ನಾಮು ಮಾತಾಡ್ತಿಮಿ

ಶಿವಣ್ಣ ಕೆಂಸಿ

ಹೌದು! ನಾಮು ಮಾತಾಡ್ತಿಮಿ
ಆದ್ರೆ ಕಿಮಿ ಮುಚ್ಚಿ ನೋಡಿ ಅಷ್ಟೇ!

ನಮ್ಮಲ್ಲೂ ಕಪ್ಪು, ಬಿಳಿ
ಕೆಂಪು, ನೀಲಿ, ಹಸ್ರುಗಳೆಂಬೂ
ಬಣ್ಗಳ್ ಬಡ್ದಾಟ ಇದ್ದುದ್ದೆ

ನಿಚ್ಚ ನೆಡೆಯುತ್ತಲೆ ಇದೆ
ಜಗ್ಳ, ಕೋಪ, ತಾಪ, ಸಿಟ್ಟು
ಮುನ್ಸು, ಸೇಡು ಎಲ್ಲಾ ಮಾಮೂಲೆ
ಆದ್ರು ಆಪೀಸ್ಗಳ್ಲಿ ನಮ್ಮದೇ ದರ್ಬಾರು
ಹಳ್ಳಿಯಿಂದ ದಿಲ್ಲಿವರ್ಗೂ

ಅಲ್ಲ ಈ ಜವಾನನ್ ದೌಲತ್ ನೋಡು
ಯಂಗತಂದ್ ಬಿಸಾಕ್ತನೆ, ನಾನೇನ್ ಕಸ್ವೆ
ನನ್ನ ರಾಜ್ರಿಂದಿಡ್ದು ಆಳ್ಗೊಳ್ ತಂಕ
ಮುಟ್ಟೋದೆನು ಬಚ್ಚಿಡದೇನು
ಬಿರಲ್ಲಿ ಮೌರಾಗಿ ಮಡ್ಗದೇನು

ನನ್ನೊ ಒಂದ್ಸಾರಿ ನೆಟ್ಗೆ, ಒಂದ್ಸಾರಿ ಅಡ್ಕೆ
ಇಲ್ಲ ಅಂದ್ರೆ ಯಂಗ್ಬೇಕಂಗೆ ಇಟ್ಟಿರ್ತಾರೆ
ನಾನ್ ಯಾವ್ ಜನ್ಮದ್ ಪಾಪ ಮಾಡ್ದಿನೋ
ಅದ್ಕಿಂಗೆ ಎಲ್ಲೆಂದ್ರಲ್ಲಿ ಅಲಿತಿರೋದು ಕನ

ಆ ಆಪೀಸಿಂದ ಈ ಆಪೀಸ್ಗೆ
ಈ ಆಪೀಸಿಂದ ಆ ಆಪೀಸ್ಗೆ
ವತ್ಕೊಂಡು ವಯ್ತೇರದೆ
ಒಬ್ರಾದ್ಮೆಲೊಬ್ರು ನನ್ಮೆಲ್
ಬರ್ಯೋದೇನು, ಗೀಚೋದೇನು
ನನ್ಗೂ ಸಾಕ್ ಸಾಕಾಗದೆ

ಕಾಸಿದ್ರೆ ಮ್ಯಾಕೆ ಇಲ್ದಿದ್ರೆ ಕೆಳಕೆ
ಒಬ್ರುಗೊಂತರ ಇನ್ನೊಬ್ರುಗೊಂತರ
ಮಾಡಿ ಮಾಡಿ ನನ್ ಅಂದನೆ ಆಲ್ ಮಾಡ್ಬುಟವ್ರೆ

ನಾನು ಯಾರ್ಗು ವಂಚ್ನೆ ಮಾಡಿಲ್ಲ
ನಂಗೆ ಯಲ್ಲಾ ಒಂದೆ
ಬಡವ ಇರ್ಲಿ, ಶ್ರೀಮಂತ ಇರ್ಲಿ
ಮೇಲ್ಜಾತಿ ಇರ್ಲಿ, ಕೀಳ್ ಜಾತಿ ಇರ್ಲಿ
ಯಲ್ರೂನೂ ಒಂದೇ

ಅಲ್ಲ ಎಷ್ಟ್ ಜನ ನನ್ನಿಂದ ಬದ್ಕಿಲ್ಲ
ಅವರ್ ಜಾತ್ಕ ಯಲ್ಲ ನಂಗ್ ಗೊತ್ತಿಲ್ವೆ
ನಾನೇನರೂ ಮಾತಾಡ್ಕನಿಂತ್ಕನ್ನ ಅಂದ್ರೆ
ಯಲ್ರೂ ಬಂಡ್ವಳ್ವ ಬಯ್ಲಮಾಡ್ಬುಡ್ತಿನಿ ಅಷ್ಟೇ
ನಾನು ಮಾತ್ಡತಿನಿ ನಂಗೂ ಹಕ್ಕದೆ

 

Leave a Reply

Your email address will not be published.