ಲಾಟೀನ ಬೆಳಕು- 5: ನೆಲದ ಹಂಚಿಕೆಗು ಆಹಾರ ಪದ್ಧತಿಗೂ ನಂಟಿದೆ

ಡಾ. ಅನಸೂಯ ಕಾಂಬಳೆ

ಮಳೆಗಾಲ ಆಶೆ-ಭರವಸೆಗಳ ಕನಸಿನ ಕಣಜ. ಹರುಷದ ಕೂಳಿಗೆ ವರುಷದ ಕೂಳನ್ನು ಮರೆಯಬಾರದು ಎಂದು ಹಸಿವಿನ ಸಂಕಟವನ್ನು ಹೊಕ್ಕುಳಲ್ಲಿ ಹೂತು ಕುಳಿತರೂ ದೇವರೇ ಮಳೆಯಾಗಲಿ ಎಂಬ ಮೊರೆ ನಮ್ಮದು. ಮಳೆಗಾಲದಲ್ಲಿ ಕೂಲಿ ಕೆಲಸ ಇರುವುದಿಲ್ಲವಾದ್ದರಿಂದ ದಿನದ ಗಂಜಿಗೆ ತತ್ವಾರ. ವಯಸ್ಸಾದವರ, ಬಾಣಂತಿಯರನ್ನು, ಮಕ್ಕಳನ್ನು ಸೋರುವ ಗುಡಿಸಲು, ಹಸಿವು-ಅನಾರೋಗ್ಯಳಿಂದ ರಕ್ಷಿಸಿಸುವುದೇ ದೊಡ್ಡ ಚಿಂತೆ. ಮಳೆಗಾಲ ಎಷ್ಷು ಮುದಕ/ಮುದಕಿಯರನ್ನು ಕರೆದೊಯ್ಯಿತು ಎಂದು ಲೆಕ್ಕಹಾಕಿದ ಸನ್ನಿವೇಶಗಳೂ ಉಂಟು. ಮಳೆ ಇದ್ದರೆ ಬೆಳೆ; ಬೆಳೆ ಬಂದರೆ ಒಂದ್ಹೊತ್ತು ಊಟಕ್ಕಾದೆರೂ ದುಡಿಯಬಹುದು ಎಂದು ಭರವಸೆಯ ಬೆಳಕಲಿ ಹಸಿವ ಸಂಕಟವನ್ನು ಗಟಗಟನೆ ನುಂಗುª ನಮ್ಮ ಕೇರಿಯ ಹೊಟ್ಟೆ ಬೆಳೆಯುತ್ತಲೇ ಇರುತ್ತದೆ.

ನಾವಿನ್ನೂ ಊರಲ್ಲೇ ಇದ್ದೆವು. ತೋಟಕ್ಕೆ ನಮ್ಮ ವಸತಿಯನ್ನು ಬದಲಿಸರಲಿಲ್ಲ. ನಾನಿನ್ನೂ ಶಾಲೆಗೂ ಹೋಗುತ್ತಿರಲಿಲ್ಲ. ನನ್ನ ತಂದೆ ಈ ಮೊದಲೇ ಹೇಳಿದಂತೆ ಹೊಟೇಲು ಪ್ರವೇಶದಂತಹ ಅಸ್ಪøಶ್ಯತಾಚರಣೆಯ ವಿರುದ್ದ ಹೋರಾಟ ಆರಂಭಿಸಿದ್ದರು. ಸತ್ತದನ ತಿನ್ನದಂತೆ ನಮ್ಮ ಕೇರಿಯ ಜನರಿಗೆ ತಿಳುವಳಿಕೆ ಮೂಡಿಸುತ್ತಿದ್ದರು. ನಮ್ಮ ಕೇರಿಯ ಅದೇ ತಾನೆ ಅಕ್ಷರ ಕಲಿಕೆ ಆರಂಭಿಸಿದ್ದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಸತ್ತ ದನದ ಮೇಲೆ ಚಿಮಣಿ ಎಣ್ಣೆ (ಕೆರೋಶಿನ್) ಸುರಿದು ಅದನ್ನು ತಿನ್ನದಂತೆ ತಡೆಯುತ್ತಿದ್ದರು. ಆದರೂ ಅಪ್ಪನಿಗೆ ಗೊತ್ತಾಗದಂತೆ ತಿನ್ನುವುದು ಮುಂದುವರಿದಿತ್ತು. ಇಂಥ ಮಳೆಗಾಲದ ಒಂದು ದಿನ ಸಾವುಕಾರ (ಮೇಲ್ಜಾತಿ) ರೊಬ್ಬರ ಎಮ್ಮೆ ಸತ್ತಿತ್ತು. ವಾರವಿಡೀ ಮಳೆ ಸುರಿಯುತ್ತಿದ್ದುದರಿಂದ ಇತ್ತ ಕೂಲಿ ಕೆಲಸವೂ ಇಲ್ಲದೆ ಅತ್ತ ಹೊಟ್ಟೆಗೆ ಅನ್ನವಿಲ್ಲದೆ ಮಳೆಚಳಿಯಿಂದ ಬಳಲಿ ಜನಕ್ಕೆ ಅದೊಂದು ಸಂಭ್ರಮದ ಸಂಗತಿಯಾಗಿತ್ತು. ಸತ್ತ ದನವನ್ನು ಎಳೆಯಲು ನಮ್ಮ ಜನರೇ ಹೋಗುತ್ತಿದ್ದುದರಿಂದ ಅದನ್ನು ಎಳೆದು ತಂದರು. ಅದನ್ನು ಕೊಯ್ದು, ಚರ್ಮ ಸುಲಿದು ಮಾಂಸ-ಮೂಳೆಗಳನ್ನು ತಗೆದು ಮೂರು ಭಾಗ ಮಾಡಿ ಪಾಲು ಮಾಡಿಕೊಂಡರು. ಎಕೆಂದರೆ ಮೂಲದಲ್ಲಿ ಒಬ್ಬ ತಂದೆ-ತಾಯಿಯ ಮೂರು ಮಕ್ಕಳು (ಅಣ್ಣ_ತಮ್ಮಂದಿರು) ಮದುವೆ-ಕುಟುಂಬಗಳಾಗಿ ಬೆಳೆದು ಈಗ ಕೇರಿಯಲ್ಲಿ ಮೂರು ಓಣಿಗಳು ನಿರ್ಮಾಣವಾಗಿದ್ದವು. ಈ ಮೂರು ಪಾಲುಗಳು ಅನಂತರ ಅವರವರ ಓಣಿಯಲ್ಲಿ ಎಷ್ಟು ಕುಟುಂಬ(ಮನೆ) ಗಳಿವೆಯೋ ಅಷ್ಟು ಸಮಪಾಲು(ಗುಂಪಿ)ಗಳನ್ನು ಮಾಡಿ ಹಂಚಿಕೊಂಡು ತನ್ನುವುದು ನಮ್ಮ ಕೇರಿಯು ಪಾಲಿಸುತ್ತಿದ್ದ ‘ಸಾಮಾಜಿಕ ನ್ಯಾಯ’ವಾಗಿತ್ತು.

ಸಾವುಕಾರರ ಸತ್ತ ಎಮ್ಮೆಯ ಮೂಳೆ ಮಾಂಸಗಳನ್ನು ಹಂಚಿಕೊಂಡು ಉಣ್ಣುವ ಸಂಭ್ರಮದಲ್ಲಿ ತಣ್ಣಗಿದ್ದ ಒಲೆಗಳು ಹೊತ್ತಿಕೊಂಡು ಎಲ್ಲ ಮನೆಗಳ ಮೇಲೆ ಹೊಗೆಯಾಡುತ್ತಿತ್ತು. ಮಳೆಗಾಲದಲ್ಲಿ ಉರುವಲು/ಕಟ್ಟಿಗೆಯ ತೊಂದರೆಯೂ ಆಗುತ್ತಿರುತ್ತದೆ. ಕೆಲವರು ಮಳೆಗಾಲಕ್ಕೆ ಮುಂಚೆಯೇ ಕಟ್ಟಿಗೆಯನ್ನು ಸಂಗ್ರಹಿಸಿಟ್ಟುಕೊಂಡಿದ್ದರೆ ಇನ್ನು ಕೆಲವರು ಸುತ್ತಮುತ್ತಲಿನ ಹೊಲಗಳ ಬೇಲಿಗಳನ್ನು ಕದ್ದು ತಂದು ಒಲೆ ಹೊತ್ತಿಸುತ್ತಿದ್ದರು.
ನಾವು ಮಾಂಸವನ್ನು ಖಂಡ ಎಂದು ಕರೆಯುತ್ತಿದ್ದೆವು. ಅದನ್ನು ಖಂಡದ ವಣಗಿ ಎಂದು ಕರೆಯುವುದು ರೂಢಿ. ಈಗಲೂ ನಮ್ಮ ಊರಲ್ಲಿ ತರಕಾರಿ, ಕಾಯಿಫಲ್ಯೆ ಎಂದು ಕರೆಯದೆ ವಣಗಿ ಎಂದೇ ಕರೆಯುವ ರೂಢಿ ಇದೆ. ನಮ್ಮದು ಮಹಾರಾಷ್ಟ್ರದ ಗಡಿಭಾಗ. ನಮಗೆ ಬಂದ ಖಂಡದ ಪಾಲನ್ನು ನಮ್ಮ ಆಯಿ(ತಂದೆಯ ತಾಯಿ) ತಂದಳು. ಅದನ್ನು ಮೂರು ಬಾರಿ ತೊಳೆದು ಕುದಿಯಲು ಇಟ್ಟಳು. ನನ್ನ ತಾಯಿ ಒರಳಲ್ಲಿ ಮೆಣಸಿನಕಾಯಿ ಖಾರ ಕುಟ್ಟುತ್ತ ಕುಳಿತ್ತಿದ್ದಳು. ಇತ್ತ ಖಂಡದ ವಾಸನೆ ಅತ್ತ ಮಸಾಲೆ ಖಾರದ ವಾಸನೆ ಮನೆಯಲ್ಲ ಘಮಘಮಿಸುತ್ತಿತ್ತು. ನಾನು ಬಾಗಿಲ(ಹೊಸ್ತಿಲು) ಮೇಲೆ ಮಿಕಮಿಕ ನೋಡುತ್ತ ಕುಳಿತ್ತಿದ್ದೆ. ನನ್ನ ತಾಯಿ ಅವ(ನನ್ನ ತಂದೆ) ಬಂದರೆ ಬೈಯುತ್ತಾನೆಂದು ಬೇಗ ಬೇಗ ವಣಗಿ ಮಾಡಿ ಎಂದು ಒತ್ತಾಯಿಸುತ್ತಿದ್ದಳು. ಅವ್ವನಿಗೆ ಖಾರ ಕುಟ್ಟಲು ಸರಿಯಾಗಿ ಬರುತ್ತಿರಲ್ಲಿಲ್ಲವಾದರು ಕಷ್ಟಪಟ್ಟು ಹಾರಿ ಎತ್ತಿ ಎತ್ತಿ ಹಾಕಿ ಕುಟ್ಟುತ್ತಿದ್ದಳು. ಆಯಿ ಖಂಡ ಕುದ್ದಿದೆಯೆಂದು ಸಪ್ಪಾನ ಚೂರು ತಿನ್ನು ಬಾ ಎಂದು ನನ್ನ ಕರೆದು ಒಂದು ಸಣ್ಣ ಪ್ಲೇಟಿನಲ್ಲಿ ನಾಲ್ಕು ಚೂರು ಹಾಕಿ ನನಗೆ ಕೊಟ್ಟು ತಾನೂ ಒಂದು ತಾಟಿನಲ್ಲಿ ಹಾಕಿಕೊಂಡು ತಿನ್ನ ತೊಡಗಿದಳು. ಅವ್ವನಿಗೂ ಆಯಿಗೂ ಆಗುತ್ತಿರಲಿಲ್ಲವಾದ್ದರಿಂದ ಅವ್ವನನ್ನು ತಿನ್ನಲು ಕರೆಯಲಿಲ್ಲ. ನನಗೂ ಅವ್ವನಿಗೆ ಕೊಟ್ಟು ತಿನ್ನಬೇಕು ಎಂಬ ತಿಳುವಳಿಕೆ ಇರಲಿಲ್ಲ. ಅವ್ವ ಸಿಟ್ಟಿನಿಂದ ದಪದಪನೇ ಖಾರ ಕುಟ್ಟ ತೊಡಗಿದಳು.

ಅಪ್ಪ ಶಾಲೆಯಿಂದ ಮಧ್ಯಾಹ್ನ ಊಟಕ್ಕೆ ಬರುವ ಹೊತ್ತು. ಅಪ್ಪ ಬರುವಷ್ಟರಲ್ಲಿ ತಿಂದು ಗಡಿಗೆ ಖಾಲಿ ಮಾಡಿ ತೊಳೆದಿಡಬೇಕಿತ್ತು. ಅಪ್ಪ ಪರಮಾನಂದವಾಡಿಯಿಂದ ಊರಿಗೆ ಬರಲು ಅರ್ಧಗಂಟೆಯಾದರು ಬೇಕಿತ್ತು. ವಾಹನ ಸೌಕರ್ಯವಿಲ್ಲದ ಕಾರಣ ನಮ್ಮ ಹಳ್ಳಿಗೆ ನಡದೇ ಬರಬೇಕಿತ್ತು. ಯಾವುದಾದರು ಎತ್ತಿನ ಗಾಡಿಗಳು ಊರ ಕಡೆ ಬರುತ್ತಿದ್ದರೆ ಗಾಡಿಯವರು ಅಪ್ಪನನ್ನು ಕರೆದುಕೊಂಡು ಬರುತಿದ್ದರು. ಅಂದು ಎನಾಯಿತೊ ಗೊತ್ತಿಲ್ಲಾ. ಅಪ್ಪ ಬೇಗನೆ ಬಂದರು. ಆಯಿ ವಣಗಿಗೆ ಖಾರ ಹಾಕುತ್ತಿದ್ದಳು. ಊರ ಹೊರಗೇ ಅಪ್ಪನಿಗೆ ವಿಷಯ ತಿಳಿದಿತ್ತು. ಓಣಿ ಓಣಿಗಳ ತುಂಬ ದನದ ಮಾಂಸ ಗಮಗುಡಿಸುತ್ತಿತ್ತು. ಅಪ್ಪ ಈಗ ಯಾರನ್ನು ಬೈಯಬೇಕಿತ್ತು. ರೌದ್ರಾವತಾರ ತಾಳಿ ಕೂಗಾಡುತ್ತ ಬರುವುದು ದೂರದಲ್ಲಿ ಕಂಡಿತು. ಆಯಿ ಓಡಿ ಹೋಗಿ ಬೋಗೊಣಿ ಎತ್ತಿ ತಂದು ಆಚೆ ಓಣಿಯ (ಪಕ್ಕದ ಮನೆ) ಪುತಳ್ಳವ್ವಾಯಿ ಮನೆಯಲ್ಲಿ ಇಟ್ಟಳು. ನನ್ನ ಕೈಯಲ್ಲಿ ತಿನ್ನುತ್ತಿರುವ ಚೂರಿನ ಪ್ಲೇಟಿತ್ತು. ಅಪ್ಪನ ಅಬ್ಬರ ಹೇಳತೀರದು. ಕೂಗಾಡೇ ಕೂಗಾಡಿದರು. ಕೇರಿಯಲ್ಲ ಥರಥರ. ಯಾರು ಎದ್ದು ಬಂದು ಕೇಳಲಿಲ್ಲ. ನನ್ನ ಆಯಿ ಆಣೆ ಮಾಡಿ ಹೇಳುತಿದ್ದಳು. ನಾನು ಸತ್ತ ದನದ ಖಂಡಾ ತಂದಿಲ್ಲಾ. ಬಾಯಿ ಮಾಡಬ್ಯಾಡ. ಹಸದ ಹೊಟ್ಟಿಗೆ ಸತ್ತ ದನಾ ಏನು? ಜೀವಂತ ದನಾ ಏನು? ಬಾಯಲ್ಲೇ ಸಣ್ಣಗೆ ಒಟಗುಟ್ಟಿದಳು. ನಾನು ಅಪ್ಪನ ಅವತಾರ ನೋಡಿ ಪ್ಲೇಟನ್ನು ಬಾಗಿಲ ಕೆಳಗೆ ಸರಿಸಿ ಬಾಯಿ ಒರೆಸಿಕಂಡು ಮೂಲೆಯಲ್ಲಿ ಕೂಳಿತು ಬಿಟ್ಟೆ. ಸ್ವಲ್ಪ ಹೊತ್ತಿನ ಮೇಲೆ ಅಪ್ಪ ಶಾಂತವಾದರು. ಅಸಾಯಕತೆ ಅವರೊಳಗೆ ಕುದಿಯುತ್ತಿತ್ತು. ಊಟ ಮಾಡಿ ಮತ್ತೆ ಶಾಲೆಗೆ ಹೋದರು. ಅಪ್ಪ ಹೋದದ್ದನ್ನು ಖಾತರಿ ಮಾಡಿಕಂಡು ಆಯಿ ಪಕ್ಕದ ಮನೆಯಿಂದ ಖಂಡದ ಒಣಗಿ ಬೋಗೊಣಿ ತರಲು ಹೋದಳು.

“ಅಯ್ಯ! ನಿಮಗ ಬೇಕೇನು? … ಮಾಸ್ತರ ಅಷ್ಟ ಹಾರ್ಯಡೋದು ನೋಡಿ ನೀ ವೈಯಾಂಗಿಲ್ಲ ಅಂತ ಅದರಾಗಿಂದ ಒಂದೀಟ ಹಾಕೋಡು ತಿಂದೆವು” ಎಂದಳು. ಆಯಿ ಬೇಸರದಿಂದ ಬೋಗಣಿ ತಂದು ಚಮಚಾ ಹಾಕಿ ತಿರುವಿ ನೋಡಿದಳು. ಅದರೊಳಗಿದ್ದ ಒಂದು ಮೂಳೆ ಇರಲಿಲ್ಲ. ಒಂದಿಷ್ಟು ಚೂರು ತಿಂದಿದ್ದರು. ಸಿಟ್ಟಿನಿಂದ ಎದ್ದ ಆಯಿ ಅವರ ಮನಗೆ ಹೋಗಿ ನಮ್ಮ ಮೂಳಿ ಯಾಕ ತಿಂದೀರಿ ಎಂದು ಜಗಳ ತೆಗೆದಳು. ನೀ ಮತ್ತ ಬಂದ ವೈಯತಿ ಅಂತ ನಮಗ್ಯಾನು ಗೊತ್ತು. ಕಲ್ಲಪ ಎಷ್ಟು ಬಾಯಿ ಮಾಡ್ದ. ಅವಗ್ಯಾನ ತಿಂಗಳಾ ಸುಂಕ ಇಲ್ಲದ ರಾಶಿ(ಪಗಾರ) ಬರತ್ತೈತಿ. ನಮ್ಮಂಗ ಹಸದ ಸಾಯಬೇಕಾಗಿಲ್ಲ’ ಎಂದು ಸಿಟ್ಟಿನಿಂದ ತಪ್ಪೊ ಸರಿಯೋ ತಳಿಯದೆ ಒಳಗೆ ಹೋದಳು.

ಕ್ರಮೇಣ ಅಪ್ಪ ಮೂಡಿಸಿದ ಅರಿವಿನಿಂದಾಗಿ ಸತ್ತ ದನ ತಿನ್ನುವುದು ನಿಂತಿತು. ಮುಂದೆ ನಾವು ಊರಿನಿಂದ ತೋಟಕ್ಕೆ ನಮ್ಮ ವಸತಿಯನ್ನು ಬದಲಾಸಿದ್ದೆವು. ನಾನು ಅಪ್ಪನೊಂದಿಗೆ ಪರಮಾನಂದವಾಡಿ ಶಾಲೆಗೆ ಹೋಗುತ್ತಿದ್ದೆ. ನಾನು ಎಷ್ಟನೆಯ ತರಗತಿಯಲ್ಲಿ ಓದುತ್ತಿದ್ದೆ ಗೊತ್ತಿಲ್ಲ. ಆ ವರ್ಷ ವಿಪರೀತ ಮಳೆ ಹಿಡದಿತ್ತು. ನಮ್ಮ ಗುಡಿಸಲುಳೆಲ್ಲ ಸೋರುತ್ತಿದ್ದವು. ಮನೆಯಲ ಜೌಗು ಹಿಡಿದು ಕೆಂಜಗಗಳು ಎದ್ದಿದ್ದವು. ಒಲೆಯಲ್ಲೂ ನೀರು ಒಸರುತ್ತಿದ್ದುದರಿಂz ಒಲೆ ಹೊತ್ತಿಸಲು ಕಷ್ಟವಾಗುತ್ತಿತ್ತು. ಒಣ ಬೂದಿ ಹಾಕಿ ನೆಲದ ನೀರನ್ನು ಇಂಗಿಸಿ ಬೂದಿ ಬಳಿದು ಚೆಲ್ಲಬೇಕಾಗಿತ್ತು. ಗೋಣಿ ಚೀಲ ಹಾಸಿಕೊಂಡು ಕೂಡ್ರಬೇಕಿತ್ತು. ಕೂಲಿ ಕೆಲಸವಿಲ್ಲದ್ದರಿಂದ ಊಟಕ್ಕೂ ಜನಗಳಿಗೆ ಚಿಂತೆ ಇತ್ತು.’¸ಸರಕಾರದವರು ಸಮುದ್ರದಲ್ಲಿ ಬಾಂಬ್ ಹಾಕಿದ್ದರಿಂದ ಸಮುದ್ರ ಸಿಟ್ಟಾಗಿ ಉಕ್ಕೇರಿ ಮಳೆ ಬರುತ್ತಿದೆ. ಅದು ಯಾವಾಗ ಶಾಂತವಾಗುತ್ತೋ ಆಗ ಮಳೆ ಕಮ್ಮಿ ಆಗುತ್ತೆ’ ಅಂv ಜ£ ಮಾತಾಡಿಕೊಳ್ಳುತ್ತಿದ್ದರು. ಹೀಗೆ ಮಳೆಯ ಮುನಿಸಿಗೆ ಸರಕಾರಿ ಅಣುಬಾಂಬ್ ಕಾರಣ ಎಂದು ಜನ ನಂಬಿದ್ದರಿಂದ ಮಳೆ ನಿಲ್ಲುವದಿಲ್ಲ ಎಂಬ ನಂಬಿಕೆ ಅವರಲ್ಲಿ ಗಾಢವಾಗಿತ್ತು. ಮಳೆ ಸ್ವಲ್ಪ ಬರವು(ಬಿಡುವು)ತೆಗೆದಾಗ ಕಬ್ಬಿನ ಗದ್ದೆಯಲ್ಲಿ ಕಳಿಗೆ ಹಿರಿಯುವ ಕೆಲಸ ಸಿಗುತ್ತಿತ್ತು. ನಮ್ಮ ಎಡಗಡೆ ಮನೆಯಲ್ಲಿ ನಾಲ್ಕು ಜನ ಅಣ್ಣ_ತಮ್ಮಂದಿರು ಮೂರು ಪ್ರತ್ಯೇಕ ಗುಡಿಸಲುಗಳಲ್ಲಿ ವಾಸವಾಗಿದ್ದರು. ಅದರಲ್ಲಿ ಕಿರಿಯ ತಮ್ಮನಿಗೆ ಹೆಚ್ಚು ಮಕ್ಕಳಿದ್ದು, ಎಲ್ಲರಿಗಿಂತ ದುಸ್ಥಿತಿಯಲ್ಲಿದ್ದನು.

ಇನ್ನೂ ಸಾವಕಾರ ಮನೆಯ ಆಯಗಾರಿಕೆ ಮಾಡುತ್ತಿದ್ದರು. ಇಂಥ ಕೀಸಲಿಟ್ಟ ಮಳೆಯಲ್ಲಿ ಅವರಿಗೆ ಉಪವಾಸ-ವನವಾಸವೇ ಗತಿಯಾಗಿತ್ತು. ಅಂಥ ಸಮಯದಲ್ಲೇ ಅವರ ಸಾವುಕಾgರ ವಯಸ್ಸಾದ ಎಮ್ಮೆ ಯಾವುದೋ ರೋಗ ಬಂದು ಸತ್ತಿತು. ಅದನ್ನು ಎಳೆದು ರಸ್ತೆ ಬದಿಯ ಹೊಲದ ದಂಡೆಗೆ ತಂದು ಚರ್ಮ ಸುಲಿದು ಅದರ ನೊಣ(ಕೊಬ್ಬು) ತೆಗೆದು ತಂದು ಕರಗೊಳಿ ಕಾಸಿ ತಿಂದರು. ಅದರ ಬಸ್ಕಿ ಮತ್ತು ಚರ್ಮವನ್ನು ಪರಮಾನಂದವಾಡಿಗೆ ಹೋಗಿ ಮಾರಿ ಅದರಿಂದ ಬಂದ ಹಣದಿಂದ ಗೋವಿನ ಜೋಳ ಹಾಗು ದಿನಸಿ ಸಾಮಾನು ತಂದು ಅಡುಗೆ ಮಾಡಿ ಉಂಡರು. ಆಗಲೇ ಸತ್ತ ದನ ತಿನ್ನುವುದನ್ನು ಬಿಟ್ಟಿದ್ದ ಉಳಿದವರು ಅವರನ್ನು ಆಡಿಕೊಂಡು ನಕ್ಕರು; ಅಣಕಿಸಿದರು. ಅವರು ಮೂರ್ನಾಲ್ಕು ದಿನ ಮನೆಯಿಂದ ಹೊರಗೆ ಬರದೆ, ಮುಖಕೊಟ್ಟು ಯಾರೊಂದಿಗೂ ಮಾತನಾಡದೆ ಒಳಗೇ ಉಳಿದರು. ಹಸಿವು-ಅವಮಾನ ಅವರನ್ನು ನುಣ್ಣಗಾಗಿಸಿದ್ದವು. ಹಸಿವು ಅವರನ್ನು ಅಸ್ಪøಶ್ಯರಲ್ಲಿಯೇ ಅಸ್ಪøಶ್ಯರನ್ನಾಗಿಸಿತ್ತು. ಇದು ನೆಲ(ಕೂಲಿ) ನಂಬಿದವರ ಸ್ಥಿತಿ.ನೆಲದ ಹಂಚಿಕೆಗೂ ಮಾಂಸಾಹಾರಕ್ಕೂ ಸಂಬಂದವಿದೆ. ನೆಲ ಹೊಂದಿ(ಒಡೆಯರ) ದವರ ನೆಲ (ಕೂಲಿ) ನಂಬಿದವರ ಆಂತರವನ್ನು ಹೇಳುತ್ತಿದೆ. ಅಂಚಿನ ಜನರ ಸಮುದಾಯದ ಅಪಮಾನಗಳು ಆರ್ಥಿಕ ಅಸಮಾನ ಹಂಚಿಕೆಯನ್ನಾಧರಿಸಿವೆ.

Leave a Reply

Your email address will not be published.