ಮೊಲೆಯೆರಡೆ ಸಾಕು

-ಮಾಧವಿ ಭಂಡಾರಿ ಕೆರೆಕೋಣ

Mums and Babies

ಎಷ್ಟೊಂದು ಆಯುಧಗಳು ನಿನಗೆ !
ಅಡಿಯಿಂದ ಮುಡಿಯವರೆಗೆ
ಎಲ್ಲವೂ ದುಷ್ಟರ ಸಂಹಾರಕ್ಕೆ

ಹಣೆಗಣ್ಣೊಂದೆ ಸಾಕು
ಎದುರು ನಿಂತರೆ ಕ್ಷಣಾರ್ಧದಲ್ಲಿ
ಉರಿದು ಭಸ್ಮವಾಗಿಸಲು

ಕೈಯಲ್ಲಿ ತ್ರಿಶೂಲ ಬೇರೆ
ಎದುರಾಳಿಗಳನ್ನೆಲ್ಲ ನಿಮಿಷದಲ್ಲಿ
ಇರಿದು ನೆಲಕ್ಕುರುಳಿಸಲು

ಅದರದೇ ಅಪರಾವತಾರ ಚಕ್ರ
ಗರಗರನೆ ತಿರುಗುತ್ತ ಗಳಿಗೆ ಮಾತ್ರದಲ್ಲಿ
ರುಂಡ ಮುಂಡ ಬೇರಾಗಿಸಲು

ಅಥವಾ ಮಧುರ ಮುರಳಿ
ನುಡಿಸುತ್ತ ನುಡಿಸುತ್ತ ಲೋಕದ
ರಮಣಿಯರನ್ನೆಲ್ಲ ಮಳ್ಳಾಗಿಸಲು

ಹೆÀಗಲಲ್ಲಿ ಅಕ್ಷಯ ಬತ್ತಳಿಕೆ
ಅತಳ ವಿತಳ ರಸಾತಳಗಳನ್ನೆಲ್ಲ
ತುಡುಕಿ ಕೊಲ್ಲಲು

ಬೇಕಾದಂತೆ ಬೆಳೆವ ಪಾದ
ದಾನಕ್ಕೆ ಬಾಗಿದ ತಲೆಯ
ಅದುಮಿ ಪಾತಾಳ ಮುಕ್ಕಿಸಲು

ಎಲ್ಲಕ್ಕೂ ಕಲಶವಿಟ್ಟಂತೆ ಹಾವು
ಸುತ್ತಿ ಬಿಗಿದು ಹೆಣೆಯಾಡಿ ಹೊಕ್ಕು
ವಿಷವುಕ್ಕಿ ಸಾಯಿಸಲು

ನನಗೊ
ಜಗದಗಲ ಪೊರೆಯಲು
ಹಾಲ್ದುಂಬಿದ ಮೊಲೆಯೆರಡೆ ಸಾಕು.

……………………………………………….

– ಮಾಧವಿ ಭಂಡಾರಿ ಕೆರೆಕೋಣ, ಕನ್ನಡ ಅಧ್ಯಾಪಕರು, ಸ. ಪ. ಪೂ ಕಾಲೇಜು , ಮಾರಿಗುಡಿ
ಶಿರಸಿ ಉತ್ತರ ಕನ್ನಡ – 581 402:

6 Responses to "ಮೊಲೆಯೆರಡೆ ಸಾಕು"

 1. ಸುಬ್ರಾಯ ಮತ್ತೀಹಳ್ಳಿ.  August 9, 2016 at 8:14 pm

  ಻ಅರ್ಥಪೂರ್ಣ ಕವನ.

 2. vishala Aradhya  August 10, 2016 at 6:13 pm

  ಸುಂದರ ವಿಶ್ಲೇಷಣೆ

 3. Kavya Kadame Nagarakatte  August 11, 2016 at 3:27 pm

  This is awesome Madhavi Mam❤️❤️

 4. H M Pernal  August 11, 2016 at 10:58 pm

  Simply superb. Powerful expressions.

 5. SHRIDHAR alur  August 15, 2016 at 11:27 pm

  ಮಾರ್ಮಿಕ ಕವನ

 6. Shivanand satti  January 28, 2017 at 4:15 pm

  ಸುಂದರ ವಿಶ್ಲೇಷಣೆ

Comments are closed.