ಮಂದಿರ ಅಪವಿತ್ರೀಕರಣ ಮತ್ತು ಇಂಡೊ-ಮುಸ್ಲಿಂ ಸಾಮ್ರಾಜ್ಯಗಳು

babri-RR    ಅರಿeóÉೂೀನ ವಿಶ್ವವಿದ್ಯಾನಿಲಯದ ಪ್ರೊಫೆಸರ್ ರಿಚರ್ಡ್ ಎಂ. ಈಟನ್ ಅವರು ಅಕ್ಟೋಬರ್ 13, 1999 ರಂದು ಔxಜಿoಡಿಜ ಅeಟಿಣಡಿe ಜಿoಡಿ Isಟಚಿmiಛಿ Sಣuಜies ನಲ್ಲಿ ನೀಡಿದ ಉಪನ್ಯಾಸವೊಂದರ ಪೂರ್ಣ ಪಾಠ. ಅನು: ಸುರೇಶ ಭಟ್, ಬಾಕ್ರಬೈಲ್
ಲಡಾಯಿ ಪ್ರಕಾಶನ, ಗದಗ ಇವರು ಇದನ್ನು ಪುಸ್ತಕವಾಗಿ ಹೊರತಂದಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದ ತರುವಾಯ ಬಹಳಷ್ಟು ಸಾರ್ವಜನಿಕ ಚರ್ಚೆಗಳು ಹುಟ್ಟಿಕೊಂಡಿವೆ. ಅವೆಲ್ಲವುಗಳ ಪ್ರಧಾನ ವಿಷಯವಾಗಿರುವುದು ದಕ್ಷಿಣ ಏಷಿಯಾದ ಮಂದಿರ, ಮಸೀದಿಗಳ ರಾಜಕೀಯ ಸ್ಥಾನಮಾನ ಮತ್ತು ನಿರ್ದಿಷ್ಟವಾಗಿ ಬ್ರಿಟಿಷ್ ಆಳ್ವಿಕೆಗೂ ಹಿಂದೆ ಅಪವಿತ್ರಗೊಂಡ ಅಥವಾ ಮಸೀದಿಗಳಾಗಿ ಪಲ್ಲಟಗೊಂಡ ಮಂದಿರÀಗಳು. ಸೀತಾರಾಂ ಗೋಯಲ್‍ರಂತಹ ಹಿಂದೂ ರಾಷ್ಟ್ರೀಯವಾದಿಗಳು, ಈ ಕಾಲಾವಧಿಯಲ್ಲಿ ಮುಸ್ಲಿಮರು ಎಲ್ಲಾ ಮಂದಿರಗಳನ್ನೂ ಸಾರಾಸಗಟಾಗಿ ನಾಶಪಡಿಸಿದರೆನ್ನುವ ನಮೂನೆಯೊಂದನ್ನು ದಾಖಲಿಸಲು ಹರಸಾಹಸಪಟ್ಟಿದ್ದಾರೆ [1]. ಆದರೆ ಇಂಥಾ ಒಂದು ಅಚ್ಚ ಐತಿಹಾಸಿಕ ವಿಷಯದÀ ಕುರಿತು ಚಿಂತನೆ ನಡೆಸಿದ ವೃತ್ತಿಪರ ಇತಿಹಾಸಕಾರರ ಸಂಖ್ಯೆ ಮಾತ್ರ ತೀರ ಕಡಮೆ.
ದೇವಾಲಯಗಳ ಪಾವಿತ್ರ್ಯನಾಶದ ವಿಷಯದಲ್ಲಿ ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಕೆಲವು ಪ್ರಶ್ನೆಗಳನ್ನೆತ್ತುವುದು ಈ ಲೇಖನದ ಉದ್ದೇಶ. ಭಾರತದ ಆಧುನಿಕಪೂರ್ವ ಯುಗದ ಇತಿಹಾಸದಲ್ಲಿ ನಿಜಕ್ಕೂ ಯಾವೆಲ್ಲ ಮಂದಿರಗಳನ್ನು ಅಪವಿತ್ರಗೊಳಿಸಲಾಯಿತು? ಅದು ಯಾವಾಗ ಮತ್ತು ಯಾರಿಂದ ನಡೆಯಿತು? ಹೇಗೆ ಮತ್ತು ಯಾವ ಉದ್ದೇಶಕ್ಕಾಗಿ ನಡೆಯಿತು? ಎಲ್ಲಕ್ಕೂ ಮಿಗಿಲಾಗಿ ಇವು ಆಧುನಿಕಪೂರ್ವ ಯುಗದ ಭಾರತದಲ್ಲಿ ಧರ್ಮ ಮತ್ತು ರಾಜಕಾರಣದÀ ನಡುವಿನ ಸಂಬಂಧಗಳ ಕುರಿತು ಏನು ತಿಳಿವಳಿಕೆ ನೀಡಬಹುದು? ಭಾರತದಲ್ಲಿ ಅನೇಕ ಜನ ಇಂದು ಧಾರ್ಮಿಕ ಕಟ್ಟಡಗಳ ಬಗೆಗಿನ ಸಾರ್ವಜನಿಕ ನೀತಿಯನ್ನು ಸಮರ್ಥಿಸಲು ಅಥವಾ ಖಂಡಿಸಲು ಗತಕಾಲದತ್ತ ಹೊರಳಿ ನೋಡುತ್ತಿದ್ದಾರೆ. ಆದುದರಿಂದÀ ಇದೊಂದು ಸಮಯೋಚಿತ ಶೀರ್ಷಿಕೆಯಾಗಿದೆ.
ಹಿಂದೂ ರಾಷ್ಟ್ರೀಯವಾದಿಗಳು ದೇವಾಲಯಗಳ ಪಾವಿತ್ರ್ಯನಾಶÀದ ವಿಷಯದಲ್ಲಿ ಅನೇಕ ಪುರಾವೆಗಳನ್ನು ಉದ್ಧರಿಸುತ್ತಾರೆ. ಅವರ ಬಹುತೇಕ ಪುರಾವೆಗಳ ಮೂಲವಿರುವುದು ಅಂದು ಬ್ರಿಟಿಷರು ಭಾರತದಲ್ಲಿ ಮೇಲುಗೈ ಸಾಧಿಸುತ್ತಿದ್ದ ಕಾಲದಲ್ಲಿ ಅನುವಾದಿಸಲ್ಪಟ್ಟ ಪರ್ಷಿಯನ್ ಗ್ರಂಥಗಳಲ್ಲಿ. ವಿಶೇಷ ಪ್ರÀಭಾವ ಬೀರಿರುವ ಒಂದು ಗ್ರಂಥವೆಂದರೆ ಎಂಟು ಸಂಪುಟಗಳ ‘ಊisಣoಡಿಥಿ oಜಿ Iಟಿಜiಚಿ ಚಿs ಖಿoಟಜ bಥಿ iಣs ಔತಿಟಿ ಊisಣoಡಿiಚಿಟಿs’. 1849ರಲ್ಲಿ ಪ್ರಕಟಿಸಲ್ಪಟ್ಟ ಈ ಪುಸ್ತಕವನ್ನು ಸಂಪಾದಿಸಿದವನು ಸರ್ ಹೆನ್ರಿ ಎಂ. ಈಲಿಯಟ್. ಈತ ಜಾನ್ ಡೌಸನ್‍ನ ಸಹಾಯದೊಂದಿಗೆ ಹೆಚ್ಚಿನ ಅನುವಾದಗಳ ಮೇಲ್ವಿಚಾರಣೆ ವಹಿಸಿದ್ದ. ತನ್ನ ಗ್ರಹಿಕೆಯ ಬ್ರಿಟಿಷ್ ನ್ಯಾಯ ಹಾಗೂ ದಕ್ಷತೆಯನ್ನು ಹಿಂದಿನ ಮುಸ್ಲಿಂ ಅರಸರ ಕ್ರೌರ್ಯ ಹಾಗೂ ಪ್ರಜಾಪೀಡನೆಗಳೊಂದಿಗೆ ಹೋಲಿಸಲು ಉತ್ಸುಕನಾಗಿದ್ದ ಈಲಿಯಟ್‍ಗೆ ಭಾರತೀಯ ಇತಿಹಾಸದ ‘ಮುಹಮ್ಮದೀಯ’ ಕಾಲದ ಬಗ್ಗೆ ಸಹಾನುಭೂತಿ ಇರಲಿಲ್ಲ. ಮೂಲ ಗ್ರಂಥದ ಮುನ್ನುಡಿಯಲ್ಲಿ ಆತ ಹೀಗೆ ಬರೆಯುತ್ತಾನೆ:
ಜನಸಾಮಾನ್ಯರು ಅತ್ಯಂತ ಕೆಳ ಮಟ್ಟದ ನಿರ್ಗತಿಕತೆ ಹಾಗೂ ಖಿನ್ನತೆಗಳಲ್ಲಿ ಮುಳುಗಿದ್ದಿರಬೇಕು. ಈ ಒಂದು ಪುಸ್ತಕದ ಸಣ್ಣಪುಟ್ಟ ಸಾರಾಂಶಗಳಲ್ಲಿ ಕೂಡ ಇರುವ ಕೆಲವು ನಸುನೋಟಗಳು ಇದೊಂದು ಅತಿಶಯೋಕ್ತಿಯಲ್ಲವೆಂದು ತೋರಿಸುತ್ತವೆ. ಉದಾಹರಣೆಗೆ – ‘ಮುಹಮ್ಮದೀಯ’ರೊಂದಿಗೆ ಜಗಳಾಡಿದ್ದಕ್ಕಾಗಿ ಹಿಂದೂಗಳ ಹತ್ಯೆ; ಮೆರವಣಿಗೆ, ಪೂಜೆ, ಶುದ್ಧಿಸ್ನಾನಗಳಿಗೆ ಸಾಮಾನ್ಯವಾಗಿ ವಿಧಿಸಲಾಗಿದ್ದ ನಿಷೇಧಗಳು; ಮೂರ್ತಿಭಂಜನೆ; ದೇಗುಲ ನಾಶÀ; ಬಲಾತ್ಕಾರದ ಮತಾಂತರ ಹಾಗೂ ವಿವಾಹಗಳು; ಬಹಿಷ್ಕಾರ ಹಾಗೂ ಆಸ್ತಿ ಮುಟ್ಟುಗೋಲುಗಳು, ಕೊಲೆ ಹಾಗೂ ಸಾಮೂಹಿಕ ಹತ್ಯೆಗಳು ಮತ್ತು ಇಂತಹ ಆದೇಶಗಳನ್ನು ನೀಡುತ್ತಿದ್ದ ಪ್ರಜಾಪೀಡಕ ಪ್ರಭುಗಳ ವಿಷಯಲಂಪಟತೆ ಹಾಗೂ ಮದ್ಯವ್ಯಸನಗಳು…[2]
ಈಲಿಯಟ್ ಪ್ರಕಾರ ಬ್ರಿಟಿಷ್ ಆಳ್ವ್ವಿಕೆಯ ಆಗಮನದೊಂದಿಗೆ ‘ಯುರೋಪಿನ ಸತ್ಯ ಹಾಗೂ ಸೂಕ್ಷ್ಮಗ್ರಹಣದ ಬೆಳಕಿನ ಕಿರಣಗಳು ಗತಕಾಲದ ಅಗೋಚರತೆಯ ಮೇಲೆ ಪೂರ್ತಿಯಾಗಿ ಬೀಳಲಾರಂಭಿಸಿದಾಗ ಭಾರತದ ಇತಿಹಾಸದಲ್ಲಿ ಇನ್ನಷ್ಟು ಹೆಚ್ಚು ವಿಪ್ಲವಕಾರಿಯಾದ ವಿಶೇಷ ಘಟನೆಗಳ ಶಕೆಯೊಂದು ಆರಂಭವಾಗುತ್ತದೆ…’ [3]. ಮುಸ್ಲಿಮರು ಭಾರತೀಯರಿಗೆ ಐದು ಶತಮಾನಗಳಲ್ಲಿ ಒದಗಿಸಿದ್ದಕ್ಕಿಂತಲೂ ಎಷ್ಟೋ ಪಾಲು ಹೆಚ್ಚು ಫಾಯಿದೆಗಳನ್ನು ಬ್ರಿಟಿಷರು ಕೇವಲ ಅರ್ಧ ಶತಮಾನದಲ್ಲಿ ತಂದುಕೊಟ್ಟರೆಂದು ಈಲಿಯಟ್ ಹೇಳುತ್ತಾನೆÉ. ತನ್ನ ಅನುವಾದಗಳು ‘ಸ್ಥಳೀಯ ಪ್ರಜೆಗಳಲ್ಲಿ ನಮ್ಮ (ಬ್ರಿಟಿಷರ) ಸೌಮ್ಯ ಮತ್ತು ಸಮಾನತೆಯ ಆಡಳಿತದಿಂದ ದೊರೆಯುವ ಅಪರಿಮಿತ ಪ್ರಯೋಜನಗಳ ಬಗ್ಗೆ ಹೆಚ್ಚಿನ ತಿಳಿವಳಿಕೆಯನ್ನು ಮೂಡಿಸುವುವು’ ಎಂಬ ಆಶಾವಾದವನ್ನು ವ್ಯಕ್ತಪಡಿಸುತ್ತಾನೆÉ [4].
ಇದರಿಂದ ಸ್ಪಷ್ಟವಾಗುವುದೇನೆಂದರೆ ಬ್ರಿಟಿಷರ ಆಳ್ವಿಕೆಗೂ ಹಿಂದಿನÀ ಇಂಡೊ-ಮುಸ್ಲಿಂ ಅರಸೊತ್ತಿಗೆಗಳು ನ್ಯಾಯಸಮ್ಮತÀವಲ್ಲವೆಂದು ತೋರಿಸುವುದೆ ಈಲಿಯಟ್‍ನ ಉದ್ದೇಶವಾಗಿತ್ತು. ಖ್ಯಾತ ಇತಿಹಾಸಜ್ಞ ಮೊಹಮ್ಮದ್ ಹಬೀಬ್ ಪ್ರಕಾರ ಭಾರತದ ಆಧುನಿಕಪೂರ್ವ ಯುಗದÀÀ ಇತಿಹಾಸವನ್ನು ಈ ರೀತಿಯಾಗಿ ಗ್ರಹಿಸಿರುವುದು ನಂತರದ ಪೀಳಿಗೆಗಳ ಮೇಲೆ ದುಷ್ಪರಿಣಾಮ ಬೀರಿದೆ. “ನಿಸ್ಸಂದೇಹವಾಗಿಯೂ ಹಿಂದೂ ಪೂರ್ವಜರಿಂದ ಜನಿಸಿ, ಮೂವತ್ತು ಅಥವಾ ನಲುವತ್ತು ಶತಮಾನಗಳ ಕಾಲದಿಂದ ಇಲ್ಲಿ ಬಾಳಿ ಬದುಕಿದ್ದ ಶಾಂತಿಯುತ ಸ್ವದೇಶೀ ಭಾರತೀಯ ಮುಸಲ್ಮಾನನನ್ನು ಓರ್ವ ವಿದೇಶೀ ಬರ್ಬರ, ದೇಗುಲಭಂಜಕ, ಗೋಮಾಂಸ ಭಕ್ಷಕನೆಂಬುದಾಗಿ ಚಿತ್ರಿಸಿ ಅವನು ಸೇನಾಬಲದಿಂದ ವಸಾಹತು ಸ್ಥಾಪಿಸಿದವನೆಂದು ಘೋಷಿಸಲಾಯಿತು…. ಇದರ ಪರಿಣಾಮವೆ ಭಾರತದಲ್ಲಿ ಇಂದು ಕಂಡುಬರುತ್ತಿರುವ ಕೋಮುವಾರು ವಾತಾವರಣ” [5]. ಮೊಹಮ್ಮದ್ ಹಬೀಬ್ ಇದನ್ನು ಬರೆದದ್ದು ಹಲವಾರು ದಶಕಗಳ ಹಿಂದೆ. ಆದಾಗ್ಯೂ ಭಾರತದ ದೇವಾಲಯಗಳ ಪಾವಿತ್ರ್ಯನಾಶದ ಚರಿತ್ರೆಗೆ ಸಂಬಂಧಿಸಿದ ಪ್ರಚಲಿತ ವಿವಾದಗಳ ಸಂದರ್ಭದಲ್ಲಿ ಇದು ಪ್ರಸ್ತುತವಾಗುತ್ತದೆÉ.
ಹಿಂದೂ ರಾಷ್ಟ್ರೀಯವಾದಿಗಳು ಆಧುನಿಕಪೂರ್ವ ಪರ್ಷಿಯನ್ ಇತಿಹಾಸದ ಕೆಲವು ಆಯ್ದ ಭಾಗಗಳನ್ನು ಅನುವಾದ ಮಾಡಿಕೊಂಡಿದ್ದಾರೆ. ಮತ್ತು ಶಿಲಾಶಾಸನಗಳÀ ಕೆಲವು ದತ್ತಾಂಶಗಳನ್ನಷ್ಟೆ ಆಯ್ದುಕೊಂಡಿದ್ದಾರೆ. ನಂತರ ಅವುಗಳನ್ನು ಬಳಸಿಕೊಂಡು ಆಧುನಿಕಪೂರ್ವ ಇಂಡೋ-ಮುಸ್ಲಿಂ ವಿಜೇತರಲ್ಲಿ ಮತ್ತು ಅರಸರಲ್ಲಿ ಖಳನಾಯಕತ್ವ ಹಾಗೂ ಮತಾಂಧತೆಯ ಒಂದು ಸತತÀ ಪ್ರಕಾರವಿತ್ತೆಂದು ತೋರಿಸುವುದÀಕ್ಕಾಗಿ ಅಲ್ಲಗಳೆಯಲಾಗದಂತಹ ಪುರಾವೆಗಳನ್ನು ಹುಡುಕಲೆತ್ನಿಸಿದ್ದಾರೆ. ಗೋಯಲ್‍ರ ಪುಸ್ತಕದ ಅಧ್ಯಾಯವೊಂದರ ಹೆಸರೇ ‘ಈಡಿom ಣhe ಊoಡಿse’s ಒouಣh’ ಅರ್ಥಾತ್ ‘ವಿಶ್ವಾಸಾರ್ಹ ಮೂಲಗಳಿಂದ’.
ಆದರೆ ವಾಸ್ತವದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಪುರಾವೆಗಳ ಪ್ರತಿಯೊಂದು ಸಣ್ಣ ತುಣುಕನ್ನು ಕೂಡ ಕೂಲಂಕಷವಾಗಿ ಪರಾಂಬರಿಸಬೇಕಾಗುತ್ತದೆ. ಹಿಂದೆ ಮಾಳವದ ರಾಜಧಾನಿಯಾಗಿದ್ದ ಧಾರ್‍ನಲ್ಲಿ (ಈಗಿನ ಮಧ್ಯಪ್ರದೇಶ ರಾಜ್ಯದಲ್ಲಿದೆ) ಸಾಧುಗಳ ಸಮಾಧಿಯೊಂದರ ದ್ವಾರದ ಮೇಲುಗಡೆ 1455ನೆ ಇಸವಿಯ ಶಾಸನವೊಂದಿದೆ. ಅದು 42 ಚರಣಗಳ ಪರ್ಷಿಯನ್ ಗಜûಲ್‍ನ ರೂಪದಲ್ಲಿದೆ. ಅದರಲ್ಲಿ 1010ರಿಂದ 1053ರ ವರೆಗೆ ಆ ಪ್ರದೇಶವನ್ನಾಳಿದ್ದ ಪರಮಾರ ವಂಶದ ಪ್ರಖ್ಯಾತ ಅರಸು ಭೋಜರಾಜನ ಕಾಲದಲ್ಲಿ ಅಬ್ದುಲ್ಲಾ ಶಾ ಚಂಗಲ್ ಎಂಬಾತನು ಹಿಂದೂ ಮಂದಿರವೊಂದನ್ನು ನಾಶಪಡಿಸಿದ ವಿಷಯವಿದೆ. ಸೀತಾರಾಂ ಗೋಯಲ್ ತನ್ನ ಊiಟಿಜu ಖಿemಠಿಟes: Whಚಿಣ hಚಿಠಿಠಿeಟಿeಜ ಣo ಖಿhem ಪುಸ್ತಕದಲ್ಲಿ ಈ ಮಂದಿರ ದ್ವಂಸ ಕೃತ್ಯದ ಬಗ್ಗೆ ಶಾಸನದಲ್ಲಿ ನಮೂದಿಸಿರುವುದನ್ನೆಲ್ಲ ಹೆಚ್ಚುಕಮ್ಮಿ ಹಾಗೆಯೆ ಸ್ವೀಕರಿಸುತ್ತಾರೆ [6]. ಅದೊಂದು ಸಮಕಾಲೀನ ವೃತ್ತಪತ್ರಿಕೆಯೊಂದರ ನಿಷ್ಪಕ್ಷಪಾತÀ ವರದಿಯೋ ಎಂಬಂತೆ. ಗೋಯಲ್‍ರ ಆಸಕ್ತಿ ಕೇವಲ ಮಂದಿರ ದ್ವಂಸ ಕೃತ್ಯವನ್ನು ದಾಖಲಿಸುವುದಕ್ಕಷ್ಟೆ ಸೀಮಿತವಾಗಿದೆ. ಆದರೆ, ಶಾಸನದ ಮುಖ್ಯ ಉದ್ದೇಶÀ ಅದಾಗಿರಲಿಲ್ಲ. ಆ ಸಮಾಧಿ ಸ್ಥಳದಲ್ಲಿ ದಫನು ಮಾಡಲಾಗಿರುವ ಅಬ್ದುಲ್ಲಾ ಶಾ ಚಂಗಲ್ ಎಂಬ ಸಂತನ ಅದ್ಭುತ ಜೀವನ ವೃತ್ತಾಂತವನ್ನು ಅರುಹಿ ಆತನನ್ನು ಕೊಂಡಾಡುವುದೆ ಶಾಸನದ ಪ್ರಧಾನ ಉದ್ದೇಶÀವಾಗಿತ್ತು. ವಾಸ್ತವದಲ್ಲಿ ಇಡೀ ಶಾಸನವನ್ನು ಓದಿದಾಗ ಅಲ್ಲಿ ಇತಿಹಾಸ ಲೇಖನದ ಒಂದು ಜಟಿಲ ಪ್ರಕ್ರಿಯೆ ನಡೆಯುತ್ತಿರುವುದು ಸ್ಪಷ್ಟವಾಗುತ್ತ್ತದೆ:
ಈತನಿಂದಾಗಿ [ಅಬ್ದುಲ್ಲಾ ಶಾ ಚಂಗಲ್] ಈ ಕ್ಷೇತ್ರ ಮೊದಲ ಬಾರಿಗೆ ಮುಹಮ್ಮದೀಯ ಎಂದಾಯಿತು [ಮತ್ತು] ಎಲ್ಲಾ ಧಾರ್ಮಿಕ ಸಂಕೇತಗಳÀನ್ನೂ ಪ್ರದರ್ಶಿಸಲಾಯಿತು. [ನಾನು ತಿಳಿದಿರುವಂತೆ] ಈ ನಿರ್ಜನ ಹಾಗೂ ಪಾಳುಬಿದ್ದ ಜಾಗÀಕ್ಕೆ ಇವರಿಗಿಂತಲೂ ಮೊದಲು ಕೆಲವು ಜನರು ಬಂದಿದ್ದರು. ನಶೆಯಲ್ಲಿರುವ ಸೂಫಿಗಳ ಪಾಲಿಗೆ ಕಹಳೆಯ ಕೂಗಿನಂತಿರುವ ಮುಂಜಾವದ ಮುಆಜಿûೀನ್‍ನ ಕರೆ ಕೇಳಿಸಿದ ಕಾಲದಲ್ಲಿ ಕಾಫಿüರರು [ನಾಸ್ತಿಕರು] ಪ್ರತಿಯೊಂದು ಗೋಡೆಯಿಂದಲೂ (?) [ದಾಳಿಮಾಡಿದರು]. ಪ್ರತಿಯೊಬ್ಬನ ಕೈಯಲ್ಲಿ ಖಡ್ಗ ಮತ್ತು ಚಾಕುಗಳಿದ್ದವು. ಕೊನೆಯಲ್ಲಿ ಅವರು [ಕಾಫಿüರರು] ಆ ಧಾರ್ಮಿಕ ಜನರನ್ನು ಗಾಯಗೊಳಿಸಿ, ಕೊಂದುಹಾಕಿದ ನಂತರ [ಅವರನ್ನು] ಒಂದು ಬಾವಿಯೊಳಗೆ ಬಚ್ಚಿಟ್ಟರು. ಇಂದು ಈ [ದಫನ ಸ್ಥಳ ಹಾಗೂ] ಹುತಾತ್ಮರ ಗೋರಿ ಆ ಪೂಜನೀಯ ಶೃದ್ಧಾಳುಗಳ ಕುರುಹಾಗಿ ಉಳಿದಿದೆ.
ಈ ಕರಾಳ ಹಾಗೂ ಗೋಳುಗರೆವ ರಾತ್ರಿಯಲ್ಲಿ ಸತ್ಯ ಎಂಬ ಸೂರ್ಯನ ಬೆಳಕು ಬೀಳುವ ಸಮಯ ಸನ್ನಿಹಿತವಾದಾಗ ಧರ್ಮದ ಕೇಂದ್ರದಿಂದ ಈ ನರಸಿಂಹ [ಅಬ್ದುಲ್ಲಾ ಶಾ ಚಂಗಲ್] ದೊಡ್ಡ ಸೇನಾಪಡೆಯೊಂದಿಗೆ ಈ ಪುರಾತನ ಮಂದಿರಕ್ಕೆ ಆಗಮಿಸಿದ. ಅವನು ಹುಸಿ ದೇವತಾಮೂರ್ತಿಗಳನ್ನು ಭಗ್ನಗೊಳಿಸಿ ವಿಗ್ರಹಾರಾಧನೆಯ ಈ ಮಂದಿರವನ್ನು ಒಂದು ಮಸೀದಿಯಾಗಿ ಪರಿವರ್ತಿಸಿದ. ಇದನ್ನು ನೋಡಿದ ಭೋಜರಾಜ ವಿವೇಚನೆಯಿಂದ ಕೂಡಿದವನಾಗಿ ತನ್ನ ಶೂರ ಸಿಪಾಯಿಗಳ ಕುಟುಂಬಗಳ ಜತೆಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ. ಈ ಪ್ರದೇಶ ಮುಹಮ್ಮದೀಯ ಕಾನೂನಿನ ಕಾಂತಿಯಿಂದ ಬೆಳಗಿತು. ಧರ್ಮವಿರೋಧಿಗಳ ಆಚರಣೆಗಳು ಅಪ್ರಚಲಿತವಾಗಿ ರದ್ದುಗೊಂಡವು.
ಅಂದಿನ ಗತದಿನಗಳÀ ನಂತರ ಈಗ ಈ ಸಮಾಧಿ ವಿಶ್ವದ ಒಂದು ಸುಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ. ಗೋರಿಗಳು ಹಳೆಯದಾಗಿ ಅವುಗಳ ದಿಬ್ಬಗಳು ನೆಲಮಟ್ಟಕ್ಕೆ ತಲುಪಿದವು. ಇಲ್ಲಿ ಈಗ ಬಳಲಿದ ದರ್ವಿಷ್‍ಗಳು ವಿಶ್ರಮಿಸಬಹುದಾದಂತಹ ಮಲಗುವ [ಜಾಗವೂ] ಇಲ್ಲದಾಯಿತು. ಹೀಗಾದಾಗ ಈ ತೂರ್‍ನ (ಸಿನಿಯಾಯ್ ದಿಬ್ಬ) ಮೇಲ್ಭಾಗವನ್ನು ಹೊಸದಾಗಿ ನಿರ್ಮಿಸಬೇಕೆಂದು ಜಗದೊಡೆಯನು ಆದೇಶವಿತ್ತನು. ಯಾರ ಆಸ್ಥಾನಗಳಿಗೆ [ತುರ್ಕಿಸ್ತಾನದ ಸಮ್ರಾಟ] ಖಕನ್ ಹಾಗೂ [ಚೀನಾದ ಸಮ್ರಾಟ] ಫಗ್‍ಫುರ್ ಭೇಟಿ ನೀಡುತ್ತಾರೋ, ಯಾರು ದೈವಕೃಪೆಯಿಂದ ಶತ್ರುಗಳನ್ನು ಜಯಿಸುವನೋ, ಯಾರ ನ್ಯಾಯದಿಂದಾಗಿ ಜಗತ್ತು ಸ್ವರ್ಗದಂತೆ ಸಿಂಗÀರಿಸಲ್ಪಟ್ಟಿದೆಯೋ, ಆ ಅಲಾಉದ್ದೀನ್ ವಾದ್‍ದುನ್ಯ ಅಬುಲ್ ಮುeóÁಫರ್, ಆ ನಗುಮೊಗದ ರಾಜ, ಆ ದಿಗಂತಗಳ [ಅಂದರೆ ವಿಶ್ವದ] ಸುಲ್ತಾನ, ಖಿಲ್ಜಿಯ ಅರಸ, ಮಹಮೂದ್ ಶಾ ಈ ಹಳೆ ಕಟ್ಟಡದ ಜೀರ್ಣೋದ್ಧಾರ ಮಾಡಿಸಿದುದರಿಂದಾಗಿ ಈ ಮನೆ ಹಾಗೂ ಅದರ ಆವರಣ ಮತ್ತೆ ಹೊಸದರಂತಾಯಿತು [7].
ಇಲ್ಲಿ ಗತಕಾಲವನ್ನು ಮೂರು ನಿರ್ದಿಷ್ಟ ಅವಧಿಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು ಮಹಾಪುರುಷ ಅಬ್ದುಲ್ಲಾ ಶಾ ಚಂಗಲ್‍ನ ಆಗಮನಕ್ಕೂ ಹಿಂದಿನ ಕಾಲಾವಧಿ. ಆ ಕಾಲದಲ್ಲಿ ಮಾಳವ ರಾಜ್ಯದೊಳಗೆ ಚಿಕ್ಕದೊಂದು ಮುಸ್ಲಿಂ ಸಮುದಾಯ ನೆಲಸಿತ್ತು. ಅದರ ನೆಲೆ ಸುಭದ್ರವಾಗಿತ್ತಾದ್ದರೂ ಅದೇ ವೇಳೆ ಬಹಳ ನಾಜೂಕಾಗಿಯೂ ಇತ್ತು. ಇವರು ತಮ್ಮ ಧರ್ಮವನ್ನು ನಿರಾಕರಿಸಲು ಒಪ್ಪದಾಗ ಸ್ಥಳೀಯ ಮುಸ್ಲಿಮೇತರ ಮಂದಿ ಇವರನ್ನು ಕೊಂದುಹಾಕಿದ್ದರು. ಬಳಿಕ ಶವಗಳನ್ನೆಲ್ಲ ಒಂದು ಬಾವಿಗೆಸೆದಿದ್ದರು.
ಎರಡನೆ ಕಾಲಾವಧಿಯಲ್ಲಿ ‘ಧರ್ಮದ ಕೇಂದ್ರ’ದಿಂದ (ಮಕ್ಕಾ?) ಆಗಮಿಸುವ ಈ ಮಹಾಪುರುಷ ಆ ವಿಗ್ರಹಗಳನ್ನು ಪುಡಿಗುಟ್ಟಿ, ಮಂದಿರವನ್ನು ಮಸೀದಿಯಾಗಿ ಪರಿವರ್ತಿಸಿ, ಪರಮಾರ ರಾಜಮನೆತನದ ಅತ್ಯಂತ ಪ್ರಖ್ಯಾತ ಅರಸ ಭೋಜರಾಜನನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸುತ್ತಾನೆ. ಈ ಸಾಹಸಕೃತ್ಯಗಳ ಮೂಲಕ ಧರ್ಮಬಲಿಗೆ ಈಡಾಗಿದ್ದ ಸೂಫಿ ಸಂತರ ಸಾವಿನ ಸೇಡನ್ನು ತೀರಿಸಿಕೊಳ್ಳುತ್ತಾನೆ ಮತ್ತು ಅತ್ಯಂತ ಮುಖ್ಯವಾಗಿ, ಆ ಪ್ರದೇಶದಲ್ಲಿ ಇಸ್ಲಾಂನ ಮರುಸ್ಥಾಪನೆ ಮಾಡುತ್ತಾನೆ.
ಈ ಮಹಾಪುರುಷನ ಮರಣಾನಂತರದಲ್ಲಿ ಆತನ ಸಮಾಧಿಸ್ಥಳ ಒಂದು ಪ್ರಖ್ಯಾತ ಪುಣ್ಯಕ್ಷೇತ್ರವಾಗಿ ಪರಿಣಮಿಸಿದೆ. ಕಾಲಾಂತರದಲ್ಲಿ ಅದು ನಿರ್ಲಕ್ಷ್ಯಕ್ಕೊಳಗಾಗಿ ಪಾಳುಬಿದ್ದಿದ್ದ ಸಮಯವೆ ಮೂರನೆ ಕಾಲಘಟ್ಟ. ಆಗ ‘ನಗುಮೊಗದ ರಾಜ’, ‘ವಿಶ್ವದ ಸುಲ್ತಾನ’, ‘ಯಾರ ಆಸ್ಥಾನಕ್ಕೆ ತುರ್ಕಿಸ್ತಾನದ ಹಾಗೂ ಚೀನಾದ ಸಮ್ರಾಟರು ಗೌರವ ಸೂಚಿಸುತ್ತಾರೋ’, ‘ಯಾರ ನ್ಯಾಯದಿಂದಾಗಿ ಜಗತ್ತು ಸ್ವರ್ಗದ ಮಾದರಿಯಲ್ಲಿ ಅಲಂಕರಿಸಲ್ಪಟ್ಟಿದೆಯೋ’ ಎಂಬಿತ್ಯಾದಿಯಾಗಿ ಕರೆಯಲ್ಪಟ್ಟ ಸುಲ್ತಾನ್ ಮಹಮೂದ್ ಖಲ್ಜಿ ಎನ್ನುವ ದ್ವಿತೀಯ ಮಹಾಪುರುಷನ ಪ್ರವೇಶವಾಗುತ್ತದೆ. ಮಹಮೂದ್ ಖಲ್ಜಿಯ ಮಹತ್ಕಾರ್ಯವೆಂದರೆ ಅಬ್ದುಲ್ಲಾ ಶಾ ಚಂಗಲ್‍ನ ಗೋರಿಯ ಪುನರ್‍ನಿರ್ಮಾಣ ಮಾಡಿ ಆತನ ಉಪಾಸನಾ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದ್ದು. ಆ ಸಮಾಧಿಸ್ಥಳದಲ್ಲಿ ವರ್ತಕರು ಹಾಗೂ ಪ್ರವಾಸಿಗರÀ ತಂಡಗಳಿಗಾಗಿ ಒಂದು ಛತ್ರ, ಒಂದು ಭದ್ರ ತಿಜೋರಿ ಮತ್ತು ಒಂದು ಮಸೀದಿಯೂ ಇತ್ತೆಂದು ಶಾಸನದ ಕೊನೆಯಲ್ಲಿ ಹೇಳಲಾಗಿದೆ. ದಾನಶೂರ ಸುಲ್ತಾನನ ಆತ್ಮ ಲೋಕಾಂತ್ಯದ (ತೀರ್ಪಿನ ದಿನ, ಪ್ರಳಯ) ವರೆಗೂ ಉಳಿಯಲಿ, ಆತನ ಸಾಮ್ರಾಜ್ಯ ಚಿರಾಯುವಾಗಲಿ ಎಂದು ಪ್ರಾರ್ಥಿಸುತ್ತಾ ಶಾಸನ ಮುಕ್ತಾಯಗೊಳ್ಳುತ್ತದೆ.
ಇಂಡೊ-ಮುಸ್ಲಿಂ ಶಾಸನಗಳನ್ನು ಆಯಾ ಘಟನೆಗಳು ಸಂಭವಿಸಿದÀ ಕಾಲಕ್ಕೆ ಹತ್ತಿರಹತ್ತಿರವಾಗಿ ದಾಖಲಿಸುವುದು ವಾಡಿಕೆ. ಆದರೆ ಪ್ರಸಕ್ತ ಶಿಲಾಶಾಸನ ಸಮಕಾಲೀನವಲ್ಲ. ಯಾಕೆಂದರೆ ಅದನ್ನು ಬರೆಯುವಾಗ ಸುಮಾರು 400 ವರ್ಷಗಳು ಕಳೆದಿವೆ. ಹಾಗಾಗಿ ಅದು ಸಮಕಾಲೀನ ಘಟನೆಯೊಂದರ ವಸ್ತುನಿಷ್ಠ ನಿರೂಪಣೆಯಾಗದೆ ಹÀಲವಾರು ಪೀಳಿಗೆಗಳ ಮೂಲಕ ಮೌಖಿಕವಾಗಿ ಹಾದು ಬಂದು ಸಮೃದ್ಧವಾಗಿ ನೇಯ್ದ ದಂತಕತೆಯಾಯಿತು. ಕೊನೆಗೆ ಅಬ್ದುಲ್ಲಾ ಶಾ ಚಂಗಲ್‍ನ ಮತ್ತು ಮಾಳವದಲ್ಲಿ ಆತÀನ ಸಾಹಸಕೃತ್ಯಗಳ ಕತೆಯಾಗಿ 1455ರಲ್ಲಿ ಕಲ್ಲಿನಲ್ಲಿ ಕೊರೆಯಲ್ಪಟ್ಟಿತು. ಈ ಶಾಸನ ನಮಗೆ ನಿರ್ದಿಷ್ಟ ಮುಸ್ಲಿಂ ಸಮುದಾಯವೊಂದು ನಿರ್ದಿಷ್ಟ ಕಾಲಘಟ್ಟದಲ್ಲಿ, ನಿರ್ದಿಷ್ಟ ಸ್ಥಳದಲ್ಲಿ – 15ನೆ ಶತಮಾನದ ಮಾಳವದಲ್ಲಿ – ಹೇಗೆ ತನ್ನ ವರ್ಗವನ್ನು ಕಟ್ಟಿಕೊಂಡಿತೆಂದು ತಿಳಿಸುತ್ತದೆ. ಅದರ ನಿರೂಪಣೆಯ ತಿರುಳಾಗಿರುವುದು ಮತಾಂತರ, ಧರ್ಮಾಹುತಿ, ವಿಮೋಚನೆ, ಭಾರತದ ಮುಸ್ಲಿಂ ರಾಜಮನೆತನಗಳು ಶೃದ್ಧಾಕೇಂದ್ರಗಳಿಗೆÀ ನೀಡುತ್ತಿದ್ದ ರಾಜಾಶ್ರಯ ಮತ್ತು ಸಹಜವಾಗಿ ಒಂದು ಮಂದಿರ ಧ್ವಂಸÀ ಪ್ರಕರಣ. ಸದರಿ ಶಿಲಾಶಾಸನದ ರಚನೆಯಾಗುವುದಕ್ಕೆ 400 ವರ್ಷಗಳ ಹಿಂದೆ ನಿಜಕ್ಕೂ ಆ ಮಂದಿರÀವನ್ನು ಧ್ವಂಸÀಗೊಳಿಸಲಾಯಿತೇ ಅಥವಾ ಇಲ್ಲವೇ ಎಂದು ನಿಸ್ಸಂದಿಗ್ಧವಾಗಿ ಕಂಡುಕೊಳ್ಳುವುದು ಅಸಾಧ್ಯ. ಆದರೆ ಅದೇ ಶಾಸನ ಸುಪ್ರಸಿದ್ಧ ಅರಸ ಭೋಜರಾಜ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡನೆಂದೂ ಪ್ರತಿಪಾದಿಸುತ್ತದೆ. ಇದು ಸತ್ಯಕ್ಕೆ ದೂರವಾಗಿರುವ ಸಾಧ್ಯತೆಯೆ ಹೆಚ್ಚು. ಆದುದರಿಂದ ದೇಗುಲ ನಾಶದ ಕತೆಯೂ ಇದರ ಹಾಗೆ ಸತ್ಯಕ್ಕೆ ದೂರವಾಗಿರುವಂತೆ ತೋರುತ್ತದೆ.
ಅದೇನಿದ್ದರೂ ಒಂದಂತೂ ಸ್ಪಷ್ಟ. 15ನೆ ಶತಮಾನದ ಮಧ್ಯಕ್ಕಾಗುವಾಗ ಮಾಳವದ ಮುಸ್ಲಿಮರು – ಅಥವಾ ಕನಿಷ್ಠ ಈ ಗಜûಲ್‍ನ ಆಶ್ರಯದಾತರು – ದೇಗುಲ ನಾಶದ ನೆನಪುಗಳನ್ನು ಗತಕಾಲಕ್ಕೆ ಸರಿಸಿ ತಾವು ತಮ್ಮ ಮೂಲಗಳೆಂದು ನಂಬಿರುವುದಕ್ಕೆ ಸೇರಿಸಿದರು. ಈ ಪ್ರಕರಣ, ದೇವಾಲಯಗಳ ಅಪವಿತ್ರೀಕರಣಕ್ಕೆ ಸಂಬಂಧಿಸಿದಂತೆ ಇಂಡೊ-ಮುಸ್ಲಿಂ ಸಾಹಿತ್ಯದಲ್ಲಿ ಕಂಡುಬರುವ ಪ್ರತಿಪಾದನೆಗಳನ್ನು ವ್ಯಾಖ್ಯಾನಿಸುವಾಗ ಎಚ್ಚರಿಕೆ ವಹಿಸಬೇಕೆಂದು ಸೂಚಿಸುತ್ತದೆ. ಜೊತೆಗೆ ಅಂತಹ ಪಾವಿತ್ರ್ಯನಾಶ ಕೃತ್ಯಗಳು ಇಂಡೊ-ಮುಸ್ಲಿಂ ರಾಜ್ಯ ಅಥವಾ ಸಮುದಾಯವೊಂದರ ಗತ ನೆನಪುಗಳಲ್ಲಿ ಪ್ರಧಾನ ಪಾತ್ರ ವಹಿಸಿದ್ದುದÀನ್ನೂ ತೋರಿಸುತ್ತದೆ.
ಅಧ್ಯಾಯ 2
ಮಂದಿರ ಅಪವಿತ್ರೀಕರಣ: ಆದಿಯ ನಿದರ್ಶನಗಳು
ಉತ್ತರ ಭಾರತದಲ್ಲಿ ಪ್ರಪ್ರಥಮವಾಗಿ ಒಂದು ಸ್ವದೇಶೀ ಮುಸ್ಲಿಂ ರಾಜ್ಯ ಮತ್ತು ಸಮುದಾಯ ಸ್ಥಾಪಿಸಲ್ಪಟ್ಟಿರುವುದೆ 1192ನೆ ಇಸವಿಯಲ್ಲಿ. ಇದರ ಹಿಂದಿನ ಎರಡು ಶತಮಾನಗಳ ಕಾಲ ಪಾರಸಿ ತುರುಕರು ದಕ್ಷಿಣ ಏಷಿಯದ ಪ್ರಮುಖ ನಗರಗಳ ಮೇಲೆ ವ್ಯವಸ್ಥಿತ ದಾಳಿ ನಡೆಸುತ್ತಿದ್ದರು. ಅವರು ನಗರಗಳನ್ನು ಕೊಳ್ಳೆಹೊಡೆಯುತ್ತ, ದೇವಸ್ಥಾನಗಳನ್ನು ಸೂರೆಗೈಯುತ್ತ ಭಾರೀ ಪ್ರಮಾಣದ ಚರಾಸ್ತಿಗಳನ್ನು ಪೂರ್ವ ಅಫಘಾನಿಸ್ತಾನದಲ್ಲಿದ್ದ ತಮ್ಮ ಅಧಿಕಾರ ಕೇಂದ್ರಗಳಿಗೆ ಸಾಗಿಸಿದರು. ಇವೆಲ್ಲವೂ ಚೆನ್ನಾಗಿ ತಿಳಿದಿರುವಂತಹ ವಿಷಯಗಳು [8]. ಕ್ರಿ.ಶ. 986ನೆ ಇಸವಿಯಲ್ಲಿ ಘಜನಿಯ ಸುಲ್ತಾನ ಸಬುಕ್ತಿಗೀನ್ (ರಾಜ್ಯಭಾರ: 977-997) ಕಾಬುಲ್ ಮತ್ತು ವಾಯವ್ಯ ಪಂಜಾಬ್ ನಡುವಿನ ಪ್ರದೇಶದ ಮೇಲೆ ದಂಡೆತ್ತಿ ಹೋಗಿ ಅಲ್ಲಿನ ಹಿಂದೂ ಅರಸ ಶಾಹೀ ರಾಜಾನÀನ್ನು ಸೋಲಿಸಿದಂದಿನಿಂದ ಈ ನಮೂನೆ ಆರಂಭವಾಗಿದೆ. ಸುಲ್ತಾನನ ಮಗನ ಆಪ್ತ ಕಾರ್ಯದರ್ಶಿಯಾಗಿದ್ದ ಅಬೂ ನಜûರ್ ಉತ್ಬೀ ಹೇಳುವಂತೆ:
ಸಬುಕ್ತಿಗೀನನು ತನ್ನ ಸೇನೆಯೊಂದಿಗೆ ಕಾಬುಲ್‍ನ ಪೂರ್ವಕ್ಕಿದ್ದ ಭಾರೀ ಬಲಾಢ್ಯ ಹಾಗೂ ಸಂಪದ್ಭರಿತ ಲಮ್‍ಘಾನ್ ನಗರÀದತ್ತ ದೌಡಾಯಿಸಿದ. ಆ ನಗರವನ್ನು ಗೆದ್ದುಕೊಂಡು ಅದರ ಆಸುಪಾಸಿನಲ್ಲಿದ್ದ ಕಾಫಿರರ ವಸತಿಪ್ರದೇಶÀಗಳನ್ನು ಸುಟ್ಟುಹಾಕಿದ ಬಳಿಕ ವಿಗ್ರಹಾರಾಧನೆಯ ದೇವಾಲಯಗಳನ್ನು ಕೆಡವಿ ಅಲ್ಲಿ ಇಸ್ಲಾಮನ್ನು ಸ್ಥಾಪಿಸಿದ [9]. ಗೆಲುವಿನಿಂದ ಮತಾಂತರ ಸುಗಮವಾಯಿತು, ಮತಾಂತರದಿಂದ ಗೆಲುವಿಗೆ ನ್ಯಾಯಸಮ್ಮತತೆ ದಕ್ಕಿತು. ಹೀಗೆ ಮತಾಂತರವನ್ನು ಗೆಲುವಿನೊಂದಿಗೆ ಜೋಡಿಸಿದ ಉತ್ಬೀಯ ಈ ಸಂಕ್ಷಿಪ್ತ ಹೇಳಿಕೆ ಆಲಂಕಾರಿಕ ಪದಪ್ರಯೋಗಕ್ಕೆ ನಾಂದಿ ಹಾಡಿತು. ನಂತರದ ಅನೇಕ ಇಂಡೊ-ಮುಸ್ಲಿಂ ಇತಿಹಾಸಕಾರರೂ ಇದೇ ಮಾದರಿಯನ್ನು ಅನುಸರಿಸಿದರು. ಈಗಾಗಲೆ ಚರ್ಚಿಸಲಾಗಿರುವ 1455ನೆ ಇಸವಿಯ ಧಾರ್ ಶಿಲಾಶಾಸನ ಇದಕ್ಕೊಂದು ನಿದರ್ಶನ.
ಉತ್ಬೀಯ ಈ ಉದ್ದುದ್ದದ ಆಲಂಕಾರಿಕ ಧಾರ್ಮಿಕ ಮಾತುಗಳೇನೇ ಇರಲಿ, ಸಬುಕ್ತಿಗೀನ್ ಮತ್ತು ಅವನಿಗಿಂತ ಹೆಚ್ಚು ಪ್ರಸಿದ್ಧನಾದ ಅವನ ಮಗ ಘಜನಿ ಮಹಮೂದ್ ಕೈಗೊಂಡ ನಂತರದ ದಾಳಿಗಳು ಭೌತಿಕ ಕಾರಣಗಳಿಗಾಗಿ ನಡೆದಿರುವÀÀಂತೆ ಕಾಣುತ್ತದೆ. ಆದಿಯ ಘಜನಿ ಅರಸರ ನೆಲೆ ಅಫಘಾನಿಸ್ತಾನ ಆಗಿತ್ತು. ಹಾಗಾಗಿ ಅವರಿಗೆ ಭಾರತದಲ್ಲಿ ಖಾಯಂ ರಾಜ್ಯವೊಂದನ್ನು ಸ್ಥಾಪಿಸುವ ಉದ್ದೇಶವಿರಲಿಲ್ಲ. ಅವರೆಲ್ಲರಿಗೂ ಪಶ್ಚಿಮ ದಿಕ್ಕಿನಲ್ಲಿ ದೂರದಲ್ಲಿದ್ದ (ಪರ್ಷಿಯಾದ) ಖುರಾಸಾನ್‍ನಲ್ಲಿ ಇನ್ನಷ್ಟು ದೊಡ್ಡದಾದ ರಾಜಕೀಯ ಉದ್ದೇಶಗಳಿದ್ದವು [10]. ಇದಕ್ಕೆ ಅವಶ್ಯವಿದ್ದ ಸಂಪತ್ತಿನ ಸಂಗ್ರಹಣೆಗೋಸ್ಕರ ಅವರು ಭಾರತದ ನಗರಗಳನ್ನು ಹಾಗೂ ಆ ನಗರಗಳಲ್ಲಿದ್ದ ಅಪಾರ ಧನಕನಕಭರಿತ ಮಂದಿರಗಳನ್ನು ಕೊಳ್ಳೆಹೊಡೆದರು. ಈ ದಾಳಿಗಳಲ್ಲಿ ಕಾಣುವÀ ದರೋಡೆಯ ಗುಣ ಘಜನಿಯ ಅರಸರ ರಾಜಕೀಯ ಆರ್ಥಿಕತೆಯ ರಚನೆಯಲ್ಲಿ ಅಂತರ್ಗತವಾಗಿತ್ತು. ಅವರ ಬಳಿ ಒಂದು ವೃತ್ತಿಪರ, ಶಾಶ್ವತ ಸೈನ್ಯವಿತ್ತು. ಇದು ಅಶ್ವಾರೂಢ ಧನುರ್ಧಾರಿ ಸೈನಿಕರ ಶ್ರೇಷ್ಠ ತಂಡವೊಂದರÀ ಸುತ್ತ ರಚಿಸಲ್ಪಟ್ಟಿತ್ತು. ಭಾರತ ಹಾಗೂ ಇರಾನ್‍ನ ನಗರಗಳ ಮೇಲಿನ ವ್ಯವಸ್ಥಿತ ದಾಳಿಗಳಲ್ಲಿ ಕೊಳ್ಳೆಹೊಡೆದ ಸಂಪತ್ತಿನಿಂದ ಗುಲಾಮರನ್ನು ಖರೀದಿಸಿ, ಅವರನ್ನು ಸೈನ್ಯಕ್ಕೆ ಸೇರಿಸಿ, ಆಯುಧಗಳನ್ನು ಪೂರೈಸಿ, ಪಗಾರÀ ನೀಡಲಾಗುತ್ತಿತ್ತು. ಘಜನಿ ಮಹಮೂದ್ ಮುಸ್ಲಿಮರ ನಗರಗಳನ್ನು ಕೂಡ ಲೂಟಿ ಮಾಡಲು ಹಿಂಜರಿದಿರಲಿಲ್ಲ. ಆತ 1029ನೆ ಇಸವಿಯಲ್ಲಿ ಇರಾನ್‍ನ ರೇ ನಗರಕ್ಕೆ ದಾಳಿಯಿಟ್ಟು ಅಲ್ಲಿಂದ 5,00,000 ದಿನಾರ್ ಬೆಲೆಬಾಳುವ ಆಭರಣಗಳು, 2,60,000 ದಿನಾರ್ ನಾಣ್ಯಗಳು ಮತ್ತು 30,000 ದಿನಾರ್‍ಗೂ ಅಧಿಕ ಬೆಲೆಯ ಚಿನ್ನ, ಬೆಳ್ಳಿಯ ಪಾತ್ರೆಗಳನ್ನು ಸೂರೆಗೈದಿದ್ದ. ಆದರೆ ವಿರಳ ಜನಸಂಖ್ಯೆಯ ಇರಾನ್ ಪೀಠಭೂಮಿಗೆ ಹೋಲಿಸಿದರೆ ಭಾರತದಲ್ಲಿ ಅದಕ್ಕಿಂತಲೂ ಹಲವಾರು ಪಟ್ಟು ಅಧಿಕ ಸಂಪತ್ತು ಲಭ್ಯವಿತ್ತು. ಕೇವಲ ಸೋಮನಾಥ ಒಂದರಿಂದಲೇ 2,00,00,000 ದಿನಾರ್ ಬೆಲೆಬಾಳುವ ಕೊಳ್ಳೆ ದೊರೆತಿತ್ತು [11]. ಆದರೆ ಮಹಮೂದನ ಉತ್ತರಾಧಿಕಾರಿಗಳ ಕಾಲಕ್ಕಾಗುವಾಗ ಘಜನಿಯ ಸೈನ್ಯಗಳಿಗೆ ಮಾನವ ಸಂಪನ್ಮೂಲ ಒದಗಿಸುತ್ತಿದ್ದ ಆಕರಗಳು ಮೊದಲು ಸೆಲ್ಜುಕ್‍ರಿಂದಾಗಿ ನಂತರ ಘುರಿದ್‍ರಿಂದಾಗಿ ಕಡಿದುಹೋದವು. ತತ್ಪÀರಿಣಾಮವಾಗಿ 11ನೆ ಶತಮಾನದ ಮಧ್ಯಭಾಗದಿಂದ ಘಜನಿಯ ಅರಸರು ಹೆಚ್ಚೆಚ್ಚಾಗಿ ತಮ್ಮದೇ ಸಂಸ್ಥಾನಗಳಿಗೆ ಕೇಂದ್ರೀಕೃತಗೊಂಡರು. ಪೂರ್ವ ಅಫಘಾನಿಸ್ತಾನದÀಲ್ಲಿದ್ದ ರಾಜಧಾನಿ ಘಜನಿಯ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಪಂಜಾಬಿನ ಕೆಲವು ಪ್ರದೇಶಗಳು ಅವರ ಸಾಮ್ರಾಜ್ಯದ ಭಾಗವಾಗಿದ್ದವು. ಸಬುಕ್ತಿಗೀನ್ ಮತ್ತು ಮಹಮೂದರ ನಂತರದ ಘಜನಿ ಅರಸರೂ ಭಾರತಕ್ಕೆ ದಾಳಿಯಿಟ್ಟು ಲೂಟಿಗೈಯುವ ಹಳೆಯ ನೀತಿಯನ್ನು ಮುಂದುವರಿಸಿದ್ದರು. ಆದರೆ ಇವು ಅವರಿಬ್ಬರ ದಾಳಿಗಳಿಗಿಂತ ಹೆಚ್ಚು ವಿರಳವೂ ಕಮ್ಮಿ ವಿನಾಶಕಾರಿಯೂ ಆಗಿದ್ದಂತೆ ತೋರುತ್ತದೆ. 1033ರಲ್ಲಿ ಲಾಹೋರ್‍ನ ಘಜನಿ ರಾಜಪ್ರತಿನಿಧಿಯು ತುರುಕರ ಸೇನೆಯೊಂದಿಗೆ ಬನಾರಸ್ ಮೇಲೆ ನಡೆಸಿದ ಪ್ರಪ್ರಥಮ ದಾಳಿಯನ್ನು ಸಮಕಾಲೀನ ಇತಿಹಾಸಕಾರ ಬೇಹಾಕಿ ಹೀಗೆ ದಾಖಲಿಸಿದ್ದಾನೆ: ‘ಆತ ತನ್ನ ಯೋಧರೊಂದಿಗೆ ಮತ್ತು ಲಾಹೋರ್‍ನ ಸೇನೆಯೊಂದಿಗೆ ಹೊರಟು ಠಾಕುರರಿಂದ ಧಾರಾಳ ಕಪ್ಪವನ್ನು ಪಡೆದುಕೊಂಡ. ನಂತರ ಗಂಗಾ ನದಿಯನ್ನು ದಾಟಿ ಅದರ ಎಡದಂಡೆಯ ದಕ್ಷಿಣಕ್ಕೆ ಸಾಗಿದ. ಆಗ ಅನಿರೀಕ್ಷಿತವಾಗಿ ಆತನಿಗೆ ಬನಾರಸ್ (ಕಾಶಿ) ಹೆಸರಿನ ನಗರವೊಂದು ಎದುರಾಯಿತು. ಅದು ಗಂಗರ ಸಾಮ್ರಾಜ್ಯಕ್ಕೆ ಸೇರಿತ್ತು. ಮುಸ್ಲಿಂ ಸೇನೆಯೊಂದು ಇದುವರೆಗೆ ಈ ಜಾಗಕ್ಕೆ ಬಂದಿರಲಿಲ್ಲ…. ಜವಳಿ, ಸುಗಂಧದ್ರವ್ಯ ಮತ್ತು ಆಭರಣಗಳ ಮಾರುಕಟ್ಟೆಗಳನ್ನು ಕೊಳ್ಳೆಹೊಡೆಯಲಾಯಿತಾದರೂ ಇದಕ್ಕಿಂತ ಹೆಚ್ಚಿನದೇನೂ ಸಾಧ್ಯವಿರಲಿಲ್ಲ. ಚಿನ್ನ, ಬೆಳ್ಳಿ, ಸುಗಂಧದ್ರವ್ಯ ಮತ್ತು ಆಭರಣಗಳನ್ನು ಪಡೆದುಕೊಂಡ ಸೈನಿಕರು ಶ್ರೀಮಂತರಾಗಿ ಸುರಕ್ಷಿತವಾಗಿ ಮರಳಿದರು.’ [12].
12ನೆ ಶತಮಾನದ ಅಂತ್ಯದಲ್ಲಿ ತಾಜಿಕ್ (ಪೂರ್ವ ಇರಾನ್) ಮೂಲದ ಒಂದು ಅರಸುಮನೆತನವಾಗಿದ್ದ ಘುರಿದ್‍ರು ಅಫಘಾನಿಸ್ತಾನದ ಕೇಂದ್ರ ಭಾಗÀದಿಂದ ಭಾರತಕ್ಕೆ ಬಂದಿಳಿದಾಗ ಉತ್ತರ ಭಾರತದ ರಾಜಕಾರಣದ ಚಲನಶೀಲತೆಯಲ್ಲಿ ಹಠಾತ್ತಾದ ಬದಲಾವಣೆಗಳಾದವು. ಘುರಿದ್‍ರು ಹಾಗೂ ಅವರ ತುರುಕ ಗುಲಾಮ ಸೇನಾಧಿಪತಿಗಳು ವಿದೇಶೀ ನೆಲೆಯ ಘಜನಿ ಅರಸರನ್ನು ಕಿತ್ತೊಗೆದು ಗಂಗಾ ನದಿ ಬಯಲಿನ ಮಧ್ಯದಲ್ಲಿ ಒಂದು ತೀರಾ ವಿಭಿನ್ನ ಹಾಗೂ ನೂತನ ರಾಜ್ಯವನ್ನು ಸ್ಥಾಪಿಸಿದರು. ಭಾರತದಲ್ಲಿ ದೆಹಲಿ ಸುಲ್ತಾನಶಾಹಿ (1206-1526) ನೆಲೆಯೂರಿದ ಬಗೆ ಇದು. ಇದು ಉತ್ತರ ಭಾರತದಲ್ಲಿ ಒಂದು ಸ್ವದೇಶೀ ಮುಸ್ಲಿಂ ರಾಜ್ಯ ಹಾಗೂ ಸಮಾಜವನ್ನು ನಿರ್ಮಿಸುವÀ ಪ್ರಥಮ ಪ್ರಯತ್ನ. ಮುಂದೆ ತಮ್ಮ ಸಾಮ್ರಾಜ್ಯವನ್ನು ಗಂಗಾ ನದಿ ಬಯಲಿನಿಂದ ಇಡೀ ಉತ್ತರ ಭಾರತಕ್ಕೆ ವಿಸ್ತರಿಸುವ ಮಹತ್ವಾಕಾಂಕ್ಷೆ ಅವರದಾಗಿತ್ತು. ಈ ಯೋಜನೆಯ ಧಾರ್ಮಿಕ ನೀತಿಯಲ್ಲಿ ಎರಡು ಮುಖ್ಯ ಅಂಶಗಳನ್ನು ಗುರುತಿಸಬಹುದು:
(ಅ) ಭಾರತವನ್ನು ನೆಲೆಯಾಗಿಸಿದ ಸೂಫಿ ಪಂಥವೊಂದಕ್ಕೆ ಪ್ರಭುತ್ವದ ಆಶ್ರಯ.
(ಆ) ಆಯ್ದ ದೇವಾಲಯಗಳ ಪಾವಿತ್ರ್ಯನಾಶÀ. ಹಿಂದಿನಂತೆ ಇದರ ಉದ್ದೇಶ ದೂರದ ಇರಾನ್ ಪೀಠಭೂಮಿಯಲ್ಲಿ ಯುದ್ಧ ಕಾರ್ಯಾಚರಣೆಗಳಿಗೆ ಬೇಕಿದ್ದ ಸಂಪನ್ಮೂಲ ಒದಗಿಸುವುದಾಗಿರಲಿಲ್ಲ. ಬದಲಿಗೆ ಭಾರತೀಯ ರಾಜಮನೆತನಗಳನ್ನು ಸೋಲಿಸಿದ ಸಂದರ್ಭಗಳಲ್ಲಿ ಅವುಗಳನ್ನು ನಿರ್ನಾಮಗೊಳಿಸಿ ಅವುಗಳ ನ್ಯಾಯಸಮ್ಮತತೆಯನ್ನು ಇಲ್ಲವಾಗಿಸುವುದೆ ಇದರ ಉದ್ದೇಶವಾಗಿತ್ತು. ಈ ಎರಡು ಅಂಶಗಳನ್ನು ಒಂದೊಂದಾಗಿ ಎತ್ತಿಕೊಳ್ಳೋಣ.

Leave a Reply

Your email address will not be published.