ಬಂಧನ

-ಶ್ವೇತಾ ಎನ್

-ಶ್ವೇತಾ ಎನ್, ಕನ್ನಡ ಎಂ. ಎ . ವಿದ್ಯಾರ್ಥಿ , ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ

OLYMPUS DIGITAL CAMERA

ರಾಮಚಂದ್ರರಾಯರು ಮತ್ತು ವಿಶಾಲಕ್ಷಮ್ಮನವರ ಒಬ್ಬಳೇ ಮಗಳಾದ ಶಾಂತಿಯ ಮದುವೆ ಪಕ್ಕದೂರಿನ ಜಾನಕಮ್ಮನವರ ಮಗನಾದ ವಿಷ್ಣುವಿನೊಂದಿಗೆ ಅದ್ದೂರಿಯಾಗಿ ಏರ್ಪಾಟಾಗಿದ್ದು, ಮದುವೆಯ ಸಂಭ್ರಮದಲ್ಲಿ ಇಡೀ ಮನೆಯೇ ತುಂಬಿ ತುಳುಕುತ್ತಿತ್ತು. ಒಂದೆಡೆ ವಿಷಾದದ ಛಾಯೆಯೂ ಮೂಡಿತ್ತು.

‘ಏ ಶಾಂತಿ ಇನ್ಮುಂದೆ ನೀನು ಮೊದಲಿನ ಹಾಗೆ ಇರೋಕಾಗಲ್ವೆ’
‘ಹೌದು ಕಣೆ ನಾನು ಸುಧಾ ರಮೇಶ ಶಶಿ ಜಗ್ಗು ಸಂಜಯ್ ಎಲ್ರೂ ನಿನ್ನ ತುಂಬಾ ಮಿಸ್ ಮಾಡ್ಕೊತೀವಿ’

‘ಅರೆ ಯಾಕೆ ನೇತ್ರ, ಅಷ್ಟು ಬೇಜರಾಗ್ತೀರ ನಾನೇನು ಮದುವೆ ಆಗಿ ಬೇರೆ ದೇಶಕ್ಕಾ ಹೋಗ್ತಿದ್ದೀನಿ? ಪಕ್ಕದೂರಿಗೆ ತಾನೇ ವಾರಕ್ಕೊಮ್ಮೆ ಬರ್ತಿರ್ತೀನಿ ಅಪ್ಪ ಅಮ್ಮಂಗೂ ನನ್ನ ಬಿಟ್ರೆ ಯಾರಿದ್ದಾರೆ. ಇಷ್ಟು ವರ್ಷ ಓದೋಕೆ ಅಂತ ಬೆಂಗಳೂರಲ್ಲಿ ಇದ್ದು ಸಾಕಾಯ್ತು ಇನ್ಮುಂದೆ ಅದ್ರೂ ಅವರ ಹತ್ರಾನೆ ಇರೋರು’

ಆದರೂ ಆ ದಿನಗಳು ಚೆಂದ ತರಗತಿಯಲ್ಲಿ ಹರಟಿದ್ದುಂಟು ಒಬ್ಬರಿಗೊಬ್ಬರು ರೇಗಿಸಿದ್ದುಂಟು ಒಂದೇ ಊಟವನ್ನು ಪ್ರಸಾದವಾಗಿ ತಿಂದದ್ದುಂಟು. ಯಾರು ಜೊತೆ ಸಿಗದೆ ಒಬ್ಬೊಂಟಿ ಎನಿಸಿದಾಗ ಸಂಜಯನೊಂದಿಗೆ ಎಷ್ಟೋ ಸಂಜೆ ಕಳೆದದ್ದುಂಟು ಅದರಲ್ಲೂ ಸಂಜಯನೆಂದರೆ ಒಂದು ಪರಿಯ ಪ್ರೀತಿ ಕಾಳಜಿ ಅವನಿಗೂ ತಿಳಿದಿತ್ತು. ಅವನಿಗೆ ನನ್ನನ್ನು ಬಿಟ್ಟರೆ ಯಾರೂ ಇರಲಿಲ್ಲ ಹೌದು ಯಾರೂ ಇಲ್ಲ ಎಂದು ಮನದಲ್ಲೇ ಗುನುಗಿದಳು. ಏನೇ ಶಾಂತಿ ಆಗ್ಲೆ ಕನಸಲ್ಲಿ ತೇಲ್ತಿದ್ದೀಯಾ?…. ಸರಿ ಬಾ ತಡ ಆಗ್ತಿದೆ ಎಲ್ಲರೂ ಕಾಯ್ತಿದ್ದಾರೆ. ಮುಹೂರ್ತ ಮೀರ್ತಿದೆ.

ಶಾಂತಿ-ವಿಷ್ಣುವಿನ ಮದುವೆ ಮುಗಿಯಿತು. ಸುಖಾ ಸಪ್ತನದಿ ಭವ ಎಂಬ ಮಂತ್ರವೂ ಮೊಳಗಿತು. ಅಲ್ಲಿ ನೆರೆದಿದ್ದವರಿಗೆಲ್ಲಾ ಇವರಿಬ್ಬರೇ ಊಟ.

ನೋಡ್ರೀ ಶಾರದಮ್ಮ ಅವರಿಬ್ರದು ಎಂಥಾ ಜೋಡಿ

ಹೌದು ಕಮಲಮ್ನೋರೆ ರಾಮಚಂದ್ರರಾಯರು ಒಳ್ಳೆ ಹುಡ್ಗನ್ನೇ ಹಿಡುದ್ಬುಟ್ಟು, ಆದ್ರೆ ಹುಡ್ಗೀನೆ….?

ಯಾಕ್ರೀ ನಮ್ ಶಾಂತಿಗೇನಾಗಿದೆ? ಎಷ್ಟು ಚೆಂದದ ಹುಡ್ಗಿ ಅದು;

ಅಯ್ಯೋ ಅಂದ ಚೆಂದ ಕಟ್ಕೊಂಡು ಏನ್ರೀ ಮಾಡ್ತೀರ ಇಷ್ಟ್ಟು ವರ್ಷ ದೂರದಲ್ಲಿದ್ದು ಬಂದೋಳು ಅದೇನೇನ್ ಮಾಡ್ಕೊಂಡೋಳೋ ಏನೋ….

ಸಾಕು ಸುಮ್ಕಿರ್ರೀ ಶಾರ್ದಮ್ಮ ಗೊತ್ತಿಲ್ದೆ ಮಾತಾಡ್ಬೇಡಿ.

ಈಗಲ್ಲ ಕಮ್ಲಮ್ಮ, ಮುಂದೆ ಬಣ್ಣ ಕಳಚೋದು; ನೋಡಿ ಎಂದು ಹೊರಟು ಹೋದರು.

ಇತ್ತ ಎಲ್ಲರೂ ಊಟ ಮುಗಿಸಿ ಮದುವೆ ದಿಬ್ಬಣದೊಂದಿಗೆ ಹೊರಟರು. ಜಾನಕಮ್ಮ ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರವನ್ನು ಮುಗಿಸಿದರು.

ಆದಷ್ಟು ಬೇಗ ಈ ಮನೇಲಿ ತೊಟ್ಟಿಲು ತೂಗ್ಬೇಕಮ್ಮ ಶಾಂತಿ ಎಂದು ಅಲ್ಲಿ ನೆರೆದಿದ್ದವರೆಲ್ಲಾ ಛೇಡಿಸಿ ಕೋಣೆಯನ್ನು ಅಲಂಕರಿಸಲು ಹೋದರು. ಶಾಂತಿ-ವಿಷ್ಣುವನ್ನು ಕರೆದು ನಿಮ್ಮೊಡನೆ ಸ್ವಲ್ಪ ಮಾತನಾಡಬೇಕು ಎಂದಳು.

‘ಹಾ ಹೇಳು ಶಾಂತಿ, ಇಲ್ಲಿ ಯಾರು ಇಲ್ಲ’
ನೋಡಿ ನಾನು ಸ್ವಲ್ಪ ನೇರವಾಗಿ ಮಾತನಾಡುತ್ತೇನೆ ಬೇಜಾರಾಗಬೇಡಿ. ಇಷ್ಟು ಬೇಗ ಈ ಶಾಸ್ತ್ರ ಮಗು ಇವೆಲ್ಲ ಬೇಡ ಸ್ವಲ್ಪ ದಿನಗಳ ಕಾಲ ಮುಂದುಡೋಣ ಮೊದಲು ಒಬ್ಬರನ್ನೊಬ್ಬರು ಅರಿತುಕೊಳ್ಳೋಣ. ಇಷ್ಟ ಕಷ್ಟ ತಿಳಿದುಕೊಳ್ಳೋಣ, ನನಗೂ ನಿಮ್ಮ ಮನೆಗೆ ಹೊಂದಿಕೊಳ್ಳಲು ಸ್ವಲ್ಪ ಕಾಲಾವಕಾಶ ಕೊಡಿ ಎಂದಳು.
‘ಹೂಂ ನೀನು ಹೇಳೋದು ನಿಜ. ಸರಿ ಶಾಂತಿ ನಿನಗೆ ಹೇಗೆ ಇಷ್ಟವೋ ಹಾಗೆ ಮಾಡೋಣ ಎಂದು ವಿಷ್ಣು ಶಾಸ್ತ್ರವನ್ನು ನಿಲ್ಲಿಸಿದನು.
‘ನೋಡುದ್ರೇನ್ರಿ ಕಮಲಮ್ಮ ನಾನ್ ಹೇಳಿಲ್ವ ಆ ಹುಡುಗಿ ಬಗ್ಗೆ ನೀವೆ ನೋಡಿ ಎಷ್ಟು ಬೇಗ ಗಂಡನ್ನ ತನ್ನ ಬಾಲಂಗೋಚಿ ಮಾಡ್ಕೊಂಡ್ಳು ಅಂತ.’
‘ಸುಮ್ನಿರಿ ಶಾರ್ದಮ್ಮ ಓದಿರೋ ಹುಡ್ಗಿ ಮೊದಲು ಅರ್ಥ ಮಾಡ್ಕೊಳೋನ ಅಂದ್ಲು ಅದ್ರಲ್ಲಿ ತಪ್ಪೇನಿz’É ಎಂದರು. ಈ ಮಾತುಗಳನ್ನು ಜಾನಕಮ್ಮನವರ ಕಿವಿಗೂ ಬೀಳದೆ ಇರಲಿಲ್ಲ. ಈ ಯೋಚನೆಯಲ್ಲಿಯೇ ಸೂರ್ಯನೂ ಬಂದನು ಶಾಂತಿ ಶಾಂತಿ ಬಾಮ್ಮ ಇಲ್ಲಿ ತಗೊ ಈ ಕಾಫಿನ ನಿನ್ನ ಗಂಡನಿಗೆ ಕೊಡು. ಹಾಗೇ ನೀನು ಕುಡಿ ಶಾಂತಿ ಕಾಫಿ ಕೊಟ್ಟು ತಿಂಡಿ ತಯಾರಿಗಾಗಿ ಬಂದಳು.

ನಾನೇ ಮಾಡ್ತೀನಿ ಬಿಡಮ್ಮ ನಾವಿಬ್ರೆ ಇರುವಾಗ ನಾನೆ ತಾನೇ ಮಾಡ್ತಿದ್ದೆ. ಈಗ ನಿನಗೂ ಸೇರಿಸಿ ಮಾಡ್ತೀನಿ ಅಷ್ಟೇ ಎಂದು ಜಾನಕಮ್ಮನವರು ಮೊದಲಿನಂತೆಯೇ ಅಡುಗೆ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಮುಂದುವರೆಸಿದರು. ಶಾಂತಿ ಹೊರಗಿನ ಕೆಲಸ ನೋಡಿಕೊಳ್ಳುತ್ತಿದ್ದಳು. ಬಿಡುವಿನ ಸಮಯದಲ್ಲಿ ಜಾನಕಮ್ಮನವರೆ ಶಾಂತಿಯನ್ನು ಕರೆದುಕೊಂಡು ತಮ್ಮ ಬಂಧುಗಳನ್ನು ಪರಿಚಯ ಮಾಡಿಕೊಡಲು ಕರೆದೊಯ್ಯುತ್ತಿದ್ದರು. ಇಡೀ ಊರನ್ನೇ ಸುತ್ತಿಸಿದ್ದರು. ಸಂಜೆ ಮಗನಿಗೆ ಶಾಂತಿಯನ್ನು ಹೊರಗೆ ಕರೆದೊಯ್ಯುಲು ತಾವೇ ಹೇಳಿ ತಾವೇ ಹೇಳಿ ಕಳುಹಿಸುತ್ತಿದ್ದರು. ಶಾಂತಿ ಬರು ಬರುತ್ತಾ ಜಾನಕಮ್ಮನವರ ಮಗಳಾದಳು.
ಶಾಂತಿ ಒಮ್ಮೆ ನಿಮ್ಮ ತವರಿಗೆ ಹೋಗಿ ಬಾರಮ್ಮ. ಅವರಿಗೂ ನಿನ್ನ ನೋಡಬೇಕೆಂಬ ಆಸೆ ಇರುತ್ತೆ ಅಲ್ವಾ….
ಸರಿ ಅತ್ತೆ ನಾಳೆ ಬೆಳಗ್ಗೆ ಹೊರಟು ಸಂಜೆ ಅಷ್ಟ್ರಲ್ಲಿ ಬರ್ತೀನಿ.
ಯಾಕಷ್ಟು ಅವಸರ ಇಲ್ಲಿ ನಾನೆಲ್ಲಾ ನೋಡ್ಕೋತೀನಿ ಒಂದೆರಡು ದಿನ ಇದ್ದು ನಿನ್ನ ಸ್ನೇಹಿತರನ್ನು ಮಾತಾಡಿಸಿಕೊಂಡು ಬಾ ಎಂದರು.
ಶಾಂತಿ ವಿಷ್ಣುವಿಗೂ ತಿಳಿಸಿ ತನ್ನ ತವರಿಗೆ ಹೊರಟಳು. ಪ್ರೀತಿ ಆದರಿಂದ ತವರಿನವರೂ ಸ್ವಾಗತಿಸಿದರು. ಮಗುವಿನನಂತೆ ತಾಯಿಯನ್ನು ತಬ್ಬಿದಳು.
ಶಾಂತಿ ಅಲ್ಲಿ ಎಲ್ಲರೂ ನಿನ್ನ ಚೆನ್ನಾಗಿ ನೋಡ್ಕೊತಿದ್ದಾರೆ ತಾನೆ?
ಹ್ಞೂಂ ಅಮ್ಮ ತುಂಬಾ ಚೆನ್ನಾಗಿ ನೋಡ್ಕೊತಾರೆ ನಮ್ಮತ್ತೆ ನನ್ನ ಮಗಳ ಹಾಗೆ ನೋಡ್ಕೊತಾರೆ.
ಅಳಿಯಂದ್ರು ಎಲ್ಲೆ? ಬರಲಿಲ್ವಾ….?
‘ಇಲ್ಲ ಅಮ್ಮ. ಅವರಿಗೆ ಆಫಿಸಲ್ಲಿ ಕೆಲಸ ಜಾಸ್ತಿ ಬರೋಕಾಗಲ್ಲ ಅಂದ್ರು. ಅತ್ತೆನ ಕೂಗ್ದೆ ಅಮ್ಮ ವಿಷ್ಣುಗೆ ಹೋಟೆಲ್ ಊಟ ಅಜಸ್ಟ್ ಆಗಲ್ಲ. ಮುಂದಿನ ಸಲ ಹೇಗಾದರೂ ಮಾಡಿ ಬರ್ತೀನಿ. ಈ ಸಲ ನೀನು ಹೋಗ್ದಾ ಅಂದ್ರು ಅಮ್ಮ.’
ಮನೆಯಲ್ಲಿ ಮಗುವಿನಂತೆ ಕುಣಿದಾಡಿದಳು. ಸ್ನೇಹಿತರನ್ನೂ ಬೇಟಿ ಮಾಡಿದಳು ಸುಧಾ ಮತ್ತು ರಮೇಶನಿಗೆ ಮದುವೆ ನಿಶ್ಚಯವಾದ ವಿಷಯ ತಿಳಿದು ಖುಷಿಪಟ್ಟಳು. ಹಾಗೆಯೇ ಸಂಜಯನಿಗೆ ಬೆಂಗಳೂರಿನಲ್ಲೆ ಕೆಲಸ ಸಿಕ್ಕಿತೆಂದು ತಿಳಿದು ಸಮಾಧಾನ ಪಟ್ಟಳು ಎಲ್ಲರನ್ನೂ ಮಾತನಾಡಿಸಿ ಒಂದೆರಡು ದಿನ ಉಳಿದು ಅತ್ತೆ ಮನೆಗೆ ಹೊರಟಳು.

ಮರಳಿದ ಶಾಂತಿಗೊಂದು ಅಚ್ಚರಿಯೇ ಕಾದಿತ್ತು. ಜಾನಕಮ್ಮನವರು ಆಕೆಗೆ ಬಂದಿದ್ದ ಪತ್ರವನ್ನು ಕೊಟ್ಟರು ಶಾಂತಿ ಪತ್ರ ಒಡೆದಳು.
‘ನನ್ನ ಪ್ರೀತಿಯ ಶಾಂತಿಗೆ.
ನಾವು ಬೆಂಗಳೂರಿನಲ್ಲಿ ಕೆಲಸ ದಿನಗಳನ್ನು ಮರೆಯಲಾಗುತ್ತಿಲ್ಲ. ನಮ್ಮಿಬ್ಬರ ಕನಸಾಗಿ ಬೆಳೆದ ಪದ್ಮಳನ್ನು ನನ್ನಿಂದ ನೋಡಿಕೊಳ್ಳಲಾಗುತ್ತಿಲ್ಲ. ಇನ್ನು ಮುಂದೆ ಅವಳ ಜವಾಬ್ದಾರಿ ನಿನ್ನದು. ತಂದೆ ತಾಯಿ ಮಾತಿಗೆ ಕಟ್ಟು ಬಿದ್ದು ಯಾರನ್ನು ಮದುವೆಯಾದೆಯೋ, ಅವನಿಗೆ ನಮ್ಮ ವಿಷಯ ತಿಳಿಸಿ ಈ ಮಗುವನ್ನು ನೀವೆ ನೋಡಿಕೊಳ್ಳಿ. ನಾಳೆ ಮಗು ನಿಮ್ಮ ಮನೆಗೆ ಬರುತ್ತದೆ. ಇಂತಿ ನಿನ್ನ ಪ್ರೀತಿಯ ಹುಡುಗ’
ಎಂದು ಬರೆದಿದ್ದನ್ನು ಕಂಡು ಈಕೆಗೆ ಭೂಮಿಯೇ ಬಿರಿದಂತಾಯಿತು. ಕುಸಿದು ಬಿದ್ದಳು ಇದನ್ನು ಕಂಡು ಓಡಿ ಬಂದ ಜಾನಕಮ್ಮ ಶಾಂತಿ, ಶಾಂತಿ ಏನಾಯ್ತಮ್ಮ? ಏನಿದೆ ಅದ್ರಲ್ಲಿ ಹೇಳಮ್ಮಾ ಎಂದು ಎಷ್ಟು ಕೇಳಿದರೂ ಶಾಂತಿ ಒಂದು ಮಾತೂ ಆಡಲಿಲ್ಲ ಅವರೂ ಪತ್ರವನ್ನು ಓದಿ ಮೂಕರಾದರು. ಆಶ್ಚರ್ಯ ಭಯ ಆತಂಕಕ್ಕೊಳಗಾದರು ಸಂಜೆ ವಿಷ್ಣು ಮನೆಗೆ ಬಂದನು ಮನೆ ಕತ್ತಲಲ್ಲೇ ಇತ್ತು.

ಅಮ್ಮ ಅಮ್ಮ ಎಲ್ಲಿದ್ಯ? ಯಾಕಿನ್ನು ಲೈಟ್ ಹಾಕಿಲ್ಲ? ಎಂದು ತಾನೇ ಹಾಕಿದನು ಅವರಿಬ್ಬರನ್ನು ಕಂಡು ಆತಂಕದಿಂದ ಓಡಿ ಬಂದು ಏನಾಯಿತು ಅಮ್ಮ? ಶಾಂತಿ ಏನಾಯಿತು? ಯಾಕ್ ಹೀಗ್ ಕೂತಿದ್ದೀರ? ಎಂದು ಕೇಳಿದರೂ ಇಬ್ಬರೂ ಮಾತಾಡಲಿಲ್ಲ ಅಲ್ಲೆ ಬಿದ್ದಿದ್ದ ಪತ್ರವನ್ನು ತೆಗೆದುಕೊಂಡು ಓದಿದನು. ಒಂದು ಕ್ಷಣ ವಿಷ್ಣುವಿಗೂ ಏನೇಳಬೇಕೆಂಬುದೇ ತಿಳಿಯದೆ ಸ್ವಲ್ಪ ಸಾವರಿಸಿಕೊಂಡು ಇದು ಯಾರೋ ಆಟ ಆಡಿಸೋಕೆ ಮಾಡಿರೋದು ಶಾಂತಿ. ನಾನು ಇದೆಲ್ಲ ನಂಬೊಲ್ಲ. ತಲೆ ಕೆಡಿಸಿಕೊ ಬೇಡಿ ಏಳಿ ಎಂದು ವಿಷ್ಣು ಇಬ್ಬರಿಗೂ ಊಟ ಮಾಡಿಸಿ ಮಗಿಸಿದನು. ಬೆಳಿಗ್ಗೆ ಮತ್ತೊಂದು ಆಶ್ಚರ್ಯವೇ ಕಾದಿತ್ತು. 4 ವರ್ಷದ ಮಗುವೊಂದು ಮನೆಯ ಮುಂದೆ ನಿಂತಿತ್ತು.
ಶಾಂತಿಯನ್ನು ಕಂಡೊಡನೆ ಅಮ್ಮಾ ಎಂದು ಕೂಗುತ್ತಾ ಒಳಬಂದಿತ್ತು ಎಲ್ಲರಿಗೂ ಆಶ್ಚರ್ಯ…………….!
ಯಾರಮ್ಮ ನೀನು? ನಿನ್ನ ಹೆಸರೇನು? ಎಂದು ವಿಷ್ಣು ಪ್ರಶ್ನೀಸಿದನು.
ನಾನು ನಾನು ಪದ್ಮ ನಮ್ಮಮ್ಮನ್ನ ಹುಡುಕೊಂಡು ಬಂದೆ ಎಂದಿತು
ಹೇಗಮ್ಮ ಬಂದೆ ಇಲ್ಲಿಗೆ? ಯಾರು ಕರೆದುಕೊಂಡು ಬಂದರು? ಎಂದು ಮರು ಪ್ರಶ್ನಿಸಿದನು.

ನಮ್ಮಪ್ಪ ಬಂದು ಬಿಟ್ಟು ಹೋದ್ರು ಎಂದು ಮುಗ್ದವಾಗಿ ಉತ್ತರಿಸಿತು. ನಿಮ್ಮಪ್ಪ ಯಾರು? ಎಲ್ಲಿದ್ದಾರೆ? ಅವರ ಹೆಸರೇನು? ಎಂದು ವಿಷ್ಣು ಎಷ್ಟೇ ಕೇಳಿದರೂ ಪದ್ಮ ಅವರಪ್ಪನ ಕುರಿತು ಯಾವುದೇ ವಿಷಯ ತಿಳಿಸಲಿಲ್ಲ ಅಸಮಾಧಾನವೂ ಹೆಚ್ಚಾಯಿತು.
ಶಾಂತಿಯ ಮಾತುಗಳೆಲ್ಲಾ ಸತ್ತು ಹೋದವು. ಆ ಹುಡುಗಿಯಂತು ಶಾಂತಿ ಅಮ್ಮ ಎನ್ನುವುದನ್ನು ಬಿಟ್ಟು ಮತ್ತೇನೂ ಹೇಳುತ್ತಿರಲಿಲ್ಲ. ಇವರ ವಿಷಯ ಮತ್ತೊಮ್ಮೆ ಇಡೀ ಊರಿಗೆ ಊಟವಾಯಿತು. ಈ ಸುದ್ಧಿ ಅವಳ ಅಪ್ಪ-ಅಮ್ಮನಿಗೂ ತಲುಪಿತು.
ಅಳಿಯಂದ್ರೆ ನಮ್ಮನ್ನ ಈಗ ನೀವೆ ಕಾಪಾಡ್ಬೇಕು. ನನ್ನ ಮಗಳ ತಪ್ಪೇನು ಇಲ್ಲ ಕಾಲೇಜಿನಲ್ಲಿ ಹಡುಗರೊಂದಿಗೆ ಒಟ್ಟಾಗಿ ಓದಿದ್ದುಂಟು. ಆದರೆ ಎಂದೂ ಮನೆ ಮರ್ಯಾದೆ ಹಾಳು ಮಾಡುವ ಕೆಲಸ ಮಾಡಿದವಳಲ್ಲ.
ಮಾವ ಅವಳು ಈಗ ನನ್ನ ಹೆಂಡ್ತಿ. ಅವಳ ಸಂಪೂರ್ಣ ಜವಾಬ್ದಾರಿ ನಂದು. ಅವಳಿಗೆ ಹೇಳ್ಕೊಲೋಕೆ ಇಷ್ಟ ಇಲ್ಲ ಅಂದ್ರೆ ಬೇಡ. ಆ ಮಗು ನನ್ನದೆ ಸಮಾಧಾನವಾಗಿರಿ.
ಅಳಿಯಂದ್ರೆ ನೀವು ನನ್ನ ಮಗಳ ಸಂಸಾರಾನ ಅಷ್ಟೇ ಅಲ್ಲ. ನಮ್ಮ ಗೌರವವನ್ನೂ ಉಳುಸಿದ್ರಿ ಎಂದು ರಾಯರು ಗೋಳಿಟ್ಟರು.
ರಾಯರು ಶಾಂತಿಯನ್ನು ಮಾತಾಡಲು ಕರೆದೊಯ್ದರು
‘ನಿಜ ಹೇಳು ಶಾಂತಿ, ಆ ಮಗು ಆ ಸಂಜಯ್ ಏನಾದ್ರೂ……………….
‘ಅಪ್ಪ ನಾನೆಂದು ನೀವು ತಲೆ ತಗ್ಗಿಸೊ ಕೆಲಸ ಮಾಡಿಲ.್ಲ ಮಾಡೋದು ಇಲ್ಲ.’ ಎಂಬ ಮಾತು ಕೇಳಿದೊಡನೆಯೇ ರಾಯರು ಅಲ್ಲಿಂದ ಹೊರಟು ಹೋದರು.
ಇತ್ತ ವಿಷ್ಣು ಬಿಡು ಶಾಂತಿ ಯಾರದೋ ಮಗು ದಿಕ್ಕಿಲ್ಲ ಎಂದು ಯಾರೋ ಬೇಕಂತಲೇ ಹೀಗೆ ಮಾಡಿರಬಹುದು. ಆ ಮಗುವನ್ನು ನಾವೇ ದತ್ತು ತೆಗೆದು ಸಾಕೋಣ ಎಂದನು.
ಮಗನ ಈ ಗುಣವನ್ನು ಕಂಡು ಜಾನಕಮ್ಮ ಹಿಗ್ಗಿದರು. ತನ್ನ ವಿಷ್ಣು ಬೇರೆ ಗಂಡಸರಂತಲ್ಲವೆಂದು ಮನದೊಳಗೊಳಗೆ ಖುಷಿ ಪಟ್ಟರು.
ಆದರೆ ಶಾಂತಿ ಮಾತ್ರ ಮತ್ತಷ್ಟೂ ಮೂಕಳಾದಳು. ವಿಷ್ಣು ಆ ಮಗುವಿಗೆ ಹತ್ತಿರಾಗುತ್ತಾ ಹೋದನು.
ಶಾಂತಿ ಸ್ವಲ್ಪ ದಿನ ನಿಮ್ಮ ಮನೆಯಲ್ಲಿ ಇದ್ದು ಬಾರಮ್ಮಾ ನಿನಗೂ ವಾತಾವರಣ ಬದಲಾಗುತ್ತೆ ಎಂದು ಜಾನಕಮ್ಮ ಒಪ್ಪಿಸಿದರು.
ಹೊರಡಲು ಅಣಿಯಾದ ಶಾಂತಿ ತನ್ನ ಬೀರುವಿನಲ್ಲಿ ಕಂಡ ಆಶ್ಚರ್ಯದೊಂದಿಗೆ ತರವನ್ನು ಹೊಕ್ಕಿದಳು.
‘ಅಯ್ಯೋ ದೇವ್ರೆ. ಮತ್ತೇನು ಮಾಡ್ಕೊಂಡು ಬಂದ್ಯೇ, ಬೆಂಗಳೂರಲ್ಲಿ ಓದ್ಸಿದ್ದು ನನ್ನ ತಪ್ಪು’ ಎಂದು ರಾಯರು ಕೂಗಾಡ ತೊಡಗಿದರು.

‘ಅಪ್ಪಾ ನಿಮ್ಮ ಗೌರವಕ್ಕೆ ಚ್ಯುತಿತರುವಂತಹ ಕೆಲಸ ನಾನೆಂದು ಮಾಡಿಲ.್ಲ ಮಾಡೋದು ಇಲ.್ಲ ಇದರ ಮೇಲೆ ನಿಮ್ಮ ನಿರ್ಧಾg,’À ಎಂದು ಹೇಳಿದ ಶಾಂತಿ ಯಾರಿಗೂ ತಿಳಿಸದೆ ಮೊದಲು ತಾನಿದ್ದ ಪಿ.ಜಿ ಯಲ್ಲೇ ಉಳಿದಳು.
ಇತ್ತ ಜಾನಕಮ್ಮನಿಗೆ ಶಾಂತಿ ಬರುವ ಸೂಚನೆಯಾಗಲಿ ಆಕೆಯಿಂದ ಪತ್ರವಾಗಲಿ ಬಾರದಿದ್ದನ್ನು ಕಂಡು ಆತಂಕದಿಂದ ‘ವಿಷ್ಣು ಹೋಗಪ್ಪ ಶಾಂತಿ ಹೋಗಿ ಇಷ್ಟು ದಿನ ಆದ್ರು ಬರ್ಲಿಲ್ಲ ಏನಾದ್ರು ಮಾಡಿ ಇವತ್ತೇ ಕರ್ಕೊಂಡು ಬಾ’ ಎಂದರು.
ಸರಿ ಅಮ್ಮ ನಾನೋಗಿ ಕರ್ಕೊಂಡು ಬರ್ತೀನಿ ಎಂದು ಹೊರಟನು.
ವಿಷ್ಣವನ್ನು ಕಂಡೊಡನೆ ರಾಯರು ಉತ್ಸಾಹದಿಂದ ಓಹ್ ಅಳಿಯಂದ್ರು ಬರ್ಬೇಕು ಬರ್ಬೇಕು ವಿಶಾಲು ಅಳಿಯಂದ್ರು ಬಂದ್ರು ಕೈ ಕಾಲಿಗೆ ನೀರು ಕೊಡು ಹಾಗೇ ಊಟಕ್ಕೆ ಸಿದ್ಧ ಮಾಡು. ‘ಅಯ್ಯೋ ಬೇಡ ಮಾವ ಇಷ್ಟು ದಿನ ಆದ್ರು ಶಾಂತಿ ಬರಲೇ ಇಲ್ಲ. ಅದಕ್ಕೆ ಅಮ್ಮ ಕರ್ಕೊಂಡು ಬಾ ಅಂತ ನನ್ನ ಕಳ್ಸಿದ್ದಾರೆ.’
ಅಷ್ಟರಲ್ಲಿ ಅಲ್ಲಿಗೆ ಬಂದ ವಿಶಾಲಾಕ್ಷಮ್ಮ ಏನ್ ಹೇಳ್ತಿದ್ದೀರ? ಶಾಂತಿ ಅಲ್ಲೂ ಇಲ್ವಾ
ಇಲ್ಲ ಅತ್ತೆ ಏನಾಯ್ತು? ಶಾಂತಿ ಎಲ್ಲಿ?
ಗೊತ್ತಿಲ್ಲ ಅಳಿಯಂದ್ರೆ ಅವತ್ತೆ ಇಲ್ಲಿಂದ ಹೊರಟೋದ್ಲು ನಿಮ್ಮ ಮನೆಲೇ ಇದ್ದಾಳೆ ಅಂತ ನಾವ್ ತಿಳಿದಿದ್ವಿ
‘ಸರಿ ಮಾವ ನೀವೇನು ಟೆನ್ಸನ್ ಮಾಡ್ಕೊಬೇಡಿ. ನಾನು ಹೋಗಿ ಅವಳ ಫ್ರೆಂಡ್ಸ್ ಹಳೆ ಪಿ.ಜಿ ಕಡೆ ವಿಚಾರಿಸ್ತೀನಿ’ ಎಂದು ವಿಷ್ಣು ತಡಮಾಡದೆ ಹೊರಟನು.
ಜಾನಕಮ್ಮ ಶಾಂತಿ ಬರುತ್ತಾಲೆಂದು ಅವಳ ಕೋಣೆಯನ್ನು ಶುಚಿಗೊಳಿಸಲು ಹೋದರು. ಶಾಂತಿಗಾದ ಆಶ್ಚರ್ಯ ಇವರಿಗೂ ಕಾದಿತ್ತು. ಒಂದು ಕ್ಷಣ ಅವರ ಕಣ್ಣುಗಳನ್ನೇ ನಂಬದಾದರು. ಸೊಸೆಯ ಮೇಲಿನ ಪ್ರೀತಿ ಗೌರವ ಮತ್ತಷ್ಟು ಹೆಚ್ಚಿತ್ತು. ಶಾಂತಿ ಪಿ.ಜಿ ಯಲ್ಲಿರುವ ವಿಷಯ ತಿಳಿದ ವಿಷ್ಟು ಅಲ್ಲಿಗೆ ಹೋದನು. ಶಾಂತಿ ಯಾಕಿಂಗ್ ಮಾಡ್ದೆ ಎರಡೂ ಮನೆಯವರೂ ಎಷ್ಟು ಟೆನ್ಸನ್ ಆಗಿದ್ದಾರೆ ಗೊತ್ತಾ? ತಪ್ಪು ಮಾಡ್ಬಿಟ್ಟೆ ಶಾಂತಿ ನೀನು ಎಂದನು. ಅದಕ್ಕೆ ಶಾಂತಿ ನಕ್ಕು ತಪ್ಪಾ? ಯಾರು ಮಾಡಿದ್ದು? ತಪ್ಪು ವಿಷ್ಣುವಿಗೆ ಒಂದು ಕ್ಷಣ ತನ್ನ ತಪ್ಪು ಹಿಂಬಾಲಿಸಿದಂತಿತ್ತು. ಸರಿ ಆಗಿದ್ದು ಆಯ್ತು ಬಾ ಮನೆಗೆ ಹೋಗೊಣ. ನಿಮ್ಮಪ್ಪ ಅಮ್ಮ ಅಲ್ಲಿ ಎಷ್ಟು ಗಾಬರಿ ಆಗಿದ್ದಾರೆ ಗೊತ್ತಾ? ಅವ್ರಿಗೆ ನಿನ್ನ ಬಿಟ್ರೆ ಬೇರೆ ಯಾರಿದ್ದಾರೆ? ವಯಸ್ಸಾಗಿರೋ ಕಾಲದಲ್ಲಿ ಯಾಕ್ ಎಲ್ರನ್ನೂ ಇಷ್ಟು ಗೋಳಾಡಿಸುತ್ತಿದ್ದಿ ಎಲ್ಲರೂ ಎಲ್ಲವನ್ನೂ ಮರೆತಾಗಿದೆ ನಡಿ ಮನೆಗೆ ಎಂದನು.
ಆದರೆ ನೀವು ಯಾವುದನ್ನೂ ಮರೆತಿಲ್ಲ. ಹಳೆಯ ಸತ್ಯಕ್ಕೆ ಹೊಸ ಸುಳ್ಳಿನ ಬಣ್ಣ ಹಚ್ಚಿ ಸತ್ಯವೆಂದು ನಂಬಿಸಿದ್ದೀರಿ ಅಲ್ಲವೇ ಎಂದಳು.

ಒಂದು ಕ್ಷಣ ವಿಷ್ಣು ಗಲಿಬಿಲಿಗೊಂಡನು. ಶಾಂತಿ ಏನ್ ಮಾತಾಡ್ತಿದ್ಯ ನಡಿ ಮನೆಗೆ ಎಂದು ಒಪ್ಪಿಸಿ ಕರೆದೊಯ್ದನು ಅವಳ ತವರಿಗೂ ವಿಷಯ ತಿಳಿಸಿದನು.
ಎಷ್ಟೋ ದಿನಗಳ ನಂತರ ಶಾಂತಿಯನ್ನು ಕಂಡ ಜಾನಕಮ್ಮನವರ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಅವಳಿಲ್ಲದ ಪ್ರತಿ ಕ್ಷಣ ಅವರಿಗೆ ವರ್ಷಗಳಂತೆನಿಸಿತ್ತು.
ಶಾಂತಿ ಯಾಕೀಗ್ ಮಾಡ್ದೆ ಅಂತ ನಾನು ಕೇಳಲ್ಲಮ್ಮ. ನಿನ್ನ ಪರಿಸ್ಥಿತಿಯಲ್ಲಿ ನಾನು ಇದ್ದಿದ್ರು ಹಾಗೆ ಮಾಡ್ತಿದ್ದೆ ಎಂದಾಕ್ಷಣ ಶಾಂತಿಯ ಕಣ್ಣುಗಳಲ್ಲಿ ಇಷ್ಟು ದಿನ ಅಡಗಿದ್ದ ಕಣ್ಣೀರು ಒಮ್ಮಲೆ ಕಟ್ಟೆ ಒಡೆದು ಹರಿಯಿತು. ಇಡೀ ಮನೆಯಲ್ಲಿ ಸತ್ಯ ಸತ್ತು ಸೂತಕದ ಛಾಯೆಯೇ ತುಂಬಿತ್ತು. ಶಾಂತಿಯೂ ಪದ್ಮಾಳನ್ನು ತನ್ನ ಮಗಳಂತೆ ಪ್ರೀತಿಸ ತೊಡಗಿದಳು. ಸತ್ಯ ಒಂದಲ್ಲಾ ಒಂದು ದಿನ ಹೊರ ಬರುತ್ತದೆ ಎಂದು ನಂಬಿ ಮೂಕಳಾದಳು.
ಒಮ್ಮೆ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ತನ್ನ ಮನೆಯಲ್ಲಿ ಸಂಜಯನನ್ನು ಕಂಡ ಶಾಂತಿಗೆ ಆಶ್ಚರ್ಯ ಆತಂಕ ಸಂತೋಷ ಉಕ್ಕಿ ಬಂದಿತ್ತು. ಏನ್ ಸಂಜಯ್ ಅಪರೂಪಕ್ಕೆ ನನ್ನ ನೆನೆಸಿಕೊಂಡಿದ್ದೀಯಾ ಏನ್ ಸಮಾಚಾರmakkalaata?
ಹಾಗೇನಿಲ್ಲ ಶಾಂತಿ ಹೊಸ ಕೆಲಸ ಅಲ್ವ? ರಜೆ ಇಲ್ಲ ಅಷ್ಟೇ ಅಲ್ಲಮ್ಮ ಮದುವೆ ಫಿಕ್ಸ್ ಆಗಿದೆ ನನಗೆ.
ಹೌದೇನೋ ಕನ್‍ಗ್ರಾಟ್ಸ್. ಸಂಜು ಹುಡುಗಿ ಯಾರು?
ಸವಿತಾ ಅಂತ ಹುಡುಗಿ ಹೆಸರು ನಮ್ಮ ಕಂಪನಿಯಲ್ಲೆ ಕೆಲಸ ಮಾಡ್ತಿದ್ದಾಳೆ ಅವ್ಳ ನಂತರಾನೆ ಶಾಂತಿ ಅಪ್ಪ-ಅಮ್ಮ ಇಲ್ಲ
ಹೌದೇನೋ… ಹೋಗ್ಲಿ ಬಿಡು ಇನ್ಮುಂದೆ ಅವಳಿಗೆ ನೀನೆ ಎಲ್ಲಾ ಯಾವುದೇ ಕಾರಣಕ್ಕೂ ಅವಳನ್ನ ದೂರ ಮಾಡ್ಬೇಡ ಯಾವ ವಿಷ್ಯಾನೂ ಅವಳಿಂದ ಮುಚ್ಚಿಡ್ಬೇಡ ಆಯ್ತಾ?
ಸರಿ, ಮೇಡಂ ನಾನಿನ್ನ ಹೊರಡ್ತೀನಿ. ಮರೆಯದೆ ನಿಮ್ಮನೆಯವರನ್ನೆಲ್ಲಾ ಮದುವೆಗೆ ಕರ್ಕೊಂಡು ಬಾ ಹಾ ಅಂದ ಹಾಗೆ ಆ ಮಗು ಯಾರ್ದು ತುಂಬಾ ಮುದ್ದಾಗಿದೆ.
ಆ ಮಗುನಾ ಪದ್ಮಾ ಅಂತ. ನಮ್ಮ ಮನೆಯವರ ಮಗು.
ಇನ್ನೂ ನಿನ್ನ ತಮಾಷೆ ಬಿಟ್ಟಿಲ್ಲ ನೋಡು ಎಂದು ಸಂಜಯ್ ಹೊರಟನು. ಶಾಂತಿ ಮದುವೆಗೆ ಹೋಗುವ ವಿಷಯದ ಕುರಿತು ವಿಷ್ಣುವಿನ ಬಳಿ ಕೇಳಿದಳು. ಕ್ಷಮಿಸು ಶಾಂತಿ ಹೊಸ ಮ್ಯಾನೆಜರ್ ಬಂದಿದ್ದಾರೆ. ರಜೆ ಕೊಡಲ್ಲ ನೀನು ಅಮ್ಮ ಪದ್ಮ ಹೋಗ್ಬನ್ನಿ ಇನ್ನೊಮ್ಮೆ ನಾನು ನೀನು ಅವರ ಮನೆಗೆ ಹೋಗಿ ಶುಭಾಶಯ ಹೇಳಿ ಬರೋಣ ಎಂದನು. ಅವನ ಮಾತಿನಂತೆಯೇ 3 ಜನ ಮದುವೆಗೆ ಹೊರಟರು.
ಹುಡುಗಿ ತುಂಬಾ ಲಕ್ಷಣವಾಗಿದ್ದಾಳೆ ಅಲ್ವ ಶಾಂತಿ?
ಹೌದು ಅತ್ತೆ ಆದ್ರೆ ಎಲ್ಲೋ ನೋಡಿರೊ ಹಾಗೆ ಅನ್ನಿಸ್ತಿದೆ .
ಅಂದು ಬೀರುವಿನಲ್ಲಿ ಕಂಡ ಪೋಟೋದಲ್ಲಿದ್ದ ಹುಡುಗ. ಇವಳೆ ಹೌದು ವಿಷ್ಣು ಮತ್ತು ಪದ್ಮಾಳ ಜೊತೆಗಿದ್ದ ಆ ಹುಡುಗಿ ಇವಳೆ. ಅಯ್ಯೋ ಸಂಜಯ್ ನೀನು ನನ್ನಂತಾದೆ ಅವಳು ವಿಷ್ಣುವಾದಳು ಎಂದು ಶಾಂತಿ ಮನದಲ್ಲೆ ಮರುಗಿದಳು
‘ಅತ್ತೆ ಅವರಿಗೆ ಹೇಳಿ ಬರ್ತೀನಿ ತಡ ಆಗುತ್ತೆ ಹೊರಡೋಕೆ’
‘ಸರಿ ಶಾಂತ ಬೇಗ ಬಾ ನಾನು ಹೊರಗಿರ್ತೀನಿ’
ಶಾಂತಿ ಸವಿತಾಳ ಬಳಿ ಸಾಗಿ ಸತ್ಯವನ್ನು ಸಮಾಧಿ ಮಾಡಿದ್ದೀರಿ ಕೆಣಕಿದಷ್ಟು ನಿಮಗೆ ತೊಂದರೆ ಎಂದು ಹೇಳಿ ಹೊರಟು ಬಿಟ್ಟಳು.
ಆಶ್ಚರ್ಯದಿಂದ ಕೂಡಿದ ಸವಿತಾಳ ಕಣ್ಣುಗಳು ಶಾಂತಿಯನ್ನೇ ಹಿಂಬಾಲಿಸದವು.

 

One Response to "ಬಂಧನ"

  1. Mahi  November 17, 2016 at 10:24 am

    Story channagide, soochaka chihnegala balake sariyilla.

    Reply

Leave a Reply

Your email address will not be published.