ಬಾಜಪದ ಪರಿವರ್ತನಾ ಯಾತ್ರೆಯ ವೈಫಲ್ಯದ ಹಿಂದಿನ ನೈಜಕಾರಣಗಳು!

ಕು.ಸ.ಮಧುಸೂದನರಂಗೇನಹಳ್ಳಿ

ಮುಂದಿನ  ವರ್ಷ ರಾಜ್ಯದಲ್ಲಿ ನಡೆಯಲಿರುವ ವಿದಾನಸಭಾ ಚುನಾವಣೆಗಳ ದೃಷ್ಠಿಯಿಂದ ರಾಜ್ಯಬಾಜಪ ಹಮ್ಮಿಕೊಂಡಿದ್ದ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ತನ್ನ ಆರಂಭದ ದಿನವೇ ವಿಫಲಗೊಂಡಿತು. ಸ್ವತ: ಬಾಜಪದ ರಾಷ್ಟ್ರಾದ್ಯಕ್ಷರೆ ಯಾತ್ರೆ ಉದ್ಘಾಟನಾ ಸಮಾರಂಭದ ವಿಫಲತೆಯ ಬಗ್ಗೆ ಮಾಧ್ಯಮದವರ ಗಮನಕ್ಕೆ ಬರುವಂತೆಯೇ ರಾಜ್ಯನಾಯಕರುಗಳನ್ನು ತರಾಟೆಗೆ ತೆಗೆದುಕೊಂಡಿದ್ದು ರಾಜ್ಯದಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು.

ಶಿಸ್ತಿನ ಪಕ್ಷ ಮತ್ತು ಕೇಡರ್ ಬೇಸಡ್( ಕಾರ್ಯಕರ್ತರನ್ನೆ ಅವಲಂಬಿಸಿದ ಪಕ್ಷ) ಎಂದು ಹೆಸರಾದ ಬಾಜಪಕ್ಕೆ -ಕಳೆದ ಹತ್ತು ವರ್ಷಗಳಿಂದಂತು- ಕಾರ್ಯಕರ್ತರ ಕೊರತೆಯಂತೂ ಇದ್ದಹಾಗೆ ಎಂದೂ ಕಂಡಿಲ್ಲ. ಇನ್ನು ರಾಜ್ಯಮಟ್ಟದ ನಾಯಕರುಗಳಿಗೂ ಸಹ ಬಾಜಪದಲ್ಲಿ ಬರವೇನೂ ಇಲ್ಲ. ಈ ನಾಡಿನ ಬಹುತೇಕ ಎಲ್ಲ ಸಮುದಾಯದ ನಾಯಕರುಗಳೂ ಬಾಜಪದಲ್ಲಿ ಇದ್ದಾರೆ. ಇನ್ನು ಕಳೆದೊಂದು ಅವಧಿಯಲ್ಲಿ ಸರಕಾರ ನಡೆಸಿದ ಮತ್ತು ಇವತ್ತಿಗೂ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಾಜಪದಂತಹ ಒಂದು ರಾಷ್ಟ್ರೀಯ ಪಕ್ಷಕ್ಕೆ ‘ಪಕ್ಷನಿಧಿ’ಯ ಕೊರತೆಯಂತು ಇರಲು ಸಾದ್ಯವೇ ಇಲ್ಲ. ಕಳೆದ ನಾಲ್ಕೂವರೆ ವರ್ಷಗಳಿಂದಲೂ ಅಧಿಕಾರ ನಡೆಸುತ್ತಿರುವ ಕಾಂಗ್ರೇಸ್ ಸರಕಾರದ ವಿರುದ್ದ ಸಹಜವಾಗಿಯೇ ಇರಬಹುದಾದ ಆಡಳಿತ ವಿರೋಧಿ ಅಲೆಯೂ ಈ ಯಾತ್ರೆಯನ್ನು ಸಫಲಗೊಳಿಸಲು ನೆರವಾಗಬೇಕಿತ್ತು. ಇದೆಲ್ಲಕ್ಕಿಂತ ಮುಖ್ಯವಾಗಿ  ಬಾಜಪದ ಎಲ್ಲ ರಾಜಕೀಯ ಚಟುವಟಿಕೆಗಳಿಗೂ ಬೆನ್ನೆಲುಬಾಗಿ ನಿಂತಿರುವ ಸಂಘಪರಿವಾರದ ಸಂಘಟನಾ ಶಕ್ತಿಯ ಬಗ್ಗೆ ಅರಿವಿದ್ದವರಿಗೆ ಈ ಯಾತ್ರೆ ಮೊದಲದಿನದ ವಿಫಲತೆ ಅಚ್ಚರಿಯನ್ನುಂಟು ಮಾಡಿದೆ. ಹಾಗಿದ್ದರೆ ಬಾಜಪಕ್ಕೆ ಪೂರಕವಾಗಿ ಇಷ್ಟೆಲ್ಲಾ ಧನಾತ್ಮಕ ಅಂಶಗಳಿದ್ದರೂ ಯಾತ್ರೆ ವೈಫಲ್ಯಕ್ಕೆ ಕಾರಣಗಳೇನಿರಬಹುದೆಂದು ಹುಡುಕುತ್ತಾ ಹೋದರೆ ಕಂಡು ಬರುವ ಅಂಶಗಳು  ಅಚ್ಚರಿದಾಯಕವಾಗಿವೆ:

ಯಡಿಯೂರಪ್ಪನವರು ಪಕ್ಷದ ರಾಜ್ಯಾದ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ನೇಮಿಸಿದ ಪದಾಧಿಕಾರಿಗಳ ಪಟ್ಟಿಯ ಬಗ್ಗೆ ಭುಗಿಲೆದ್ದ ಭಿನ್ನಮತದ ಬೆಂಕಿ ಇವತ್ತಿಗೂ ಶಮನವಾದಂತೆ ಕಾಣುತ್ತಿಲ್ಲ. ಯಡಿಯೂರಪ್ಪನವರು ತಮ್ಮ ಕೆಜೆಪಿಯ ಬೆಂಬಲಿಗರಿಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆಂಬ ಕೋಪ ಇರುವ ಹಲವು ನಾಯಕರುಗಳು  ನಡೆಸಿದ ಭಿನ್ನಮತೀಯ ಚಟುವಟಿಕೆಗಳನ್ನು ಗಮನಿಸಿದ ಹೈಕಮ್ಯಾಂಡ್ ಹಲವು ಬಾರಿ ನಾಯಕರುಗಳ ಜೊತೆಯಲ್ಲಿ ಸಮಾಲೋಚನೆ ನಡೆಸಿ ಪಟ್ಟಿಯ ಪರಿಷ್ಕರಣೆ ನಡೆಸಿದರೂ ಯಡಿಯೂರಪ್ಪನವರ ಜಿಗುಟು ನಿಲುವಿನಿಂದ ಅದೊಂದು ಭಿನ್ನಮತದ ದ್ವನಿ ಕ್ಷೀಣವಾದಂತೆ ಕಂಡು ಬಂದರೂ ಆಳದಲ್ಲಿ ಹೊಗೆಯಾಡುತ್ತಲೇ ಇದೆ. ಇನ್ನು ಈಶ್ವರಪ್ಪನವರು ಸ್ಥಾಪಿಸಿದ ರಾಯಣ್ಣ ಬ್ರಗೇಡಿನ ತೀವ್ರ ಚಟುವಟಿಕೆಯಿಂದ ಕಂಗೆಟ್ಟ ಹೈಕಮ್ಯಾಂಡ್   ಈಶ್ವರಪ್ಪನವರಿಗೆ ಹಿಂದುಳಿದ ವರ್ಗಗಳ ವಿಭಾಗದ ಮುಖ್ಯಸ್ಥರನ್ನಾಗಿ ಮಾಡಿ ರಾಯಣ್ಣ ಬ್ರಿಗೇಡಿನ ಚಟುವಟಿಕೆಗಳಿಂದ ದೂರವಿರುವಂತೆ ಮಾಡಿತು. ಆದರೆ ಇಷ್ಟೆಲ್ಲದರ ನಡುವೆಯೂ  ತೋರಿಕೆಗೆ ಒಂದಾದಂತೆ ಕಂಡು ಬರುವ ಯಡಿಯೂರಪ್ಪ ಮತ್ತು ಈಶ್ವರಪ್ಪನವರ ಜೋಡಿ ಒಳಗಿಂದೊಳಗೆ ಕತ್ತಿ ಮಸೆಯುತ್ತಿರುವುದು ಸುಳ್ಳಲ್ಲಿ. ಪಕ್ಷದ ಆಂತರೀಕ ಚಟುವಟಿಕೆಗಳಲ್ಲಿ ಶೋಬಾ ಕರಂದ್ಲಾಜೆಯವರು ಅನಗತ್ಯ ಹಸ್ತಕ್ಷೇಪ ನಡೆಸುತ್ತಿದ್ದಾರೆಂಬ ಬಾವನೆ ಈಗಾಗಲೇ ಪಕ್ಷದ ಇತರೇ ನಾಯಕರುಗಳಾದ  ಪ್ರಹ್ಲಾದ ಜೋಷಿ, ಜಗದೀಶ್ ಶೆಟ್ಟರ್ ಮುಂತಾದವರನ್ನು  ಕಾಡುತ್ತಿದ್ದು ಪಕ್ಷದ ನಿದರ್ಾರಗಳಲ್ಲಿ ಇವತ್ತಿಗೂ ಯಡಿಯೂರಪ್ಪನವರೆ ತೀಮರ್ಾನವೇ ಅಂತಿಮ ಎನ್ನುವಂತಾಗಿದೆ.

ಈ ಪರಿವರ್ತನಾ ಯಾತ್ರೆಯ ರೂಪುರೇಷೆಗಳನ್ನು ತಯಾರಿಸುವಲ್ಲಿಯೂ ಯಡಿಯೂರಪ್ಪನವರು ಪಕ್ಷದ ಇತರೆ ನಾಯಕರುಗಳೊಂದಿಗೆ ಮುಕ್ತವಾಗಿ ಚಚರ್ೆ ನಡೆಸಿಲ್ಲವೆಂದು ಹೇಳಲಾಗುತ್ತಿದ್ದು ಇದೂ ಸಹ ಯಾತ್ರೆ ವಿಫಲತೆಗೆ ಕಾರಣವೆನ್ನಬಹುದಾಗಿದೆ. ಇದರೊಂದಿಗೆ ಯಾತ್ರೆಯ ಸಂಪೂರ್ಣ  ಉಸ್ತುವಾರಿಯನ್ನು ಶೋಬಾ ಕರಂದ್ಲಾಜೆಯವರಿಗೆ ನೀಡಿದ್ದು ಉಳಿದೆಲ್ಲ ನಾಯಕರುಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಂಘಟನೆಯ ವಿಷಯದಲ್ಲಿ  ಚುರುಕಾಗಿ ಕೆಲಸ ಮಾಡಬಲ್ಲಂತಹ ಅಶೋಕ್ ಅವರಂತವರನ್ನು ಕಡೆಗಣಿಸಿದ್ದು ಬೆಂಗಳೂರಿನ ಬಾಜಪದ ನಾಯಕರುಗಳ ಸಿಟ್ಟಿಗೆ ಕಾರಣವಾಗಿತ್ತು.  ಈ ಅಸಹನೆಯನ್ನು ಅರ್ಥ ಮಾಡಿಕೊಂಡಂತೆ  ಕೊನೆಗಳಿಗೆಯಲ್ಲಿ ಯಾತ್ರೆ ಉದ್ಘಾಟನೆಯ ಹೊಣೆಗಾರಿಕೆಯನ್ನು ಅಶೋಕ್ ಅವರಿಗೆ ವಹಿಸಲಾಗಿತ್ತಾದರೂ ಯಾಕೋ ಅಶೋಕ್ ಮತ್ತವರ ಬೆಂಬಲಿಗರು ಆಸಕ್ತಿಯಿಂದ ಕೆಲಸ ಮಾಡಿದಂತೆ ಕಾಣಲಿಲ್ಲ.

ಇನ್ನು ಹೈಕಮ್ಯಾಂಡ್  ಸಂಘಟನಾ ಚತುರ ಎಂದೇ ಹೆಸರು ಮಾಡಿರುವ ಸಂತೋಷ್ ಅವರನ್ನು ರಾಜ್ಯ ಬಾಜಪಕ್ಕೆ ವಾಪಾಸು ಕಳಿಸಿದ್ದರು ಸಹ ಯಾತ್ರೆಯ ಸಂಘಟನೆಯ ವಿಚಾರದಲ್ಲಿ ಯಡಿಯೂರಪ್ಪನವರು ಸಂತೋಷ್ ಅವರ ಸೇವೆಯನ್ನು ಬಳಸಿಕೊಳ್ಳದೇ ಹೊಗಿದ್ದು ಕೆಲ ಮಟ್ಟಿಗೆ ಸಂಘಪರಿವಾರ ಈ ಯಾತ್ರೆಯಿಂದ ದೂರು ಉಳಿಯುವಂತೆ ಮಾಡಿತು ಎನ್ನಬಹುದು.

ಇದುವರೆಗೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಾ ಹೆಚ್ಚು ಜನರನ್ನು ತಲುಪುತ್ತಿದ್ದ ಬಾಜಪಕ್ಕೆ ಇತ್ತೀಚೆಗೆ ಕಾಂಗ್ರೇಸ್ ಕೂಡಾ ಜಾಲತಾಣಗಳ ಒಳಗೆ ಸಕ್ರಿಯವಾಗಿದ್ದು ಬಾಜಪವನ್ನು ಮಣಿಸುವುದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗುತ್ತಿರುವುದು ಸಹ ಒಂದು ಕಾರಣ. ಇನ್ನು ಬಾಜಪದ ಕಾರ್ಯಕರ್ತರುಗಳು ಸಹ ಪಕ್ಷದ ಒಳಜಗಳಗಳಿಂದ ಬೇಸತ್ತಿದ್ದು ಮೊದಲಿನ ಉತ್ಸಾಹದಿಂದ ಪಕ್ಷದ ಚಟುವಿಕೆಗಳಲ್ಲಿ ಬಾಗವಹಿಸುತ್ತಿಲ್ಲ.  ರಾಜ್ಯಸರಕಾರದ ವಿರುದ್ದ ಆಡಳಿತ ವಿರೋಧಿ ಅಲೆಗಿಂತ ಕೇಂದ್ರ ಸರಕಾರದ ವಿರುದ್ದದ ಆಡಳಿತ ವಿರೋಧಿ ಅಲೆಯೇ ಜೋರಾಗಿ ಬೀಸುತ್ತಿರುವಂತೆ ಕಾಣುತ್ತಿದ್ದು ಇದೂ ಸಹ ಜನರು ಬಾಜಪದಿಂದ ದೂರ ಸರಿಯುತ್ತಿರುವಂತೆ  ಕಾಣುತ್ತಿದೆ. ಇನ್ನು ಕಳೆದ ವರ್ಷದ ನೋಟುಬ್ಯಾನು ಮತ್ತು ಜಿ.ಎಸ್.ಟಿ.ಗಳು ಸಾಮಾನ್ಯರಿಗೆ ಮತ್ತು ವರ್ತಕರಿಗೆ ತಂದೊಡ್ಡಿದ  ಸಂಕಷ್ಟಗಳ ಸರಮಾಲೆಯಿಂದ ಬೇಸತ್ತಿರುವ ಜನ ಸಮುದಾಯ ಬಾಜಪದ ಯಾತ್ರೆಯಲ್ಲಿ ಬಾಗವಹಿಸುವ ಉತ್ಸಾಹವನ್ನೇನೂ ತೋರಿಸದೇ ಹೋಗಿದ್ದು ಸಹ ಯಾತ್ರೆ ವಿಫಲತೆಗೆ ಕಾರಣವೆನ್ನುಬಹುದು.

ಇನ್ನು ಈ ಬಾರಿ ಟಿಕೇಟು ನೀಡುವಾಗ ಸ್ವತ: ಹೈಕಮ್ಯಾಂಡ್ ನಡೆಸುವ  ಸರ್ವೆಯ ಪ್ರಕಾರ ಗೆಲ್ಲಬಲ್ಲ ಅಭ್ಯಥಿಗಳಿಗೆ ಮಾತ್ರ ಟಿಕೇಟು  ಎಂದು ಘೋಷಿಸಿದ್ದು,  ಯಾರಿಗೂ ಟಿಕೇಟಿನ ಭರವಸೆಯನ್ನು ನೀಡಬಾರದೆಂದು ರಾಜ್ಯ ನಾಯಕರಿಗೆ ಅಮಿತ್ ನಿರ್ದೇಶಿಸಿರುವುದರಿಂದ ಹೆಚ್ಚಿನ ಸಂಖ್ಯೆಯ ಟಿಕೇಟ್ ಆಕಾಂಕ್ಷಿಗಳು ಹಣ ಖರ್ಚು ಮಾಡಿ ಯಾತ್ರೆಗೆ ಕಾರ್ಯಕರ್ತರನ್ನು ಕರೆತರುವ ಉತ್ಸಾಹ ತೋರಲಿಲ್ಲ.  ಹಲವು ಹಾಲಿ ಶಾಸಕರುಗಳಿಗೂ ಟಿಕೇಟು ಸಿಗುವುದು ಖಚಿತವಿಲ್ಲ ಎನ್ನುವ ಮಾತು ಬಾಜಪದ ಅಂತರೀಕ ವಲಯದಲ್ಲಿ ಕೇಳಿ ಬರುತ್ತಿದ್ದು, ಬಹಳಷ್ಟು ಹಾಲಿ ಶಾಸಕರುಗಳು ನೆಪ ಮಾತ್ರಕ್ಕೆ ಯಾತ್ರೆಯಲ್ಲಿ ಜನ ಕರೆದುಕೊಂಡು ಬಂದಂತೆ ಕಂಡಿತು. ಅದರಲ್ಲೂ ಬಹಳ ಮುಖ್ಯವಾಗಿ  ಬೆಂಗಳೂರಿನ ಬಹುತೇಕ ಶಾಸಕರುಗಳು ಹೆಚ್ಚಿನ ಆಸಕ್ತಿ ತೋರಿಸದೆ ಹೋದದ್ದು ಸಹ ಇನ್ನೊಂದು ಪ್ರಮುಖ ಕಾರಣ.

ಅದೂ ಅಲ್ಲದೆ ಈಗೀಗ ಜನರಿಗೆ  ರಾಜಕೀಯ ಪಕ್ಷಗಳ ಯಾತ್ರೆಗಳು ಚುನಾವಣೆಯ ಗಿಮಿಕ್ ಎಂಬುದು ಅರ್ಥವಾಗಿದ್ದು. ಮೊದಲಿನಂತೆ ಆಸಕ್ತಿ ತೋರಿಸುತ್ತಿಲ್ಲ.  ಇಷ್ಟಲ್ಲದೆ ಬಾಜಪದ ಪರಿವರ್ತನಾ ಯಾತ್ರೆಯಲ್ಲಿ ಜನರನ್ನು ಸೆಳೆಯಬಲ್ಲಂತಹ ಆಕರ್ಷಕ ವ್ಯಕ್ತಿತ್ವದ ಯಾವುದೇ ರಾಜಕಾರಣಿಗಳೂ ಇಲ್ಲದೇ ಹೋಗಿದ್ದು ಸಹ ಒಂದು ಕಾರಣವೆನ್ನ ಬಹುದು. ನರೇಂದ್ರ ಮೋದಿಯವರನ್ನು ಹೊರತು ಪಡಿಸಿದರೆ ಬಾಜಪದ ಇನ್ಯಾವ ನಾಯಕರಿಗೂ  ಜನರನ್ನು ಸೆಳೆಯುವ ಶಕ್ತಿ ಇಲ್ಲವೆಂಬುದು ಇದರಿಂದ ಗೊತ್ತಾಗುತ್ತದೆ. ಇದೂ ಒಂದು ಕಾರಣವೆನ್ನ ಬಹುದು. ಇನ್ನು ರಾಜ್ಯದ ಬಾಜಪ ನಾಯಕರುಗಳು  ಒಂದು ಅಧಿಕೃತ ವಿರೋಧಪಕ್ಷವಾಗಿ ಸರಿಯಾಗಿ ಕೆಲಸ ಮಾಡದೆ ಸರಕಾರದ ವಿರುದ್ದ ಗಂಬೀರವಾಗಿ ಒಂದು ಹೋರಾಟವನ್ನೂ ನಡೆಸದೆ ಇರುವುದು ಸಹ ಜನರಲ್ಲಿ ಬಾಜಪದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಆಗಿದೆ.

 

 

 

Leave a Reply

Your email address will not be published.