ಬಾಜಪ ಮತ್ತು ಕಾಂಗ್ರೇಸ್ ತದ್ರೂಪಿಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

ಬದಲಾದ ಸನ್ನಿವೇಶಗಳಿಗೆ ತಕ್ಕಂತೆ ನಮ್ಮ ಎರಡೂ ರಾಷ್ಟ್ರೀಯ ಪಕ್ಷಗಳ ಪಾತ್ರನಿರ್ವಹಣೆ ಒಂದೇ ದಿಕ್ಕಿನಲ್ಲಿ ನಡೆಯುತ್ತಿರುವಂತೆ ಕಾಣುತ್ತಿದೆ. ಮೊನ್ನೆ ನಡೆದ ಗುಜರಾತ್ ಚುನಾವಣೆಗಳ ಪ್ರಚಾರ ವೈಖರಿಯನ್ನು ಮತ್ತು ಮುಂದಿನ ತಿಂಗಳುಗಳಲ್ಲಿ ನಡೆಯಲಿರುವ ಕನರ್ಾಟಕ ರಾಜ್ಯದ ವಿದಾನಸಭೆಗಳಿಗೆ ನಡೆಯುತ್ತಿರುವ ತಯಾರಿಗಳನ್ನು ಸೂಕ್ಷ್ಮವಾಗಿ ನೋಡಿದರೆ ಈ ಎರಡು ಪಕ್ಷಗಳೊಳಗೆ ನಡೆಯುತ್ತಿರುವ ಬದಲಾವಣೆಗಳನ್ನು  ಅರ್ಥಮಾಡಿಕೊಳ್ಳಬಹುದಾಗಿದೆ.   ಕಾಂಗ್ರೇಸ್ ಪಕ್ಷ ಬಾಜಪದ ಮತ್ತೊಂದು ರೂಪವಾಗಿ, ಬಾಜಪ ಕಾಂಗ್ರೇಸ್ಸಿನ ಮತ್ತೊಂದು ರೂಪವಾಗಿ ಹೊರಹೊಮ್ಮುತ್ತಿರುವ ಈ ಬದಲಾವಣೆ ಪ್ರಾರಂಭವಾಗಿದ್ದು ಬಹುಶ: 2017ರ ಹಲವು ರಾಜ್ಯಗಳ ಚುನಾವಣಾ ಪಲಿತಾಂಶಗಳು ಹೊರಬಿದ್ದನಂತರವೇ. ಅದನ್ನು ಹೀಗೆ ನೋಡಬಹುದು.

ಗುಜರಾತ್ ವಿದಾನಸಭಾ ಚುನಾವಣೆಗಳ ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ ಬಾಜಪಕ್ಕೆ ತನ್ನ ಗೆಲುವು ಕಷ್ಟವೆಂಬುದು ಅರ್ಥವಾಗತೊಡಗಿತ್ತು. ಆಗ  ಅದಕ್ಕೆ ತನ್ನ ಹಿಂದುತ್ವದ ಮಂತ್ರವನ್ನು, ದೇಶಭಕ್ತಿ-ದೇಶದ್ರೋಹದ ಆಯುಧಗಳನ್ನು ಝಳಪಿಸಲೇ ಬೇಕಾದ ಅನಿವಾರ್ಯತೆ ಬಂದೊದಗಿತು. ಇದರ ಪರಿಣಾಮವಾಗಿ ಮೊದಲ ಹಂತದ ಪ್ರಚಾರದಲ್ಲಿ ‘ಸಭ್ ಕಾ ವಿಕಾಸ್-ಸಭ್ ಕಾ ಸಾಥ್’ ಬಗ್ಗೆ, ಅಭಿವೃದ್ದಿಯ ಬಗ್ಗೆ, ಇಂಡಿಯಾವನ್ನು ವಿಶ್ವ ಗುರುವನ್ನಾಗಿ ಮಾಡುವ ಬಗ್ಗೆ ಮಾತಾಡುತ್ತಿದ್ದ ನಮ್ಮ ಪ್ರದಾನಮಂತ್ರಿಯವರು  ಜ್ಞಾನೋದಯವಾದವರಂತೆ ಬಾಜಪವನ್ನು ಸೋಲಿಸಲು ಕಾಂಗ್ರೇಸ್ ಪಾಕಿಸ್ತಾನದ ಜೊತೆ ಸಂಚುನಡೆಸುತ್ತಿದೆ ಎನ್ನುವಂತಹ ಆರೋಪಗಳನ್ನು ಮಾಡುತ್ತ, ಧರ್ಮಾಧಾರಿತ ವಿಷಯಗಳನ್ನು  ಪ್ರಸ್ತಾಪಿಸತೊಡಗಿದರು. ಇದೇ ಸಮಯದಲ್ಲಿ ಮಣಿಶಂಕರ್ ಅಯ್ಯರ್ ಕಾಂಗ್ರೇಸ್ಸಿನ ಅವಿವೇಕಿ ನಾಯಕನ ನೀಚ ಎಂಬ ಹೇಳಿಕೆ  ಮೋದಿಯವರಿಗೆ ಅನಿರೀಕ್ಷಿತವಾದ  ಜಾತಿಯ ಶಸ್ತ್ರವೊಂದನ್ನು ನೀಡಿತು.

ತಾನು ನೀಚ ಜಾತಿಯವನೆಂಬ ಕಾರಣಕ್ಕೆ ಕಾಂಗ್ರೇಸ್ ತನ್ನನ್ನು ವಿರೋಧಿಸುತ್ತಿದೆ ಎಂದು ಬಹಿರಂ ಗ ಸಭೆಗಳಲ್ಲಿ ಬಾವುಕರಾಗಿ ಹೆಳುತ್ತ ಗುಜರಾತಿನ ಹಿಂದುಳಿದ ವರ್ಗಗಳ ಮತ ಸೆಳೆಯುವಲ್ಲಿ ಸಫಲರಾದರು. ಇದನ್ನು ಅರ್ಥ ಮಾಡಿಕೊಂಡಂತೆ ಕಾಂಗ್ರೇಸ್ಸಿನ ನಾಯಕರಾದ ರಾಹುಲ್ ಗಾಂದಿಯವರು ತಾವು ಹಿಂದೂ ವಿರೋದಿ ಅಲ್ಲವೆಂದು ತೋರಿಸಿಕೊಳ್ಳಲು ಗುಜರಾತಿನ ಇದ್ದಬದ್ದ ದೇವಾಲಯಗಳನ್ನು ಸುತ್ತ ತೊಡಗಿದರು. ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರಗಳನ್ನು ನಿರ್ಲಕ್ಷಿಸಿದಂತೆ ಒಂದೊಂದೇ ದೇವಸ್ಥಾನಗಳಿಗೆ ಬೇಟಿ ನೀಡುತ್ತಾ ತಾನು ಸಹ ಹಿಂದು, ಎಂದು ತನ್ನ ಜನಿವಾರ ತೋರಿಸುತ್ತ, ತಾನು ಶಿವಭಕ್ತ  ಎಂದೆಲ್ಲಾ ಹೇಳಿ ಬಹುಸಂಖ್ಯಾತ ಹಿಂದೂಗಳ ಓಲೈಕೆಯಲ್ಲಿ ತೊಡಗಿಸಿಕೊಂಡರು. ಅಲ್ಲಿಗೆ ಗುಜರಾತಿನ ಮಟ್ಟಿಗೆ ಬಾಜಪದ ಉಗ್ರ ಹಿಂದುತ್ವಕ್ಕೆ ಕಾಂಗ್ರೇಸ್ ತನ್ನ ಸೌಮ್ಯ ಹಿಂದುತ್ವದ ಮೂಲಕ  ಸವಾಲುಎಸೆಯುವಲ್ಲಿ  ನಿರತವಾಯಿತು. ಅಂತಿಮವಾಗಿ ಪಲಿತಾಂಶಗಳು ಬಂದಾಗ  ಬಾಜಪ ತಿಣುಕಾಡಿ ಗೆಲುವಿನ ದಡ ಸೇರಿತ್ತು.

   ಅಲ್ಲಿಗೆ ಕಾಂಗ್ರೇಸ್ ನಾಯಕರುಗಳಿಗೆ ಒಂದುಅಂಶ ಅರ್ಥವಾಗಿತ್ತು, ಅದೆಂದರೆ ಬಾಜಪದ ಹಿಂದುತ್ವಕ್ಕೆ ತನ್ನ ಜಾತ್ಯಾತಿತೆಯಮಂತ್ರ ಸಾಟಿಯಾಗಲಾರದೆಂದು.ಹಾಗಾಗಿಯೇ ಕಾಂಗ್ರೆಸ್ ಮೃಧು ಹಿಂದುತ್ವದ  ಹಿಂದೆ ಬಿದ್ದಿದೆ. ಇದಕ್ಕೆ ಪೂರಕವಾಗಿ ಮೊನ್ನೆ ರಾಹುಲ್ ಗಾಂದಿಯವರು ತಮ್ಮ ಸ್ವಕ್ಷೇತ್ರವಾದ ಉತ್ತರಪ್ರದೇಶದ  ಅಮೇಥಿಗೆ ಬೇಟಿ ನೀಡಿದಾಗ ಮಾಡಿದ ಮೊದಲ ಕೆಲಸವೆಂದರೆ ಹನುಮಾನ್ ದೇವಾಲಯಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದ್ದು. ಬಹುಶ;  ಇದೇ ಮೊದಲಬಾರಿಗೆ ರಾಹುಲ್ ಗಾಂದಿಯವರುತಮ್ಮ ಕ್ಷೇತ್ರಕ್ಕೆ ಬೇಟಿ ನೀಡಿದಾಗ ದೇವಾಲಯವೊಂದಕ್ಕೆ ಬೇಟಿನೀಡಿ ಪೂಜೆ ಸಲ್ಲಿಸಿದ್ದು! ವಿಶೇಷವೆಂದರೆ ತಮ್ಮ ಸ್ವಕ್ಷೇತ್ರ ಬೇಟಿಗೆಮಕರ ಸಂಕ್ರಾಂತಿಯ ಆಸುಪಾಸಿನ ದಿನಗಳನ್ನು ಆಯ್ಕೆ ಮಾಡಿಕೊಂಡ ರಾಹುಲ್ ಗಾಂದಿ  ಮತ್ತೊಂದು ದೇವಸ್ಥಾನದಲ್ಲಿ ನಡೆಯುತ್ತಿದ್ದ ಹೊಮಹವನವೊಂದರಲ್ಲಿ ಬಾಗವಹಿಸಿ ಬ್ರಾಹ್ಮಣರಿಗೆ ನೀಡಲಾಗುವ ಕಿಚಡಿ ರೂಪದ ಅನ್ನದಾನದಲ್ಲಿ ಬಾಗವಹಿಸಿದರು. ರಾಹುಲ್ ಗಾಂದಿಯವರ  ಬದಲಾದ ಈ ನಡವಳಿಕೆಯನ್ನುತೀರಾ ಖಾಸಗಿ ಎಂದು ತಳ್ಳಿ ಹಾಕಲು ಸಾದ್ಯವಿಲ್ಲ. ಯಾಕೆಂದರೆ ಕಾಂಗ್ರೇಸ್ಸಿನ ರಾಷ್ಟ್ರೀಯ ಅದ್ಯಕ್ಷರಾದ ಅವರ ಈ ಬದಲಾವಣೆಯ ಹಿಂದೆ ನಿಶ್ಚಿತವಾಗಿಯು ಅವರ ಪಕ್ಷದ ರಾಜಕೀಯ ನಿಲುವಿನಲ್ಲಾಗಬಹುದಾದ ಅಲ್ಪಮಟ್ಟಿಗಿನ ಬದಲಾವಣೆಯೂ ಥಳುಕುಹಾಕಿಕೊಂಡಿರುವಂತೆ ಕಾಣುತ್ತಿದೆ.

ಕಾಂಗ್ರೆಸ್ಸಿನ ಈ ಮೃಧುಹಿಂದುತ್ವದ ಬದಲಾವಣೆಯ ಒಂದಿಷ್ಟು ಪರಿಣಾಮಗಳನ್ನು ಕನರ್ಾಟಕದಲ್ಲಿಯೂ ನಾವು ಕಾಣಬಹುದಾಗಿದೆ.  ಕರ್ನಾಟಕದಲ್ಲಿಈಗಾಗಲೇ ಎಲ್ಲಾ ಪಕ್ಷಗಳು ವಿವಿಧ ಹೆಸರಿನ ಯಾತ್ರೆಗಳ ಮೂಲಕ ಚುನಾವಣಾ ಪ್ರಚಾರವನ್ನು ಪ್ರಾರಂಬಿಸಿವೆ. ರಾಜ್ಯದ ಅಬಿವೃದ್ದಿಯ ವಿಚಾರವನ್ನಾಗಲಿ, ಕೃಷಿಸಮಸ್ಯೆಗಳನ್ನಾಗಲಿ, ನಿರುದ್ಯೋಗ ಸಮಸ್ಯೆಯನ್ನಾಗಲಿ ಮುಂಚೂಣಿಗೆ ತಂದು ಚಚರ್ಿಸಲು ಇಚ್ಚಿಸದ ಪಕ್ಷಗಳು  ಜಾತಿ, ಧರ್ಮದಂತಹ ಬಾವನಾತ್ಮಕ ವಿಚಾರಗಳ ಬಗ್ಗೆಆರೋಪಪ್ರತ್ಯಾರೋಪ ಮಡುತ್ತಕಾಲಹರಣ ಮಾಡುತ್ತಿವೆ. ಬಾಜಪದಹಿಂದುತ್ವದ ಪ್ರಚಾರಕ್ಕೆ ಉತ್ತರವಾಗಿ ಕಾಂಗ್ರೇಸ್ ಸಹ  ತನ್ನ ಹಿಂದುತ್ವದ ಪರವಾದ ನಿಲುವುಗಳನ್ನು ಸಾರ್ವಜನಿಕವಾಗಿ ಹೇಳುತ್ತ ಹೋಗುತ್ತಿದೆ. ಇದಕ್ಕೆ ಉದಾಹರಣೆಯೆಂದರೆ ಬಾಜಪದ ಹಿಂದುತ್ವದ ಮಾತಿಗೆಉತ್ತರ ನೀಡುವ  ಭರದಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ತಾವುನಿಜವಾದ ಹಿಂದು, ತಾವು ದೇವಸ್ಥಾನಗಳ ವಿರೋಧಿಯಲ್ಲ.ಎನ್ನುತ್ತಾ ತಾವು ಬಹುಸಂಖ್ಯಾತರ ವಿರೋದಿಯಲ್ಲ ಎನ್ನುವುದನ್ನು ಸಾಬೀತು ಪಡಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿಯೇ ಇವತ್ತು ರಾಜ್ಯ ಕಾಂಗ್ರೇಸ್ಸಿನ ಹಲವಾರು ನಾಯಕರುಗಳು ತಾವು ಸಹ ಹಿಂದೂಗಳೇ ಎಂದು ಹೇಳುತ್ತ ಹೋಗುತ್ತಿದ್ದಾರೆ.ಇದರ ಜೊತೆಗೆ ಇತ್ತೀಚೆಗೆ ರಾಹುಲ್ ಗಾಂದಿಯವರು ಬಾಜಪದ ಟೀಕೆಗಳಿಗೆ ಉತ್ತರ ನೀಡಬೇಕಾದರೆ ಬಹಳ ಎಚ್ಚರಿಕೆಯಿಂದಉತ್ತರ ನೀಡಬೇಕೆಂದುರಾಜ್ಯ ಕಾಂಗ್ರೇಸ್ ನಾಯಕರುಗಳಿಗೆ ಸೂಚನೆ ನೀಡಿರುವುದರ ಹಿಂದಿರುವುದು ಹಿಂದುತ್ವದ ವಿಚಾರದಲ್ಲಿ ಕಾಂಗ್ರೇಸ್  ವಿವಾದಾಸ್ಪದಕ ಹೇಳಿಕೆಗಳನ್ನು ನೀಡಬಾರದೆಂಬ ಎಚ್ಚರಿಕೆಯೇ ಹೊರತು ಬೇರೇನಲ್ಲ.

ಒಟ್ಟಿನಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳೂ ಹಿಂದುತ್ವದ ಬಗ್ಗೆ ಮಾತನಾಡುತ್ತ ಜನಪರ ಸಮಸ್ಯೆಗಳನ್ನು ಕಡೆಗಣಿಸುತ್ತಿವೆ. ಆದರೆ  ಈ ಎರಡೂ ಪಕ್ಷಗಳ ಹಿಂದುತ್ವದ ಅಜೆಂಡಾದಲ್ಲಿ ಒಂದು ಸ್ಪಷ್ಟವಾದ ವ್ಯತ್ಯಾಸ ಕಂಡುಬರುತ್ತಿದೆ. ಬಾಜಪ  ತನ್ನ ಹಿಂದುತ್ವದ ಪ್ರತಿಪಾದನೆಯಲ್ಲಿ ಅಲ್ಪಸಂಖ್ಯಾತವಿರೋಧಿ ಎನ್ನುವ ಹಣೆ ಪಟ್ಟಿಗೆ ಒಳಗಾಗಿದ್ದರೆ ಕಾಂಗ್ರೇಸ್ ಸರ್ವಧರ್ಮಗಳನ್ನು  ಒಳಗೊಂಡಿರುವ ಉದಾರ ಹಿಂದುತ್ವದ ಪ್ರತಿಪಾದನೆ ಮಾಡುತ್ತಿರುವಂತೆ  ತೋರಿಸಿಕೊಳ್ಳುತ್ತಿದೆ. ಇದು ಕಾಂಗ್ರೇಸ್ ಸಹ ಇನ್ನೊಂದು ಬಾಜಪ ಆಗುವ ಹಾದಿಯಲ್ಲಿರುವಂತೆ ನಡೆದುಕೊಳ್ಳುವ ರೀತಿ.

ಇದೇ ರೀತಿ ಬಾಜಪ ಸಹ ಮತ್ತೊಂದು ಕಾಂಗ್ರೇಸ್ ಆಗುವ ಹಾದಿಯಲ್ಲಿ ನಡೆಯುತ್ತಿರುವುದನ್ನು ನಾವು ನೋಡಬಹುದಾಗಿದೆ. ಬಹುಶ: 2013ರ ಹೊತ್ತಿಗೆ  ನರೇಂದ್ರಮೋದಿಯವರನ್ನು ಪ್ರದಾನಿ ಅಭ್ಯರ್ಥಿಯನ್ನಾಗಿ ಘೋಷಿಸುವ ತನಕವೂ ಬಾಜಪ ತಾನು ಕಾಂಗ್ರೇಸ್ಸಿಗಿಂತ ಭಿನ್ನಪಕ್ಷವೆಂದು ಹೇಳಿಕೊಳ್ಳುತ್ತಿತ್ತು ಮತ್ತು ಕೆಲ ಮಟ್ಟಿಗೆ ಹಾಗೆ ನಡೆದುಕೊಳ್ಳಲು ಪ್ರಯತ್ನಿಸುತ್ತಿತ್ತು. ಕಾಂಗ್ರೇಸ್ಸಿನ ಕುಟುಂಬ ರಾಜಕಾರಣವನ್ನು ತೀವ್ರವಾಗಿವಿರೋದಿಸುತ್ತಿದ್ದ ಬಾಜಪ, ಅದರ ಜೊತೆಗೇನೆ ಕಾಂಗ್ರೇಸ್ಸಿನ ದೆಹಲಿಯ ಹೈಕಮ್ಯಾಂಡ್ ಸಂಸ್ಕೃತಿಯನ್ನೂ ಕಟುವಾದ ಶಬ್ದಗಳಲ್ಲಿ  ಖಂಡಿಸುತ್ತ ಪ್ರಾದೇಶಿಕ ನಾಯಕತ್ವದ ಬಗ್ಗೆ, ಸಾಮೂಹಿಕ ಹೊಣೆಗಾರಿಕೆಯ ಬಗ್ಗೆ ಉದ್ದಾನುಉದ್ದದ ಬಾಷಣಗಳನ್ನು ಬಿಗಿಯುತ್ತಿತ್ತು.

ಆದರೆ ನರೇಂದ್ರಮೋದಿಯವರು ಪ್ರದಾನಮಂತ್ರಿಯಾಗುವುದರೊಂದಿಗೆ ಬಾಜಪದ ಸಾಮೂಹಿಕ ನಾಯಕತ್ವದ ಮಾತುಗಳು ಕಣ್ಮರೆಯಾಗತೊಡಗಿದವು. ಬದಲಿಗೆ ಇಡೀ ಪಕ್ಷದ ಆಗುಹೋಗುಗಳು ನರೇಂದ್ರ ಮೊದಿಯವರು ಮತ್ತು ಪಕ್ಷದ ರಾಷ್ಟ್ರಾದ್ಯಕ್ಷರಾದ ಅಮಿತ್ ಷಾರವರ ನಿರ್ದೇಶನದಂತೆ ನಡೆಯ ತೊಡಗಿದವು. ಹಿರಿಯ ನಾಯಕರುಗಳನ್ನುಬದಿಗೆಸರಿಸುತ್ತ ಬಂದ ಈ ಜೋಡಿ ನಂತರದಲ್ಲಿ ಪಕ್ಷದೆಲ್ಲಾ ನಿದರ್ಾರಗಳನ್ನೂ ಏಕಪಕ್ಷೀಯವಾಗಿತೆಗೆದುಕೊಳ್ಳತೊಡಗಿತು. ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ  ವಿದಾನಸಭಾ ಚುನಾವಣೆಗಳನ್ನು ಗೆದ್ದ ನಂತರ ಅದು ಅಲ್ಲಿನ ಬಹುತೇಕ ಹಿರಿಯ ನಾಯಕರುಗಳನ್ನು ಕಡೆಗಣಿಸಿ ತಮ್ಮ  ತಾಳಕ್ಕೆತಕ್ಕಂತೆ ಕುಣಿಯುವ ಹೊಸ ನಾಯಕರುಗಳನ್ನುಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸುವಲ್ಲಿ ಸಫಲವಾಯಿತು. ಅದೇ ರೀತಿ ಉತ್ತರಪ್ರದೇಶದ ಚುನಾವಣೆಯಲ್ಲಿ ಬಾರೀ ಬಹುಮತ ಪಡೆದಾಗಲೂ ಮೊದಿ-ಷಾ ಜೋಡಿಎಲ್ಲರಿಗೂ ಅಚ್ಚರಿ ನೀಡುವ ರೀತಿಯಲ್ಲಿಸಂಸದರಾಗಿದ್ದ  ಯೋಗಿ ಆಧಿತ್ಯನಾಥ್ ಅವರನ್ನು  ಮುಖ್ಯಮಂತ್ರಿಯನ್ನಾಗಿ ಮಾಡಿ  ಉತ್ತರಪ್ರದೇಶದ ಶಾಸಕರುಗಳ ಅಭಿಪ್ರಾಯಗಳನ್ನು ನಿರ್ಲಕ್ಷಿಸಿತು.

ಇನ್ನು ಇವತ್ತಿನ ಕನರ್ಾಟಕದ ಚುನಾವಣೆಗಳ ವಿಷಯಕ್ಕೆ ಬಂದರೆ  ರಾಜ್ಯಬಾಜಪ ನಾಯಕರುಗಳು ಟಿಕೇಟು ನೀಡುವ ಬಗ್ಗೆ ಯಾರಿಗೂ ಮಾತು ಕೊಡುವಂತಿಲ್ಲ. ಎಲ್ಲಾಟಿಕೇಟುಗಳನ್ನು ದೆಹಲಿಯಲ್ಲಿ ಕೂತು ತಾವೇ ಹಂಚುವುದಾಗಿ ಇತೀಚೆಗೆಅದರ ರಾಷ್ಟ್ರಾದ್ಯಕ್ಷರಾದ ಅಮಿತ್ಷಾರವರು ಹೇಳಿರುವುದು ಬಾಜಪ ಸಹ ಕಾಂಗ್ರೇಸ್ಸಿನಂತೆಯೇ ದೆಹಲಿಯ  ನಾಯಕರುಗಳ ಆಣತಿಗೆ ಕಾಯುವ ಸ್ಥಿತಿಗೆ ಬಂದು ನಿಂತಿರುವುದನ್ನು ತೋರಿಸುತ್ತಿದೆ. ಇವತ್ತು ರಾಜ್ಯ ವಿದಾನಸಭೆಯ ಚುನಾವಣೆಯ ಪ್ರಚಾರದಲ್ಲಿ ಪ್ರಸ್ತಾಪಿಸಬೇಕಾಗಿರುವ ವಿಚಾರಗಳಿಗಾಗಿ ರಾಜ್ಯ ಬಾಜಪ ನಾಯಕರುಗಳುದೆಹಲಿಯತ್ತನೊಡಬೇಕಾದ ಸ್ಥಿತಿ ಬಂದೊದಗಿದೆ. ಬಹುಶ:ಪ್ರಾದೇಶಿಕ ನಾಯಕತ್ವದ ಬಗ್ಗೆ ಬಾಜಪದ ಹೈಕಮ್ಯಾಂಡಿಗೆ ಇರುವ ಅಲಕ್ಷ್ಯಮತ್ತು ಅಸಡ್ಡೆಯನ್ನು ಇದು ತೋರಿಸುತ್ತದೆ.ಮುಂದಿನ ಚುನಾವಣೆಯಲ್ಲಿಅಕಸ್ಮಾತ್ ಬಾಜಪ ಏನಾದರು ಗೆದ್ದಲ್ಲಿ  ಅದು ಜನರ ನಿರೀಕ್ಷೆಯಂತೆ ಯಡಿಯೂರಪ್ಪನವರನ್ನೇನು ಮುಖ್ಯಮಂತ್ರಿ ಮಾಡುವುದಿಲ್ಲ.ಬದಲಿಗೆ ತನಗೆ ಬೇಕಾದವರೊಬ್ಬರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸುವುದು ನಿಶ್ಚಿತ. ಸಾಮೂಹಿಕ ನಾಯಕತ್ವದಮಾತಿಗೆಎಳ್ಳುನೀರು ಬಿಟ್ಟಿರುವ ಬಾಜಪ ಕಾಂಗ್ರೇಸ್ ರೀತಿಯಲ್ಲಿಯೇ ಕೇಂದ್ರೀಕೃತ ಅಧಿಕಾರವ್ಯವಸ್ಥೆಯ ಪಕ್ಷವಾಗಿಬದಲಾಗುತ್ತಿದೆ.

ಹೀಗೆ ಒಂದೆಡೆ ಕಾಂಗ್ರೇಸ್ ನಿದಾನವಾಗಿ ಬಾಜಪದ ಮತಿಯವಾದದ  ಕಡೆಗೆ ವಾಲುತ್ತಿದ್ದರೆ, ಬಾಜಪ ಕಾಂಗ್ರೇಸ್ಸಿನಂತೆಯೇ ಏಕವ್ಯಕ್ತಿಪಕ್ಷವಾಗಿ ಬದಲಾಗುತ್ತಿದೆ.  ಅಂತಿಮವಾಗಿ ನಮ್ಮನ್ನಾಳುವ ಎರಡೂ ರಾಷ್ಟ್ರೀಯಪಕ್ಷಗಳುತದ್ರೂಪಿಗಳಾಗುತ್ತಿವೆ.

 

 

Leave a Reply

Your email address will not be published.