ಮಾನವ ಇತಿಹಾಸದ ‘ಸಾಂಗ್ ಲೈನ್ಸ್’- ಎರಡು

-ಲಕ್ಷ್ಮೀಪತಿ ಕೋಲಾರ

INDUS-CIVILIZATIONಹರಪ್ಪ ಮತ್ತು ಮೊಹೆಂಜೋದಾರೋ ನಾಗರಿಕತೆಯ ಮಣ್ಣಿನ ಇಟ್ಟಿಗೆಯ ಗಾತ್ರ ಮತ್ತು ಮಹಾಬಲಿಪುರಂ, ಪೂಂಪುಹಾರ್ ನಗರ ಸಂಸ್ಕøತಿಗಳ ಕತ್ತರಿಸಿದ ಕಲ್ಲಿನ ಗಾತ್ರಗಳು ಒಂದೇ ಅಳತೆಯಲ್ಲಿವೆಯೆಂಬುದು ಕೂಡ ಆಸಕ್ತಿದಾಯಕ ಅಂಶವಾಗಿದೆ. ಎರಡು ನಾಗರಿಕತೆಗಳ ವಿನ್ಯಾಸದಲ್ಲೂ ಬಹಳಷ್ಟು ಸಾಮ್ಯಗಳಿವೆಯೆಂದೂ ತಜ್ಞರು ಅಂದಾಜಿಸಿದ್ದಾರೆ. ಭಾರತದ ಪುರಾತತ್ವ ಇಲಾಖೆ ಈಗಾಗಲೇ ಪಾಂಡಿಚೇರಿಗೆ ನಾಲ್ಕು ಕಿ.ಮಿ.ದೂರದಲ್ಲಿರುವ ಅರಿಕಮೇಡು ಎಂಬಲ್ಲಿ ಸಾಗರದಾಳದ ಉತ್ಖನನವನ್ನು ನಡೆಸುತ್ತಿದೆ. ಅದು ಅರಿಯನ್ ಕುಪ್ಪಂ ಎಂಬ ನದೀ ದಂಡೆಯ ಮೇಲಿನ ಬಂದರು ಪಟ್ಟಣವಾಗಿತ್ತು. ಇವುಗಳ ಜೊತೆಗೆ 2002ರಲ್ಲಿ ದಕ್ಷಿಣ ಗುಜರಾತಿನ ಕ್ಯಾಂಬೇ ಕೊಲ್ಲಿಯಲ್ಲಿ ಮುಳುಗಡೆಯಾಗಿದ್ದ ಬೃಹತ್ ನಗರ ಸಂಸ್ಕøತಿಯೊಂದರ ಅವಶೇಷಗಳು ಅತ್ಯಂತ ಆಕಸ್ಮಿಕವೆಂಬಂತೆ ಪತ್ತೆಯಾದವು. ಸಮುದ್ರ ತೀರದಿಂದ 30 ಕಿಲೋಮೀಟರ್ ದೂರದಲ್ಲಿ 40 ಮೀಟರ್ ಆಳದಲ್ಲಿ ಸಿಕ್ಕಿದ ಪಳೆಯುಳಿಕೆಯಾಗಿರುವ ಮರದ ತುಂಡೊಂದರ ಕಾರ್ಬನ್ ಡೇಟಿಂಗ್ ಆಧಾರದ ಮೇಲೆ ಕ್ಯಾಂಬೇನಗರ ಸಂಸ್ಕøತಿಯನ್ನು ಕ್ರಿಸ್ತಪೂರ್ವ 7500, ಅಂದರೆ ಇವತ್ತಿಗೆ 9,500 ವರ್ಷಗಳ ಹಿಂದಿನ ಕಾಲಘಟ್ಟದ್ದೆಂದು ನಿರ್ಧರಿಸಲಾಗಿದೆ.

ಇದರ ಕಾಲ ಅಧಿಕೃತವೆಂದು ಜಗತ್ತು ನಂಬಿದಂದು ಅಥವಾ ಹಾಗೆ ತೀರ್ಮಾನಿಸಲ್ಪಟ್ಟ ದಿನ, ಇದುವರೆವಿಗೂ ಶೋಧಿಸಲ್ಪಟ್ಟ ನಾಗರಿಕತೆಗಳಲ್ಲೇ ಕ್ಯಾಂಬೇನಗರ ಸಂಸ್ಕøತಿ ಜಗತ್ತಿನಲ್ಲೇ ಅತ್ಯಂತ ಪ್ರಾಚೀನ ನಾಗರಿಕತೆಯೆಂದೆನಿಸಿ ಕೊಳ್ಳಬಲ್ಲದು. ಕುತೂಹಲದ ಸಂಗತಿಯೇನೆಂದರೆ ಡಾಕ್ಟರ್ ಸ್ಟೆನ್ಸರ್ ವೆಲ್ಸ್ ಅವರು ಆಫ್ರಿಕದ ಆದಿಮಾನವರು ಪಯಣಿಸಿದ್ದಿರಬಹುದೆಂದು ಯಾವ ವಲಸೆ ಮಾರ್ಗವನ್ನು ತಮ್ಮ ವಂಶವಾಹಿ ಸಂಶೋಧನೆಗಳ ಮೂಲಕ ಗುರುತಿಸಿದ್ದರೋ, ದಕ್ಷಿಣ ಭಾರತದ ಆ ಮಾರ್ಗದಲ್ಲೇ ಈ ಎಲ್ಲಾ ಸಾಗರದಾಳದ ನಗರ ಸಂಸ್ಕøತಿಗಳು ಪತ್ತೆಯಾಗುತ್ತಿರುವುದು! ಆಗ ಭೂಭಾಗ ಸಮುದ್ರದೊಳಗೆ 200 ಕಿಲೋಮೀಟರ್‍ಗಳಷ್ಟು ವಿಸ್ತರಿಸಿಕೊಂಡಿದ್ದ ಹಿಮಯುಗವೆಂಬುದೂ ನಮ್ಮ ನೆನಪಲ್ಲಿರಬೇಕು. ಅಂತಹ ಭೂಭಾಗದಲ್ಲಿ ಅರಳಿದ್ದ ನಗರ ಸಂಸ್ಕøತಿಗಳೇ ಹಿಮ ಕರಗಿ ಸಮುದ್ರದ ಮಟ್ಟ 100 ಮೀಟರುಗಳಷ್ಟು ಏರಿದಾಗ ಮುಳುಗಡೆಯಾಗಿದ್ದಿರಬೇಕು.

ಡಾಕ್ಟರ್ ವೆಲ್ಸ್ ಅವರು ಗುರುತಿಸಿರುವಂತೆ ಆಫ್ರಿಕವನ್ನು ತೊರೆದ ಬುಷ್‍ಮನ್ ಬುಡಕಟ್ಟಿನ ಜನರು ಭಾರತದ ಗುಜರಾತಿನ ಸಮುದ್ರ ತೀರವನ್ನೇ ಮೊದಲು ತುಳಿದಿದ್ದು. ಅಲ್ಲಿನ ಯಾದವ ಜನಾಂಗದಲ್ಲಿ ಬುಷ್‍ಮನ್ ಜನರ ವಂಶವಾಹಿಗಳಲ್ಲಿ ಕಂಡುಬಂದ ಮಾರ್ಕರ್-130ರ ಚಹರೆಗಳು ಶತಾಂಶ ಐದರಷ್ಟಿರುವುದನ್ನು ಕೂಡ ಅವರು ಪತ್ತೆಹಚ್ಚಿದ್ದಾರಷ್ಟೇ? ಆದರೆ 50,000 ವರ್ಷಗಳ ಹಿಂದೆ ಗುಜರಾತಿನ ಸಮುದ್ರ ತೀರಗಳನ್ನು ಮೆಟ್ಟಿದ ಜನರ ಗುಂಪೇ ಈ ನಗರ ಸಂಸ್ಕøತಿಗಳನ್ನು ನಿರ್ಮಿಸಿದ್ದಿರಬಹುದೆಂದು ಹೇಳಲು ಎಂಥವರಿಗೂ ಧೈರ್ಯ ಸಾಲುವುದಿಲ್ಲ. ಯಾಕೆಂದರೆ ಆ ಕಾಲಕ್ಕೆ ಇಂತಹ ಸುಸಜ್ಜಿತ ಹಾಗೂ ನಾಜೂಕಿನ ನಗರ ಸಂಸ್ಕøತಿಗಳನ್ನು ಕಟ್ಟಬಲ್ಲ ಕೌಶಲ್ಯವಿನ್ನೂ ಮನುಷ್ಯರಿಗೆ ಖಂಡಿತ ಸಿದ್ದಿಸಿರಲಾರದು. ಒಂದೋ ಅಲ್ಲೇ ನೆಲೆಸಿದ ವಲಸೆಯ ದ್ರಾವಿಡಪೂರ್ವ ಜನಾಂಗದ ಒಂದು ಗುಂಪು ಕ್ರಮೇಣ ವಿಕಾಸಗೊಳ್ಳುತ್ತ 10,000 ವರ್ಷಗಳ ಹಿಂದೆಂದೋ ಈ ನಗರ ಸಂಸ್ಕøತಿಗೆ ನಾಂದಿ ಹಾಡಿದ್ದಿರಬೇಕು. ಇಲ್ಲವೇ 10,000 ವರ್ಷಗಳ ಹಿಂದೆಯೇ ಮೆಡಿಟರೇನಿಯನ್ ಪ್ರದೇಶದಿಂದ ದಕ್ಷಿಣ ಭಾರತದ ಸಮುದ್ರ ತೀರ ಪ್ರದೇಶಗಳಿಗೆ ಬಂದು ನೆಲೆಸಿದ, ಅದಾಗಲೇ ವಿಕಾಸ ಹೊಂದಿದ್ದ ದ್ರಾವಿಡ ಜನಾಂಗದವರು ಈ ನಗರ ಸಂಸ್ಕøತಿಗಳ ವಾರಸುದಾರರಾಗಿದ್ದಿರಬೇಕು. ಬಹು ಶಿಸ್ತೀಯ ಅಧ್ಯಯನಗಳು ಕಡಲಿನಾಳದಲ್ಲಿ ಹೂತುಹೋಗಿರುವ ನಗರಗಳಂತೆಯೇ, ಕಾಲದೊಳಗೆ ಹೂತುಹೋಗಿರುವ ಈ ಗಟ್ಟಿ ಸತ್ಯಗಳನ್ನು ಮಥಿಸಿ ಹೊರತರಬೇಕಿದೆ.

ಇತಿಹಾಸಪೂರ್ವ ಯುಗದಲ್ಲಿ ಆದಿಮ ಬುಡಕಟ್ಟುಗಳು ಬದುಕನ್ನರಸುತ್ತ ಒಂದೆಡೆಯಿಂದ ಮತ್ತೊಂದೆಡೆಗೆ ವಲಸೆ ಹೊರಟಾಗ ಅವರೊಂದಿಗೆ ಅವರ ಮೂಲ ಪ್ರದೇಶದಲ್ಲಿನ ನದಿ, ಬೆಟ್ಟ, ವೃಕ್ಷ, ಪ್ರಾಣಿಪಕ್ಷಿಗಳು ಹಾಗೂ ದೈವತಗಳ ಪರಿಕಲ್ಪನೆಗಳೂ ಸಮುದಾಯದ ನೆನಪಿನ ಬಂಡಿಯೇರಿ ವಲಸೆ ಹೊರಡುತ್ತಿದ್ದವು. ಋಗ್ವೇದದಲ್ಲಿನ ಇಂದ್ರ, ಅಗ್ನಿ, ಸೋಮ, ಮಿತ್ರ, ಯಮ ಮತ್ತಿತ್ಯಾದಿ ದೈವತಗಳು ಕೂಡ ವಲಸೆ ದೇವರುಗಳೇ. (ಡಾ. ರಾಜೇಶ್ ಕೊಚ್ಚಾರ್: ‘ದಿ ವೇದಿಕ್ ಪೀಪಲ್’) ಇಂತಹ ಮಾನವ ವಲಸೆಯ ಪ್ರಾಚೀನ ಇತಿಹಾಸದಲ್ಲಿ ಬಹುಶಃ ವಲಸೆ ಹೊರಟು ಬಂದ ಮೊಟ್ಟ ಮೊದಲ ದೈವತ ಮುರುಗನೇ. ಆಫ್ರಿಕದಿಂದ ಹೊರಟ ಮೊದಲ ವಲಸೆಯ ಗುಂಪಿನೊಂದಿಗೆ ದಕ್ಷಿಣ ಭಾರತ/ಸಿಲೋನ್ ತಲುಪಿದ ಮುರುಗ ಆಗ ಕಡವುಳ್, ಕೋ, ಆಂಡವನ್, ಪೆರುಮಾಳ್ (ದೇವರು) ಆಗಿರಲಿಲ್ಲ. ಕೇವಲ ಮಲೈ ಪೆಯ್ (ಬೆಟ್ಟದ ಭೂತ) ಆಗಿದ್ದ. ಯಾಕೆಂದರೆ ನಮ್ಮ ‘ಭೂತಕೋಲ’ ಹಾಗೂ ಕೇರಳದ ‘ತೆಯ್ಯಂ’ ಸೇರಿಕೊಂಡಂತೆ ಜಗತ್ತಿನೆಲ್ಲೆಡೆಯ ಭೂತಾರಾಧನೆಗಳ ಆಚರಣಾ ಸಂಸ್ಕøತಿಯ ಮೂಲ ಆಫ್ರಿಕವೇ. ಹೀಗಾಗಿ ದಟ್ಟ ಭೂತಾರಾಧನೆಯ ಸಂಸ್ಕøತಿಯಲ್ಲಿ ರೂಪುಗೊಂಡ ಮುರುಗ ಸಹಜವಾಗಿಯೇ ಭೂತವಾಗಿದ್ದಾನೆ. ಆದರೆ ಬೆಟ್ಟದ ಭೂತವಾಗಿದ್ದಾನೆ, ಅಷ್ಟೆ.

ಈಗ ಮತ್ತೆ ಮುರುಗನ ತವರುಮನೆಯಾದ ಆಫ್ರಿಕಕ್ಕೇ ವಾಪಸ್ಸು ಹೋಗೋಣ. ಪೂರ್ವ ಆಫ್ರಿಕದ ಅನೇಕ ಬುಡಕಟ್ಟುಗಳು ಇಂದಿಗೂ ‘ಮುರುಂಗು’ (ಒuಡಿuಟಿgu) ಎಂಬ ಬೆಟ್ಟದ ದೈವವನ್ನು ಆರಾಧಿಸುತ್ತಾರೆ. ಸುಮೇರಿಯನ್ ಸಂಸ್ಕøತಿಯಲ್ಲೂ ‘ಮುರು’ ಎಂಬ ಬೆಟ್ಟ ಹಾಗೂ ಯುದ್ಧದ ದೈವತವನ್ನು ಆರಾಧಿಸುತ್ತಿದ್ದುದರ ಬಗ್ಗೆ ಡಾ.ಯು.ಪಿ.ಉಪಾಧ್ಯಾಯ ಅವರು ದಾಖಲಿಸಿದ್ದಾರೆ. (ಉಪಾಧ್ಯಾಯ ಅವರು ಆಫ್ರಿಕದ ಸೆನೆಗಲ್ ವಿಸ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ ಸಂಸ್ಕøತಿ ಅಧ್ಯಯನದ ವ್ಯಾಪಕ ಕ್ಷೇತ್ರ ಕಾರ್ಯವನ್ನು ಮಾಡಿ, ಪ್ರತ್ಯಕ್ಷವಾಗಿ ಕಂಡ ಅನೇಕ ಆಚರಣೆಗಳನ್ನು ತಮ್ಮ ‘ದ್ರಾವಿಡಿಯನ್ ಅಂಡ್ ನೀಗ್ರೋ ಆಫ್ರಿಕನ್’ ಎಂಬ ಪುಸ್ತಕದಲ್ಲಿ ನಿರೂಪಿಸಿದ್ದಾರೆ) ತಮಿಳಿನ ಸಂಗಂ ಸಾಹಿತ್ಯದ ‘ತೊಲ್‍ಕಾಪ್ಪಿಯಂ’ನಲ್ಲಿ ಮುರುಗನನ್ನು ಕುರಿಂಚಿ ದೈವ (ಕುರಿಂಚಿ=ಹನ್ನೆರಡು ವರ್ಷಕ್ಕೊಮ್ಮೆ ಬೆಟ್ಟದಲ್ಲಿ ಬಿಡುವ ಹೂ ಹಾಗೂ ಅಂತಹ ಹೂಗಳ ಬೆಟ್ಟ) ಎಂದೇ ಪ್ರಸ್ತಾಪಿಸಲಾಗಿದೆ. ಇದಕ್ಕೆ ನಿದರ್ಶನವೆಂಬಂತೆ ಪಳನಿಯನ್ನು ಸೇರಿಸಿಕೊಂಡಂತೆ ತಮಿಳುನಾಡಿನ ಬಹುತೇಕ ಮುರುಗನ ದೇವಾಲಯಗಳು ಇರುವುದೇ ಬೆಟ್ಟಗಳಲ್ಲಿ. ಇದರ ಜೊತೆಗೆ ತಮಿಳರು ಪ್ರಾಚೀನ ಕಾಲದಿಂದಲೂ, ಬಹುಶಃ ಆಫ್ರಿಕದ ಕಲಹರಿ ಅಥವ ಸಹರಾ ಮರುಭೂಮಿಯ ನೆನಪುಗಳ ಹಿನ್ನೆಲೆಯಲ್ಲಿ ಮುರುಗನನ್ನು ‘ಪಾಲೈ ನಿಲೈತ್ ತಲೈವನ್’ (ಛಿhieಜಿ oಜಿ ಜeseಡಿಣ) ಎಂದು ಆ ಮೂಲದ ಮುರುಗನನ್ನು ಅದೇ ಹೆಸರಲ್ಲಿ ಕರೆದಂತಿದೆ. ಮುರುಗ ಮರುಭೂಮಿಗೆ ಸಂಬಂಧಿಸಿದ ದೈವತವೆನ್ನುವುದರ ಹಿಂದಿನ ಮೂಲ ಪ್ರೇರಣೆ ಆಫ್ರಿಕದ ಮರುಭೂಮಿಗಳಲ್ಲದಿದ್ದರೆ, ಶ್ರೀಲಂಕಾ ಅಥವಾ ತಮಿಳುನಾಡುಗಳಲ್ಲಿ ಮರುಭೂಮಿಗಳ ನೆನಪಾದರೂ ಎಲ್ಲಿಂದ ಬರಬೇಕು? ಮರುಭೂಮಿಯ ನಾಯಕನೆಂದು ಕರೆಯಬೇಕಾದರೂ ಯಾಕೆ?

harappaಈ ಹಿಂದೆಯೇ ನಾವು ಗಮನಿಸಿರುವಂತೆ ಸೈಪ್ರಸ್ ಮತ್ತು ಪ್ಯಾಲೆಸ್ತೀನಿನ ಪ್ರಾಚೀನ ಸಮಾಧಿಗಳಲ್ಲಿ ಮುರುಗನ ಆಯುಧವಾದ ‘ವೇಲ್’ (ಶೂಲದಾಕಾರದ ಬಾಣ) ಸಿಕ್ಕಿರುವುದು ಮುರುಗನ ಪಂಥ ಒಟ್ಟಾರೆ ಆಫ್ರಿಕ ಹಾಗೂ ಅಲ್ಲಿಂದಲೇ ವಲಸೆ ಹೋದ ಮೆಡಿಟರೇನಿಯನ್ ಪ್ರದೇಶದ ಜನಾಂಗಗಳಲ್ಲೂ ಪ್ರಾಚೀನ ಆಚರಣೆಯಾಗಿತ್ತೆಂಬುದಕ್ಕೆ ಸ್ಪಷ್ಟ ನಿದರ್ಶನವೊದಗಿಸಬಲ್ಲದು. ಮುರುಗನ ಈ ‘ವೇಲ್’ ಹಿಡಿದು ಪೂಜರಿ ವೇಲನ್ ಆಡುವ ಕುಣಿತಕ್ಕೆ ‘ವೆರಿಯಾಟಲ್’ (ಮೈದುಂಬುವ ಹುಚ್ಚು ಆವೇಶÀ) ಎನ್ನುತ್ತಾರೆ. ಕೇರಳದಲ್ಲಿ ಇದನ್ನೇ ‘ಪೆಯ್ಯಾಟಂ’ ‘ಮಲೈಪೇಯ್’ (ಬೆಟ್ಟದ ಭೂತ) ಎಂದು ಕರೆಯುತ್ತಾರೆ. ಇವೆಲ್ಲವುಗಳಲ್ಲೂ ನಾವು ಬೆಟ್ಟ, ಭೂತ ಹಾಗೂ ಮೈದುಂಬುವ ಹುಚ್ಚು ಪರಿಗಳನ್ನು ಗಮನಿಸಬಹುದಾಗಿದೆ.

ಹಿಮಯುಗದಲ್ಲಿ ಶ್ರೀಲಂಕಾ ದಕ್ಷಿಣ ಭಾರತದ ತುಟ್ಟ ತುದಿಯಾಗಿತ್ತಷ್ಟೇ? ಅದರಲ್ಲೂ ವಲಸೆಗಳು ಬಂದ ಕಾಲದಲ್ಲಂತೂ ಶ್ರೀಲಂಕಾ ತಮಿಳುನಾಡಿನ ವಿಸ್ತರಿಸಿದ ದಕ್ಷಿಣ ಭಾಗವಾಗಿದ್ದು ಸಾಂಸ್ಕøತಿಕ ಹಾಗೂ ಜನಾಂಗೀಯ ಭೇದಗಳೇ ಇದ್ದಿರಲಾರದು. ಹೀಗಾಗಿ ಶ್ರಿಲಂಕಾದಲ್ಲಿನ ದ್ರಾವಿಡಪೂರ್ವ ಜನಾಂಗದ ವೆಡ್ಡಾ ಆದಿವಾಸಿಗಳಿಗೆ ಇಂದಿಗೂ, ಮುರುಗನೇ ಆರಾಧ್ಯದೈವ. ಆದರೆ ಶ್ರೀಲಂಕಾದಲ್ಲಿ ಮುರುಗನನ್ನು ಸೆಯಾನ್ (ಛಿeಥಿoಟಿ) ಎಂದು ಕರೆಯುತ್ತಾರೆ. ಶೆ,ಸೆ,ಚೆ, ಎಂಬ ಧಾತುಗಳು ತಮಿಳು ಭಾಷೆಯಲ್ಲಿ ಕೆಂಪು ಎಂಬ ಅರ್ಥವನ್ನು ಕೊಡುತ್ತವೆ. ಶ್ರೀಲಂಕಾದ ‘ಕಟರಗಾಮ’ ಎಂಬ ಸ್ಥಳವು ಸೆಯಾನ್/ಮುರುಗನ ಮೂಲ ಕ್ಷೇತ್ರವಾಗಿ ಗುರುತಿಸಲ್ಪಡುತ್ತದೆ. ಹೆಸರುಗಳಲ್ಲಿ ಬದಲಾವಣೆಯಿದ್ದರೂ ಶ್ರೀಲಂಕದಲ್ಲೇ ಮುರುಗನ ಪ್ರಾಚೀನತೆ ಹೆಚ್ಚು ಉಳಿದಿರುವುದು. ವೆಡ್ಡಾಗಳು ಬಿಲ್ಲು ಹಿಡಿದು ಬೇಟೆಯಾಡುವ ಆದಿವಾಸಿಗಳು. ಬಹುಶಃ ‘ವಿಲ್’ ಕಾವಡಿಯ ನೃತ್ಯವನ್ನು ಅವರೇ ರೂಪಿಸಿರಲೂಬಹುದು. ಮುರುಗನ ‘ವೇಲ್’ ಬಾಣವಾದರೆ ‘ವಿಲ್’ ಬಿಲ್ಲಾಗುತ್ತದೆ. ಈ ಆದಿವಾಸಿಗಳು ಬೇಟೆಗಾರ ಹಂತವನ್ನು ತಲುಪಿದಾಗ ‘ಮಲೈಪೆಯ್’ ವೇಲ್ ಮತ್ತು ವಿಲ್‍ನ ಅಧಿದೇವತೆಯಾಗಿ ಮಾರ್ಪಟ್ಟಿರಬಹುದು. ತುಟಿ, ಕೆನ್ನೆ, ನಾಲಗೆಗಳಿಗೆ ಸಣ್ಣ ಸಣ್ಣ ಬಾಣಗಳನ್ನು ಚುಚ್ಚಿಸಿ ಕೊಂಡು ಮುರುಗನ ಬಿಲ್ಲನ್ನು ಮೈ ತುಂಬಾ ಹೊರಳಿಸಿಕೊಂಡು ವಿಲ್ ಕಾವಡಿ ಹರಕೆ ಸಲ್ಲಿಸುವುದು ಕೂಡ ಈ ಹಿನ್ನೆಲೆಯಲ್ಲಿಯೇ. ಶ್ರೀಲಂಕಾದಲ್ಲಿ ವೆಡ್ಡಾ ಬುಡಕಟ್ಟಿನ ಹೆಣ್ಣು ಮಗಳಾದ ವಳ್ಳಿಯೇ ಮುರುಗನ ಹೆಂಡತಿಯಾದರೆ ತಮಿಳುನಾಡಿನಲ್ಲಿ ಬೆಟ್ಟಗಳ ಬುಡಕಟ್ಟಿನವಳಾದ ವಳ್ಳಿ ಮುರುಗನ ಹೆಂಡತಿ. ಶ್ರೀಲಂಕಾದಲ್ಲಿ ಮುರುಗನ ಗುಡಿಗಳನ್ನು ‘ತಿರುಪ್ಪತ್ತಾ ೈ’ ಎನ್ನುತ್ತಾರೆ. ‘ತಿರುಪ್ಪತ್ತಾ ೈ’ ಎಂಬ ಪದವನ್ನೇ ಕೊಂಚ ಶಿಷ್ಟ ಉಚ್ಛಾರಣೆಗೆ ಅನುವಾದಿಸಿಕೊಂಡರೆ ಅದು ‘ತಿರುಪತಿ’ ಎಂದಾಗುತ್ತದೆ.

ಯಾರಿಗೆ ಗೊತ್ತು? ಇಂದಿನ ತಿರುಪತಿಯೂ ಪ್ರಾಚೀನ ಮುರುಗನ ಗುಡಿಯೇ ಆಗಿತ್ತೇನೋ? ಯಾಕೆಂದರೆ ಈ ಏಳು ಮಲೆಗಳ ಗುಡಿಯಲ್ಲಿ ಮಲೆಗಳ ಆದಿದೈವವೂ, ಆ ಭಾಗದ ಪ್ರಾಚೀನ ಹಾಗು ಪ್ರಮುಖ ದೈವವಾದ ಮುರುಗನಿರದೆ, ಬೆಟ್ಟಗಳಿಗೆ ಏನೇನೂ ಸಂಬಂಧವಿರದ ಮತ್ತು ಮುರುಗನಿಗೆ ಹೋಲಿಸಿದರೆ ತೀರಾ ಇತ್ತೀಚಿನ ದೈವವಾದ ವೆಂಕಟೇಶ್ವರನಿರುವುದು ಹೇಗೆ ಸಾಧ್ಯ ಮತ್ತು ಹೇಗೆ ಸಮರ್ಥನೀಯವೋ ತಿಳಿಯುತ್ತಿಲ್ಲ. ‘ಪ್ಪತ್ತಾ ೈ’ ಎಂದರೆ ತಮಿಳಿನಲ್ಲಿ ಸೈನ್ಯದ ಬಿಡಾರ ಎಂಬರ್ಥವಿದೆ. ವೇಲಾಯುಧ ಎಂದೂ ಅರ್ಥೈಸಬಹುದಾಗಿದೆ. ಹೀಗಾಗಿ ತಿರುಪ್ಪತ್ತಾ ೈಎಂದರೆ (ತಿರು=ಪವಿತ್ರವಾದ) ಮುರುಗನ ಯುದ್ಧದ ಆಯುಧವಾಧ ‘ವೇಲ್’ಅನ್ನು ಅವನ ಸಂಕೇತವಾಗಿಟ್ಟು ಸಂರಕ್ಷಿಸಿ, ಪೂಜಿಸುವ ಸ್ಥಳವೆಂದಾಗುತ್ತದೆ. ಹಾಗೆ ನೋಡಿದರೆ ತುಂಬಾ ಪ್ರಾಚೀನ ಕಾಲದಲ್ಲಿ ಮುರುಗನ ವಿಗ್ರಹಗಳೇ ಇರುತ್ತಿರಲಿಲ್ಲ. ಬದಲಿಗೆ ಅವನ ಸಂಕೇತವಾಗಿ ವೇಲ್ ಅನ್ನೇ ಪೂಜಿಸಲಾಗುತ್ತಿತ್ತು.

‘ಕಟಂಪು’ (ಮಂಜಳ್ ಮರ=ಹರಿಷಿಣದ ವೃಕ್ಷ) ಮರದಡಿಯಲ್ಲಿ ಮುರುಗನ ವೇಲ್ ಹಾಗೂ ಕೆಲವೊಮ್ಮೆ ‘ವೇಂಗೈ’ ಎಂಬ ಮರದ ಕೊಂಟು, ತುಂಡನ್ನು ಇಟ್ಟು ಪೂಜಿಸಲಾಗುತ್ತಿತ್ತು. ಈ ಕೊಂಟು ಪೂಜೆ ನಿಸ್ಸಂಶಯವಾಗಿಯೂ ಆದಿಮ ಹಂತದ ಲಿಂಗಪೂಜೆಯ ವಿಧಾನಗಳಲ್ಲಿ ಒಂದು. ಈ ವಿವರಗಳಲ್ಲಿನ ಅರಿಷಿಣ. ಲಿಂಗ ಇತ್ಯಾದಿಗಳು ಆದಿಮಾವಸ್ಥೆಯ ಪೂಜಾ ಸಂಕೇತಗಳೇ ಆಗಿವೆ. ಇರಲಿ. ಆದರೆ ಇಲ್ಲಿನ ‘ಪ್ಪತ್ತಾೈ’ ಎಂಬ ಸೈನ್ಯ, ಯುದ್ಧ ಸಂವಾದಿ ಅರ್ಥದ ಪದವನ್ನು ಸಾಂಸ್ಕøತೀಕರಿಸಿ ‘ಪತಿ’ ಎಂದು ಬದಲಿಸಿದ್ದಲ್ಲದೆ ಅದರ ಮೂಲ ಅರ್ಥವನ್ನು ಪಲ್ಲಟಗೊಳಿಸಿ ತಿರು ಎಂದರೆ ಶ್ರೀಲಕ್ಷ್ಮಿ ಎಂತಲೂ ಪತಿ ಎಂದರೆ ಒಡೆಯ, ಗಂಡ ಎಂತಲೂ ಮಾಡಿ, ಅನಾಯಾಸವಾಗಿ ಮುರುಗನನ್ನು ಹೊರಗಿಟ್ಟು ಶ್ರೀನಿವಾಸನನ್ನು ತಂದು ಪ್ರತಿಷ್ಠಾಪಿಸಿದಂತಿದೆ. ಆದರೂ ತಿರುಪ್ಪತ್ತಾೈ ಎಂಬುದರ ಮೂಲ ಅರ್ಥಬೆಟ್ಟಗಳ ದೇವರಾದ ಮುರುಗನ ಗುಡಿಯೆಂದೇ ಉಳಿದಿದೆ. ಇದಲ್ಲದೆಯೂ ತಿರುಪತಿಯಲ್ಲಿರುವ ವಿಗ್ರಹ ವೀರಭದ್ರನದೆಂದು, ಜೈನರ ಯಕ್ಷಿ ದೇವತೆಯದೆಂದೂ, ಬಾಲಾಜಿಯಾದ ಬಲಿಚಕ್ರವರ್ತಿಯದೆಂದೂ ಭಿನ್ನ ಭಿನ್ನ ವಾದಗಳೇ ಇವೆ. ಅಂತಹ ವಾದಗಳ ಸರಣಿಗೆ ಮುರುಗ ಹೊಸ ಸೇರ್ಪಡೆ.

ಈ ಆಫ್ರಿಕನ್ ಮೂಲದ ಮುರುಗನಿಗೂ ಸ್ಕಂದ, ಕುಮಾರ ಹಾಗೂ ಷಣ್ಮುಗನಿಗೂ ಯಾವ ಸಂಬಂಧವೂ ಇಲ್ಲ. ಕೊಡಗಿನ ಇಗ್ಗುತಪ್ಪ, ಮುರುಗ, ಸೆಯಾನ್ ಹಾಗೂ ಸುಬ್ರಹ್ಮಣ್ಯ ಒಂದೇ ದೇವರ ನಾಲ್ಕುಭಿನ್ನ ಹೆಸರುಗಳು. ಬಹುಶಃ ಪ್ಪತ್ತಾ ೈ ಎಂಬ ಸೇನಾ ಸೂಚಕ ಪದದಿಂದಾಗಿ ಸ್ಕಂದನನ್ನು ಪಲ್ಲವರ ಕಾಲದಲ್ಲಿ ಮುರುಗನೊಂದಿಗೆ ಸಮೀಕರಿಸಲಾಯಿತು. ಸ್ಕಂದನ ಹೆಂಡತಿ ದೇವಸೇನೆ (ಸಂಗಂ ಸಾಹಿತ್ಯದಲ್ಲಿ ಇವಳ ಪ್ರಸ್ತಾಪವೇ ಇಲ್ಲ.) ಈ ಹಿನ್ನೆಲೆಯಲ್ಲಿ ಮುರುಗನಿಗೂ ಹೆಂಡತಿಯಾದಳು. ಶ್ರೀಲಂಕಾದ ಕಟರಗಾಮದಲ್ಲಿನ ಮೂಲ ಮುರುಗನ ತಿರುಪ್ಪತ್ತೂನಲ್ಲಿ ಇಂದಿಗೂ ಮುರುಗನ ಪೂಜೆಯನ್ನು ಆಗಮಿಕ ಪದ್ಧತಿಗಳಿಗೆ ಹೊರತಾಗಿಯೇ ನಡೆಸಲಾಗುತ್ತದೆ. 17ನೇ ಶತಮಾನದಲ್ಲಿ ಕಲ್ಯಾಣಗಿರಿ ಎಂಬ ಉತ್ತರಭಾರತದ ಬ್ರಾಹ್ಮಣ ಸನ್ಯಾಸಿನಿಯೊಬ್ಬಳು ಬಂದು ಅಲ್ಲಿ ಮೊದಲಬಾರಿಗೆ ದೇವಸೇನೆಯ ಗುಡಿ ಸ್ಥಾಪಿಸಿದಳಂತೆ. ಅಂದಿನಿಂದ ದೇವಸೇನೆಯ ಗುಡಿಯಲ್ಲಿನ ಪೂಜೆಯನ್ನು ಮಾತ್ರ ಆಗಮಿಕ ಪದ್ಧತಿಗಳಿಗೆ ಅನುಗುಣವಾಗಿ ಬ್ರಾಹ್ಮಣ ಪೂಜಾರಿಗಳೇ ಮಾಡುತ್ತಿದ್ದಾರೆ. ‘ದೇವಸೇನೆ’ ಎಂಬುದು ನಾಮಪದಕ್ಕಿಂತಲೂ ‘ದೇವರ ಸೈನ್ಯ’ ಎಂಬ ಅರ್ಥವನ್ನೇ ಹೆಚ್ಚು ಉತ್ಕಟವಾಗಿ ಹೊರಡಿಸುವಂತಿದೆ.

ಈ ದೇವರ ಸೈನ್ಯಕ್ಕೆ ಒಡೆಯ/ಪತಿಯಾದವನೇ ದೇವಸೇನಾನಿ ಸ್ಕಂದನಾಗಿರಬಹುದು. ಆದರೂ ದೇವಸೇನೆ ಮುರುಗನ ಹೆಂಡತಿಯಾದಂತೆ, ಮುರುಗನ ಹೆಂಡತಿಯಾದ ತಮಿಳು ಭಾಷಾ ಮೂಲದ ಹೆಸರಿನ ವಳ್ಳಿ ಸ್ಕಂದನ ಹೆಂಡತಿಯೆಂಬುದನ್ನು ಕಲ್ಪಿಸಿಕೊಳ್ಳುವುದು ಭಾಷಾ ವಿಜ್ಞಾನದ ಪ್ರಾಥಮಿಕ ಅರಿವಿರುವ ಯಾರಿಗಾದರೂ ಕೊಂಚ ಕಷ್ಟವೇ. ಇದರ ಜೊತೆಗೆ ಮಯೂರ (ನವಿಲಿನ ಈ ಪದವೂ ದ್ರಾವಿಡ ಪೂರ್ವ ಮುಂಡಾಗಳ ಭಾಷೆಯದ್ದು. ತಮಿಳಿನಲ್ಲೂ ನವಿಲನ್ನು ಮಯಿಲ್ (ಒಚಿಥಿiಟ) ಎಂದೇ ಕರೆಯಲಾಗುತ್ತದೆ. ಮಯಿಲ್ + ಆಡು + ತುರೈ ಎಂಬ ಮಯಿಲಾಂಡತುರೈ ಎಂಬ ಊರೇ ಈಗ ತಂಜಾವೂರಿನ ಬಳಿಯ ಮಯಾವರಂ ಎಂಬ ಆಧುನಿಕ ಹೆಸರಲ್ಲಿ ಚಾಲ್ತಿಯಲ್ಲಿದೆ. ಮೈಲಾಪುರಂ ಎಂಬ ಹೆಸರನ್ನೂ ನೆನಪಿಸಿಕೊಳ್ಳಬಹುದು.) ಸ್ಕಂದನ ವಾಹನವಾದರೆ ಹುಂಜ ಮುರುಗನ ವಾಹನವಾಗಿದೆ. ಅಡಿಚ್ಚನೆಲ್ಲೂರಿನ ಪ್ರಾಚೀನ ಸಮಾಧಿಗಳಲ್ಲಿ ವೇಲ್‍ನೊಂದಿಗೆ ಹುಂಜದ ಲಾಂಛನವೂ ದೊರೆತಿದ್ದು, ಅದರ ಕಾಲ ಇಂದಿಗೆ 3000 ವರ್ಷಗಳ ಹಿಂದಿನದೆಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕಿದೆ.

ಸುನಾಮಿ ಅಲೆಗಳು ಭಾರತದ ಪೂರ್ವ ಸಮುದ್ರ ತೀರಗಳನ್ನು ಅಪ್ಪಳಿಸಿ ಹೋದ ನಂತರ, ಅಂದರೆ 2005ರಲ್ಲಿ ಮಹಾಬಲಿಪುರಂನಿಂದ ಕೇವಲ ಕೆಲವೇ ಕಿ.ಮೀ.ಗಳ ದೂರದಲ್ಲಿನ ಸಲುವನ್ ಕುಪ್ಪಂ ಎಂಬಲ್ಲಿ ಪ್ರಾಚೀನ ಮುರುಗನ ದೇವಾಲಯವೊಂದರ ಅವಶೇಷಗಳು ಪತ್ತೆಯಾದ ಸಚಿತ್ರ ವರದಿ ಸೆಪ್ಟೆಂಬರ್ 21ರ ‘ದಿ ಹಿಂದು’ ಪತ್ರಿಕೆಯಲ್ಲಿ ಪ್ರಕಟವಾಯಿತು. ಇದು ಕ್ರಿ.ಪೂ. ಒಂದು ಅಥವಾ ಎರಡನೆಯ ಶತಮಾನದ ಅವಧಿಯದಾಗಿದ್ದು, ಅದು ಸಂಗಂ ಸಾಹಿತ್ಯದ ಕೊನೆಯ ಕಾಲಘಟ್ಟವಾಗಿದೆ. ಮುರುಗನ ಇಂತಹ ಪ್ರಾಚೀನ ಕೋಯಿಲ್‍ಗಳು (ಕೋ=ದೇವರು ಇಲ್=ಮನೆ) ಕಡಲಿನಾಳದಲ್ಲಿ ಇನ್ನೂ ಅದೆಷ್ಟು ಸಂಖ್ಯೆಯಲ್ಲಿವೆಯೋ? ಬಲ್ಲವರಾರು?

ಮುರುಗನ ಪ್ರಾಚೀನ ಪುರಾಣವನ್ನು ಸಂಕ್ಷಿಪ್ತಗೊಳಿಸಿ ಹೇಳುವುದು ಕಷ್ಟ ಸಾಧ್ಯದ ಕೆಲಸವೇ. ಆದರೆ ಒಂದು ಮಾತು ನಿಜ. ತಮಿಳು ಸಂಸ್ಕøತಿಯೆಂದರೆ ಮುರುಗನ ಸಂಸ್ಕøತಿಯೇ ಎಂಬಂತಾಗಿ ಹೋಗಿದೆ. ಛಿeಥಿoಟಿ, ಛಿeಥಿಟoಟಿ ಎಂದು ಕರೆಯಲ್ಪಡುವ ಮುರುಗನಿಂದಾಗಿಯೇ ಸಿಲೋನಿಗೆ ಈ ಹೆಸರು ಬಂತೋ ಅಥವಾ ಅದು ಕೇವಲ ಭಿನ್ನ ಭಾಷೆಗಳ ನಡುವಿನ ಶಬ್ದಗಳ ಆಕಸ್ಮಿಕವಾಗಿದೆಯೋ ಗೊತ್ತಿಲ್ಲ. ಆದರೆ ಕ್ರ್ರಿ.ಪೂ.ದ ಶ್ರೀಲಂಕಾದ ನಿಲಗಂ, ಅನುರಾಧಪುರ, ಓಮುನಗಲ, ಹಂಡಗಲ ಮುಂತಾದೆಡೆಯ ಶಾಸನಗಳು ಪರುಮಕ ವೇಲನ್ ಕುರಿತಾಗಿ ಮಾತನಾಡುತ್ತವೆ. ಬೌದ್ಧ ಗ್ರಂಥವಾದ ‘ಮಹಾವಂಶ’ದಲ್ಲೂ ಛಿeಥಿoಟಿ ಕುರಿತಂತೆ ವಿಪುಲ ಮಾಹಿತಿಗಳಿವೆ. ಶ್ರೀಲಂಕಾದಲ್ಲಿ ಇಂದಿಗೂ ಪುರಾತನ ಮುರುಗನ ದೇವಾಲಯಗಳನ್ನು ‘ಪತ್ತಾಯ್ ವೀಟು’ ಎಂದೇ ಕರೆಯುತ್ತಾರೆ. ತಮಿಳು ಜನರಲ್ಲಿ ಇರುವ ಒಂದು ನಂಬಿಕೆಯ ಪ್ರಕಾರ (ಸಾಹಿತ್ಯದ ಆಧಾರಗಳೂ ಇದ್ದಿರಬಹುದು) ಮುರುಗನೇ ಶಿವನಿಗೆ ‘ಓಂ’ ಮಂತ್ರೋಚ್ಚಾರಣೆಯನ್ನು ಬೋಧಿಸಿದನಂತೆ. ಮುರುಗನ ವೇಲ್ ಮೇಲೆ ತಮಿಳು ಲಿಪಿಯ ಓಂ ಎಂಬ ಅಕ್ಷರವನ್ನ ಕೆತ್ತಿರುತ್ತಾರೆ. ಮುರುಗನ ಧ್ಯಾನದಲ್ಲಿ ಬಿದ್ದ ನನಗಂತೂ ತಮಿಳಿನ ಈ µ ಅಕ್ಷರ ಆಫ್ರಿಕಾದ ಭೂಪಟದಂತೆಯೇ ಭ್ರಮೆ ಹುಟ್ಟಿಸುತ್ತದೆ.

ಆಫ್ರಿಕನ್ನರು, ದಕ್ಷಿಣ ಭಾರತೀಯರು, ಮಲಯ ಹಾಗೂ ಆಸ್ಟ್ರೇಲಿಯಾದ ಮೂಲ ನಿವಾಸಿಗಳ ನಡುವೆ ಹೊಡೆಚಾಚಿ ಕಾಣುವಂತಹ ಸಾಮ್ಯತೆಗಳಿರುವುದಾಗಿ ಜಗತ್ತಿನ ಅನೇಕ ಪ್ರಸಿದ್ಧ ಮಾನವ ಶಾಸ್ತ್ರಜ್ಞರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಒಪ್ಪಿಕೊಂಡಿದ್ದಾರೆ. ಈ ಭಾಗಗಳು ಆಓಂನ ಪ್ರಪ್ರಾಚೀನ ವಲಸೆಯ ಮಾರ್ಗದಲ್ಲಿನ ಆರಂಭ, ಮಧ್ಯ ಹಾಗೂ ಅಂತ್ಯದ ಪ್ರದೇಶಗಳನ್ನೇ ಒಳಗೊಂಡಿರುವುದು ಕೇವಲ ಕಾಕತಾಳೀಯವಾಗಿರಲಾರದು. ತಮ್ಮ ಪೂರ್ವಜರ ಈ ಪುರಾತನವೂ, ಸುದೀರ್ಘವೂ ಆದ ಖಂಡಾಂತರ ಯಾನವನ್ನು ಆಸ್ಟ್ರೇಲಿಯಾದ ಮೂಲ ನಿವಾಸಿಗಳು ನೆನಪು ಹಾಗೂ ಮೌಖಿಕ ಪರಂಪರೆಯಲ್ಲಿ ಜತನವಾಗಿ ಕಾಪಾಡಿಕೊಂಡು ಬಂದಿರುವುದಲ್ಲದೆ ಅದನ್ನೇ ತಮ್ಮ soಟಿgಟiಟಿeಗಳಲ್ಲಿ ಹಾಡಿಕೊಳ್ಳುತ್ತಾರೆ. ಆದರೆ ನಾವು ಮರೆತಿದ್ದೇವೆ. ಬಹುಶಃ ಅವರಿಗಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಸಂಕರಗೊಂಡಿದ್ದರಿಂದಲೋ ಅಥವಾ ಅನ್ಯ ಸಾಂಸ್ಕøತಿಕ ಪ್ರಭಾವಗಳಲ್ಲಿ ಮೂಲ ಅಸ್ಮಿತೆ ಮರೆಯಾಗುವಷ್ಟು ಮುಳುಗಿಹೋಗಿದ್ದರಿಂದಲೋ ಇರಬಹುದು.

ಲಿಂಗ, ಶಿವ ಹಾಗೂ ರುದ್ರ ಎಂಬ ದೈವತ್ವದ ಪರಿಕಲ್ಪನೆಗಳು ಅನುಕ್ರಮವಾಗಿ ಭಾರತದ ಭಾಷಿಕ ಮತ್ತು ಸಾಂಸ್ಕøತಿಕ ಅಧ್ಯಯನದ ಮೂರು ಭಿನ್ನ ಸ್ತರಗಳನ್ನು ಪ್ರತಿನಿಧಿಸುತ್ತವೆಂದು ತೋರುತ್ತದೆ. ಫ್ರಾನ್ಸಿನ ಸಂಸ್ಕøತಿ ಸಂಶೋಧಕಾದ ಪ್ರಿಲಸ್ಕಿ ಎಂಬ ವಿದ್ವಾಂಸರು ‘ಲಿಂಗ’ ಎಂಬ ಪದ ಹಾಗೂ ಪರಿಕಲ್ಪನೆ ದ್ರಾವಿಡಪೂರ್ವ ಬುಡಕಟ್ಟುಗಳದೆಂದು ಸಾಧಾರವಾಗಿ ನಿರೂಪಿಸಿದ್ದಾರೆ. ಇಂಡೋ ಆರ್ಯನ್ ಭಾಷಾ ಕುಟುಂಬದಲ್ಲಾಗಲೀ, ವಿಶೇಷವಾಗಿ ಸಂಸ್ಕøತದಲ್ಲಿ ಮತ್ತು ಇಂಡೋ ದ್ರಾವಿಡಿಯನ್ ಭಾಷಾ ವರ್ಗದಲ್ಲಾಗಲೀ ‘ಲಿಂಗ’ ಎಂಬ ಪದಕ್ಕೆ ಧಾತ್ವರ್ಥವು ದೊರೆಯುವುದಿಲ್ಲ. ‘ಲಿಂಗ’ವೇನಿದ್ದರೂ ಲಾಗಾಯ್ತಿನ ಪರಿಕಲ್ಪನೆಯೆ. ಕೋಲಾ, ಮುಂಡ, ಚೆಂಚು, ಜೇನು ಕುರುಬ, ಕುರುಂಬ, ಕಾಡಾರ್, ಗೊಂಡ ಹಾಗೂ ವೆಡ್ಡಾಗಳ ಭಾಷಾ ವರ್ಗದ್ದು. ಲಿಗ್, ಲೀ ಎಂಬ ಧಾತುವಿನಿಂದ ‘ಲಿಂಗ’ ಎಂಬ ಪದ ಸಾಧಿತವಾಗಿದೆ. ಲಿಂಗವೆನ್ನುವುದು ಮೂಲದಲ್ಲಿ ಪುರುಷನ ಜನನೇಂದ್ರಿಯ ಸಂಭೋದಿ ಪದವೇ ಆಗಿದೆ. ಲಿಂಗದ ಜ್ಞಾತಿ ಪದ ‘ಲಾಂಗಲ’, ಅಂದರೆ ನೇಗಿಲು. ನೇಗಿಲಿನ ಉಳುವ ಕ್ರಿಯೆಗೂ ಲಿಗ್, ಲೀ ಎಂಬ ಧಾತುಗಳ ಮುನ್ನುಗ್ಗು, ಮುಂದುವರಿ ಎಂಬರ್ಥಗಳಿಗೂ ನೇರ ಸಂಬಂಧವಿದೆ. ಸರ್ವರಸೃಷ್ಟಿಗೆ ಕಾರಣವಾಗುವ ಸ್ತ್ರೀ-ಪುರುಷ ಜನನೇಂದ್ರಿಯಗಳ ಬಗ್ಗೆ ಪುಜಾರ್ಹವಾದ ಗೌರವಭಾವನೆ ಇಟ್ಟುಕೊಂಡಿದ್ದ ದ್ರಾವಿಡ ಪೂರ್ವ ಬುಡಕಟ್ಟುಗಳು ಅ ಮೂಲಕ ಪೂರ್ವೀಕ ಪಿತೃಗಳ ಕುರಿತ ಆರಾಧನಾ ಭಾವನೆಯನ್ನೇ ಹೊಂದಿದ್ದರು.

ಲಿಂಗಕ್ಕೆ ಪುರುಷ ಜನನೇಂದ್ರಿಯವೇ ಮಾದರಿ. ಹಾಗಾಗಿಯೇ ಲಿಂಗವನ್ನು ಮುಚ್ಚುವ ವಸ್ತ್ರವನ್ನು ಲಂಗೋಟಿ ಎಂದು ಕರೆದರು. ಪುರುಷ ಜನನೇಂದ್ರಿಯವನ್ನು ಅಣಬೆಯ ಮೂಲಕ ಸಂಕೇತಿಸುವ ಪದ್ಧತಿ ನಮ್ಮ ಜೇನು ಕುರುಬರಲ್ಲಿದೆ. ಅವರ ಮೂಲದೈವ ಅಣಪೆ ನೂರಾಳೊಡೆಯ. ಒರಟು ಕೆತ್ತನೆಯ ಲಿಂಗವೇ ಈ ಅಣಪೆÀನೂರಾಳೊಡೆಯ. ನೂರಾಳನ್ನು ಸೃಷ್ಟಿಸಬಲ್ಲ ಶಕ್ತಿಯುಳ್ಳ ಅಣಬೆ ಮತ್ತದರ ಹಿಂದಿರುವ ಕಲ್ಪನೆಯೇ ಇಂದಿನ ಶಿವಲಿಂಗಕ್ಕೆ ಆದಿಮ ಮಾದರಿ. ಅಣಬೆಯನ್ನು ತೆಲುಗಿನಲ್ಲಿ ‘ಪುಡಗೋಕಲು’ ಎಂದು ಕರೆಯುತ್ತಾರೆ. ಆಂತಹ ಪುಡಗೋಕಲನ್ನು ಮರೆಮಾಡುವ ತುಂಡು ಬಟ್ಟೆಯೇ ‘ಪುಡಗೋಸಿ’. ಈ ಪುಡಗೋಸಿ ಪದ ನಂತರ ತೆಲುಗಿನಿಂದ ಕನ್ನಡಕ್ಕೆ ಬಂದಂತಿದೆ, ಇರಲಿ.

ಫ್ರಾನ್ಸಿನ ಮಾನವ ಶಾಸ್ತ್ರಜ್ಞರಾದ ಬರ್ನಾರ್ಡ್ ಸರ್ಜೆಂಟ್ ಅವರ ಪ್ರಕಾರ ಭಾರತದ ಲಿಂಗಪೂಜೆಯ ಪದ್ಧತಿಗೆ ಮೂಲವಾದದ್ದು ಪಶ್ಚಿಮ ಆಫ್ರಿಕ ಹಾಗು ಇಥಿಯೋಪಿಯಾದ ಲಿಂಗಪೂಜೆಯೇ. ಪಶ್ಚಿಮ ಆಫ್ರಿಕದಲ್ಲಿ ಪಾಣಿವಟ್ಟ (ಸ್ತ್ರೀ ಜನನಾಂಗ) ಸಮೇತವಾದ ಲಿಂಗಗಳು ಪೂಜೆಗೊಳ್ಳುವುದಾಗಿ ಡಾ.ಯು.ಪಿ. ಉಪಾಧ್ಯಾಯರು ಸಹ ದಾಖಲಿಸಿದ್ದಾರೆ. ಆಫ್ರಿಕದಿಂದಲೇ ಕ್ರೀಟ್ ಹಾಗೂ ಮೆಡಿಟರೇನಿಯನ್ ನಾಗರಿಕತೆಗಳಿಗೂ ಲಿಂಗಪೂಜೆಯ ವಿಧಾನ ಹಬ್ಬಿದೆ. ಆಫ್ರಿಕದ ಮಾಂತ್ರಿಕಾಚರಣೆಗಳಲ್ಲಿ ತ್ರಿಕೋನ ವಿನ್ಯಾಸ-ಆಕೃತಿಯ ಪರಿಕಲ್ಪನೆಯಿದ್ದು, ನಮ್ಮ ತಂತ್ರಪಂಥದ ವಿಸ್ತøತ ಶ್ರೀ ಚಕ್ರಗಳಿಗೆಲ್ಲಾ ಮೂಲ ಪಡಿಯಚ್ಚು ಕೂಡ ಅದೇ. ಮೇಲ್ತುದಿಯ ತ್ರಿಕೋನವು ಲಿಂಗದ್ದೇ ಸಾಂಕೇತಿಕ ವಿನ್ಯಾಸ ಈ ಲಿಂಗದ ಪರಿಕಲ್ಪನೆ ದ್ರಾವಿಡಪೂರ್ವ ಬುಡಕಟ್ಟುಗಳೊಂದಿಗೇ ಆಫ್ರಿಕದಿಂದ ವಲಸೆ ಬಂದದ್ದಾಗಿರಬಹುದು.

‘ಶಿವ’ ಎಂಬುದು ದ್ರಾವಿಡ ಭಾಷಾ ಮೂಲದ್ದು. ಋಗ್ವೇದದಲ್ಲಿ ತ್ರಿಮೂತಿಗಳಲ್ಲಿ ಒಬ್ಬನಾದ ಶಿವನ ಹೆಸರಿನ ಪ್ರಸ್ತಾಪ ಕೂಡ ಇಲ್ಲವೆಂದು ಶಂ.ಬಾ.ಜೋಷಿಯವರು ಹೇಳಿದ್ದಾರೆ. ಗಂಗೆಯನ್ನೇ ತಲೆಯ ಮೇಲೆ ಹೊತ್ತ ಶಿವ ಜಲಸಂಸ್ಕøತಿಯ ಮೂಲದವನಾಗಿದ್ದರೆ ‘ಅಗ್ನಿರ್ವೈ ರುದ್ರಃ..’ ಹಾಗೂ ‘ತ್ವಂ ಅಗ್ನೇ ರುದ್ರಃ ಅಸುರಃ….’ ಎಂಬ ಋಕ್‍ಗಳ ರುದ್ರ ಅಗ್ನಿ ಮೂಲದವನಾಗಿದ್ದಾನೆ. ಕಾಲಾಂತರದಲ್ಲಿ ಸಮೀಕರಣಗೊಂಡ ಶಿವ-ರುದ್ರರ ನಡುವೆ ಅಗಾಧವೆನ್ನಿಸುವಷ್ಟು ವ್ಯತ್ಯಾಸ, ಅಂತರಗಳಿವೆ. ಸಂಪುಟಗಟ್ಟಲೆ ಚರ್ಚಿಸಬಹುದಾದ ವಿಚಾರವಿದು. ಭಾಷಾ ವಿಜ್ಞಾನಿಗಳಾದ ಕಾಲ್ಡ್ ವೆಲ್, ಟಿ. ಬರೋ, ಹಮ್‍ಬರ್ಗರ್, ಕ್ಲೆಮನ್ಸ್ ಶೂನರ್ ಹಾಗೂ ಟಟ್ಲ್ ಎಂಬ ವಿದ್ವಾಂಸರೆಲ್ಲರೂ ಆಫ್ರಿಕ, ಮೆಡಿಟರೇನಿಯನ್ ಹಾಗೂ ಮಧ್ಯಪ್ರಾಚ್ಯ ದೇಶಗಳ ಭಾಷೆಗಳೊಂದಿಗೆ ದ್ರಾವಿಡ ಭಾಷೆಗಳಿಗಿರುವ, ಬೇರುಗಳ ರಚನೆಯಲ್ಲಿನ ಭಾಷಾ ವಂಶವಾಹಿ ಸಂಬಂಧಗಳ ಸಾಮ್ಯತೆಯನ್ನು ವ್ಯಾಕರಣ, ದ್ವನಿಶಾಸ್ತ್ರ, ಪದನಿಷ್ಪತ್ತಿ ಹಾಗೂ ಶಬ್ದ ಸಂಪತ್ತಿನ ಸಾಕ್ಷ್ಯಗಳೊಂದಿಗೆ ಈಗಾಗಲೇ ಗುರುತಿಸಿದ್ದಾರೆ. ಕನ್ನಡದ ‘ಹೊರೆ’ ಎಂಬ ಪದ ಆಫ್ರಿಕದ ಪುಲಾರ್ ಭಾಷೆಯಲ್ಲು ‘ಹೊರೆ’ಯೇ. ‘ನೆರೆಹೊರೆ ಎನ್ನುವುದು ‘ಹೊರೇರು’ ಎಂದಿದೆ. ‘ಮಹಡಿ’ ‘ಮಾಡಿ’ ಎಂದಿದೆ. ‘ಸೋಗೆ’ ‘ಸೀಗೆ’ ಯಾಗಿಯೂ, ‘ಬಯಲು’ ‘ಬಯಲ್’ ಎಂದೂ ‘ಗುಡುಗು’ ‘ಗಿಡಾಂಗೋ’ ಎಂದು ಉಳಿದಿದೆ.

ಆಫ್ರಿಕದ ಓಲೋಫ್ ಭಾಷೆಯಲ್ಲಿ ನೀರಿಗೆ ‘ನೀರ್’ ಎಂದೂ ‘ಬೆಚ್ಚಗೆ’ ಪದ ‘ಬೆಚ್ಚಗ್’ ಎಂದು, ‘ಆನೆ’ ‘ನೆ’ ಎಂದೂ, ‘ಕೊನೆ’ ‘ಕೊನ್’ ಆಗಿಯೂ, ‘ಅಲ್ಲ’ ಎಂಬುದು ‘ಅಲಾ’ ಆಗಿಯೂ ಉಳಿದಿವೆ. ‘ಜಿಗಿ’ ಎಂಬ ಪದ ‘ಜಗ್ಗಿ’ ಎಂಬ ರೂಪದಲ್ಲಿದೆ. ಆಫ್ರಿಕದ ಝಾಲ ಭಾಷೆಯಲ್ಲಿ ‘ಕಲಿ’ ಎಂಬುದಕ್ಕೆ ‘ಕಲೀಕೆನ್’ ಎಂದೂ ‘ಉಸಿರು’ – ‘ಎರುಸ್’ ಆಗಿಯೂ ‘ಕುನ್ನಿ’ ‘ಕುನಿಲ್’ ಪದವಾಗಿಯೂ ‘ಬಾಲ’ ‘ವಾಲ’ವಾಗಿಯೂ ‘ನಾನು’ ‘ಆನ್’ ರೂಪದಲ್ಲೂ ಬಳಸಲ್ಪಡುತ್ತಿದೆ. ಸುಮೇರಿಯನ್ ಭಾಷೆಯಲ್ಲಂತೂ ‘ಊರು’ ಪದ ‘ಉರ್’ ಎಂತಲೂ ‘ಬೀಡು’ ‘ಬಿಡ್’ ಎಂತಲೂ ಕಾಣಿಸಿವೆ. ‘ಮಲೈ’ ಎಂಬ ತಮಿಳು-ಕನ್ನಡದ ಪದವಂತೂ ಆಫ್ರಿಕ ಹಾಗೂ ಸುಮೇರಿಯನ್ ಭಾಷೆಗಳೆರಡರಲ್ಲೂ ಯಥಾವತ್ತಾಗಿ ಕಾಣಿಸುತ್ತದೆ. ತಮಿಳಿನ ‘ಕುರುಂಚಿ’ (ಬೆಟ್ಟ ಹಾಗು ಕುರಿಂಜಿ ಹೂ) ‘ಕುರ್’ ಎಂಬ ಬಳಕೆಯಲ್ಲಿದೆ. ಮುರುಂಗು, ಮುರ ಪದಗಳಂತೂ ನಮಗೀಗಾಗಲೇ ಗೊತ್ತೇ ಇದೆ. ಬರೊ ಎಂಬ ವಿದ್ವಾಂಸರಂತು ‘ಉರಾಲಿಯನ್’ ಭಾಷೆ ಹಾಗೂ ದ್ರಾವಿಡ ಭಾಷೆಗಳಲ್ಲಿನ ಮನುಷ್ಯ ದೇಹಾಂಗಗಳನ್ನು ಕುರಿತ 72 ಪದನಿಷ್ಪತ್ತಿ ಮೂಲಗಳನ್ನು ಶೋಧಿಸಿ ಪಟ್ಟಿ ಮಾಡಿದ್ದಾರೆ. ಅತ್ಯಂತ ವಿಸ್ತಾರವಾದ ಭಾಷಾ ವಂಶವಾಹಿಗಳ ಸಂಬಂಧದ ಸ್ವರೂಪವನ್ನು ಇಲ್ಲಿನ ಮಿತಿಯಲ್ಲಿ ವಿವರಿಸುವುದು ಕಷ್ಟಸಾಧ್ಯವಾದ್ದರಿಂದ ಕೇವಲ ಸಮಾನ ಹೋಲಿಕೆಯ ಕೆಲವು ಪದಗಳ ಪಟ್ಟಿಯನ್ನಷ್ಟೆ ಇಲ್ಲಿ ನೀಡಿದ್ದೇನೆ.

ಕಲಹರಿಯಿಂದ ಕರಾವಳಿಯವರೆಗೂ ಹರಿದುಬಂದಿರುವ ಆಚರಣಾತ್ಮಕವಾದ ಸಾಂಸ್ಕøತಿಕ ಜಗತ್ತಿನಲ್ಲಂತೂ ನಮ್ಮನ್ನು ಬೆಚ್ಚಿಬೀಳಿಸುವಷ್ಟು ಹೇರಳ ಅಂಶಗಳಿವೆ. ಅದರಲ್ಲಿ ಕೆಲವು ಮುಖ್ಯವಾದ ಆಚರಣೆ, ಪದ್ಧತಿಗಳು ಕರಾವಳಿ ಪ್ರದೇಶಕ್ಕೇ ಅನನ್ಯವಾದವು ಎಂಬಂಥವು. ದ್ರಾವಿಡ ಜನಾಂಗಗಳಲ್ಲಿ ಕಾಳಿ, ಮಾರಿಯಮ್ಮ, ಎಲ್ಲಮ್ಮ, ಸಿಡುಬಿನ ದೊಡ್ಡಮ್ಮ ಎಂಬ ಮಾತೃದೇವತೆಗಳ ಆರಾಧನೆಯ ಬಹುದೊಡ್ಡ ಪರಂಪರೆಯೇ ಇದೆಯಷ್ಟೇ. ಪಶ್ಚಿಮ ಆಫ್ರಿಕದ ಅಶಂಟಿ  ಬುಡಕಟ್ಟಿನಲ್ಲಿ ‘ನ್ಯಾಮ’ ಎಂಬ ಮಾತೃದೇವತೆಯ ಆರಾಧನೆ ಇದೆ. ಸೂಡಾನ್‍ನ ಡೋಗೋನ್ ಬುಡಕಟ್ಟಲ್ಲಿ ಸಿಡುಬಿನ ದೊಡ್ಡಮ್ಮನಿದ್ದಾಳೆ. Chicken Pox ದ್ರಾವಿಡರ ‘ಅಮ್ಮ’ ಸೂಡನಿನಲ್ಲೂ ‘ಅಮ್ಮ’ ಎಂದೇ ಕರೆಯಲ್ಪಡುತ್ತದೆ. ತಟ್ಟಮ್ಮ ಎಂದೂ ನಾವು ಕರೆಯುವುದುಂಟು. ಆಫ್ರಿಕದಲ್ಲೂ ನಮ್ಮಲ್ಲಿಯಂತೆಯೇ ಮಾರಿ ಜಾತ್ರೆ ನಡೆಯುತ್ತದೆ. ನಮ್ಮಲ್ಲಿಯಂತೆಯೇ ಗ್ರಾಮ ದೇವತೆಗಳಿಗೆ ಕೋಳಿ, ಮೇಕೆಗಳನ್ನು ಬಲಿ ಕೊಡುವ ಪದ್ಧತಿ ಹಾಗು ಬಲಿಪೀಠಗಳು ಆಫ್ರಿಕದ ಅನೇಕ ಭಾಗಗಳಲ್ಲಿವೆ. ಆಫ್ರಿಕದ ಸಿಕ್ಕ ಬುಡಕಟ್ಟಿನಲ್ಲಿ ನಮ್ಮಲ್ಲಿಯ ದೇವದಾಸಿ ಪದ್ಧತಿಯಂತೆಯೇ ದೇವಾಲಯಗಳಿಗೆ ಕನ್ಯೆಯರನ್ನು ಬಿಡುತ್ತಾರೆ. ಕಾಳಿ ಕಪ್ಪಾಗಿರುವಂತೆ ಆಫ್ರಿಕದ ಪ್ರಧಾನ ಮಾತೃದೇವತೆಯೂ ಕಪ್ಪೇ.

nataಕರಾವಳಿ ಕರ್ನಾಟಕ ಭಾಗದಲ್ಲಿನ ಅಳಿಯ ಸಂತಾನ ಕಟ್ಟು ಅಥವಾ ಕೇರಳದ ಮರುಮಕ್ಕತಾಯಿ ಪದ್ಧತಿ ಬಂಟ ಹಾಗು ಬಿಲ್ಲವ ಜನಾಂಗಗಳಲ್ಲಿ ಕ್ಷೀಣವಾಗಿಯಾದರೂ ಇಂದಿಗೂ ಉಳಿದು ಬಂದಿದೆ. ತಾಯಿಯಿಂದ ಮಗಳಿಗೆ ಆಸ್ತಿ ಹರಿದು ಬರುವ ಈ ಪದ್ಧತಿ ಪ್ರಾಚೀನ ಈಜಿಪ್ಟ್, ದಕ್ಷಿಣ ಕಾಂಗೋನ ಬಂಟು, ಇಥಿಯೋಪಿಯಾ, ಝಾಂಬಿಯ ಹಾಗೂ ತಾಂಜಾನಿಯಾದಲ್ಲೂ ಇದೆ. ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲೆಲ್ಲ ಇದೇ ಪದ್ಧತಿ ಇತ್ತೆಂದು ಉಪಾಧ್ಯಾಯರು ಅಭಿಪ್ರಾಯಪಟ್ಟಿದ್ದಾರೆ. ಅಶ್ವತ್ಧ ಮರದಡಿಯ ನಾಗಪೂಜೆಯಂತೂ ಹಳ್ಳಿ ಹಳ್ಳಿಗಳಲ್ಲೂ ನಾವು ಕಾಣಬಹುದಾದಂತಹುದು. ಕರಾವಳಿಯಲ್ಲಂತೂ ನಾಗಬನಗಳು, ನಾಗಮಂಡಲ ವಿಶಿಷ್ಟ ಆಚರಣೆಗಳೇ ಆಗಿವೆ. ಕರಾವಳಿ ಪ್ರದೇಶವನ್ನು ಶಾಸನವೊಂದರಲ್ಲಿ ನಾಗಖಂಡವೆಂದೇ ಕರೆಯಲಾಗಿದೆ. ಸರ್ಪಾರಾಧನೆ ಆಫ್ರಿಕದಲ್ಲಂತೂ ನಮ್ಮಲ್ಲಿರುವಷ್ಟೇ ಉತ್ಕಟ ಸ್ವರೂಪದ್ದು. ಪಶ್ಚಿಮ ಆಫ್ರಿಕದ ಬೋಬಾಬ್ (Baobab) ಮರದಡಿಯಲ್ಲಿ ಸರ್ಪದ ಪ್ರತಿಮೆಗಳನ್ನಿಟ್ಟು ಪೂಜಿಸುತ್ತಾರೆ. ನಾಗಮಂಡಲದ ನಮ್ಮ ನೃತ್ಯವನ್ನು ಹೋಲುವಂತಹ ನಾಗನೃತ್ಯವನ್ನು ಆಫ್ರಿಕದ ಸೆನೆಗಲ್ ಪ್ರಾಂತ್ಯದಲ್ಲಿ ತಾವು ಕಣ್ಣಾರೆ ಕಂಡಿರುವುದಾಗಿ ಉಪಾಧ್ಯಾಯ ಅವರು ದಾಖಲಿಸಿದ್ದಾರೆ. ಮುರುಗನ ಕನ್ನಡ ರೂಪವಾದ ಸುಬ್ರಹ್ಮಣ್ಯ ದೈವದೊಂದಿಗೆ ನಾರಗಹಾವಿನ ವಿಶಿಷ್ಟ ಸಂಬಂಧವಿರುವುದನ್ನು ನಾವಿಲ್ಲಿ ಗಮನಿಸಲೇಬೇಕು.

ನಮ್ಮಲ್ಲಿನ ಭೂತಕೋಲ, ಭೂತಾರಾಧನೆ, ಹಾಗೂ ಕೇರಳದ ತೆಯ್ಯಂ(ದೆಯ್ಯಂ) ಆಚರಣೆಗಳು ಬಹಳ ಮಹತ್ವದ್ದಷ್ಟೆ. ಮನುಷ್ಯರ ವಿಧಿಗಳನ್ನು ಭೂತಗಳು ಬದಲಿಸಬಲ್ಲವೆಂದು ನಂಬುವ ಆಫ್ರಿಕನ್ನರು ಕೂಡ ಪ್ಯಾಗನ್ ಎಂಬ ಭೂತಗಳನ್ನು ಆರಾಧಿಸುವ ಆಚರಣೆ ನಡೆಸುತ್ತಾರೆ. ಭೂತಕೋಲದ ಶಿರೋಭೂಷಣ ಹಾಗೂ ಮುಖವಾಡಗಳು ಪ್ಯಾಗನ್ ಆಚರಣೆಯ ಆಫ್ರಿಕನ್ ಮಾಂತ್ರಿಕರು ಧರಿಸುವ ಮುಖವಾಡಗಳಂತೆಯೇ ಇರುವುದಾಗಿಯೂ ವಿದ್ವಾಂಸರು ಗುರುತಿಸಿದ್ದಾರೆ. ಪಿತೃಪೂಜೆ ಹಾಗು ಕುಲಬೆಡಗುಗಳ ಪದ್ಧತಿ ಆಫ್ರಿಕನ್ ಹಾಗೂ ದ್ರಾವಿಡ ಸಮುದಾಯಗಳೆರಡರಲ್ಲೂ ಸಮಾನವಾಗಿಯೇ ಇದೆ. ಆಫ್ರಿಕ, ದಕ್ಷಿಣ ಭಾರತಗಳಲ್ಲಿಯಂತೆಯೇ ಆಸ್ಟ್ರೇಲಿಯಾದ ಮೂಲನಿವಾಸಿಗಳಲ್ಲೂ ಮೈಮೇಲೆ ದೆವ್ವ ಬರುವುದುಂಟು.

ಶುಭಕಾರ್ಯಗಳಲ್ಲಿ ದ್ರಾವಿಡರು ವೀಳ್ಯದೆಲೆ, ಅಡಿಕೆಯನ್ನು ಬಳಸುವಂತೆಯೇ ಆಫ್ರಿಕನ್ನರೂ ಕೋಲ ಎಂಬ ತಿನ್ನಬಹುದಾದ ಒಗರು ಬೀಜವೊಂದನ್ನು ಬಳಸುತ್ತಾರೆ. ಸೋದರ ಮಾವಂದಿರ ಮಗಳನ್ನು ವಿವಾಹವಾಗುವ ಪದ್ಧತಿ ಕೂಡ ಆಫ್ರಿಕನ್ – ದ್ರಾವಿಡಿಯನ್ನರ ಮಟ್ಟಿಗೆ ವಿಶಿಷ್ಟವಾದುದೇ ಆಗಿದೆ. ನಮ್ಮಲ್ಲಿನ ಅಳಗುಳಿ ಮಣೆ ಅಥವಾ ಚೆನ್ನೆಮಣೆಯ ಮಕ್ಕಳಾಟ ಆಫ್ರಿಕಾದಲ್ಲೂ ಇದ್ದು ಅದನ್ನು ಮಂಚಲಲ್ ಎಂದು ಕರೆಯುತ್ತಾರೆ. ಈಜಿಪ್ಟ್‍ನಲ್ಲು ಇದೇ ಬಗೆಯ ಆಟವಿತ್ತು. ಶ್ರೀಲಂಕಾದ ಬೌದ್ಧ ವಿಹಾರದಲ್ಲು ಇಂತಹ ಆಟದ ಸಾಮಗ್ರಿ ಕಂಡುಬಂದಿದೆ.

ಈ ಬಗೆಯ ಭಾಷಿಕ, ಆಚರಣಾತ್ಮಕ, ಧಾರ್ಮಿಕ, ಸಾಂಸ್ಕøತಿಕ, ಸಾಮಾಜಿಕ ನಂಬಿಕೆ ಕಟ್ಟುಪಾಡುಗಳು ಎರಡು ಭಿನ್ನ ಪ್ರದೇಶಗಳ ಭಿನ್ನ ಜನ ಸಮುದಾಯಗಳಲ್ಲಿ ಇಷ್ಟು ನಿಕಟ ಸ್ವರೂಪದ ಸಾಮ್ಯತೆಗಳಲ್ಲಿ ಕಂಡುಬರುವುದು ಕೇವಲ ಆಕಸ್ಮಿಕವಾಗಿರಲಾರದು. ಇದಕ್ಕೆ ತಕ್ಕಂತೆ ಅನುವಂಶಿಕ ಪುರಾವೆಗಳು ಹಾಗೂ ಪುರಾತತ್ವ ಸಂಶೋಧನೆಗಳ ಪೂರಕ ಆಂಶಗಳು ಸೇರಿ ಇಂದು ಪ್ರಪಂಚದ ಅತ್ಯಂತ ಪುರಾತನ ನಾಗರೀಕತೆಯಾದ ದ್ರಾವಿಡ ಸಂಸ್ಕøತಿ ಹಾಗು ದಕ್ಷಿಣ ಭಾರತವು ಜಗತ್ತಿನಾದ್ಯಂತದ ಭಾಷಾವಿಜ್ಞಾನಿಗಳು, ಮಾನವ ಶಾಸ್ತ್ರಜ್ಞರು, ಪುರಾತತ್ವ ತಜ್ಞರು, ಸಾಗರದಾಳದ ಪ್ರಾಕ್ತನ ತಜ್ಞರು ಹಾಗು ಅನುವಂಶಿಕ ತಜ್ಞರನ್ನು ತನ್ನತ್ತ ಆಹ್ವಾನಿಸುತ್ತಿದೆ. ಡಾ. ಸ್ಪೆನ್ಸರ್ ವೆಲ್ಸ್ ಅವರು ಪ್ರಾರಂಭಿಸಿದ ಈ ಪ್ರಾಚೀನ ಯಾನದ ಡಿ.ಎನ್.ಎ. ಸಾಂಗ್‍ಲೈನ್ಸ್‍ನ ಸಂಗೀತ ಕಥನ ನಮ್ಮ ನಮ್ಮ ನೆನಪುಗಳಾಳವನ್ನೂ ಮಥಿಸುವಂತಾಗಲಿ.

 

 

Leave a Reply

Your email address will not be published.