ಮಿಂಚು ಕಥೆಗಳು

-ಕೃಷ್ಣ ಶ್ರೀಕಾಂತ ದೇವಾಂಗಮಠ

AMMANAಪರಿವರ್ತನೆ

ವಿಕೃತ ಕಾಮಿಯೊಬ್ಬ ಕಥೆ ಓದುತ್ತಲೇ ಅದರಾಳಕ್ಕಿಳಿದು ಕಥಾ ನಾಯಕನ ಪಾತ್ರಕ್ಕೆ ಪರಕಾಯ ಪ್ರವೇಶ ಪಡೆದ ಅವನೊಳಗಿದ್ದ ಹೆಣ್ಣು ಜಾಗೃತಳಾದಳು ನಿಮ್ಹಾನ್ಸನಲ್ಲಿ ಬೆನ್ನು ಬಿಡದ ಹುಚ್ಚು ಈಗ ಬಿಟ್ಟು ಹೋಯಿತು

ನಕಲು

ಅವಳನ್ನು ಮನೆ ತುಂಬಿಸಿಕೊಂಡ ಹೊಸತರಲ್ಲಿ ಆತ ಇಪ್ಪತ್ತೈದರ ಹರೆಯ ಗತಿಸಿದ ಒಂದೇ ವರ್ಷಕ್ಕೆ ಅವನ ಮರುಹುಟ್ಟು ತಾಯಂದಿರು ಮುಖ ನೋಡಿ ನಕ್ಕರು ಆತ ಮುಖ ಮುಚ್ಚಿಕೊಂಡ

ಮಡಿಲು

ಒಂಭತ್ತು ತಿಂಗಳ ತನ್ನ ಗರ್ಭಕ್ಕೆ ಜನ್ಮವಿತ್ತ ಅನಾಥೆ ಕಣ್ಣು ಮುಚ್ಚಿಕೊಂಡಳು ಮಗು ಕಣ್ ಬಿಟ್ಟಿರಲಿಲ್ಲ ಅಳುತ್ತಿತ್ತು ಪಕ್ಕದ ಕೋಣೆಯಲ್ಲಿ ನೈಟ್ ಶಿಪ್ಟ ಮಾಡುತ್ತಿದ್ದ ದಾದಿ ಶಿಶುವನ್ನು ಮಡಿಲಿಗೆಳೆದುಕೊಂಡಳು ತಬ್ಬಲಿ ಗೂಡು ಸೇರಿತು ಬಂಜೆಯ ಒಡಲಲ್ಲಿ ಮತ್ತೀಗ ಪ್ರೀತಿ ಚಿಗುರೊಡೆಯುತ್ತಿದೆ

Leave a Reply

Your email address will not be published.