ರವೀಂದ್ರನಾಥ ಠಾಕೂರ್ :ಚಿತ್ರಕಲೆ ಮತ್ತು ಆಧುನಿಕ ಪ್ರಜ್ಞೆ

ಆರ್. ಶಿವಕುಮಾರ್ : ಅನುವಾದ- ಬಿ.ಆರ್ ವಿಶ್ವನಾಥ್

ಆರ್. ಶಿವಕುಮಾರ್   ಅವರ ‘ರವೀಂದ್ರನಾಥ ಠಾಕೂರ್ :ಚಿತ್ರಕಲೆ ಮತ್ತು ಆಧುನಿಕ ಪ್ರಜ್ಞೆ’ ಎಂಬ ಕೃತಿಯ ಆಯ್ದ ಭಾಗ.  ಅನುವಾದ -ಬಿ. ಆರ್ ವಿಶ್ವನಾಥ್  : ಪ್ರಕಟಣೆ- ಕೆ. ವಿ. ಸುಬ್ಬಣ್ಣ ಆಪ್ತ ರಂಗಮಂದಿರ .ಈ ಕೃತಿಯು ೧೩. ೦೧. ೨೦೧೬ರಂದು ಬಿಡುಗಡೆಯಾಗಲಿದೆ. 

ರವೀಂದ್ರನಾಥ ಠಾಕೂರರಿಗೆ ತಾನು ಚಿತ್ರಕಲಾವಿದನಾಗಬೇಕು ಎಂಬ ಆಸೆಯೊಂದು ಮೊದಲಿನಿಂದಲೂ ಇತ್ತು. ಹಾಗೆಂದು ಅವರೇ ಹೇಳಿಕೊಂಡಿದ್ದಾರೆ. ಬರವಣಿಗೆ, ಸಂಗೀತ, ನಾಟಕ ರಚನೆ ಹಾಗೂ ನಟನೆಯ ಕೌಶಲಗಳು ಅವರ ಬಂಧುಬಳಗದವರಿಗೆ, ಯಾವುದೇ ಪೂರ್ವಸಿದ್ಧ ತರಬೇತಿ ಇಲ್ಲದೇ, ಅತ್ಯಂತ ಸಹಜವಾಗಿ ಒಲಿದು ಬಂದಿದ್ದವು. ಇಂಥ ಕಲೆಗಳಲ್ಲಿ ರವೀಂದ್ರನಾಥರು ಅವರೆಲ್ಲರಿಗಿಂತ ಹೆಚ್ಚು ಪ್ರತಿಭಾವಂತರೂ ಆಗಿದ್ದರು. ಆದರೆ ಚಿತ್ರಕಲೆ ಮಾತ್ರ ಅವರಿಗೆ ಅಷ್ಟು ಸಲೀಸಾಗಿ ದಕ್ಕಿರಲಿಲ್ಲ. ಅದರ ಸಿದ್ಧಿಗಾಗಿ ಸುಮಾರು ನಲವತ್ತನೇ ವಯಸ್ಸಿನವರೆಗೂ ಪ್ರಯತ್ನಿಸುತ್ತಲೇ ಇದ್ದರು. ಅವರ ಅನೇಕ ಪತ್ರಗಳು ಮತ್ತು ನೆನಪುಗಳಲ್ಲಿ ಈಸೂಚನೆಗಳು ದಾಖಲಾಗಿವೆ. ಆವೇಳೆಗಾಗಲೇಅವರೊಬ್ಬಪ್ರಸಿದ್ಧಸಾಹಿತಿಯಾಗಿದ್ದರು.

guruನಾನೊಂದು ಸ್ಕೆಚ್ ಬುಕ್ ಹಿಡಿದು ಚಿತ್ರ ಬಿಡಿಸಲು ಕುಳಿತಿದ್ದೇನೆಂದರೆ ನಿನಗೆ ಆಶ್ಚರ್ಯವಾಗಬಹುದು. ಈ ಚಿತ್ರಗಳು ಪ್ಯಾರಿಸ್‌ನ ಯಾವುದೇ ಪ್ರದರ್ಶನಾಲಯಕ್ಕಾಗಿ ರಚಿಸಿರುವುದಲ್ಲ. ಅಥವಾ ಯಾವುದೇ ರಾಷ್ಟ್ರೀಯ ಕಲಾಸಂಗ್ರಹಾಲಯವೇ ಆದರೂ ಈ. ಚಿತ್ರಗಳನ್ನು ಜನರಿಗೆ ಹೆಚ್ಚಿನ ತೆರಿಗೆ ಹಾಕಿ. ಕೊಂಡುಕೊಳ್ಳಬಹುದು ಎಂಬ ಕಿಂಚಿತ್ ಎಣಿಕೆಯೂ ನನಗಿಲ್ಲ. ಆದರೆ, ಹೆತ್ತವಳು ತನ್ನ ಮಕ್ಕಳ ಕುಂದುಕೊರತೆಗಳೇನೇ ಇದ್ದರೂ ಅವರಲ್ಲಿ ಅತಿಯಾದ ಪ್ರೀತಿ ತೋರುತ್ತಾಳೆ. ಹಾಗೆಯೇ ಅನಾಯಾಸವಾಗಿ ಬಂದಿರುವ ಈ ಚಿತ್ರರಚನೆಯ ಕೌಶಲಕ್ಕೆ ನಾನು ಮರುಳಾಗಿದ್ದೇನೆ.”.

ಹೀಗೆಂದು ೧೯೦೦ರಲ್ಲಿ, ಪ್ರಸಿದ್ಧ ವಿಜ್ಞಾನಿ ಜಗದೀಶ್ಚಂದ್ರ ಬೋಸರಿಗೆ ಬರೆದ ಪತ್ರವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ ಪೆನ್ಸಿಲ್‌ಗಿಂತ ರಬ್ಬರನ್ನೇ ತಾನು ಹೆಚ್ಚಾಗಿ…. ಬಳಸುತ್ತಿದ್ದೇನೆಂದು…. ರವೀಂದ್ರನಾಥರಿಗೆ…. ನಂತರದಲ್ಲಿ ಗಮನಕ್ಕೆ ಬಂತು. ಈ ರೀತಿ ತಿದ್ದಿತೀಡಿ ರಚಿಸಿದಂಥ ತಮ್ಮ ಅಂದಿನ ಚಿತ್ರಗಳ ಬಗ್ಗೆ. ಅತೃಪ್ತಿಯೂ ಆಗಿ, ಚಿತ್ರಕಲೆ ತನಗಲ್ಲ ಎಂದು ನಿರ್ಧರಿಸಿದ್ದರು.

ಮುಂದೆ, ಇಪ್ಪತ್ತನಾಲ್ಕು ವರ್ಷಗಳ ನಂತರ, ಅವರ ನೋಟ್ ಪುಸ್ತಕದಲ್ಲಿಕವನಗಳಜೊತೆಗಿದ್ದಗೀಚುಚಿತ್ರಗಳನ್ನು, ಸ್ಪಾನಿಷ್ ಹಾಗೂ ಫ್ರೆಂಚ್ ಭಾಷೆಗಳಲ್ಲಿ ಪ್ರಸಿದ್ಧ ಲೇಖಕಿಯಾದವಿಕ್ಟೋರಿಯಾಒಕಾಂಪೊ(Victoria Ocampo)ಗಮನಿಸಿದರು. ನಂತರ‘ಪೂರಬಿ’(.ಸಂಧ್ಯಾರಾಗ.)ಕವನ ಸಂಕಲನದಲ್ಲಿ ಅವರ ಕವಿತೆಗಳ ಜೊತೆಗೆ ಆ ಚಿತ್ರಗಳೂ

ಬೆಳಕು ಕಂಡವು. ಒಕಾಂಪೊ ಅವರ ಪ್ರಕಾರ, “ತಮ್ಮ ಬರೆಹವನ್ನು ತಿದ್ದಿತೀಡುವುದು ರವೀಂದ್ರನಾಥರಿಗೆ ಒಂದು ಆಟ. ಚರಣದಿಂದ ಚರಣಕ್ಕೆ ಹರಿಯುವ ಪೆನ್ನಿನ ಗೆರೆಗಳು ಒಮ್ಮೆಲೇ. ಜೀವಂತವಾಗಿಪುಟಿದು, ಪ್ರಾಗೈತಿಹಾಸಿಕ. ಪೆಡಂಭೂತಗಳಂತೆ, ಪಕ್ಷಿಗಳಾಗಿ, ವಿಕೃತ ರೂಪದ ಮುಖಗಳಾಗಿ ಇಲ್ಲಿ ತೋರುತ್ತವೆ.” .

ಆರು ವರ್ಷಗಳ ನಂತರ ೧೯೩೦ರಲ್ಲಿ, ಆ ಚಿತ್ರಗಳನ್ನು ಪ್ಯಾರಿಸ್‌ನಲ್ಲಿ ಪ್ರದರ್ಶಿಸಲೂ ಆಕೆ ಅವರಿಗೆ ಸಹಾಯಮಾಡಿದರು.

ಆ ಕಲಾಕೃತಿಗಳು ಯೂರೋಪ್ ಮತ್ತು ಅಮೇರಿಕಾಗಳಲ್ಲಿ ಸರಣಿ ಪ್ರದರ್ಶನಗಳನ್ನು ಕಂಡವು. ನುರಿತ ಕಲಾವಿದರು ಹಾಗೂ ಕಲಾಪೋಷಕರು ಇವುಗಳನ್ನು ಮೆಚ್ಚಿಕೊಂಡರು. ಹಣದ ಮುಗ್ಗಟ್ಟಿನ ಪರಿಸ್ಥಿತಿಯಲ್ಲೂ ಬರ್ಲಿನ್‌ನ ರಾಷ್ಟ್ರೀಯ ಕಲಾಸಂಗ್ರಹಾಲಯವು ಅವರ ಕೆಲವು ಕಲಾಕೃತಿಗಳನ್ನು ಕೊಂಡುಕೊಳ್ಳಲು ಮುಂದಾಯಿತು. ಜರ್ಮನಿಯು ಇದಕ್ಕೆ ಮೊದಲೂ ಅವರ ಸಾಹಿತ್ಯವನ್ನು ಹೀಗೇ ಮುಕ್ತಮನಸ್ಸಿನಿಂದ ಸ್ವೀಕರಿಸಿತ್ತು.ಈಗ ತಮ್ಮ ಚಿತ್ರಕಲೆಗೆ ಜರ್ಮನಿಯು ನೀಡಿದ ಅಪಾರ ಗೌರವಕ್ಕೆ ಮಾರುಹೋದ ರವೀಂದ್ರನಾಥರು,ತಮ್ಮ ಐದು ಕಲಾಕೃತಿಗಳನ್ನು ಮೇಲೆ ಹೇಳಿದ ಸಂಗ್ರಹಾಲಯಕ್ಕೆ ಕೊಡುಗೆಯಾಗಿ ಕೊಟ್ಟರು. ಮುಂದೆ ಹಿಟ್ಲರನು ‘ಅವನತಿಗೊಂಡ /ಭ್ರಷ್ಟಗೊಂಡ ಕಲೆ’ ಎಂದು ಮುಟ್ಟುಗೋಲು ಹಾಕಿಕೊಂಡ ಅನೇಕ ಸಮಕಾಲೀನ ಕೃತಿಗಳಲ್ಲಿ ಇವೂ ಸೇರಿದವು.

ರವೀಂದ್ರನಾಥರು ಚಿತ್ರಕಲೆಯಲ್ಲಿ ಪ್ರಜ್ಞಾಪೂರ್ವಕವಾಗಿ ತೊಡಗಲಿಲ್ಲವಷ್ಟೆ; ಹೀಗಿರುವಾಗ ತಮ್ಮನ್ನು ತಾವು ಕಲಾವಿದರಾಗಿ ಗುರುತಿಸಿಕೊಂಡದ್ದಾದರೂ ಹೇಗೆ.? ಉತ್ತರ ನಮ್ಮ ಊಹೆಗೆ ಬಿಟ್ಟದ್ದು. ಆದರೆ ಇದಕ್ಕೆ ಎರಡು ಕಾರಣಗಳಂತೂ ಸ್ಪಷ್ಟವಾಗಿವೆ. ತಾನು ಚಿತ್ರಕಾರನಾಗಲು ಅಸಮರ್ಥ ಎಂದುಕೊಂಡಿದ್ದರೂ ರವೀಂದ್ರನಾಥರು ಸಮಕಾಲೀನ ಕಲಾಸನ್ನಿವೇಶದೊಂದಿಗೆ ಆತ್ಮೀಯ ಸಂಬಂಧವನ್ನು ಉಳಿಸಿಕೊಂಡಿದ್ದರು. ಎರಡನೆಯದಾಗಿ,ಬಹುಸಾಂಸ್ಕೃತಿಕ ಪರಿಸರವು ವೈಯಕ್ತಿಕ ಬೆಳವಣಿಗೆಗೆ ಸಹಕಾರಿಯೆಂಬ ಅವರ ಸಹಜ ಒಲವು.

ರವೀಂದ್ರನಾಥರು ಜಪಾನ್, ಯೂರೋಪ್, ಅಮೇರಿಕಾ, ಜಾವಾ ಮತ್ತು ಚೀನಾಗಳಿಗೆ ಹೋದಾಗ ಸಮಕಾಲೀನ ಕಲೆಗಳ ಜೊತೆ ಪ್ರಾಚೀನಕಲೆಗಳನ್ನೂ ಗಮನಿಸತೊಡಗಿದರು. ಅಲ್ಲದೆ ಒಬ್ಬ ಸಾಹಿತಿಯಾಗಿಯೂ ಭಾರತೀಯ ಕಲಾ ಸನ್ನಿವೇಶದ ರೂಪುರೇಷೆಗಳನ್ನು ಸ್ಪಷ್ಟ ಮಾಡಲು ಪ್ರಯತ್ನಿಸಿದರು. ಈ ಪ್ರಯತ್ನದಲ್ಲಿ ಅವರ ಸೋದರ ಸಂಬಂಧಿಗಳು ಹಾಗೂ ವಿದ್ಯಾರ್ಥಿಗಳ ಪಾತ್ರ ದೊಡ್ಡದು.

ಚಿತ್ರರಚನೆಯಲ್ಲಿ ಅವರು ನೇರವಾಗಿ ತೊಡಗದೇ ಇದ್ದಾಗಲೂ ಅದಕ್ಕೆ ಪೂರಕವಾದ ಚೇತನ ಅದಮ್ಯವಾಗಿ ಮಿಡಿಯುತ್ತಿತ್ತು. ಅದು ಖಾಸಗಿಯಾಗಿ, ಪ್ರಾಯಶಃ ಅರಿವಿಲ್ಲದೆಯೇ ಅವರ ಹಸ್ತಪ್ರತಿಗಳಲ್ಲಿ ಚಿಗುರೊಡೆಯುತ್ತಾ ಹೋಯಿತು, ಕಡೆಗೆ ಇದ್ದಕ್ಕಿದ್ದಂತೆ ರವೀಂದ್ರನಾಥರು ಚಿತ್ರಕಾರರೂ ಆದರು. ಈ ವೇಳೆಗೆ ಆದಿಮ ಕಲೆಯ* ವಿಚಾರವಾಗಿ ಪುಸ್ತಕಗಳಿಂದ ಮತ್ತು ಸಂಗ್ರಹಾಲಯಗಳಿಂದ ಹಲವು ಸಂಗತಿಗಳು ಅವರಿಗೆ ಗೊತ್ತಾಗಿದ್ದವು. ಅಲ್ಲದೆರವೀಂದ್ರನಾಥರು ಆದಿಮಕಲೆಯಪ್ರಭಾವಕ್ಕೊಳಗಾದ ಆಧುನಿಕ ಕಲಾವಿದರ ಕೃತಿಗಳನ್ನೂ ನೋಡಿದ್ದರು. ಆದಿಮ ಕಲೆಯೊಂದಿಗಿನ ಇಂತಹ ದೀರ್ಘ, ಅನಿರೀಕ್ಷಿತ ಮುಖಾಮುಖಿಯು ಅವರ ತಕ್ಷಣದ ಪರಿವರ್ತನೆಯ (.ಆತ್ಮ-ಶೋಧದ.) ಹಿಂದೆ ಇದೆ.

*ಕಲೆಯ ಬೆಳವಣಿಗೆಯನ್ನು ಆದಿಮಾನವನ ಹುಟ್ಟಿನಿಂದಲೂ ಗುರುತಿಸಬಹುದಾಗಿದೆ. ಆಗಿನಿಂದ ಇಲ್ಲಿಯವರೆಗೂ ನಾಗರೀಕತೆ ಬೆಳೆದಂತೆಲ್ಲಾ, ಸಮಾಜ-ಸಂಸ್ಕೃತಿಗಳ ಜೊತೆಜೊತೆಗೆ ಕಲೆಯಆಯಾಮಗಳು ಹಲವು ಬಗೆಗಳಲ್ಲಿ ವ್ಯಕ್ತವಾಗುತ್ತಾಬಂದಿವೆ.ಆದಿಮ ಕಲೆಯ ರೂಪುರೇಷೆಗಳು ನಿರ್ಧಾರವಾಗುವುದು ಕಲಾಕೃತಿಯೊಂದು ನಿರ್ಮಾಣಗೊಂಡ ಆಯಾ‘ಪದಾರ್ಥಗಳ ಗುಣವಿಶೇಷದ ದೃಷ್ಟಿಯಿಂದ’ ಎಂಬ ವಿಚಾರ ಇಲ್ಲಿ ಮುಖ್ಯ. -ಅನುವಾದಕ

ಆಗ ಆದಿಮ ಕಲಾಪ್ರಕಾರಗಳಿಗೆ ಮುಂಚೂಣಿ ಕಲಾವಲಯದ ಹೊರತು ಅದರಾಚೆ ಮನ್ನಣೆಯಿರಲಿಲ್ಲ. ವಿಕಾರ ಹಾಗೂ ಘೋರವೆಂದೇ ಭಾವಿಸಿದ್ದ ಈ ಬಗೆಯ ಕಲೆಯನ್ನು ರವೀಂದ್ರನಾಥರು ಸ್ವಪ್ರೇರಣೆಯಿಂದ ಅಪ್ಪಿಕೊಂಡರು ಎಂಬುದು ಗಮನಾರ್ಹ.  ರವೀಂದ್ರನಾಥರಿಗೆ ಮೊದಲಿನಿಂದಲೂ ಅನ್ಯ ಸಂಸ್ಕೃತಿಗಳಲ್ಲಿ ಆಸಕ್ತಿಯಿತ್ತು. ಇವುತಮ್ಮಸೃಜನಶೀಲತೆಗೆಸಹಕಾರಿ ಎಂಬುದನ್ನೂ ಅವರು ಕಂಡುಕೊಂಡಿದ್ದರು. ೧೯೧೪ರಲ್ಲಿ ಹೆಸರಾಂತ ಇಂಗ್ಲಿಶ್ ಕವಿ,ಸ್ಟರ್ಜ್ ಮೂರ್(Sturge Moore)ಅವರಿಗೆ ಬರೆದ ಪತ್ರವೊಂದರಲ್ಲಿ ಇದರಪ್ರಸ್ತಾಪವಿದೆ.

ಒಟ್ಟಾರೆ ವಿಭಿನ್ನಸಾಂಸ್ಕೃತಿಕ ಹಾಗೂ ಭೌತಿಕಪರಿಸರದಲ್ಲಿ ಬರೆದ ಮೂರ್‌ ಅವರ ಪದ್ಯಗಳು ಈ ಮುಖ್ಯವ್ಯತ್ಯಾಸಗಳಿಂದಾಗಿ ತಮಗೆ ಅಮೂಲ್ಯವಾದವು ಎಂಬ ಸಂಗತಿಯು ಈ ಪತ್ರದಲ್ಲಿ ಬಂದಿದೆ.

“ಅನ್ಯಸಂಸ್ಕೃತಿಗೆಸೇರಿದಸಾಹಿತ್ಯದಲ್ಲಿಅದರದೇನಿರ್ದಿಷ್ಟಕಲಾತ್ಮಕಅಂಶಗಳಿರುತ್ತವೆ.ಇಂಥಅಂಶಗಳುನಮಗೆ ದಕ್ಕದೇ ಹೋಗಬಹುದು. ಆದರೆ ಈ ಸಾಹಿತ್ಯದಒಳಸುಳಿಯಾಗಿ ಹರಿಯುವ ಮಾನವೀಯತೆ ಹಾಗೂ ಋಜುತ್ವಗಳು ಎಲ್ಲಾ ದೇಶಕಾಲಗಳಿಗೂ ಒಪ್ಪಿಗೆ ಆಗುವಂಥವು. ಅನ್ಯ ಸಾಹಿತ್ಯವು ನಮ್ಮ ಸಂವೇದನೆಗೆ ದೂರವೇನೋ ನಿಜ. ಆದರೆ ಇದೇ ಅದರ ಮಹತ್ವವೂ ಆಗಿದೆ. ಹೀಗೆ ದೂರವಾಗಿರುವ ಕಾರಣದಿಂದ ಅದು ನಮ್ಮ  ಬದುಕಿಗೆ ಅಗತ್ಯವಾದ ಸಮೃದ್ಧತೆಯನ್ನೂ ತರುತ್ತದೆ. ಬದುಕಿನ ಸರ್ವತೋಮುಖ ಬೆಳವಣಿಗೆಗೆ ನಮ್ಮ ಬುದ್ಧಿ, ಮನಸ್ಸು ಶ್ರೀಮಂತವಾಗಬೇಕು. ಹೀಗಾಗಬೇಕಾದರೆ ಅಂಥ ಸಂಪರ್ಕವು ಮಹತ್ವವಾದದ್ದು.”.

ರವೀಂದ್ರನಾಥರದೃಷ್ಟಿಯಲ್ಲಿ‘ಅನ್ಯ’ಎಂಬುದುನಮ್ಮಸಂಸ್ಕೃತಿಗೆಒಡ್ಡಿದಸವಾಲಲ್ಲ; ಬದಲಾಗಿಬಿಡುಗಡೆಯದಾರಿಯೇಆಗಿದೆ. ‘ಅನ್ಯ’ವೊಂದು ನಮ್ಮ ವಿಚಾರ ಸರಣಿಗೆ ವಿರುದ್ಧವಾಗಿರಬಹುದು; ಆದರೆ ಆ ಮೂಲಕ ನಮ್ಮನ್ನು ನಾವು ಮರು ಪರೀಕ್ಷೆಗೆ ಒಡ್ಡಿಕೊಳ್ಳುವುದು ಸಾಧ್ಯ. ಹಾಗೆಯೇ, ಈಗಾಗಲೇ ಗೊತ್ತಿರುವ ಸಂಗತಿಗಳನ್ನು ಹೊಸ ಬೆಳಕಿನಲ್ಲಿ ನೋಡಲು ಸಾಧ್ಯ. ಕೆಲವೊಂದು ಸಂದರ್ಭದಲ್ಲಿ ‘ಅನ್ಯ’ವು ಪರಕೀಯ ಎನಿಸಬಹುದು. ಆದರೆ ಅದು ಯಾವಾಗಲೂ ಪರಕೀಯವೇ ಆಗಿ ಉಳಿಯುವುದಿಲ್ಲ ಎಂಬುದು ರವೀಂದ್ರನಾಥರ ಗ್ರಹಿಕೆ. ‘ಅನ್ಯ’ವೊಂದು ತನ್ನ ಸೃಜನಾತ್ಮಕತೆಗೆ ಇಂಬು ಕೊಡುವುದಾದರೆ ಅದನ್ನು ಅವರು ನಿರ್ಭಯವಾಗಿ ಸ್ವೀಕರಿಸುತ್ತಿದ್ದರು. ಸಾಂಸ್ಕೃತಿಕ ಪರಿಶುದ್ಧತೆಯೇ ಮುಖ್ಯವೆಂದು ಕುಳಿತರೆ ಪರಂಪರೆಯೊಂದು ಪಳಿಯುಳಿಕೆಯಾಗಿ ಬಿಡುವ ಸಾಧ್ಯತೆಯೇ ಹೆಚ್ಚು. ಇದರ ಬದಲು ಅನ್ಯ ಸಂಸ್ಕೃತಿಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸೃಜನಶೀಲರಾಗುವುದೇ ಅವರಿಗೆ ಒಪ್ಪಿಗೆ. ರವೀಂದ್ರನಾಥರ ಮನೆತನದಲ್ಲಿ ಸೃಜನಶೀಲ ಚೈತನ್ಯವು ಸ್ವಭಾವತಃ ಪ್ರಕಾಶಗೊಂಡಿತ್ತಲ್ಲವೇ.?ತಮ್ಮ ಪರಿವಾರದ ಈ ಸಹಜ ಪ್ರವೃತ್ತಿಯು ಅಸಾಂಪ್ರದಾಯಿಕ ಮನೋಭಾವದಿಂದಲೇ ಬಂದಿದೆ ಎಂದು ಅವರು ನಂಬಿದ್ದರು. ಹಾಗೆಯೇ ಅವರ ಬಂಧುಬಳಗದವರ ಬೌದ್ಧಿಕ ಹಾಗೂ ಸಾಂಸ್ಕೃತಿಕಕೃಷಿಯು ಹಿಂದೂ, ಮಹಮ್ಮದೀಯ ಮತ್ತು ಬ್ರಿಟಿಶ್ ಸಂಸ್ಕೃತಿಗಳ ಸಂಗಮ. ಎಂಬುದುರವೀಂದ್ರನಾಥರ ನಂಬಿಕೆ.

‘ಅನ್ಯ’ವು ದೂರ ದೇಶಗಳಿಗೆ ಮಾತ್ರ ಸಂಬಂಧಿಸಿರುವುದಲ್ಲ. ಸಾಂಸ್ಕೃತಿಕವಿಸ್ಮೃತಿಯಿಂದಲೂ ನಮಗೆ ಅನ್ಯತೆಯ ಅನುಭವವಾಗುತ್ತದೆ ಎಂದೂ ರವೀಂದ್ರನಾಥರು ನಂಬಿದ್ದರು. ವಸಾಹತುಶಾಹಿ ಸನ್ನಿವೇಶದಲ್ಲಿ ಒಂದು ದೇಶದ ಸಾಂಸ್ಕೃತಿಕ ಸಿರಿ ಹೀಗೆ ಮರೆಯಾಗುವುದು ಅನ್ಯತೆಯ ಅನುಭವವೇ ಆಗಿದೆ. ಅಲ್ಲದೇ ಇದು, ನಮ್ಮಿಂದ ದೂರವಾಗುವ ಸುತ್ತಣ ಪರಿಸರ, ಬದುಕಿನ ಅನುಭವಗಳು, ಅಥವಾ ನಮ್ಮ ಸನಿಹದಲ್ಲಿಯೇ ಇದ್ದು ಮರೆಯಾಗಿರುವ ಸಕಲವೂ ಆಗಿರಬಹುದು. ರಾಷ್ಟ್ರೀಯತೆಗೆ ಒಲಿದ ಕಲ್ಕತ್ತಾದಕೆಲವುಕಲಾವಿದರುತಮ್ಮಸಾಂಸ್ಕೃತಿಕಬೇರುಗಳನ್ನುಮತ್ತೆಕಂಡುಕೊಳ್ಳುವಪ್ರಯತ್ನದಲ್ಲಿದ್ದುದುರವೀಂದ್ರನಾಥರ ಗಮನದಲ್ಲಿತ್ತು.

ಈ ಕಲಾವಿದರು ತಮ್ಮದೇ ಪೂರ್ವಗ್ರಹದಿಂದಗತಚರಿತ್ರೆಯಲ್ಲಿ ಸಿಲುಕಿದ್ದರು. ಸಾಂಸ್ಕೃತಿಕಬೇರುಗಳನ್ನುಕಾಪಾಡಿಕೊಂಡಿದ್ದ ಕೆಲವು ಸಮುದಾಯಗಳುಅವರನಡುವೆಯೇ ಇತ್ತು. ಆದರೆ ಈಸಮುದಾಯಗಳೇ ಅಲ್ಲದೇತಮ್ಮಸುತ್ತಲಸಮಕಾಲೀನರಬದುಕು

ಮತ್ತುಆಗುಹೋಗುಗಳೂಇವರ ಗಮನಕ್ಕೆ ಬರಲಿಲ್ಲ. ಅವುಗತಕಾಲಕ್ಕೆಸೇರಿದವು ಎಂಬ ಭಾವನೆಯಿಂದಲೋ ಏನೋ,ಅಥವಾ ಅದಕ್ಕಿಂತಲೂ ಹೆಚ್ಚು ಪರಕೀಯವಾಗಿಯೇ ಮಾಡಿಕೊಂಡಿದ್ದರು. ರವೀಂದ್ರನಾಥರಿಗೆ ‘ಅನ್ಯ’ ಎಂಬುದು ಹೊರಗಿನಿಂದ ಬಂದದ್ದು ಮಾತ್ರವೇ ಆಗಿರಲಿಲ್ಲ; ಅದು‘ಅಗಮ್ಯವಾದವ್ಯಕ್ತಿಗತಸತ್ಯ’ವಾಗಿತ್ತು. ಹಾಗೆಯೇ ಅವರ ದೃಷ್ಟಿಯಲ್ಲಿ,ಆಯ್ಕೆಯೊಂದರಿಂದ ವಿಮುಖಿಯಾಗಿರುವುದೂಸಹ‘ಅನ್ಯ’ವೇಆಗಿತ್ತು.

ಎಲ್ಲಾ ಸಾಮಾಜಿಕ ಸಂದರ್ಭಗಳಲ್ಲಿಯೂ ಈ ರೀತಿಯ ಆಯ್ಕೆಗಳು ಇದ್ದೇ ಇರುತ್ತವೆ. ಚಾರಿತ್ರಿಕ ಸಂಧಿಕಾಲದಲ್ಲಿ ಇಂಥ ಸಾಂಸ್ಕೃತಿಕ ಆಯ್ಕೆಗಳು ವಿವಾದಾತ್ಮಕವೂ ಆಗಬಹುದು. ಆದರೂ ಈ ಆಯ್ಕೆಗಳು ಮಹತ್ವವಾದವು. ಪಾಶ್ಚಿಮಾತ್ಯ ಕಲೆಯು ಸಾಂಸ್ಕೃತಿಕವಾಗಿ ಅನ್ಯ ಎಂದು ಭಾವಿಸಿ ಅನೇಕರು ಪ್ರತಿರೋಧ ಒಡ್ಡಿದರು;ಮತ್ತೆ ಕೆಲವರು ಅದನ್ನೇ ಆಧುನಿಕತೆಯ ಹರಿಕಾರ ಎಂದು ಬಿಂಬಿಸುತ್ತಿದ್ದರು. ಆದರೆ ರವೀಂದ್ರನಾಥರು ಇವೆರಡನ್ನೂ ಒಪ್ಪಲಿಲ್ಲ. ಸೃಜನಶೀಲ ವ್ಯಕ್ತಿಗೆ ಸ್ವಂತಿಕೆಯೇ ಮುಖ್ಯವಲ್ಲ. ಅದನ್ನು ಕೊಂಚವಾದರೂ ಬಿಟ್ಟುಕೊಡದವರು ತಮ್ಮ ಅನುಭವಜನ್ಯ ಪ್ರಪಂಚದಿಂದ ಅಥವಾ ಸಹಜ ಬೌದ್ಧಿಕ ನೆಲೆಯಿಂದ ಹೊರಬರಲಾರರು ಅಲ್ಲದೇ ವಿಶಾಲ ಪ್ರಪಂಚದೊಂದಿಗೆ ಪರಸ್ಪರಕೊಡುಕೊಳ್ಳುವಿಕೆಯಿಲ್ಲದೆ ಬೌದ್ಧಿಕವಾಗಿ ಬೆಳೆಯುವುದಾಗಲೀ, ಸಂವಹನದ ಮೇರೆಗಳನ್ನು ವಿಸ್ತರಿಸಿಕೊಳ್ಳುವುದಕ್ಕಾಗಲೀ ಆಗುವುದಿಲ್ಲವೆಂದೇ ರವೀಂದ್ರನಾಥರು ಭಾವಿಸಿದ್ದರು. ಸ್ವದೇಶೀ ಚಳುವಳಿಯ ಸಂದರ್ಭದಲ್ಲಿ ರಾಷ್ಟ್ರೀಯತಾವಾದಿ ಕಲಾವಿದರು ಸಂಪ್ರದಾಯಗಳ ಬೆನ್ನತ್ತಿ ಹೊರಟಾಗ, ರವೀಂದ್ರನಾಥರು ಸ್ಥಳೀಯ ಸಂಸ್ಕೃತಿಯಲ್ಲಿ ನೆಲೆಯೂರುವುದರ ಮಹತ್ವದ

ಕಡೆ ಅವರ ಗಮನಸೆಳೆದರು. ಅವರ ದೃಷ್ಟಿಯಲ್ಲಿ ಕಲಾವಿದರು ಸಾಂಸ್ಕೃತಿಕ ಹೊರಕವಚ ಹೊದ್ದಿದ್ದರು. ಅವರಕಲಾಕೃತಿಗಳು ಪೂರ್ವಗ್ರಹಐತಿಹ್ಯದಿಂದ ತಿರುಚಿಕೊಂಡಿದ್ದವು. ಈ ಸಂಕುಚಿತ ಗೂಡುಗಳನ್ನು ಬಿಟ್ಟು ಸುತ್ತಣ ಪ್ರಕೃತಿ, ಬದುಕಿನೊಂದಿಗೆ, ಅದರಲ್ಲೂ ಲಕ್ಷ್ಯಕ್ಕೆ ಬಾರದೆಉಳಿದ ಹಳ್ಳಿಗಳೊಂದಿಗೆ ಸಂಪರ್ಕ ಸಾಧಿಸಲು ತಿಳಿಹೇಳಿದ್ದರು. ಒಬ್ಬ ಲೇಖಕನಾಗಿ, ಹಿಂದಿನ ತಮ್ಮ ವ್ಯಕ್ತಿಗತರಮ್ಯ ನೆಲೆಯ ಬರೆವಣಿಗೆಗಳಿಂದ ಹೊರಬರಲು ಅಂಥ ಸಂಪರ್ಕಗಳು ತಮಗೆನೆರವಾಗಿವೆಎಂಬುದೇಅವರತಿಳುವಳಿಕೆ.

ರವೀಂದ್ರನಾಥರದೃಷ್ಟಿಯಲ್ಲಿ‘ಅನ್ಯ’ವೆಂಬುದು ಮೂಲೆಗುಂಪಾಗಿರುವ ಸತ್ಯವೂ, ನಮ್ಮ ತಿಳುವಳಿಕೆಯ ಮಿತಿಯುಗ್ರಹಿಸಲಾರದ ಒಂದು ಅಸ್ತಿತ್ವವೂ ಆಗಿದೆ. ೧೯೧೬ರಲ್ಲಿ ರವೀಂದ್ರನಾಥರು ಜಪಾನ್ ಪ್ರವಾಸ ಕೈಗೊಂಡರು. ಆಗ ಜಪಾನಿನ ನಾಡಿಮಿಡಿತವಾಗಿದ್ದ ಅಲ್ಲಿನ ದೃಶ್ಯಸಂಸ್ಕೃತಿಯು ಅವರಿಗೆ ಪರಿಚಯವಾಯಿತು. ಜಪಾನೀ ಪಟಚಿತ್ರ ಹಾಗೂ ಸುರಳಿ ಚಿತ್ರಗಳು ಅವರ ಮೇಲೆ ವಿಶೇಷ ಪ್ರಭಾವ ಬೀರಿದವು. ಈ ದೃಶ್ಯಸಂಸ್ಕೃತಿಯನ್ನು ಕೈಪಿಡಿಯಾಗಿ ಇಟ್ಟುಕೊಂಡು ತಮ್ಮದೇ ಆದ ಯೋಜನೆಯೊಂದನ್ನು ರೂಪಿಸಲು ತಮ್ಮ ಸೋದರಸಂಬಂಧಿಗಳಿಗೆ ಮತ್ತು ಯುವ ಕಲಾವಿದರಿಗೆ ತಿಳಿಸಿದರು. ಆ ಮೂಲಕ ತಮ್ಮ ಕೃತಿಗಳ ಹರವನ್ನು ಹಿಗ್ಗಿಸಿಕೊಳ್ಳಲು ಸೂಚಿಸಿದರು. ಬಳುಕುವ ಹೂದೋಟದಂತಿದ್ದ ಅವರ ಕಲಾಕೃತಿಗಳು, ಬದುಕಿನ ಗುಡುಗು-ಸಿಡಿಲಿಗೆ ಚೈತನ್ಯಶೀಲವಾಗಿ ಸ್ಪಂದಿಸುವ ಕಾಡು ಮರಗಳಾಗಲಿ ಎಂದು ಆಶಿಸಿದರು. ಕಲೆ ಮತ್ತು ಬದುಕುಗಳೆರಡರಲ್ಲೂ ಅಭಿವ್ಯಕ್ತಿಗೊಳ್ಳುವ ಜಪಾನೀಯರ ಭಾವಪೂರ್ಣ ಮೌನ ಮತ್ತು ಔಚಿತ್ಯಪ್ರಜ್ಞೆಯು ಅವರಿಗೆ ಮೆಚ್ಚುಗೆಯಾಯಿತು. ಜಪಾನೀಯರ ಬದುಕಿನ ನವುರಾದ ಸೌಂದರ್ಯಪ್ರಜ್ಞೆಯು ಅವರಿಗೆ ಹಿಡಿಸಿತು.

tagore_section_13ಆದರೆ ಅದು ಅತಿಭಾವುಕತೆಯ ಕೀರಲು ದನಿಗೆ ಎಡೆಮಾಡಬಹುದು ಎಂಬುದನ್ನೂ ರವೀಂದ್ರನಾಥರು ಗುರುತಿಸಿದರು.. ಇದು ಅವರ ತೀಕ್ಷ್ಣ ವಿವೇಚನಾದೃಷ್ಟಿಗೆ ಒಂದು ಉದಾಹರಣೆ. ಅವರ ಆಶಯ, ವಿಚಾರಗಳಿಗೆ ಕಲ್ಕತ್ತಾದ ಕಲಾವಿದರು ಉತ್ಸಾಹದಿಂದ ಸ್ಪಂದಿಸದಿದ್ದಾಗ ಶಾಂತಿನಿಕೇತನದಲ್ಲಿ ಕಲಾಶಾಲೆಯೊಂದನ್ನು ಆರಂಭಿಸಲು ನಿರ್ಧರಿಸಿದರು. ಪರಿಸರದೊಂದಿಗೇ ಇದ್ದು, ಬದುಕನ್ನು ಮತ್ತೂ ಸುಧಾರಿಸಬಲ್ಲ ಸಮಗ್ರ ದೃಶ್ಯಸಂಸ್ಕೃತಿಯೊಂದು ಅವರ ಯೋಜನೆಯ ಉದ್ದೇಶ್ಯವಾಗಿತ್ತು. ಈ ಯೋಜನೆಗೆ ನಂದಲಾಲ.ಬಸು ಅವರನ್ನು ಶಾಂತಿನಿಕೇತನಕ್ಕೆ ಕರೆತಂದರು. ಆ ಮೂಲಕ ರವೀಂದ್ರನಾಥರ ವಿಚಾರಗಳು ಕಾರ್ಯರೂಪಕ್ಕೆ ಬಂದವು.

ಪ್ರಕೃತಿಗೆ ಹತ್ತಿರವೂ, ಸಂವೇದನಾಶೀಲವೂ ಆದ ಸಂಸ್ಕೃತಿಯೊಂದನ್ನು ಶಾಂತಿನಿಕೇತನದಲ್ಲಿ ಹೀಗೆ ನಿರ್ಮಾಣ ಮಾಡುವಾಗಲೂ ರವೀಂದ್ರನಾಥರು ಅಲ್ಲಿನ ಪರಿಸರ ಹಾಗೂ ಜನರನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದರು. ಈ ಹೊಸ ಸಮುದಾಯದ ಬದುಕು ಮತ್ತು ವಿಚಾರಗಳು ಪ್ರಾಂತೀಯವಾಗಬಾರದು; ಸಾಂಸ್ಕೃತಿಕ ಕಂದಾಚಾರಗಳ ಮೂಲಕ ಅದು ಹಿಂದುಳಿಯುವಂತೆಯೂ ಆಗಬಾರದೆಂಬುದು ಅವರ ಸ್ಪಷ್ಟ ವಿಚಾರವಾಗಿತ್ತು. ಪಾರಂಪರಿಕ ಜ್ಞಾನಶಾಖೆಗಳ ಅಧ್ಯಯನದಲ್ಲಿ ಹೆಸರಾದ ಪಂಡಿತರನ್ನು ಹಾಗೂ ಯೂರೋಪಿನ ಓರಿಯಂಟಲಿಸ್ಟರನ್ನು ತಮ್ಮ ವಿಶ್ವವಿದ್ಯಾಲಯಕ್ಕೆ ಕರೆಸಿದರು. ಹಾಗೆಯೇ ಸ್ಥಳೀಯ ರೈತಾಪಿ ಜನರಿಗೆ ವಿಜ್ಞಾನದ ಅನುಕೂಲಗಳನ್ನು ಒದಗಿಸುವ ಪ್ರಯತ್ನವನ್ನೂ ಮಾಡಿದರು. ನಂದಲಾಲ ಬಸು ಮತ್ತು ಅವರ ವಿದ್ಯಾರ್ಥಿಗಳು, ಪೌರಾತ್ಯ ಸಂಸ್ಕೃತಿಯ ಜೊತೆಜೊತೆಗೆ, ಸ್ಥಳೀಯ ದೃಶ್ಯ ಸಂಸ್ಕೃತಿಯಲ್ಲಿ ತಮ್ಮ ದಾರಿಯನ್ನು ಕಂಡುಕೊಳ್ಳುವಂತೆ ಪ್ರೋತ್ಸಾಹಿಸಿದರು. ವಿಯೆನ್ನಾದಲ್ಲಿ ಶಿಕ್ಷಣ ಪಡೆದ ಕಲಾಚರಿತ್ರಕಾರ್ತಿ ಸ್ಟೆಲ್ಲಾ ಕ್ರಾಮಿರಿಷ್ (Stella Kramrisch)ಅವರನ್ನು ಪಾಶ್ಚಿಮಾತ್ಯ ಕಲೆಯ ಪ್ರಾಧ್ಯಾಪಕಿಯಾಗಿ, ಕಲಾ ವಿಮರ್ಶಕಿಯಾಗಿ ಕಲಾಭವನದಲ್ಲಿ ಕಾರ್ಯ ನಿರ್ವಹಿಸಲು ಆಮಂತ್ರಿಸಿದರು. ಅವರ ತರಗತಿಗಳಿಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತಪ್ಪದೇ ಹಾಜರಾಗುವಂತೆ ಒತ್ತಾಯಿಸಿದರು..

ಶಾಂತಿನಿಕೇತನದಲ್ಲಿಕಲೆಯುರಾಷ್ಟ್ರೀಯತೆಹಾಗುಸಂಕುಚಿತಏಷ್ಯಾವಾದಿತ್ವದಿಂದಸ್ಥಳೀಯ-ಉದಾರತೆಗೆ(cosmopolitan-local)ಸರಿದಿದ್ದರೆ ಅದಕ್ಕೆ ಮುಖ್ಯ ಕಾರಣ ರವೀಂದ್ರನಾಥರ ಅಸೀಮ ದೃಷ್ಟಿ ಹಾಗೂ ನಿರಂತರ ಚಲನಶೀಲವಾಗಿದ್ದ ಮನಸ್ಸು.

ಈ ದಿಸೆಯಲ್ಲಿ ಶಾಂತಿನಿಕೇತನದ ಕಲಾವಿದರಿಗೆ ಪರಂಪರೆಯು ಜಡ್ಡುಗಟ್ಟಿದ ಆಚರಣೆಗಳು ಮಾತ್ರವೇ ಆಗದೆ, ಹೊಸತನ ಹಾಗೂ ಪರಿವರ್ತನೆಗೆ ಸದಾ ಮುಕ್ತವಾಗಿರುವಂತೆ ಅನುಭವವಾಯಿತು.

ಆಧುನಿಕ ಕಾಲ ಇಂಥ ಮುಕ್ತತೆಯನ್ನೇ ಎದುರುನೋಡುವುದುಎಂದು ನಂಬಿದ್ದ ರವೀಂದ್ರನಾಥರು ಆಧುನಿಕತೆ ಕೇವಲ ಯೂರೋಪಿನ ಅನುಕರಣೆಯಲ್ಲ ಎಂದು ಪ್ರತಿಪಾದಿಸಿದರು. ಅವರ ಪ್ರಕಾರ ನಿಜವಾದ ಆಧುನಿಕತೆಯೆಂದರೆ ಮುಕ್ತ ಮನಸ್ಸು.ಅದು ಅಭಿರುಚಿಯ ಗುಲಾಮಗಿರಿ ಅಲ್ಲ; ಬದಲಿಗೆ ಐರೋಪ್ಯ ಶಿಕ್ಷಕರ ಬೋಧನೆಗೆ ಕಟ್ಟುಬೀಳದ, ವಿಚಾರ

ಮತ್ತು ಕ್ರಿಯೆಗಳಲ್ಲಿನ ಮುಕ್ತತೆ. ಹೀಗಾಗಿ ಸ್ಥಳೀಯತೆಯು ಮುಂದೆಂದೂ ಪ್ರಾಂತೀಯವಾಗಿರಲಾರದು ಎಂಬುದನ್ನೂ ಅವರು ಗುರುತಿಸಿದ್ದರು. “ನಮ್ಮ ವಲಯದ ಪಟಚಿತ್ರವುಎಷ್ಟೇ ಅಮೂಲ್ಯವಾದರೂ ಅದು ಪ್ರಾಂತೀಯವಾದ್ದು; ಒಂದು ಸೀಮಿತ ಸಮುದಾಯಕ್ಕೆ ಸೇರಿದುದು.ನಮ್ಮ ಕಲೆಯನ್ನು ವಿಶ್ವಾತ್ಮಕವಾಗಿ ನಿರ್ಮಿಸಲು ಸಾಧ್ಯವಾದಾಗನಾವು ಜಾಗತಿಕ ಸಂದರ್ಭದಲ್ಲಿ ನೆಲೆ ಕಾಣುತ್ತೇವೆ; ಜೊತೆಗೆ ನಮ್ಮ ಮಾನವೀಯ ಮೌಲ್ಯಗಳೂ ಹೊಸ ಅರ್ಥಸಾಧ್ಯತೆಗಳನ್ನು ಪಡೆಯುತ್ತವೆ.” ಹೀಗೆಂದು ೧೮೯೮ರಲ್ಲೇ ಅವರು ಬರೆದಿದ್ದಾರೆ.

ಬಂಗಾಳಿಸಾಹಿತ್ಯವುಆಗಲೇಈನಿಟ್ಟಿನಲ್ಲಿದೆಎಂಬತಮ್ಮಅಭಿಪ್ರಾಯವನ್ನುಹೀಗೆವ್ಯಕ್ತಪಡಿಸಿದ್ದಾರೆ: “ಅರ್ಧ ಶತಮಾನಕ್ಕೆ ಮುಂಚೆ, ತನ್ನ ‘ಪಾಂಚಾಲೀಗಾನ’ಮತ್ತು ‘ಕವಿಗಾನ’ಗಳೊಂದಿಗೆ.*ಈ ಸಾಹಿತ್ಯವುಪ್ರಾಂತೀಯವಾಗಿದ್ದಿತು. ಮಧುಸೂದನ್ದತ್ತಾ, ಬಂಕಿಮ್ಚಂದ್ರ, ಹೇಮಚಂದ್ರರಂಥ ಚೈತನ್ಯಶೀಲ ಬರಹಗಾರರು ಈ ಸಾಹಿತ್ಯವನ್ನು ರೂಪಾಂತರಗೊಳಿಸಿ ವಿಶ್ವಾತ್ಮಕ ನೆಲೆಗೆ ಕೊಡುಗೆಯಾಗಿತ್ತರು. ಮುಂದಿನ ಇಪ್ಪತ್ತೈದು-ಮುವ್ವತ್ತು ವರ್ಷಗಳಲ್ಲಿ ಈ ಸಾಹಿತ್ಯವು ಬೃಹತ್ತಾಗಿ ಬೆಳೆದು ಅವರನ್ನು ಅತಿಮಾನುಷರನ್ನಾಗಿಸಿತು. ಈಗ ಇದೇ ಸಾಹಿತ್ಯವು ಬಂಗಾಳದ ಮಾನವೀಯತೆಯ ಪ್ರಮುಖ ಅಂಶವಾಗಿದೆ.ಈ ಸಾಹಿತ್ಯದ ಮುಖಾಂತರವೇ, ಬಂಗಾಳದ ಜನರು ಅರಿವಿನ ಮುಕ್ತತೆಯನ್ನು, ಕಲ್ಪನೆಯ ವಿಸ್ತಾರವನ್ನು, ಮತ್ತು ಭಾವನೆಗಳ ವ್ಯಾಪ್ತಿಯನ್ನು ಅನುಭವಿಸಲು ಸಾಧ್ಯವಾಗಿದೆ.ಈ ಸಾಹಿತ್ಯವು ಬಂಗಾಳದ ಪ್ರತಿಯೊಬ್ಬ ವ್ಯಕ್ತಿಯ ಅಂತರಂಗದಲ್ಲಿ ಒಂದು ಸಾರ್ವತ್ರಿಕವಾದ ನೆಮ್ಮದಿಯ ಭಾವವನ್ನು, ಸ್ವದೇಶಾಭಿಮಾನದ ಪ್ರೀತಿಯನ್ನು ಎರಕಹೊಯ್ದಿದೆ. ಆಳ-ಹರವನ್ನುಳ್ಳ ಹಾಗೂ ಅವಿರತವೂ ಆದ ಮಹತ್ವಾಕಾಂಕ್ಷೆಯೊಂದನ್ನು ಬಿತ್ತಿದೆ.

ಈಗ, ಈ ಸಾಹಿತ್ಯದಲ್ಲಿ ಒಳ್ಳೆಯದೂ-ಕೆಟ್ಟದ್ದೂ, ಸುಂದರವೂ-ಕುರೂಪವೂ ಆದ ಯಾವುದೇ ಆದರ್ಶಗಳು ನುಸುಳಿದರೂಅದು ಪ್ರಾಂತೀಯ ಸೀಮೆಗಳನ್ನು ಮೀರಿ, ಎಲ್ಲರಿಗೂ ಎಲ್ಲಕಾಲಕ್ಕೂ ಸಲ್ಲುವಂಥದ್ದಾಗಿದೆ.”೮ ‘ಸಂಸ್ಕೃತಿ’ಎಂಬುದು ನಮಗೆ ಆಧುನಿಕಜಗತ್ತಿನಲ್ಲಿ ವಿಶ್ವಾತ್ಮಕ ದಿಕ್ಕೊಂದನ್ನು ಒದಗಿಸುವ ಸಾಧನವಾಗಿದೆ ಎಂಬುದು ರವೀಂದ್ರನಾಥರ ವಿಚಾರ. ಢಾಕಾದಲ್ಲಿ ೧೯೨೬ರಲ್ಲಿ ‘ಕಲೆ ಮತ್ತು ಪರಂಪರೆಗಳ ನಡುವಿನ ಸಂಬಂಧ’ ಎಂಬ ವಿಚಾರವಾಗಿ ನೀಡಿದ ಉಪನ್ಯಾಸವೊಂದರಲ್ಲಿ ಅವರು ಹೀಗೆ ಹೇಳಿದ್ದಾರೆ:

“ಮಾನವ .ಜನಾಂಗಗಳು. ಪ್ರತ್ಯೇಕವಾಗಿ .ಬದುಕಿದ್ದ ಕಾಲವೊಂದಿತ್ತು. ಹಾಗಾಗಿ ಕಲಾವಿದರು ತಮ್ಮ ರಚನೆಯ ಕ್ರಮಗಳಲ್ಲಿ ಏನೇ ಸಾಹಸಗಳನ್ನು ಮಾಡಿದರೂ ಅವು ಕೆಲವು ಗೊತ್ತಾದ ಸೀಮೆಯೊಳಗೇ ನಡೆಯುತ್ತಿದ್ದವು. ಆದರೆ ಇಂದು ಆ ಪರಿಧಿ ಅತ್ಯಂತ ವಿಸ್ತಾರವಾಗಿ, ನಮ್ಮ ಗ್ರಹಿಕೆಯ ವ್ಯಾಪ್ತಿಯು ಹಿರಿದಾಗಿದೆ. ನಾವು ಹೊಸವಿಚಾರಗಳಿಗೆ ಹಾಗೂ ಹೊಸರೂಪಗಳಿಗೆ ಅತಿಸೂಕ್ಷ್ಮವಾಗಿ ಸ್ಪಂದಿಸಲು ಇದು ಎಡೆ ಮಾಡಿದೆ. ಇದು ನಿಜವಾದರೆ  ಯಾವುದೇ ಮೌಲಿಕ ಸಂಗತಿ, ವಿಚಾರಗಳನ್ನು ಒಬ್ಬ ಕಲಾವಿದ ಸುಲಭವಾಗಿ ಸ್ವೀಕರಿಸುತ್ತಾನೆ. ಕೆಲವು ಶಾಶ್ವತ ಮೌಲ್ಯಗಳನ್ನು ಪ್ರವೃತ್ತಿಸಹಜವಾಗಿ ಗುರುತಿಸಬಲ್ಲ ಕಲಾವಿದರಿಂದ ಮಾತ್ರ ಇದು ಸಾಧ್ಯ. ಈಗಾಗಲೇ ರೂಢಿಯಲ್ಲಿರುವ ಆಚಾರ ವಿಚಾರಗಳನ್ನು ವಿವೇಚನೆಯಿಲ್ಲದೆ ಅನುಸರಿಸುವವರಿಂದ ಇದಾಗದು. ಹಾಗಾದಾಗಲೂ ಕೂಡ ಭಾರತೀಯ ಕಲೆಯು ತನ್ನದೇ ಆದ ಭಾರತೀಯ ಗುಣಧರ್ಮವನ್ನು ಖಂಡಿತವಾಗಿ ಹೊಂದಿರುತ್ತದೆ.

ಏನೇ ಆಗಲಿ ಈ ಕಲೆಯು ನಮ್ಮ ಅಂತರಂಗದ ಗುಣಧರ್ಮವಾಗಿ ರೂಪ ತಾಳಬೇಕೇ ಹೊರತು ಕೃತಕ ರಚನಾಶಾಸ್ತ್ರವಾಗಿ ಅಲ್ಲ. ಅಂದರೆ ಬಲವಂತವಾಗಿ ಹೇರಿದ, ಅಸಹಜ ಸ್ವಪ್ರಜ್ಞೆಯಾಗಿ ಅಲ್ಲ.”

“ಭಾರತೀಯ ಕಲೆಯ ಹೆಸರಿನಲ್ಲಿ ಹಿಂದಿನ ತಲೆಮಾರಿನವರು ರೂಢಿಸಿಕೊಂಡಿದ್ದ ಕೆಲವು ಭಾವನೆಗಳು, ವಿಚಾರಗಳೇ ಇಂದಿನ ಅಂಧಾಭಿಮಾನಗಳಾಗಿ ಬೇರುಬಿಟ್ಟಿವೆ. ಈ ಪೂರ್ವಸಿದ್ಧ ಸಂವೇದನೆಯೇ ಇಂದಿನ ರೂಢಿಯೂ ಆದರೆ ನಮ್ಮ ಅಂತರಂಗ ಉಸಿರುಗಟ್ಟುತ್ತದೆ. ಸದಾ ಬದಲಾಗುತ್ತಿರುವ, ಬದುಕಿನ ನಿರಂತರ ನಾಟಕಕ್ಕೆ ಸ್ಪಂದಿಸಲಾರದೆ ಸೋತ ಇಂಥ ಸಂವೇದನೆಯು ಗಂಟುಮೋರೆಯ ಮುಖವಾಡವಿದ್ದ ಹಾಗೆ.”

ರವೀಂದ್ರನಾಥರುತಮ್ಮಮಾತಿನಕಡೆಯಲ್ಲಿಹೀಗೆಹೇಳುತ್ತಾರೆ:

“ಮೇಧಾವಿಗಳ ಪ್ರತಿಭೆಯು ಹೇಗಿರುತ್ತದೆ ಎಂದರೆ, ಅನ್ಯಮೂಲಗಳಿಂದ ಎರವಲು ಪಡೆಯುವುದು ಅವರಿಗೆ ತೀರಾ ಸಹಜವಾದದ್ದು. ಇದೊಂದು ಅಸಾಧಾರಣ ಸಾಮರ್ಥ್ಯ. ತಮ್ಮ ವ್ಯವಹಾರಗಳಲ್ಲಿ ಸಾಲ ತೀರಿಸುವ ಬಗೆ ತಿಳಿಯದ ಸಾಮಾನ್ಯರು ಮಾತ್ರ ಎರವಲಿಗೆ ನಾಚಿಕೆ, ಭಯಪಡುತ್ತಾರೆ.”೧೦

 ಹೀಗೆ ರವೀಂದ್ರನಾಥರು ‘ಅನ್ಯ’ದ ಜೊತೆಗೆ ಸೆಣಸಾಡುತ್ತಲೇ ಇದ್ದರು. ಆ ಮೂಲಕ ಬದುಕಿನ ಚಲನಶೀಲತೆಗೆ ಸ್ಪಂದಿಸುವುದು ಅವರಿಗೆ ಸುಲಭವೂ ಆಯಿತು. ಅಲ್ಲದೆ ಸೃಜನಶೀಲತೆಯ ಹೊಸಮಾರ್ಗಗಳಿಗೆ ಅದು ಅನುವು ಮಾಡಿತು. ರವೀಂದ್ರನಾಥರು ಒಬ್ಬ ಲೇಖಕನಾಗಿ ಬೆಳೆಯುವಲ್ಲಿ, ಒಂದು ದೃಷ್ಟಿಕೋನವನ್ನು ಹೊಂದುವಲ್ಲಿ ಆಂಗ್ಲ ಸಾಹಿತ್ಯದ ಕೊಡುಗೆಯಿದೆ; ಅದು ಬಂಗಾಳದ ತಮ್ಮ ಗ್ರಾಮೀಣ ಒಡನಾಟದಷ್ಟೇ ಅವರಿಗೆ ಪ್ರಮುಖವಾಗಿದೆ. ಹಲವು ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಪದರುಗಳ ಜೊತೆ ಬೆಸೆದ ವಿವಿಧ ಸಂಗೀತ ಪ್ರಕಾರಗಳು ಅವರ ಸಂಗೀತಕ್ಕೆ ಬಳುವಳಿಯಾಗಿವೆ. ಅವರು

ಒಬ್ಬ ಚಿತ್ರಕಲಾವಿದನಾಗುವುದರಲ್ಲಿ ಅನ್ಯ ಸಂಸ್ಕೃತಿಗಳು ನಿರ್ಣಾಯಕ ಪಾತ್ರವಹಿಸಿವೆ. ನಾವು ಈಗಾಗಲೇ ಕಂಡಂತೆ ಅವರಿಗೆ ಚಿತ್ರಕಲಾವಿದನಾಗುವ ಹೆಬ್ಬಯಕೆಯಿತ್ತು. ತನ್ನ ಸುತ್ತಣ ಕಲಾವಿದರು ಓರಿಯಂಟಲ್

ಅಥವಾ ಪಾಶ್ಚಿಮಾತ್ಯಪ್ರಾತಿನಿಧಿಕಕಲೆಯಸಂಪ್ರದಾಯಗಳನ್ನು ಅಳವಡಿಸಿಕೊಂಡಿದ್ದರು. ಆದರೆ ರವೀಂದ್ರನಾಥರಿಗೆ ಅದಕ್ಕೆ ಬೇಕಾದ ತರಬೇತಿಯಾಗಲೀ,ಸಹಜ ಕುಶಲತೆಯಾಗಲೀ ಇರದ ಕಾರಣ ಅವರು ಅದನ್ನು ಕೈಬಿಡಬೇಕಾಯಿತು. ಆದರೆ ಮುಂದೆ ಆದಿಮ ಮತ್ತು ಆಧುನಿಕ ಕಲೆಗಳು ಲಕ್ಷ್ಯಕ್ಕೆ ಬಂದ ಮೇಲೆ ಚಿತ್ರಕಲಾವಿದನಾಗುವ ಪರ್ಯಾಯ ದಾರಿಯೊಂದನ್ನು ಅವರು ಕಂಡುಕೊಂಡರು.

One Response to "ರವೀಂದ್ರನಾಥ ಠಾಕೂರ್ :ಚಿತ್ರಕಲೆ ಮತ್ತು ಆಧುನಿಕ ಪ್ರಜ್ಞೆ"

  1. sukruthi  January 17, 2016 at 9:49 am

    kala jagathige edondu utthamavada koduge agide . moola kruthi parichaya villadidda nanage edu aneka vishayavannu tagore avara bagge thilisikotithu. nijakku vishwanath avaru uthama barahagararu .

    Reply

Leave a Reply

Your email address will not be published.