ಬಿಪಿಎಲ್ ಮಂದಿಗೂ ಕೈಗೆಟುಕುವಂತಹ ಬೂತಗಳು

-ದಿನೇಶ್ ಅಮಿನ್ ಮಟ್ಟು

FB_IMG_1493870406902

ನಾನು  ಮಟ್ಟುವಿಗೆ ಕಾಲಿಟ್ಟ ದಿನದಿಂದ ನಮ್ಮೂರ ದೈವಗಳಾದ ಕೊರ್ದಬ್ಬು-ತನಿಮಾನಿಗಾ ಮತ್ತು ಜುಮಾದಿ.-ಬಂಟರ ಜತೆ ನನಗೆ ಸಂಬಂಧ ಇದೆ. ಅವರನ್ನು ದೈವಗಳಿಗಿಂತ ಹೆಚ್ಚಾಗಿ ಮನೆ ಹಿರಿಯರಂತೆ ಗೌರವಿಸುತ್ತಾ  ಬಂದವನು ನಾನು. ತಮ್ಮ ಕಷ್ಟಗಳನ್ನು ಹೇಳಿಕೊಂಡು ಬಂದವರ ಪಾಲಿಗೆ ಈ ಭೂತಗಳು ವೈದ್ಯರಾಗುತ್ತಾರೆ, ನ್ಯಾಯಾಧೀಶರಾಗುತ್ತಾರೆ, ತಂದೆ-ತಾಯಿ,ಅಣ್ಣ-ಅಕ್ಕ ಆಗುತ್ತಾರೆ. ಅದು ನೀಡುವ ಒಂದೆಲೆ ಕರಿಗಂಧದಿಂದ ಎಲ್ಲವೂ ಪರಿಹಾರ. ಸಣ್ಣವನಿದ್ದಾಗ ಈ ಭೂತಗಳು ನೀಡುವ ಭರವಸೆಗಳನ್ನು ನೋಟ್ ಬುಕ್ ನಲ್ಲಿ ಬರೆದಿಡುತ್ತಿದ್ದೆ. ಅವುಗಳಲ್ಲಿ ೯೦ ಭಾಗ ನಿಜವಾಗುತ್ತಿತ್ತು. ಊರು ಬಿಟ್ಟು ಹೋದ ಮಗ ವಾಪಾಸು ಬಂದಿರುತ್ತಾನೆ, ಜಗಳಮಾಡಿ. ಅನ್ನ-ನೀರು ಬಿಟ್ಟ ಕುಟುಂಬದ ಸದಸ್ಯರು ಒಂದಾಗುತ್ತಾರೆ, ಗಂಡ-ಹೆಂಡತಿ ಜಗಳ ಬಗೆಹರಿದಿರುತ್ತದೆ. ಇನ್ನೂ ಏನೇನೊ…

 

ಭೂತಗಳ ಕುಣಿತ ಕಣ್ಣಿಗೆ ಹಬ್ಬವಾದರೆ, ಆಡುವ ಮಾತುಗಳಲ್ಲಿನ ನುಡಿಗಟ್ಟು ಕೇಳಲು ಚಂದ.

FB_IMG_1493870390646

FB_IMG_1493870398651

 

 

 

 

 

 

 

 

ಭೂತಗಳೆಲ್ಲ ಒಂದುಕಾಲದ ಸಾಮಾಜಿಕ ಹೋರಾಟಗಾರರು. ಕಾಲದ ಪಟ್ಟಭದ್ರರ ಸಂಚಿಗೆ ಬಲಿಯಾದವರು. ಅವರ ನೆನಪು ಅಳಿದು ಹೋಗದಂತೆ ಅವರನ್ನು ಪ್ರೀತಿಸುತ್ತಿದ್ದ ಜನ ಪಾಡ್ದನ ಎಂಬ ಮೌಖಿಕ ಕಾವ್ಯದ ಮೂಲಕ ಜೀವಂತವಾಗಿಟ್ಟಿದ್ದಾರೆ.
ನಡುವೆ ಬಹಳಷ್ಟು ವರ್ಷ ನಮ್ಮೂರಿನ ಕೋಲಕ್ಕೆ  ಹೋಗಲು ಆಗಿರಲಿಲ್ಲ. ಕಳೆದ ಮೂರುವರ್ಷಗಳಿಂದ ತಪ್ಪದೆ ಹೋಗುತ್ತಿದ್ದೇನೆ ಒಂದು ರಾತ್ರಿ,ಒಂದು ಹಗಲು ನಿದ್ದೆ ಬಿಟ್ಟು ಕೋಲ ನೋಡುತ್ತೇನೆ.

ಎರಡನೇ ದಿನ ಸಂಜೆ. ಜುಮಾದಿಬಂಟ ನದಿಬದಿಯಲ್ಲಿನ ಗಡಿಗೆ ಬಂದು  ಹಿಂದಿರುಗುವಾಗ ನಮ್ಮ ಮನೆಯವರು ನೀಡುವ ಹಾಲುಕುಡಿದು ಹೋಗುತ್ತಾರೆ. ತಂದೆಯ ಸಾವಿನ ನಂತರ ನನ್ನಣ್ಣ ಹಾಲು ಕೊಡುತ್ತಿದ್ದರು. ಮೊನ್ನೆ.ಅವರಗೈರು ಹಾಜರಿಯಲ್ಲಿ ನಾನು ಹಾಲುಕೊಟ್ಟೆಬಹಳ ಜಬದರ್ಸಾಗಿ ಜುಮಾದಿ ಆಶೀರ್ವಾದ ಕೊಟ್ಟಿದೆ. ಹಿಂದಿನ ದಿನ ಕೋರ್ದಬ್ಬುಕೂಡಾ ಅಭಯ ನೀಡಿ ಬೆಂಗಾವಲಾಗಿ ನಿಂತು ಕಾಪಾಡುವುದಾಗಿ ಹೇಳಿದ್ದಾನೆ. ಕೊನೆಗೂ ನನಗೆ,ದೈವಬಲ ಒದಗಿಬಂತಲ್ಲಾ ಎಂದು ಖುಷಿ. ನಿಮಗೆ.ಕಷ್ಟಗಳಿದ್ದರೆ ಮುಂದಿನವರ್ಷ ನಮ್ಮೂರಿಗೆ ಬನ್ನಿ, ನಮ್ಮ ದೈವಗಳು ಧರ್ಮಸ್ಥಳ, ಕೊಲ್ಲೂರು, ಕಟೀಲುಗಳಷ್ಟು ದುಬಾರಿಯಲ್ಲ. ಬಿಪಿಎಲ್  ಮಂದಿಗೂ ಕೈಗೆಟುಕುವಂತಹದ್ದು. ಬನ್ನಿ

Leave a Reply

Your email address will not be published.