ಮೌಢ್ಯಮುಕ್ತ ಕರ್ನಾಟಕತ್ತ ಮುನ್ನಡೆಯೋಣ: ಚಿಂತಕರ ಅಭಿಪ್ರಾಯಗಳು

 ವೀರಭದ್ರ ಚನ್ನಮಲ್ಲ ಸ್ವಾಮೀಜಿ

ತಾಳ್ಮೆ ಪರೀಕ್ಷಿಸದೆ ಮೌಢ್ಯ ಮುಕ್ತ ಕಾಯ್ದೆ ಜಾರಿಗೊಳಿಸಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಈಗ ತರುತ್ತೇವೆ, ಆಗ ತರುತ್ತೇವೆ ಎಂದು ಹೇಳಿಯೇ ಎರಡು ಚಳಿಗಾಲದ ಅಧಿವೇಶನಗಳು ಮುಗಿದುಹೋದವು. ಉಳಿದ ಒಂದು ಅಧಿವೇಶನದಲ್ಲಿ ಕಾಯ್ದೆ ತರುವುದು ಅನುಮಾನವೇ. ಹೀಗಾಗಿ ಕೂಡಲೆ ಮೂರು ದಿನಗಳ ವಿಶೇಷ ಅಧಿವೇಶನವನ್ನು ಕರೆದು ಕಾಯ್ದೆ ಜಾರಿಗೆ ತರಬೇಕು. ಮತ್ತೂ ನಮ್ಮ ತಾಳ್ಮೆ ಪರೀಕ್ಷಿಸುತ್ತಾ ಕಾಲ ವ್ಯಯ ಮಾಡಿದರೆ ಸುಮ್ಮನೆ ಕೂರದೆ ಪರ್ಯಾಯ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಪ್ರಗತಿಪರ ಮಠಾಧೀಶರ ವೇದಿಕೆ ಮಾನವಧರ್ಮ ಪೀಠದ ಚನ್ನಮಲ್ಲ ವೀರಭದ್ರ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಾಯ್ದೆಯನ್ನು ಜಾರಿಗೆ ತರಲು ವಿರೋಧಿಸುತ್ತಿವೆ. 2006ರಿಂದಲೇ ಮಠದಲೇ ಮಡೆಮಡೆ ಸ್ನಾನ, ಎಡೆ ಸ್ನಾನ ಇತ್ಯಾದಿಗಳ ವಿರುದ್ಧ ಕಾನೂನು ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಜನಪರ ಸಂಘಟನೆಗಳು, ದಲಿತ ಸಂಘಟನೆಗಳು, ಪ್ರಗತಿಪರ ಮಠಾಧೀಶರ ವೇದಿಕೆ,ನಾಗರಿಕ ಸಂಘಟನೆಗಳಿಂದ ಒತ್ತಾಯಿಸುತ್ತಲೇ ಬರಲಾಗುತ್ತಿದೆ. ಕಾಯ್ದೆಯನ ಮೌಢ್ಯ ಮುಕ್ತ ಕಾಯ್ದೆಯ ಕರಡಲ್ಲಿ ಎಡೆಸ್ನಾನವನ್ನೂ ಸೇರಿಸಬೇಕು. ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರಗತಿಪರ ಮಠಾಧೀಶ ವೇದಿಕೆ ವತಿಯಿಂದ ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಹಮ್ಮಿಕೊಂಡಿರುವ ಮೂರು ದಿನಗಳ ಮೌಢ್ಯಮುಕ್ತ ಕರ್ನಾಟಕದತ್ತ ನಡೆಯೋಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಿರುವ ಪ್ರಗತಿಪರ ಮಠಾಧೀಶರ ವೇದಿಕೆ ಬಗ್ಗೆ ಹಗುರವಾಗಿ ಮಾತನಾಡಲಾಗುತ್ತಿದೆ. ಇದು ನಮ್ಮ ಪರವಾಗಿ ಮಾಡಿಕೊಳ್ಳುತ್ತಿರುವ ಹೋರಾಟವಲ್ಲ, ಬಡವರು, ಶೋಷಿತರು, ತಳ ಸಮುದಾಯಗಳ ಬಗ್ಗೆ ಮಾಡುತ್ತಿರುವ ಹೋರಾಟವಿದು ಎಂದು ಅವರು ಅರಿಯಬೇಕಿದೆ. ಮೂರು ದಿನ ಪ್ರತಿಭಟನೆ ಮಾಡಿ ಹೋಗಲು ನಾವು ಬಂದು ಕುಳಿತಿಲ್ಲ. ಆದರೂ ನಮ್ಮ ಹೋರಾಟವನ್ನು ನಿರ್ಲಕ್ಷಿಸಿದರೆ ಬೇರೆ ಕಡೆಯಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಯ್ದೆ ಜಾರಿಗೆ ತರುವ  ಬಗ್ಗೆ ಆಸಕ್ತಿ ಇದೆ. ಆದರೆ ಇತರರು ಅದನ್ನು ವಿರೋಧಿಸುತ್ತಿದ್ದಾರೆ ಎಂಬ ಮಾತಿದೆ. ಆದರೆ ಅವರು ಎಲ್ಲರನ್ನೂ ಒಗ್ಗೂಡಿಸಿ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ಥಾಯಿಸಿದರು.

ಇದೇ ವೇಳೆ ಜ್ಯೋತಿಷ, ಫಲ ಜ್ಯೋತಿಷವನ್ನು ಗ್ರಾಹಕ ಕಾಯ್ದೆಯಡಿ ತರಬೇಕು, ಮಠ , ಮಂದಿರ, ದೇಗುಲಗಳಲ್ಲಿ ಪಂಕ್ತಿ ಬೇಧವನ್ನು ನಿಷೇಧಿಸಬೇಕು. ಮೂಢನಂಬಿಕೆ ಕಾಯ್ದೆ ಜಾರಿಗೆ ತರುವ ಸಂಬಂಧ ಮೂರು ದಿನಗಳ ವಿಶೇಷ ಅಧಿವೇಶನವನ್ನು ಕರೆದು ಚರ್ಚೆ ನಡೆಸಿ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಆದರೆ ದುರ್ಬಲವಲ್ಲದೆ ಸಬಲ ಕಾಯ್ದೆಯನ್ನು ಜಾರಿಗೆ ತರಬೇಕು. ಗುರುವಾರ 4 ಗಂಟೆಯೊಳಗೆ ಲಿಖಿತ ಭರವಸೆ ಕೊಡದಿದ್ದರೆ ನಾವು ಸ್ವತಂತ್ರ  ನಿರ್ಧಾರವನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.

ನಾಗಮೋಹನ್ ದಾಸ್

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. 1950ರಲ್ಲಿ ಅಂಬೇಡ್ಕರ್ ಸಂವಿಧಾನ ಒಪ್ಪಿ ಸಂವಿಧಾನ ಆಯಿತು. ಅಂದಿನಿಂದ ಇಂದಿನವರೆಗೆ ಹಕ್ಕು ಅನುಭವಿಸಿಕೊಂಡು ಮತ್ತಷ್ಟು ಹಕ್ಕುಗಳಿಗಾಗಿ ಹೋರಾಟ ಮಾಡತ್ತಿದ್ದಾರೆ. ಕೈ ತಪ್ಪಿದ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಆದರೆ ಭಾರತದ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯವೂ ಇದೆ. ಇದರಲ್ಲಿ ಪ್ರತಿಯೊಬ್ಬನೂ ವೈಜ್ಞಾನಕ, ಮಾನವೀಯತೆ ಬೆಳೆಸಿಕೊಳ್ಳಬೇಕು ಎಂಬುದು. ಆದರೆ ದುರಾದೃಷ್ಟವಶಾತ್ ನಾವು ಇದನ್ನು ಬೆಳೆಸಿಕೊಳ್ಳಲಿಲ್ಲ. ಮೌಢ್ಯ ನಿವಾರಣೆಯಾಗಲಿಲ್ಲ ಎಂದು ನ್ಯಾ.ನಾಗಮೋಹನ್ ದಾಸ್ ಬೇಸರ ವ್ಯಕ್ತಪಡಿಸಿದರು.

ಇದು ಶೋಷಣೆ, ಜನರ ಧ್ವನಿಯನ್ನು ಅಡಗಿಸಿದೆ. ಲಿಂಗ, ಜಾತಿ, ಅಸ್ಪಸ್ಪ್ಯತೆ ಮುಕ್ತಿಗಾಗಿ ಮೌಢ್ಯ ಮುಕ್ತ ಹೋರಾಟ ಅಗತ್ಯ, ಮಹಾರಾಷ್ಟ್ರದಲ್ಲಿ ಪನ್ಸಾರೆ, ದಾಬೋಲ್ಕರ್ ಇದಕ್ಕಾಗಿ ಮಡಿದಿದ್ದಾರೆ.. ಕಾಯ್ದೆಗಾಗಿ ಇನ್ನೆಷ್ಟು ಮಂದಿ ಸಾಯಬೇಕು. ನಿಡುಮಾಮಿಡಿ ಮಠದ ಚನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ಮೌಢ್ಯ ಕಂದಾಛಾರ ನಿಷೇಧಿಸಿದ್ದು, ಪ್ರಗತಿಪರವಾಗಿದೆ. ಈ ಕಾಯ್ದೆ ಪವಾಡ ಪುರುಷರ ವಿರುದ್ಧವಲ್ಲ, ನಂಬಿಕೆಗಳ ವಿರುದ್ಧವಲ್ಲ. ಆದರೆ ಕೆಲವು ಅಮಾನವೀಯ ನಂಬಿಕೆ, ಹಿಂಸಾತ್ಮಕ, ಅನಾರೋಗ್ಯಕಾರ ನಂಬಿಕೆಗಳ ವಿರುದ್ಧ ಕಾಯ್ದೆ ಬರಬೇಕು. ಇದು ಸರ್ಕಾರದ ಮೇಲೆ ಇರುವ ನಂಬಿಕೆ. ಇದು ಅದರ ಜವಾಬ್ದಾರಿಯೂ ಹೌದು.

ಜೀಸಸ್, ಪೌಗಂಬರ್, ಬುದ್ಧ ಬಸವ ಪರಂಪರೆಯಲ್ಲಿ ಬಂದ ಗಾಂಧಿ, ಅಂಬೇಡ್ಕರ್ ಹೋರಾಟ ಮಾಡಿಕೊಂಡು ಬಂದಿದ್ದರು. ಭಾರತದ ಜನತೆಗೆ ನಾವು ಬಡವರು ಎಂದು ತಿಳಿದರೆ ಅದಕ್ಕೆ ಅವರು ಪರಿಹಾರ ಕಂಡುಕೊಳ್ಳುತ್ತಾರೆ. ಹಾಗಾಗಿ ಕಾಯ್ದೆ ಬರಬೇಕು. ಬಂದ ಮೇಲೆ ಮತ್ತೆ ಕೆಲವಕ್ಕೆ ಹೋರಾಟ ಮುಂದುವರಿಬೇಕು.ಮೌಢ್ಯ ತೊಲಗಿ, ವೈಜ್ಞಾನಿಕ ಚಿಂತನೆ ಬರಬೇಕು ಎಂದು ಅವರು ಕರೆ ನೀಡಿದರು.

ಬರಗೂರು ರಾಮಚಂದ್ರಪ್ಪ

ಸೂಫಿಗಳು, ಚಿಂತಕರು, ಪರಂಪರೆ ಬಗ್ಗೆ ಗೌರವ ಇದಲ್ಲಿ ಶೀಘ್ರ ಕಾಯ್ದೆ ರಚಿಸಿ, ಮನುಷ್ಯ ವಿರೋಧಿ ನಂಬಿಕೆಗಳನ್ನು ನಿಷೇಧಿಸಿ.ಮಠಗಳು ಸರ್ಕಾರಗಳಾಗುತ್ತಿರುವ, ಸರ್ಕಾರಗಳು ಮಠಗಳಾಗುತ್ತಿರುವ ಕಾಲವಿದು. ಸರ್ಕಾರಕ್ಕೆ ಸಂವೇಧನೆ ಇರಬೇಕು. ವ್ಯಾಪಾರಿ ಆಗಬಾರದು. ಚರ್ಚೆ, ಸಂವಾದಗಳ ಮೂಲಕ ಕಾಯ್ದೆ ತನ್ನಿ ಎನ್ನುತ್ತಿರುವುದೇ ಸಂವಿದಾನಾತ್ಮಕವಾದದ್ದು.

ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಯಾಗಬೇಕು ಎಂಬ ಚರ್ಚೆ ಶುರುವಾದಾಗ ದೇವರ ವಿರೋಧಿ ಎಂದು ದಿಕ್ಕು ತಪ್ಪಿಸಲು ಯತ್ನಿಸಿದರು. ಇದು ದೇವರು, ಧರ್ಮಗಳ ವಿರುದ್ಧವಲ್ಲ, ಅನೇಕ ಮಠಾಧೀಶರು, ಸಚಿವರು, ಶಾಸಕರು ಇದರ ಪರವಾಗಿದ್ದಾರೆ. ಇದು ತಾರ್ತಿಕ ಅಂತ್ಯ ಮುಟ್ಟಬೇಕು. ಇದಕ್ಕಾಗಿ ನಾವು ಜೊತೆಯಲ್ಲಿರೋಣ.. ಸಿದ್ದರಾಮಯ್ಯ ಅವರು ಜನರಿಗೆ ಮನವರಿಗೆ ಮಾಡಿಕೊಟ್ಟು ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಅವರಿಗೆ ಕಾಯ್ದೆ ಜಾರಿಗೆ ತರಲು ಕೆಲವು ವಿರೋಧಿಸುತ್ತಿದ್ದಾರೆ ಎಂದು ಕೆಲವರು ಮಾತನಾಡಿಕೊಳ್ತಿದಾರೆ. ಆಧರೆ ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲದ ಕೆಲಸಗಳನ್ನು ಶಾಸಕ ಸಚಿವರಿಗಾಗಿ ಮಾಡುತ್ತಾರೆ. ಅಂದ ಮೇಲೆ ಇಂಥ ಅಮೂಲ್ಯ ಮೌಢ್ಯಮುಕ್ತ ಕಾಯ್ದೆಗೆ ಹಿಂದೇಟು ಹಾಕುವುದೇಕೆ ಎಂದು ಅವರು ಪ್ರಶ್ನಿಸಿದರು.

ನಿವೃತ್ತ ನ್ಯಾ. ವಿ.ಗೋಪಾಲಗೌಡರು

ಪ್ರಜಾಸತ್ತೆಯಲ್ಲಿ ಮೂಢನಂಬಿಕೆಗಳಿಗೆ ಸ್ಥಾನವಿದೆಯೇ… ಮುಖ್ಯಮಂತ್ರಿಗಳಿಗೆ ಕಾಯ್ದೆ ಜಾರಿಗೆ ತರಲು ಆಸಕ್ತಿ ಇದೆ. ಆದರೆ ಇದಕ್ಕೆ ಕೆಲ ಸಚಿವರು, ಶಾಸಕರ ವಿರೋಧವಿದ್ದರೆ ಹಾಗೆ ವಿರೋಧಿಸುತ್ತಿರುವ ಶಾಸಕ, ಸಚಿವರಾರು ಎಂದು ಅವರು ಜನರಿಗೆ ತಿಳಿಸಬೇಕು. ಮಾನ್ಯ ಸರ್ವೋಚ್ಛ ನ್ಯಾಯಾಲಯ , ಸಂವಿಧಾನಗಳೂ ಸಮಾನತೆ ಮತ್ತು ವೈಚಾರಿಕ ತತ್ವಗಳಿಗೆ ಒತ್ತು ನೀಡಿ ಆದೇಶ ನೀಡಿವೆ ಎಂದು ಅಭಿಪ್ರಾಯಪಟ್ಟರು.

ಪಂಡಿತಾರಾಧ್ಯ ಸ್ವಾಮೀಜಿ

ಕಾಯ್ದೆ ಜಾರಿಗೆ ತರಲು ಹಿಂದೇಟು ಹಾಕುತ್ತಿರುವುದನ್ನು ನೋಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬದ್ಧತೆ ಇಲ್ಲವೇ ಎಂಬ ಅನುಮಾನ ಮೂಡುತ್ತಿದೆ. ಜನರೂ ತಮ್ಮ ಬಳಿ ಬರುವ ಜನಪ್ರತಿನಿಧಿಗಳು ಎಷ್ಟು ವೈಜ್ಞಾನಿಕವಾಗಿದ್ದಾರೆ ಎಂದು ಯೋಚಿಸಿ ಮತ ನೀಡಿ. ಗಿಳಿಗೆ ಬೆಕ್ಕು ಶಾಸ್ತ್ರ ಹೇಳಿದಂತಿದೆ.  ಮಾಧ್ಯಮಗಳಲ್ಲಿ ಜ್ಯೋತಿಷ ಹೇಳುತ್ತಿರುವ ಜ್ಯೋತಿಷಿಗಳು ಮಾನಸಿಕ ಭಯೋತ್ಪಾದಕರು ಎಂದು ಬೇಸರಿಸಿದರು. ಬಹುತೇಕರು ಮೌಢ್ಯದ ಪರವಾಗಿಲ್ಲ, ಸಾಮೂಹಿಕ ಸಂದರ್ಭದ ವೇಳೆ ಹಿಂಜರಿಯುತ್ತಾರಷ್ಟೆ. ಬಸವಣ್ಣನವರೂ ಆದರ್ಶ ಮುಖ್ಯವಾಗಿ ಅಧಿಕಾರ ಬಿಟ್ಟು ಬಂದರು. ಮುಖ್ಯಮಂತ್ರಿಗಳು ಇದನ್ನು ಅನುಸರಿಸಬೇಕು ಎಂದರು ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿಗಳು ಹೇಳಿದರು.

ಮೂರ್ತಿ, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈಯನ್ಸ್,

ಶಿಕ್ಷಣದಿಂದ ಮಾತ್ರ ಮೌಢ್ಯಮುಕ್ತವಾಗಲು ಸಾಧ್ಯ. ಆದರೆ ದುರಂತ ನಮ್ಮ ಹಳ್ಳಿಗಾಡಿನಲ್ಲಿ ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗುತ್ತಿಲ್ಲ. ಹಿಂದೆ ಕಾಲರಾ ಪ್ಲೋಗು ಜನರನ್ನು ಬಲಿ ತೆಗೆದುಕೊಳ್ತಿದ್ದೋ. ಈಗ ಮೌಢ್ಯ ಆ ಕೆಲಸವನ್ನು ಮಾಡುತ್ತಿವೆ.  ಎಂದರು.

ಕೆ.ಎಸ್.ಭಗವಾನ್

ದೇವರನ್ನು ನಂಬಿದ ಕೂಡಲೇ ಮೌಢ್ಯಗಳು ಶುರುವಾಗುತ್ತವೆ. ಮೌಢ್ಯಗಳೇ ಇಂದು ದೇವರ ರೂಪಗಳನ್ನು ತಾಳಿವೆ. ಇವುಗಳನ್ನು ಉಳಿಸಲು ರಾಮಮಂದಿರ ಕಟ್ಟಲು ಕೆಲವರು ಸಂಚು ನಡಿಸಿದ್ದಾರೆ. ಬೌದ್ಧ ಧರ್ಮವೊಂದೇ ವೈಜ್ಞಾನಿಕ ಧರ್ಮ ಎಂದು ಅಭಿಪ್ರಾಯಪಟ್ಟರು.

ದೊರೆಸ್ವಾಮಿ

ಕೃಷ್ಣನ ಅವತಾರ ಎತ್ತಿದ ಸ್ವಾಮಿಯ ಕ್ಷೀರಾಭಿಷೇಕದ ಹಾಲು ಬಳಸಿ ಜನ ಪಾಯಸ ಮಾಡಿ ಕುಡಿದರೆ ಕಾಯಿಲೆ ರೋಗಗಳು ಹೋಗುತ್ತವೆ ಎಂಬುದು ಕೆಲ ದಿನಗಳ ಹಿಂದಿತ್ತು. ಕಾಯಿದೆ ಜಾರಿಗೆ ತರಲು ಸಮಿತಿ ಮಾಡುವುದಕ್ಕಿಂತ ಕಸದ ಬುಟ್ಟಿಗೆ ಹಾಕುವುದೇ ಲೇಸು. ಎರಡು ನಡವಳಿಕೆ ಸರಿಯಲ್ಲ, ಮಾನವೀಯತೆಯಲ್ಲ. ಎಲ್ಲ ಮೌಢ್ಯ ಒಂದೇ ಬಾರಿ ನಿರ್ಮೂಲನೆಮಾಡಲಾಗಲ್ಲ. ಮಡೆಸ್ನಾನ, ಎಡೆಸ್ನಾನ, ಪಂಕ್ತಿಬೇಧ ನಿಷೇಧ ಶಾಸನ ಕೂಡಲೇ ಬರಬೇಕು. ಮುಂದೆ ವರ್ಷವರ್ಷವೂ ಹೊಸದನ್ನು ಸೇರಿಸುತ್ತಾ ಐದಾರು ವರ್ಷಗಳಲ್ಲಿ ಕರ್ನಾಟಕವನ್ನು ಮೌಢ್ಯ ಮುಕ್ತಾವಾಗಿಸುವತ್ತ ಕೊಂಡೊಯ್ಯಬೇಕು ಎಂದರು.

ಲಲಿತಾನಾಯಕ್

ಸರ್ಕಾರ ಮೂರು ದಿನಗಳ ಕಾಲ ಸಮಯ ತೆಗೆದುಕೊಳ್ಳದೆ ಈಗಲೇ ನಿರ್ದಾರ ತಿಳಿಸಬೇಕು. ನೀವು ಈ ಕಾಯ್ದೆ ತಂದರೆ ಶೇ.80 ಮಂದಿ ಓಟು ಹಾಕಲ್ಲ, ಹಾಗಾಗಿ ಈ ಕಾಯ್ದೆ ತರಬೇಡಿ ಎಂಬ ಒತ್ತಡವಿದೆ ಎನ್ನಲಾಗ್ತಿದೆ. ಸರ್ಕಾರ ಆಗುವುದಿಲ್ಲ ಎಂದು ಹೇಳಿದಲ್ಲಿ ಕ್ರಾಂತಿಕಾರಕ ರೀತಿಯಲ್ಲಿ ಇದನ್ನು ತರವು ಹೋರಾಟಕ್ಕೆ ಮುಂದಾಗುವ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಡಾ.ಅಲ್ಲಮ ಬೆಟ್ಟದೂರು

ನಾಡಿನ ಜನರಿಗೆ ಎಲ್ಲ ಭಾಗ್ಯ ಕೊಟ್ಟಿರುವ ಸರ್ಕಾರ ವಿಚಾರ ಭಾಗ್ಯವನ್ನೂ ನೀಡಬೇಕು. ಇಂದಿರಾ ಕ್ಯಾಂಟೀನ್ ಗಳಲ್ಲಿ ವಿಚಾರ ಪರ ಸಂಗತಿಗಳನ್ನೂ ಹಾಕಬೇಕು.  ಮಳೆಯನ್ನು ದೇವರ ಮೂತ್ರ ಎಂದು ತಿಳಿದಿರುವಷ್ಟು ಮೌಢ್ಯವಿದೆ.  ಸರ್ಕಾರ ಜನರನ್ನು ವಿಚಾರರ ಪರರನ್ನಾಗಿ ಮಾಡಬೇಕು. ಕರ್ನಾಟಕ ಸರ್ಕಾರ ಶೀಘ್ರ ಮೂಢನಂಬಿಕೆ ಪ್ರತಿಭಂಧಕ ಕಾಯ್ದೆಯನ್ನು ಜಾರಿಗೆ ತರಬೇಕು.

ಚಂದ್ರಶೇಖರನಾಥ ಸ್ವಾಮೀಜಿ..

ಊಟಕ್ಕೆ ಉಪ್ಪಿನಕಾಯಿ ಶುರುವಾದದಂದೇ ಮೌಢ್ಯವೂ ಶುರುವಾಗಿಬಿಟ್ಟಿವೆ. ಕುವೆಂಪು ಅವರು ಈ ಮೌಢ್ಯ ಮತ್ತು ಅದ್ಧೂರಿ ಮದುವೆ ವಿರೋಧಿಸಿ ಸರಳ ಮಂತ್ರ ಮಾಂಗಲ್ಯಕ್ಕೆ ನಾಂದಿ ಹಾಡಿದರು. ಆದರೆ ಜನ ಮಾತ್ರ ಅದನ್ನು ಪಾಲಿಸುತ್ತಲೇ ಇಲ್ಲ. ಜನ ಎಲ್ಲಿಯವರೆಗೆ ಜ್ಞಾನಿಗಳಾಗೋಲ್ವೋ ಅಲ್ಲಿಯವರೆಗೆ ಮೌಢ್ಯ ಹೋಗಲ್ಲ. ಸರ್ಕಾರ ಕಾಯ್ದೆ ತಂದರೂ ಜನರೇ ಅದನ್ನು ಪಾಲಿಸಬೇಕಾಗಿದೆ.

ಸೂಫಿ ಮಹಮ್ಮದ್ ರೂಹುಲ್ಲಾ

ಎಲ್ಲ ಜಾತಿ ಧರ್ಮಗಳೂ ಸೇರಿದಂತೆ ಒಂದೇ ತಟ್ಟೆಯಲ್ಲೂ ಉಣ್ಣುವಂತೆ ಜನ ಆಗಬೇಕು. ದುಡ್ಡುಕೊಟ್ಟರೆ ಶೀಘ್ರ ದರ್ಶನ ಇಲ್ಲದಿದ್ದರೆ ಕ್ಯೂ,

ಮಾರಪ್ಪ: ದಸಂಸ ಮುಖ್ಯಸ್ಥ

ಅಧಿಕಾರ ಇರಲಿ ಹೋಗಲಿ ಮೂರು ದಿನಗಳ ಅಧಿವೇಶನ ಕರೆದು ಮೌಡ್ಯ ಪ್ರತಿಭಂದಕ ಕಾಯ್ದೆ ಜಾರಿಗೆ ತರಬೇಕು. ತಪ್ಪಿದಲ್ಲಿ ವಿಧಾನಸೌಧಕ್ಕೆ ಬೀಗ ಮುದೆ ಹಾಕುವುದು ಗ್ಯಾರಂಟಿ ಎಂದು ಎಚ್ಚರಿಸಿದರು.

ಬೋಧಿಸತ್ತ ಭಂತೇಜಿ, ಸಿದ್ದಾರ್ಥ ನಗರ ಮೈಸೂರು.

ಅಜ್ಞಾನವೇ ಮೌಢ್ಯಕ್ಕೆ ಕಾರಣವಾಗಿದೆ. ಮೌಢ್ಯದಿಂದ ಸಾಲಸೂಲ ಮಾಡಿಕೊಂಡರೆ ದರಿದ್ರ ಬರುತ್ತದೆ. ಹಾಗಾಗಿ ವೈಚಾರಿಕತೆ ಹೋರಾಟದ ಕಾರಣದಿಂದ ಫ್ರಾನ್ಸ್ ಕ್ರಾಂತಿ ಉಂಟಾಯಿತು. ಹಾಗಾಗಿ ಫ್ರಾನ್ಸ್ ದೇಶಕ್ಕೆ ನೆಗಡಿಯಾದರೆ ಯುರೋಪ್ ಸೀನುತ್ತದೆ ಎಂಬ ಮಾತಿದೆ. ಹಾಗೆ ಕರ್ನಾಟಕದಲ್ಲಿ ಮೌಡ್ಯ ಮುಕ್ತ ಕಾಯ್ದೆ ಜಾರಿಗೆ ತಂದರೆ ಅದು ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದು ಒತ್ತಾಯಿಸಿದರು.

 

 

Leave a Reply

Your email address will not be published.