜ್ಞಾನದ ವಲಯದಲ್ಲಿನ ನಾಟಕೀಯ ಕ್ರಾಂತಿಗೆ ಒಳಗಾಗುತ್ತಿರುವ ಮಾನವಕುಲವು ಆ ಬದಲಾವಣೆಯನ್ನು ಅನುಭವಿಸುತ್ತಿದೆ. ಇಲ್ಲಿ ಮನುಷ್ಯನ ದುಡಿಮೆಯಿಂದ ಮೊದಲುಗೊಂಡು ತನ್ನ ಸಹೋದ್ಯೋಗಿಗಳೊಂದಿಗೆ ಸಂಭಾಷಿಸುವ ಮಟ್ಟದಲ್ಲಿ ಕಡೆಗೆ ಆತನ ವಿಶ್ರಾಂತದ ಗಳಿಗೆಗಳಲ್ಲೂ ಅಮೂಲಾಗ್ರ ಬದಲಾವಣೆಗಳಾಗಿವೆ. ಕಂಪ್ಯೂಟರ್, ಮಾಹಿತಿ ತಂತ್ರಜ್ಞಾನ, ಸಂಪರ್ಕ ಮತ್ತು ಮಲ್ಟಿಮೀಡಿಯಾಗಳಂತಹ ತಂತ್ರಜ್ಞಾಗಳ ಮೇಲೆ ಸಂಪೂರ್ಣವಾಗಿ ಕೇಂದ್ರೀಕೃತವಾದಂತಹ ಈ ತಂತ್ರಜ್ಞಾನ ಕ್ರಾಂತಿಯನ್ನು ‘ಮಾಹಿತಿ ಸಮಾಜ’ದ ಆರಂಭ ಎಂದೇ ವಾಖ್ಯಾನಿಸಲಾಗುತ್ತಿದೆ ಮತ್ತು ಜೀವನದ ಪ್ರತಿಯೊಂದು ತೋರ್ಕೆಯಲ್ಲಿಯೂ ಶಿಕ್ಷಣವೇ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಗುಣವಿಶೇಷಣಗಳೊಂದಿಗೆ ಉಲ್ಲೇಖಿಸಲಾಗುತ್ತಿದೆ. ಈ ಮಹಾನ್ ಪಲ್ಲಟಗಳು ಶಿಕ್ಷಣತಜ್ಞರಿಗೆ ಅಸಾಧಾರಣವಾದ ಸವಾಲುಗಳನ್ನು ಒಡ್ಡಿವೆ. ಇವರಿಗೆ ತಮ್ಮ ಕಡುನಂಬಿಕೆಗಳನ್ನು ಮರುಚಿಂತನೆಗೆ ಒಳಪಡಿಸಿಕೊಳ್ಳಬೇಕಾದಂತಹ ಅನಿವಾರ್ಯತೆ ಎದುರಾಗಿದೆ. ಉದಿಸುತ್ತಿರುವ ಈ ತಂತ್ರಜ್ಞಾನವನ್ನು ಸೃಜನಾತ್ಮಕವಾಗಿ ಮತ್ತು ಫಲದಾಯಕವಾಗಿ ವಿಸ್ತಾರಗೊಳ್ಳುವಂತೆ ಜಾಗೃತ ವಹಿಸಬೇಕಾಗಿದೆ. ಜಗತ್ತನ್ನು ಆಕ್ರಮಿಸಿಕೊಂಡಿರುವ ಈ ನವ ತಂತ್ರಜ್ಞಾನದ ಅಲೆಗೆ ರಚನಾತ್ಮಕವಾಗಿ, ಪ್ರಗತಿಪರವಾಗಿ ಪ್ರತಿಸ್ಪಂದಿಸಲು ಶಿಕ್ಷಣತಜ್ಞರು ತಮ್ಮ ಶಿಕ್ಷಣ ನೀತಿಯನ್ನು, ಪಠ್ಯಗಳನ್ನು, ಪಠ್ಯಕ್ರಮಗಳನ್ನು ಪುನರೂಪಿಸಿಕೊಳ್ಳಲೇಬೇಕಾಗಿದೆ.

ang4ಈ ಮಾಹಿತಿ ತಂತ್ರಜ್ಞಾನದ ನಾಟಕೀಯ ಕ್ರಾಂತಿ ಚಲಾವಣೆಯಲ್ಲಿರುವ ಪ್ರಸ್ತುತ ಸಂದರ್ಭದಲ್ಲಿಯೇ ಜಗತ್ತಿನಾದ್ಯಾಂತ ಪ್ರಜಾಶಾಸ್ತ್ರದ ಮತ್ತು ಸಾಮಾಜಿಕ-ಆರ್ಥಿಕ ನೆಲೆಗಳಲ್ಲಿ ಗಮನಾರ್ಹವಾದ ಬದಲಾವಣೆಗಳಾಗುತ್ತಿವೆ. ಇತ್ತೀಚಿನ ದಶಕಗಳಲ್ಲಿ ವಲಸೆಹೋಗುವ ನಿರ್ದಿಷ್ಟ ಮಾದರಿಯಿಂದಾಗಿ ಪಟ್ಟಣ, ನಗರಗಳಲ್ಲಿ ಬಲು ದೊಡ್ಡ ಮಟ್ಟದಲ್ಲಿ ವಿವಿಧ ಬಗೆಯ ಜನರು ಮತ್ತು ಕುಟುಂಬಗಳು ಮುಖಾಮುಖಿಯಾಗುತ್ತಿದ್ದಾರೆ. ಇದರ ಫಲವಾಗಿ ಅನೇಕ ದೇಶಗಳು ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ವಿವಿಧ ಬಣ್ಣಗಳ, ವೈವಿಧ್ಯಮಯವಾದ ಜನಾಂಗಳ, ಬಹುಸಂಸ್ಕ್ರತಿಗೆ ಸಾಕ್ಷಿಯಾಗುತ್ತಿವೆ. ವೈವಿಧ್ಯಮಯವಾದ ಜಾತಿ, ಬಣ್ಣ, ವರ್ಗಗಳ ಹಿನ್ನೆಲೆಯುಳ್ಳ ಈ ಲಕ್ಷಾಂತರ ಜನರಿಗೆ, ಕುಟುಂಬಗಳಿಗೆ ಈ ಅಪರಿಚಿತ ಪಟ್ಟಣ, ನಗರಗಳಲ್ಲಿ ದಿನ ನಿತ್ಯ ಬದಲಾಗುತ್ತಿರುವ, ಸಂಕೀರ್ಣ ಜಗತ್ತಿನ ವಿನೂತನ ಬಿಕ್ಕಟ್ಟುಗಳನ್ನು ಎದುರಿಸಲು ಬೇಕಾದಂತಹ ಅಗತ್ಯ ಹತಾರಗಳನ್ನು ಒದಗಿಸುವಂತಹ, ಸಾಮಥ್ರ್ಯ ಮತ್ತು ಕೌಶಲ್ಯವನ್ನು ಗಳಿಸುವಂತಹ ತರಬೇತಿಯನ್ನು ಒದಗಿಸುವ ಗುರುತರ ಸವಾಲುಗಳಿವೆ.

ಈ ಪ್ರಬಂಧದಲ್ಲಿ ಪ್ರಸ್ತುತ ಜಾಗತಿಕ ಮತ್ತು ತಂತ್ರಜ್ಞಾನದ ವ್ಯವಸ್ಥೆಯಲ್ಲಿನ ಸವಾಲುಗಳನ್ನು ಎದುರಿಸಲು ಅವಶ್ಯವಾದಂತಹ ಶಿಕ್ಷಣವನ್ನು ಪ್ರಜಾತಾಂತ್ರಿಕವಾಗಿ ಪುನನಿರ್ಮಿಸಲು ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣವನ್ನು ಅಭಿವೃದ್ಧಿಪಡಿಸಬೇಕೆಂದು ನಾನು ಪ್ರಸ್ತಾಪ ಮಾಡುತ್ತಿದ್ದೇನೆ. ಪಾರಂಪರಿಕವಾದ ಶಿಕ್ಷಣನೀತಿಯನ್ನು ಸಂಪೂರ್ಣವಾಗಿ ಬದಲಾಯಿಸಿ, ಈಗಿನ ಕಾಲಮಾನದ ಅಗತ್ಯತೆಗೆ ಅನುಗುಣವಾಗಿ ಪರ್ಯಾಯ ಮಾದರಿಯ “ಕಲಿಕೆಯರಿಮೆ”(pedagogies)ಗಳ ಶಿಕ್ಷಣವನ್ನು ಪುನನಿರ್ಮಿಸಬೇಕಾಗಿದೆ. ಈ ಪ್ರಬಂಧವು ಶಿಕ್ಷಣ ನೀತಿಯ ಫಿಲಾಸಫಿಗಾಗಿ ಒಂದು ಸ್ಪಷ್ಟವಾದ meta-theory ಯನ್ನು ರೂಪಿಸುವ ಕ್ರಮ ಹಾಗೂ ಇದಕ್ಕಾಗಿ ಐತಿಹಾಸಿಕ ಪೀಳಿಗೆಯ ಕತೆಯನ್ನು ಒದಗಿಸಲು ಮತ್ತು ಪ್ರಜಾತಾಂತ್ರಿಕವಾಗಿ ಶಿಕ್ಷಣನೀತಿಯನ್ನು ಪುನನಿರ್ಮಿಸಲು ಅವಶ್ಯಕವಾದ ಮಹತ್ವದ ವಿಷಯಗಳಿಗೆ ತಳಪಾಯವನ್ನು ಒದಗಿಸುತ್ತದೆ. ಹೊಸ ತಂತ್ರಜ್ಞಾನದ ಅವಿಷ್ಕಾರಗಳಿಗೆ ಪ್ರತ್ಯುತ್ತರವಾಗಿ ಬಹುಮುಖೀ ಅಕ್ಷರಜ್ಞಾನದ ಅಭಿವೃದ್ಧಿ, ಜಾಗತೀಕರಣ ಮತ್ತು ವಲಸೆ ಸಂಸ್ಕ್ರತಿಯು ತಂದೊಡ್ಡುವ ಬಹುಸಂಸ್ಕøತಿಯ ಸವಾಲುಗಳನ್ನು ಎದುರಿಸಲು ವಿಮರ್ಶಾತ್ಮಕವಾದ, ಪರ್ಯಾಯ “ಕಲಿಕೆಯರಿಮೆ”(‘pedagogies)ಗಳ ಅಭಿವೃದ್ಧಿ ಮತ್ತು ಶಿಕ್ಷಣ ಮೇಲೆ ನವ ಉದಾರೀಕರಣದ ವ್ಯಾಪಾರಿ ಮಾದರಿಯ ಶಿಕ್ಷಣದ ಹೇರುವಿಕೆಯನ್ನು ತಡೆಗಟ್ಟಲು ಬೇಕಾದ ಪ್ರಜಾತಾಂತ್ರೀಕರಣವನ್ನು ಈ ಯೋಜನೆ ಒಳಗೊಂಡಿದೆ.

ಹಳತಾದ, ತಿರಸ್ಕøತಗೊಂಡ ಆದರ್ಶಗಳು, ಪ್ರತಿಷ್ಠೆಯ, ಪ್ರಜಾಪ್ರಭುತ್ವ ವಿರೋಧಿ ಗುಣಲಕ್ಷಣಗಳ ಸಾಂಪ್ರದಾಯಿಕ ಮಾದರಿಯ ಶಿಕ್ಷಣವನ್ನು ಟೀಕಿಸುತ್ತಲೇ ಮತ್ತೊಂದೆಡೆ ಶಾಸ್ತ್ರೀಯ ಫಿಲಾಸಫಿಯ ದೃಷ್ಟಿಕೋನದ ಶಿಕ್ಷಣವನ್ನು ಸಮನ್ವಯಗೊಳಿಸುತ್ತ ಡೇವಿಯನ್ ತತ್ವದ ತೀವ್ರವಾದಿ ವಾಸ್ತವತಾವಾದ, ಫ್ರೇರಿಯಾನ್ ಚಿಂತನೆಗಳ ವಿಮರ್ಶಾತ್ಮಕ “ಕಲಿಕೆಯರಿಮೆ”, ರಾಚನಿಕೋತ್ತರವಾದ, ವಿವಿಧ ಲಿಂಗ, ವಂಶೀಯತೆ, ಬಣ್ಣ, ಜಾತಿ, ವರ್ಗ, ಸಮಾಜದ ತಳಹದಿಯ ಮೇಲೆ ಪ್ರಜಾಪ್ರಭುತ್ವವಾದಿ, ಬಹುರೂಪಿ ಸಂಸ್ಕøತಿಯ ಶಿಕ್ಷಣವನ್ನು ಪುನಃನಿರ್ಮಿಸಬೇಕಾಗಿದೆ.

ಹಸಿವು, ಸೂರು, ಮತ್ತು ಮೂಲಭೂತ ಸಾಕ್ಷರತೆ ಇವೆಲ್ಲಾ ಜಗತ್ತಿನಲ್ಲಿ ಬದುಕಲಿಕ್ಕಾಗಿ ಬೇಕಾದಂತಹ ಜ್ವಲಂತ ಅಗತ್ಯತೆಗಳು ಎನ್ನುವುದು ನನಗೆ ಗೊತ್ತಿದೆ. ಆದರೆ ಜಾಗತೀಕರಣದ ಜಗತ್ತಿನಲ್ಲಿ ವಿವಿಧ ಪರಿಸ್ಥಿತಿಗಳಲ್ಲಿ ಶಿಕ್ಷಣವನ್ನು ವಿಮರ್ಶಿಸಲು ಮತ್ತು ಪುನರಚಿಸಲು ಶಿಕ್ಷಣಕ್ಕಾಗಿ ಸಾಮಾನ್ಯ ಪ್ರಮಾಣದ ದೂರದೃಷ್ಟಿ ಮತ್ತು ಸಾಮಾಜಿಕ ಪರಿವರ್ತನೆಯನ್ನು ಬಳಸಿಕೊಳ್ಳಬೇಕಾಗಿದೆ. ಆದಾಗ್ಯೂ ಶಿಕ್ಷಣದ ಫಿಲಾಸಫಿಯ ಇತಿಹಾಸದ ಮೇಲೆ ಬೆಳಕನ್ನು ಚೆಲ್ಲುವ ಕಾಲ ಬಂದಿದೆ, ವರ್ತಮಾನದ ಸಂದರ್ಭದಲ್ಲಿ ವಿಮರ್ಶಾತ್ಮಕ ಶಿಕ್ಷಣದ ಪಠ್ಯಗಳನ್ನಾಗಿ ಏನನ್ನು ರಚಿಸಬಹುದು ಎನ್ನುವುದರ ಕುರಿತಾಗಿ, ಈಗಿನ ಕಾಲದಲ್ಲಿ ಶಿಕ್ಷಣವನ್ನು ಪುನರಚಿಸಲು ಮತ್ತು ಪ್ರಜಾತಾಂತ್ರೀಕರಣಗೊಳಿಸಲು ಅವಶ್ಯಕವಾದ ದೃಷ್ಟಿಕೋನವನ್ನು ಸ್ಪಷ್ಟಗೊಳಿಸಿಕೊಳ್ಳಬೇಕಾಗಿದೆ

ವಿಮರ್ಶಾತ್ಮಕ ಸಿದ್ಧಾಂತ ಮತ್ತು ಶಿಕ್ಷಣ meta-theory ಯ ದೃಷ್ಟಿಕೋನಗಳು

ನಾನು ಫ್ರಾಂಕ್‍ಫರ್ಟ ಶಾಲೆಯನ್ನು (ಕೆಲ್ನರ್,1989) ಉಲ್ಲೇಖಿಸಿ “ವಿಮರ್ಶಾತ್ಮಕ ಸಿದ್ಧಾಂತ” ಎನ್ನುವ ಶಬ್ದವನ್ನು ಬಳಸಿದರೂ ನಾನು ನಿರೀಕ್ಷಿಸುತ್ತಿರುವ ವಿಮರ್ಶಾತ್ಮಕ ಸಿದ್ಧಾಂತವು ಈ ಅಮೆರಿಕಾ-ಜರ್ಮನಿ ವಲಸಿಗರು ಬಳಸಿದ ಆವೃತ್ತಿಗಿಂತಲೂ ಹೆಚ್ಚಿನ ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಸಮಕಾಲೀನ ಸಂದರ್ಭಕ್ಕೆ ಶಿಕ್ಷಣವನ್ನು ಸಿದ್ಧಾಂತೀಕರಣಗೊಳಿಸಿ, ಪುನರಚಿಸುವಾಗ ನಾನು ಸಾಂಪ್ರದಾಯಿಕ ನೆಲೆಯ ವಿಮರ್ಶಾತ್ಮಕ “ಕಲಿಕೆಯರಿಮೆ”ಗಳನ್ನು, ಡೇವಿಯನ್ ತತ್ವದ ವಾಸ್ತವತಾವಾದ, ರಾಚನಿಕೋತ್ತರವಾದವನ್ನು ಒಳಗೊಂಡಿರುತ್ತೇನೆ. ನಾನು ಅನ್ವರ್ಥಗೊಳಿಸಿಕೊಂಡಿರುವ ರಾಚನಿಕೋತ್ತರವಾದವು ‘ವಿಷಯ, ಕಾರಣದ ವಿಮರ್ಶೆಯನ್ನು ಮತ್ತು ಲಿಬರಲ್ ಪ್ರಜಾಪ್ರಭುತ್ವದ ಸಿದ್ಧಾಂತವನ್ನು ಅಳವಡಿಸಿಕೊಂಡಿರುತ್ತದೆ. ಅಲ್ಲದೆ ಲಿಂಗ, ವಂಶೀಯತೆ, ಬಣ್ಣ, ಲೈಂಗಿಕತೆಯ ವಿಮರ್ಶಾತ್ಮಕ ಸಿದ್ಧಾಂತಗಳೊಂದಿಗೆ ಮತ್ತು ಕಳೆದ ದಶಕಗಳಲ್ಲಿ ಅಕಡೆಮಿಕ್ ಚೌಕಟ್ಟಿನೊಳಗಿನ ವಿಸ್ತಾರವಾದ ಹರುಹುವಿನಲ್ಲಿ ಅಭಿವೃದ್ಧಿಗೊಂಡ ವ್ಯಕ್ತಿನಿಷ್ಟ ರಚನೆಗಳೊಂದಿಗೆ ಸಹ ಸಂವಹನ ಮಾಡುತ್ತೇನೆ. ಈ ವಿಷಯಗಳು ವಿಮರ್ಶಾತ್ಮಕ “ಕಲಿಕೆಯರಿಮೆ”ಗಳನ್ನು ಸಮೃದ್ಧಿಗೊಳಿಸುತ್ತದೆ ಮತ್ತು ಡೇವಿಯನ್ ತತ್ವದ ನಕ್ಷೆಯಾದ ಶಿಕ್ಷಣÀದ ಪ್ರಜಾಪ್ರಭುತ್ವೀಕರಣ ಮತ್ತು ಶಿಕ್ಷಣದ ಪುನನಿರ್ಮಾಣದ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು, ಪ್ರಗತಿಪರ ಮುನ್ನೋಟಗಳನ್ನು ಸಾಧಿಸುತ್ತದೆ.

school4ವಿಮರ್ಶಾತ್ಮಕ ಆಯಾಮಗಳು, ಸಿದ್ದಾಂತಗಳ ಹಂಬಲಗಳು ಮತ್ತು ಈ ಸಿದ್ಧಾಂತ ಮತ್ತು ಅದರ ಪ್ರಾಯೋಗಿಕ ಬಳಕೆಯನ್ನು ಸಂಯೋಜಿಸುವ ರಾಜಕೀಯ ಕ್ರಿಯಾಶೀಲತೆಗಳ ಮಹತ್ವವನ್ನು ವಿವರಿಸುವುದಕ್ಕಾಗಿ meta-theory ಯ ಈ ವಿಮರ್ಶಾತ್ಮಕ ಸಿದ್ಧಾಂತಗಳ ಮೂಲವಿಚಾರಗಳನ್ನು ಬಳಸಿಕೊಳ್ಳುತ್ತೇನೆ. ನನ್ನ ಪರಿಕಲ್ಪನೆಯ “ವಿಮರ್ಶೆ”ಯು ಗ್ರಹಿಸು, ಪ್ರತಿಕ್ರಯಿಸು, ನಿರ್ಣಯಿಸುವುದರ ಮಹತ್ವವನ್ನು ವಿವರಿಸುವಂತಹ ವಿಶಾಲ ವ್ಯಾಪ್ತಿಯ ಗ್ರೀಕ್ ಮೂಲದ ‘ಕ್ರಿನೀನ್’ ಕ್ರಿಯಾಪದದಲ್ಲಿ ಅಡಕಗೊಂಡಿದೆ. ‘ವಿಮರ್ಶಾತ್ಮಕ’ ಪರಿಭಾಷೆಯ ಪದಬಳಕೆಯನ್ನು ನೋಡುವ ದೃಷ್ಟಿಕೋನ ಮತ್ತು ಅನುಸಂಧಾನದ ಅರ್ಥವ್ಯಾಪ್ತಿಯನ್ನುಳ್ಳ ಗ್ರೀಕ್ ಮೂಲದ ‘ಥಿಯೋರಿಯ’ ಎನ್ನುವ ನಾಮಪದವನ್ನು ಉಪಯೋಗಿಸಿಕೊಂಡು ‘ಸಿದ್ಧಾಂತ’ ಪರಿಭಾಷೆಯನ್ನು ಬಳಸಿಕೊಳ್ಳುತ್ತೇನೆ. ಗ್ರೀಕ್ ವಿಮರ್ಶೆಯು ‘ದಿನನಿತ್ಯದ ಬದುಕಿನಲ್ಲಿ ಮತ್ತು ಸಾಕ್ರೆಟಿಕ್ ಮಾದರಿಯ ಆಚರಣೆಗಳಾದ ಸಾಮಾಜಿಕ ಜೀವನವನ್ನು ಪರೀಕ್ಷಿಸುವ ಕ್ರಮಗಳು, ಆ ಮಾದರಿಯ ವಿಶ್ವವಿದ್ಯಾಲಯಗಳು, ಮೌಲ್ಯಗಳು, ಪ್ರಭಾವಿ ಚಿಂತನೆಗಳು ಮತ್ತು ಪ್ರತಿಯೊಬ್ಬ ವ್ಯಕ್ತಿಯ ವೈಯುಕ್ತಿಕ ಆಲೋಚನೆಗಳು ಮತ್ತು ಕ್ರಿಯೆಗಳಲ್ಲಿ’ ಹಾಸುಹೊಕ್ಕಾಗಿರುವುದನ್ನು ನಾವು ದೃಷ್ಟಾಂತವಾಗಿ ಪರಿಶೀಲಿಸಬಹುದು.

ತಿಳುವಳಿಕೆಯ ಪ್ರಕ್ರಿಯೆಯಾದ ವಿಮರ್ಶಿಸುವ ಅಧಿಕಾರದ ಕೇಂದ್ರವಾಗುವ ವಿಮರ್ಶೆಯು ವ್ಯಕ್ತಿಯೊಬ್ಬನ ಬೌದ್ಧಿಕತೆ ಮತ್ತು ರಾಜಕೀಯ ಸ್ಥಾನಕ್ಕೆ ಸಮರ್ಥನೆಯನ್ನು ಒದಗಿಸುತ್ತದೆ. ಉದಾಹರಣೆಗೆ ‘ಕಾಂತೀಯನ್’ ಪ್ರಜ್ಞೆಯ ವಿಮರ್ಶೆಯ ಸಿದ್ಧಾಂತವು ಎಲ್ಲಾ ಕಾರಣಗಳ ಉದ್ದೇಶಗಳು, ನೈತಿಕತೆ, ಧಾರ್ಮಿಕತೆ, ಸೌಂದರ್ಯಪ್ರಜ್ಞೆ ಹಾಗೂ ಮತ್ತಿತರ ಪ್ರಭಾವಿ ಚಿಂತನೆಗಳನ್ನು ಪ್ರಶ್ನಿಸುತ್ತಲೇ ಅವೆಲ್ಲವೂ ಅತ್ಯುತ್ತಮ ಅಡಿಪಾಯದ ಮೂಲಕ ಕ್ರಮಬದ್ಧಗೊಂಡಿವಿಯೇ ಎಂದು ಪರಿಶೀಲಿಸುತ್ತದೆ. ಈ ‘ಕಾಂತೀಯನ್’ ಪ್ರಜ್ಞೆಯ ವಿಮರ್ಶೆಯ ಸಿದ್ಧಾಂತವು’ ಪೂರ್ವಗ್ರಹಿಕೆಗಳಿಂದ, ಅಸ್ವಸ್ಥ ಮನಸ್ಸಿನ ಗ್ರಹಿಕೆಗಳಿಂದ ಹೊರಬಂದು ಸ್ವಾಯತ್ತತೆಯ ಗುರಿ ಹೊಂದಿರುತ್ತದೆ

ಹೆಗೆಲಿಯನ್ ಪರಿಕಲ್ಪನೆಯನ್ನಾಧರಿಸಿದ ವಿಮರ್ಶಾ ಪದ್ಧತಿಯ ತಳಹದಿಯ ಮೇಲೆ ಕಟ್ಟಲ್ಪಟ್ಟ ವಿಮರ್ಶಾತ್ಮಕ ಸಿದ್ಧಾಂತವು ಏಕಪಕ್ಷೀಯ ನಿಲುವುಗಳನ್ನು ಟೀಕಿಸುತ್ತ, ಸಂಕೀರ್ಣವಾದ ಡಯಲೆಕ್ಟಿಕ್ ದೃಷ್ಟಿಕೋನಗಳನ್ನು ಬೆಳೆಸುತ್ತಿರುತ್ತವೆ ಮತ್ತು ಶೋಷಣೆಯ ಅಥವಾ ದೋಷಪೂರಿತ ಗುಣಲಕ್ಷಣಗಳ ನಿಲುವುಗಳನ್ನು ನಿರ್ಲಕ್ಷಿಸುತ್ತ ಮತ್ತು ತಿರಸ್ಕರಿಸುತ್ತ ಸಕಾರತ್ಮಕವಾದ ವಿಮೋಚನೆಯ ನೋಟಗಳನ್ನು ಒಳಗೊಳ್ಳುತ್ತಿರುತ್ತವೆ. ಸಮಗ್ರತ ದೃಷ್ಟಿಯ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸುವುದರ ಮೂಲಕ ವಿಮರ್ಶಾತ್ಮಕ ಸಿದ್ಧಾಂತವು ಹೆಗೆಲಿಯನ್ ಪರಿಕಲ್ಪನೆಯನ್ನು ಸ್ವೀಕರಿಸುತ್ತದೆ ಆ ಮೂಲಕ ವಿಮರ್ಶಾತ್ಮಕ ಸಿದ್ಧಾಂತಗಳು ಹೆಗೆಲಿಯನ್ ಪರಿಕಲ್ಪನೆಯನ್ನು ಚಿಜoಠಿಣs ಮಾಡಿಕೊಳ್ಳುತ್ತವೆ. ಮುಖ್ಯವಾಗಿ ಸಂಬಂಧಗಳನ್ನು ಬೆಳೆಸುತ್ತ, ವಿರೋಧಾಭಾಸಗಳನ್ನು ಸ್ಪಷ್ಟಗೊಳಿಸಿಕೊಳ್ಳುತ್ತ ಕಡಿತಗೊಳಿಸುವ ಅಖಂಡ ಸಿದ್ಧಾಂತಗಳನ್ನು ಅಥವಾ ಆದರ್ಶವಾದವನ್ನು ಮೀರುತ್ತಿರುತ್ತವೆ.

ಐಡಿಯಾಲಜಿ ವಿಮರ್ಶೆಯ ಮಹತ್ವ ಮತ್ತು ಪ್ರಭಾವಶಾಲಿ ಸಾಮಾಜಿಕ ಸಂಬಂಧಗಳೊಗಿನ ಶಿಕ್ಷಣ ಹಾಗೂ ರಾಜಕೀಯ ಆರ್ಥಿಕ ವ್ಯವಸ್ಥೆಯ ಸಾಂದರ್ಭಿಕ ವಿಶ್ಲೇಶಣೆಗೆ ಹೆಚ್ಚಿನ ಒತ್ತನ್ನು ಕೊಡುವುದರ ಮೂಲಕ ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣವು ಮಾಕ್ರ್ಸವಾದದ ವಿಮರ್ಶೆಯನ್ನು ಸೆಳೆಯುತ್ತದೆ. ಮಾಕ್ರ್ಸನ ರಾಜಕೀಯ ಅರ್ಥಿಕನೀತಿಯ ವಿಮರ್ಶೆಯಲ್ಲಿ ಉಲ್ಲೇಖಗೊಂಡಂತೆ ಪಟ್ಟಭದ್ರ ಹೆಜಮನಿ ಶಿಸ್ತಿನ ಕಲ್ಪನೆಗಳನ್ನು ಮಾಕ್ರ್ಸವಾದದ ಮಾದರಿಯು ವ್ಯವಸ್ಥಿತವಾಗಿ ಟೀಕಿಸುತ್ತವೆ. ಮಾಕ್ರ್ಸವಾದವು ಪಟ್ಟಭದ್ರ ಸಂಸ್ಥೆಗಳ ದಬ್ಬಾಳಿಕೆಯ ಗುಣಲಕ್ಷಣಗಳು ಮತ್ತು ಮಿತಿಗಳನ್ನು ಮೀರಲು ಮತ್ತು ಉತ್ಪಾದನೆಯ ವ್ಯವಸ್ಥೆಯನ್ನು ಮೀರಲು ಪರ್ಯಾಯ ಸಿದ್ಧಾಂತಗಳು ಮತ್ತು ಆಚರಣೆಯನ್ನು ನಿರ್ಮಿಸುತ್ತದೆ. ಮಾಕ್ರ್ಸವಾದಿ ವಿಮರ್ಶೆಯು ಆಸ್ತಿತ್ವದಲ್ಲಿರುವ ಐಡಿಯಾಲಜಿಗಳ ಮತ್ತು ಶಿಕ್ಷಣದ ಆಚರಣೆಗಳ ತೀವ್ರವಾದಿ ಪರಿಶೀಲನೆಯನ್ನು ಒಳಗೊಂಡಿರುತ್ತದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನು ಕೊಳ್ಳುಬಾಕುತನದ ಬಂಡವಾಳಶಾಹಿಯ ಸಂಕೋಲೆಗಳಿಂದ ಬಿಡುಗಡೆಗೊಳಿಸಲು ಅವಶ್ಯಕವಾದ “ಕಲಿಕೆಯರಿಮೆ” ಮತ್ತು ಸಾಮಾಜಿಕ ಪರಿವರ್ತನೆಯನ್ನು ಸಹ ಒಳಗೊಂಡಿರುತ್ತದೆ. ಆ ಮೂಲಕ ಲಿಬರಲ್ ಆದ, ಪ್ರಜಾಪ್ರಭುತ್ವ ಮತ್ತು ಮಾನವತಾವಾದದ ಸಂಸ್ಕøತಿ ಮತ್ತು ಸಮಾಜದ ನಿರ್ಮಾಣಕ್ಕೆ ಸಹಕಾರಿಸುತ್ತದೆ.

ಮಾಕ್ರ್ಸವಾದೀ ಚಿಂತಕರಾದ ಗ್ರಾಮ್ಷಿ ‘ಇಟಾಲಿಯನ್ ಮಾದರಿಯ ಶಿಕ್ಷಣ ಮತ್ತು ಸಂಸ್ಕøತಿ ವಿಧಾನಗಳು ಕೇವಲ ಬೂಜ್ವಾ ಐಡಿಯಾಲಜಿಗಳನ್ನು ಮತ್ತು ಆ ಮೂಲಕ ಫ್ಯಾಸಿಸಂ ಅನ್ನು ಪುನರುತ್ಪಾದಿಸಿವೆ’ ಎಂದು ಕಟುವಾಗಿ ಟೀಕಿಸಿದರು. ಯಜಮಾನ್ಯದ ವಿರುದ್ಧ ಪ್ರತಿರೋಧವಾಗಿ ಪರ್ಯಾಯ ಸಂಸ್ಥೆಗಳಾದ ವಿದ್ಯಾಭ್ಯಾಸದಿಂದ ರಂಗಭೂಮಿವರೆಗೆ ಅಲ್ಲಿಂದ ಪತ್ರಿಕೋದ್ಯಮದ ಮೂಲಕ ಸಮಾಜವಾದ ಮತ್ತು ಪ್ರಜಾಪ್ರಭುತ್ವವಾದ ಸಮಾಜವನ್ನು ಕಟ್ಟಬೇಕೆಂದು ಪ್ರತಿಪಾದಿಸಿದರು. ನಮ್ಮ ಕಾಲಘಟ್ಟದಲ್ಲಿ ‘ಹೆರ್ಬರ್ಟ ಮಾಕ್ಯೂಸ್’ ಅವರು ಪಟ್ಟಭದ್ರ ವ್ಯವಸ್ಥೆಯ ಪ್ರಾಬಲ್ಯವನ್ನು, ದಬ್ಬಾಳಿಕೆಯನ್ನು ಪುನುರುತ್ಪಾದಿಸಲು ಒಂದು ಸೂತ್ರವಾಗಿ ಅಸ್ತಿತ್ವದಲ್ಲಿರುವ ಶಿಕ್ಷಣವು ಬಳಕೆಗೊಳ್ಳುತ್ತಿರುವ ಸಂದರ್ಭದಲ್ಲಿ ಪಟ್ಟಭದ್ರ ನೀತಿಗಳ ವಿರುದ್ಧ ಪ್ರತಿಯಾಗಿ ಪರ್ಯಾಯ ಸಂಸ್ಥೆಗಳು ಮತ್ತು ಹೊಸ “ಕಲಿಕೆಯರಿಮೆ”ಯ ಮೂಲಕ ಪ್ರಜಾಪ್ರಭುತ್ವವಾದಿ ಸಾಮಾಜಿಕ ಪರಿವರ್ತನೆಯನ್ನು, ವ್ಯಕ್ತಿಗತ ಅಭಿವೃದ್ಧಿಯನ್ನು ಪ್ರತಿಪಾದಿಸಿದರು

ಮೇಲ್ಕಾಣಿಸಿದ ಪರಂಪರೆಯ ತಳಹದಿಯ ಮೇಲೆ, ವಿಮರ್ಶಾತ್ಮಕ ಹೆಗೆಲಿಯನ್ ಚೈತನ್ಯದ ನೆಲೆಯಲ್ಲಿ ನಾನು ‘ಶಿಕ್ಷಣದ ಅಭಿಜಾತ ದಾರ್ಶನಿಕತೆಯು ಪುನನಿರ್ಮಾಣದ ಯೋಜನೆಗಳಿಗೆ ಮತ್ತು ಶಿಕ್ಷಣ ಹಾಗೂ ಸಮಾಜದ ಪ್ರಜಾಪ್ರಭುತ್ವೀಕರಣಕ್ಕೆ ಒತ್ತಾಸೆಯಾಗುತ್ತದೆ’ ಎಂದು ವಾದಿಸುತ್ತೇನೆ. ಆದರೆ ಈ ಕಟ್ಟುವಿಕೆಯ ಪ್ರಕ್ರಿಯೆಯಲ್ಲಿ ಶಾಸ್ತ್ರೀಯವಾದ ಸಮಕಾಲೀನ “ಕಲಿಕೆಯರಿಮೆ”ಗಳ ಒಂದು ನಿರ್ದಿಷ್ಟ ಸಂಪ್ರದಾಯಿಕ, ಪ್ರತಿಷ್ಟೆಯ, ದಬ್ಬಾಳಿಕೆಯ ಮೂಲತತ್ವಗಳು, ಐಡಿಯಾಲಜಿಗಳನ್ನು ತಿರಸ್ಕರಿಸುತ್ತೇನೆ. ಸಾಮಾನ್ಯ ಪದ್ಧತಿ ಮತ್ತು ಯುಟೋಪಿಯನ್ ಆಯಾಮವನ್ನು ಹೊಂದಿರುವ ಈ ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣವು ಜೀವನವು ಶಿಕ್ಷಣದ ಮೂಲಕ ಪರ್ಯಾಯವನ್ನು ಕಟ್ಟುತ್ತದೆ ಎಂದು ದಾಖಲಿಸುತ್ತದೆ. ಜಾನ್ ಡೇವೆ ಮತ್ತು ಪಶ್ಚಿಮದ ಶಾಸ್ತ್ರೀಯ ಶಿಕ್ಷಣದ ವಿಮರ್ಶಕರಾದ ಇವಾನ್ ಇಲಿಚ್ ಮತ್ತು ಪೌಲೋ ಫ್ರೇರಿ ಅವರ ಸಿದ್ಧಾಂತಗಳ ಸಹಾಯದಿಂದ ಗ್ರೀಕ್‍ನ ಕ್ಲಾಸಿಕಲ್ ಶಿಕ್ಷಣದ ದಾರ್ಶನಿಕತೆಯನ್ನು ಆಧರಿಸಿ ಉತ್ತಮ ಜೀವನ ಮಟ್ಟ ಮತ್ತು ಉತ್ತಮ ಸಮಾಜವನ್ನು ಪ್ರೋತ್ಸಾಹಿಸುವಂತಹ ಶಿಕ್ಷಣದ ಮಾದರಿಯೊಂದನ್ನು ಅಭಿವೃದ್ಧಿಪಡಿಸಬೇಕಾಗಿದೆ. ಗ್ರೀಕರಿಗೆ ದಾರ್ಶನಿಕತೆ ಎಂದರೆ ಜ್ಞಾನದ ಕುರಿತಾದ ಮಮಕಾರ (ಫಿಲೋಸೋಫಿಯ) ಮತ್ತು ಈ ದಾರ್ಶನಿಕತೆಯ ಪರಿಪಾಠವು ಮನುಜಕುಲವನ್ನು ಮತ್ತು ನಾಗರಿಕರನ್ನು ರೂಪಿಸುವಂತಹ, ಬೆಳೆಸುವಂತಹ, ಅಭಿವೃದ್ಧಿಪಡಿಸುವಂತಹ ದಾರ್ಶನಿಕತೆಯಾಗಿದೆ (ಜೇಗೆರ್,1965). ಗ್ರೀಕರಿಗೆ ‘ಭಾಷೆ ಮತ್ತು ಸಂವಹನವು ಮನುಜಕುಲವನ್ನು ಸೃಷ್ಟಿಸಿದೆ ಮತ್ತು ದಾರ್ಶನಿಕ ಸಂಭಾಷಣೆಯು ಜ್ಞಾನ ಮತ್ತು ಉತ್ತಮ ಜೀವನವನ್ನು ಹುಡುಕಾಟವೂ ಆಗಿದೆ’ ಎನ್ನುವುದು ಆದರ್ಶ ಮತ್ತು ನಂಬಿಕೆ.

ಹೌದು, ಗ್ರೀಕ್ ಸಮಾಜವು ಗುಲಾಮಿ ಸಂಸ್ಕøತಿಯ ಮೇಲೆ ನಿರ್ಮಾಣಗೊಂಡಿದೆ. ಹೀಗಾಗಿ ಕೇವಲ ಮೇಲ್ವರ್ಗದ ಜನತೆ ಅದರಲ್ಲೂ ಪುರುಷ ವರ್ಗಕ್ಕೆ ಮಾತ್ರ ಈ ಶಿಕ್ಷಣದ ಸೌಭಾಗ್ಯ ಲಭಿಸಿತು. ಅವರು ಮಾತ್ರ ನಾಗರಿಕರಾದರು. ಆದರೆ ತದನಂತರದ ಶತಮಾನಗಳಲ್ಲಿ ಗ್ರೀಕ್ ಸಂಕಲ್ಪವಾದ ‘ಪೈಡಿಯಾ’ದ ಅನುಸಾರವಾಗಿ ಶಿಕ್ಷಣವನ್ನು ಅವಶ್ಯಕವಾದ ಮೂಲತತ್ವವನ್ನಾಗಿಯೂ, ಆದರ್ಶವನ್ನಾಗಿಯೂ ರೂಪಿಸಲಾಗಿದೆ. ಆದರೆ ಈ ತತ್ವವು ಮುಂದಿನ ದಿನಗಳಲ್ಲಿ ಈ ಸಾಂಸ್ಕøತಿಕ ಒಲವುಗಳು ರೋಮಾಂಟಿಕ್ಸ್‍ನಿಂದ, ಮ್ಯಾಥ್ಯೂ ಅರ್ನಾಲ್‍ರಿಂದ ಮುಂದುವರೆದು ಪ್ರಸ್ತುತ ಸಂದರ್ಭದಲ್ಲಿ ಆದರ್ಶಮಯವಾದ ಸಂಸ್ಕøತಿಯನ್ನು ಅನಾಗರಿಕತೆಯೆಂದು ಬಿಂಬಿಸುವ, ಬುದ್ಧಿಮತ್ತೆಯನ್ನು ದೈಹಿಕ ಶ್ರಮಕ್ಕಿಂತಲೂ ಮೇಲ್ಪಟ್ಟದ್ದು ಎಂದು ಸಾಧಿಸುವ, ಸಮುದಾಯಗಳ ಹಿತಾಸಕ್ತಿಗಿಂತಲೂ ವ್ಯಕ್ತಿಗತ ನೆಲೆಯ ಬುದ್ಧಿವಂತಿಕೆ ಶ್ರೇಷ್ಠ ಎಂದು ತರ್ಕ ಕಟ್ಟುವ ಈ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ,ನಾಗರಿಕ ಹಕ್ಕುಗಳನ್ನು ಗೌಣಗೊಳಿಸುವ ಸಾಂಪ್ರದಾಯಿಕ ಪ್ರತಿಷ್ಠಿತರವರೆಗೂ ಬಂದು ನಿಂತಿದೆ

ಒಂದು ಕಡೆ ಗ್ರೀಕರು ಪ್ರಾಥಮಿಕವಾಗಿ ಸಿರಿವಂತರ ಪರವಾದ ಪರಿಕಲ್ಪನೆಯ ಶಿಕ್ಷಣವನ್ನು ಬೆಳೆಸುತ್ತಿದ್ದರೆ ಮತ್ತೊಂದು ಕಡೆ ರೋಮನ್ನರಿಗೆ ಶಿಕ್ಷಣವು ಸಾಮ್ರಾಜ್ಯಗಳ ಅವಶ್ಯಕತೆಗೆ ತಕ್ಕಂತೆ ರೂಪುಗೊಂಡಂತದ್ದಾಗಿದೆ. ಶಿಕ್ಷಣವು ರೋಮ್‍ನ ಆದರ್ಶಗಳ ತಳಹದಿಯ ಮೇಲೆ ಕಟ್ಟಲ್ಪಟ್ಟ ಸಾರ್ವತ್ರೀಕರಣಗೊಂಡ ಸಂಸ್ಕøತಿ ಮತ್ತು ನಾಗರೀಕತೆಯನ್ನು ವಿಸ್ತರಿಸುವಂತದ್ದಾಗಿದೆ. ಇದು ಮುಂದಿನ ದಿನಗಳಲ್ಲಿ ಪಶ್ಚಿಮದ ನಾಗರೀಕತೆ ಮತ್ತು ಸಂಸ್ಕøತಿಯ ಪರಿಕಲ್ಪನೆಗೆ ತಳಹದಿಯಾಯಿತು. ರೋಮನ್ ನಾಗರೀಕತೆಗೆ ಶಿಕ್ಷಣವೆಂದರೆ ಅದು ತಳಸಮುದಾಯಗಳಿಗೆ ಮೂಲಭೂತ ಕೌಶಲ್ಯ ಮತ್ತು ಸಾಕ್ಷರತೆ ತರಬೇತಿಯನ್ನು ತಲುಪಿಸುವ ಕಲಿಕೆಯಾಗಿದೆ. ಸಾಮ್ರಾಜ್ಯಶಾಹೀ ಸಮಾಜದ ಬಿಳಿ ಕಾಲರಿನ ಐಷರಾಮಿ ಮೇಲ್ವರ್ಗಕ್ಕೆ ಆಡಳಿತಾತ್ಮಕವಾದ, ಮುಂದುವರೆದ, ಪ್ರೌಢ ಶಿಕ್ಷಣವನ್ನು ರೂಪಿಸಿತು. ರೋಮ್ ಸಮಾಜದ ಕುಲೀನ, ಶ್ರೀಮಂತ ವರ್ಗದ ಮನೆತನಗಳಿಗೆ ಹೆಚ್ಚುವರಿಯಾಗಿ ಕ್ಲಾಸಿಕ್ ಮಾದರಿಯ ಖಾಸಗೀ ಶಿಕ್ಷಣವನ್ನು ಸಹ ರೂಪಿಸಿತು.

ಲ್ಯಾಟೀನ್ ಮೂಲವನ್ನು ಆಧರಿಸಿದ ಆರಂಭದ ಇಂಗ್ಲೀಷ್ ಪರಿಕಲ್ಪನೆಯ ಶಿಕ್ಷಣವು ಯುವಕರಿಗೆ ಅವರ ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ನಡುವಳಿಕೆ, ಸಂಪ್ರದಾಯಬದ್ಧ ರೂಢಿಗಳು, ಗುಣಮಟ್ಟದ ವಿಚಾರ ಮತ್ತು ವ್ಯಕ್ತಿತ್ವವನ್ನು ಪೋಷಿಸುತ್ತಿತ್ತು. ಕುತೂಹಲವೆಂದರೆ ಲ್ಯಾಟಿನ್ ಮೂಲದ ಇಂಗ್ಲೀಷ್ ಪದವಾದ ಶಿಕ್ಷಣ ಮತ್ತು ಬೋಧನೆಯನ್ನು ಮನುಷ್ಯರ ಮತ್ತು ಪ್ರಾಣಿಗಳ ತರಬೇತಿ ಮತ್ತು ಶಿಸ್ತನ್ನು ತೋರಿಸಿಕೊಡಲು ಬಳಸಲಾಗುತ್ತದೆ ಮತ್ತು ಈ ಒಳಾರ್ಥಗಳು ಆದರ್ಶ ಸಂಕಲ್ಪಗಳ ಸಂಸ್ಕøತಿಯು ಚಲಾವಣೆಯಲ್ಲಿದ್ದ 19ನೇ ಶತಮಾನದ ಕಡೆಯ ವರ್ಷಗಳವರೆಗಿದ್ದವು. 19ನೇ ಶತಮಾನದ ಕಡೆಯ ದಿನಗಳಲ್ಲಿ ಸಂಪ್ರದಾಯವಾದಿಗಳು ಮತ್ತು ‘ಡೇವೆ’ಯಂತಹ ಪ್ರಗತಿಪರರು ತಮ್ಮ “ಕಲಿಕೆಯರಿಮೆ” ಯೋಜನೆಗಳನ್ನು ಅರ್ಥಪೂರ್ಣಗೊಳಿಸಿಕೊಳ್ಳಲು ಮತ್ತು ಕ್ರಮಬದ್ಧಗೊಳಿಸಲು ಲ್ಯಾಟಿನ್ ಪದ ‘’ಎಜುಕೇಟಿಯೊ” ಕಡೆಗೆ ಮರಳಿ ಗಮನ ಹರಿಸತೊಡಗಿದರು. ಆದರೂ ಇವಾನ್ ಇಲಿಚ್ ( 1981) ಮತ್ತು ಇ.ಡಿ.ಹಿರ್ಷ (1988) ಇವರಿಬ್ಬರು ‘ಆಧುನಿಕ ಪ್ರಗತಿಪರರು ಈ ಲ್ಯಾಟಿನ್ ಮೂಲದ ‘’ಎಜುಕೇಟಿಯೊ” (ಅಂದರೆ ಚಲನಶೀಲತೆ, ವಲಸೆ, ಮತ್ತಷ್ಟು ವಿಸ್ತಾರಗೊಳ್ಳುವುದು) ಪದವನ್ನು ರೋಮನ್ “ಕಲಿಕೆಯರಿಮೆ” ಶಬ್ದವಾದ “ಎಜುಕೋ” (ಅಂದರೆ ಪೋಷಣೆ ಅಥವಾ ತರಬೇತಿ) ಶಬ್ದದೊಂದಿಗೆ ಸಮನ್ವಯಗೊಳಿಸಿರುವುದು ದುರ್ದೈವದ ಸಂಗತಿ’ ಎಂದು ಅಭಿಪ್ರಾಯಪಟ್ಟರು. ಇದರ ಫಲವಾಗಿ ಶಿಕ್ಷಕರು ಮನುಷ್ಯನೊಳಗಿನ ಸಹಜ ಸಾಮಥ್ರ್ಯವನ್ನು ಹೊರಸೆಳೆಯುವ ಪ್ಲೇಟೋ ಮತ್ತು ಗ್ರೀಕ್ ಸಂಪ್ರದಾಯದೆಡೆಗೆ ಮರಳುವಂತಹ ಪಶ್ಚಿಮದ ಆದರ್ಶದ ಅವತರಿಣಿಕೆಯು ಹುಟ್ಟಿಕೊಂಡಿತು.

ಆದರೂ ಸಹ ಇಲ್ಲಿಯತನಕವೂ ಶಿಕ್ಷಣದ ಶಾಸ್ತ್ರೀಯ ಆದರ್ಶಗಳು ಅಭಿವೃದ್ಧಿಗೊಂಡ ಮುನುಕುಲವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಪ್ರಜೆ ಮತ್ತು ರಾಜಕೀಯ ದಾರ್ಶನಿಕನಾಗಿ “ಸಿಸೆರೋ” ಇದನ್ನು ನೆನಸಿಕೊಳ್ಳುತ್ತಾನೆ. ಮಾನವೀಯ ಮೌಲ್ಯಗಳು ಮತ್ತು ತಾಳ್ಮೆಯನ್ನು ಒಳಗೊಳ್ಳುತ್ತಾ ವ್ಯಾಪಕ ಹರುಹಿಗೆ ವಿಸ್ತರಿಸಲಾಯಿತು. ಈ ವಿಶಾಲ ಹರುಹಿನ ಜ್ಞಾನವು ಪಠ್ಯದ ಸಿದ್ಧಾಂತಗಳ ದಂತಗೋಪುರಗಳನ್ನು ತಿರಸ್ಕರಿಸಿ ಮೌಲ್ಯಗಳಿಗಾಗಿ ನಿರ್ಮಿತಗೊಂಡ ಸಾರ್ವಜನಿಕ ವೇದಿಕೆ ಮತ್ತು ಅದರ ನಿಯಂತ್ರಣದ ದಿಕ್ಕಿಗೆ ಹೊರಳಿತು.

ಶಿಕ್ಷಣದ ಶಾಸ್ತ್ರೀಯ ಆದರ್ಶಗಳು ಮಾನವೀಯತೆಯ ಕಾಣ್ಮೆಯನ್ನು ಸ್ಪಷ್ಟವಾಗಿ ರೂಪಿಸಿದವು ತಮ್ಮ ಮಿತಿಯನ್ನು ಮೀರಿ ತನ್ನನ್ನೇ ಪುರೂಪಿಸಿಕೊಳ್ಳಬಲ್ಲಷ್ಟು ಸಮರ್ಥವಾಗಿದ್ದವು. ಇದರ ಜಗತ್ತು ಸಕರಾತ್ಮಕವಾದ ಹುಟ್ಟುಪರಿಚೆಯಾಗಿತ್ತು. ನಂತರದ ದಿನಗಳಲ್ಲಿ ‘ಎರ್ನೆಸ್ಟ್ ಬ್ಲಾಚ್’ ರಂತಹ ದಾರ್ಶನಿಕರು (1986) ಸುಪ್ತವಾಗಿದ್ದ ಮಾನವ ಅಂತಸತ್ವವನ್ನು ನಾಟಿ ಮಾಡಿ ಹೊರತೆಗೆಯುವುದಕ್ಕೆ ಹೆಚ್ಚಿನ ಒತ್ತನ್ನು ನೀಡುವಂತಹ ಒಂದು ಆದರ್ಶತ್ಮಕ ಆಯಾಮವನ್ನು ಪ್ರತಿಪಾದಿಸಿದರು. ಈ ಶಾಸ್ತ್ರೀಯ ಆದರ್ಶಗಳು ರೂಪಿಸುವ “ಕಲಿಕೆಯರಿಮೆ” ಮತ್ತು ಅದರ ಪರಿಪಾಠಗಳು ಮನುಷ್ಯನ ಸುಪ್ತವಾದ ಸಾಮಥ್ರ್ಯವನ್ನು ಬಿಡುಗಡೆಗೊಳಿಸುತ್ತದೆ

ಕಡೆಗೂ ನಾವು ನೆನಪಿಸಿಕೊಳ್ಳಬೇಕಾಗಿರುವುದು ಕ್ಲಾಸಿಕಲ್ ಶಿಕ್ಷಣದ ಎಲಿಟಿಸಂ ಮತ್ತು ಆದರ್ಶಮಯ ಬೇರುಗಳು ಮತ್ತು ಆ ‘ಪೈಡಿಯಾ’ ಮತ್ತು ‘ಹುಮಾನಿಟಾಸ್’ ಗಳನ್ನು ಗುಲಾಮಿ ಸಮಾಜವನ್ನು ನ್ಯಾಯಬದ್ಧಗೊಳಿಸಲು ಮತ್ತು ರೋಮನ್ನರ ವಿಚಾರದಲ್ಲಿ ರಾಜವಂಶವಕ್ಕೆ ಸಾಮ್ರಾಜ್ಯಕ್ಕೆ ಉತ್ತೇಜನ ಕೊಡಲು ಬಳಸಿಕೊಳ್ಳಲಾಗಿದೆ. ಹಿಂದಿನ ಶಿಕ್ಷಣದ ಮಾದರಿಗಳೂ ಸಹ ಪ್ರಭುತ್ವದ ಮತ್ತು ಶಕ್ತಿಕೇಂದ್ರಗಳ ಒಳಗೆ ಮತ್ತು ಅವುಗಳ ಸಂಕಥನಗಳಾಗಿಯೇ ಕಟ್ಟಲ್ಪಟ್ಟಿರುವುದು ಈ ಕ್ಲಾಸಿಕಲ್ ಆದರ್ಶಗಳ ಅಧ್ಯಯನಗಳು ಸ್ಪಷ್ಟಪಡಿಸುತ್ತವೆ. ಹೀಗಾಗಿಯೇ ಇತಿಹಾಸದ ಕಾಲಘಟ್ಟ, ಅದರ ಭೌಗೋಳಿಕ ಪರಿಧಿಗಳು ಮತ್ತು ಅದರ ಸಂಸ್ಕøತಿಗಳನ್ನು ತೀವ್ರವಾಗಿ ಬಳಸಿಕೊಂಡು ಶಿಕ್ಷಣದ ದಾರ್ಶನಿಕತೆಯನ್ನು ತಲುಪಲು ಪ್ರಯತ್ನಿಸಿದಾಗ ಕನಿಷ್ಟ ಹೊರಗಣದಿಂದಲೂ ಪಡೆದುಕೊಳ್ಳಲು ಸಾಧ್ಯವಿಲ್ಲ ಮತ್ತು ಸಿದ್ಧಾಂತ ನಿಲುವುಗಳನ್ನು ಪುನರೂಪಿಸಲು ಸಾಧ್ಯವಿಲ್ಲ. ಆದರೆ ‘ವಾಲ್ಟೇರ್ ಬೆಂಜಮಿನ್’ ಮತ್ತು ‘ಎರ್ನೆಸ್ಟ್ ಬ್ಲಾಚ್’ ತಮ್ಮ ಚಿಂತನೆಗಳಾದ “ಬಿಡುಗಡೆಯ ವಿಮರ್ಶೆಗಳು” ಮೂಲಕ ಗತಕಾಲದ ಹುರುಳುಗಳನ್ನು ಸಮಕಾಲೀನಗೊಳಿಸುತ್ತ, ಪುನರೂಪಿಸುತ್ತಲೇ ವರ್ತಮಾನದ ವಿಮರ್ಶಾತ್ಮಕ ಸಿದ್ಧಾಂತಗಳನ್ನು, ಉತ್ತಮ ಭವಿಷ್ಯಕ್ಕಾಗಿ ಮಹತ್ವದ ಕಾಣ್ಮೆಗಳನ್ನು ರೂಪಿಸುತ್ತಾರೆ
(ಮುಂದುವರೆಯುತ್ತದೆ)

Leave a Reply

Your email address will not be published.