ಜಾಗತೀಕರಣ : ಸಂದಿಗ್ಧತೆಯಲ್ಲಿ ಮಹಿಳೆ

ಯಮುನ ಕೊನೇಸರ

ಇಡೀ ವಿಶ್ವವೇ ಒಂದು ಸಣ್ಣ ಹಳ್ಳಿಯಾಗಿದೆ. ಆಧುನಿಕ ಸಂಪರ್ಕ ಮಾದ್ಯಮಗಳು ,ಸಮೂಹ ಮಾಧ್ಯಮಗಳು ವಿಶ್ವದ ಒಂದು ಮೂಲೆಯಲ್ಲಿ ನಡೆಯುವ ವಿದ್ಯಮಾನವನ್ನು ಪ್ರಪಂಚದ ಇನ್ನಾವುದೇ ಒಂದು ಮೂಲೆಯಲ್ಲಿ ಕುಳಿತು ನೋಡಲು, ತಿಳಿಯಲು ಸಾಧ್ಯವಾಗುವಂತೆ ಮಾಡಿದೆ. ಇದನ್ನೆ ನಾವು ಸ್ಥೂಲವಾಗಿ ಜಾಗತೀಕರಣ ಎನ್ನುತ್ತೇವೆ.

ಅಖಂಡ ಜಗತ್ತನ್ನು ತನ್ನ ಅಖಾಡವಾಗಿರಿಸಿಕೋಂಡು ಸಮಕಾಲೀನ ಮಾನವ ಜೀವನದ ಎಲ್ಲ ಶಾಖೆಗಳ ಮೇಲೂ ಪ್ರಭಾವವನ್ನು ಬೀರುತ್ತಿರುವ ಅತ್ಯಂತ ಪ್ರಭಲ ಹಾಗು ಪ್ರಚೊದಕ ವಿದ್ಯಮಾನ ಈ ಜಾಗತೀಕರಣ.

ಮೇಲ್ನೋಟಕ್ಕೆ ಇಷ್ಟೊಂದು ಸುಂದರವಾದ ಆಶಯಗಳನ್ನು ಒಳಗೊಂಡ ಪ್ರಕ್ರಿಯೆಗೆ ಒಂದೆಡೆ ವಿರೋಧ ಯಾಕೆ ? ತೃತೀಯ ಜಗತ್ತಿನ ಬಡ ರಾಷ್ಟ್ರಗಳ ಪಾಲಿಗೆ ಮತ್ತು ಮುಂದುವರೆಯುತ್ತಿರುವ ರಾಷ್ಟ್ರಗಳ ಪಾಲಿಗೆ ಇದು ಮೆಲ್ನೋಟಕ್ಕೆ ಕಾಣುವಷ್ಟು ಸುಂದರವೂ ಅಲ್ಲ, ಸರಳವೂ ಅಲ್ಲ.ಎರಡು ದಶಕಗಳ ಹಿಂದೆ ಅಮೇರಿಕಾ ಹಾಗು ಅದರ ಮಿತ್ರ ರಾಷ್ಟ್ರಗಳ ಕೂಸು, ಈ ಜಾಗತಿಕರಣ ಎನ್ನುವ ಅಭಿಪ್ರಾಯ ಬಲವಾಗಿದೆ. ಅಷ್ಟೇ ಏಕೆ ಹಲವಾರು ಬುಧ್ಧಿಜೀವಿಗಳು,ತಜ್ಞರು ಜಾಗತಿಕರಣದ ವಿರುಧ್ಧ ಧ್ವನಿ ಎತ್ತಿದ್ದಾರೆ ಯಾಕೆ?

ಜಾಗತಿಕರಣವನ್ನು ವಿಷಕನ್ಯಗೆ ಹೋಲಿಸುವ ಲೇಖಕರೋಬ್ಬರು ಅವರೊಂದಿಗೆ ಉದಾರಿಕರಣ ,ಆಧುನಿಕರಣ ,ಖಾಸಗೀಕರಣ, ಕಂಪ್ಯೂಟರೀಕರಣ, ಮಾಹಿತಿ ತಂತ್ರಜ್ಞಾನ, ಮಲ್ಟಿಕಲ್ಚರ ಮೊದಲಾದುವನ್ನು ಸೇರಿಸಿ ಮಾಯಾಂಗನೆ ಎಂದು ಕರೆದಿದ್ದಾರೆ.
ಜಾಗತೀಕರಣದ ಪ್ರಕ್ರಿಯೆಯನ್ನು ಸಾಮ್ರಾಜ್ಯಶಾಹಿಯ ಹೊಸ ರೂಪದ ಅಕ್ಟೊಪಸ ಎನ್ನುವ ಲೇಖಕರು ಅದು ಶೀಘ್ರ ಪರಿಣಾಮ ಉಂಟು ಮಾಡಿರುವ ಕ್ಷೇತ್ರಗಳೆಂದು, ಕೃಷಿ, ಕೈಗಾರಿಕೆ, ಮತ್ತು ಶೈಕ್ಷಣಿಕ ವಲಯ ಎನ್ನುತ್ತಾರೆ. ಉದಾರಿಕರಣ, ಮಾಧ್ಯಮ, ಮಹಿಳೆಯರ ಕ್ಷೇತ್ರಗಳಲೆಲ್ಲಾ ಅದರ ರೆಂಬೆ ಕೊಂಬೆಗಳಾಗಿವೆ.

ಜಾಗತೀಕ ಮಟ್ಟದಲ್ಲಿ ಎಲ್ಲಾ ರಾಷ್ಟ್ರಗಳಿಗೆ ,ಜನತೆಗೆ ಧರ್ಮ –ವರ್ಣಬೇಧ ಪ್ರಾದೇಶಿಕ ಮನೋಭಾವ ತೊರೆದು ಜಾಗತೀಕ ನ್ಯಾಯ ಸಮಾನಾಂತರವಾಗಿ ಹಂಚಿಕೆಯಾಗಲಿ. ಇದು ಜಾಗತೀಕರಣದಿಂದ ಸಾಧ್ಯವಾಗಿದೆಯೇ? ಜಾಗತೀಕರಣದ ಮೂಲ ಗುರಿ ಲಾಭ -ಹಾಗಾಗಿ ಮಾನವ ಹಕ್ಕುಗಳಾಗಲಿ, ಕಾರ್ಮಿಕರ ಹಕ್ಕುಗಳಾಗಲಿ,ಮಹಿಳೆಯರ ಹಕ್ಕುಗಳಾಗಲಿ ನೆಲೆಕಚ್ಚಿವೆ. ಕಲ್ಯಾಣ ನಮ್ಮ ಸಂವಿಧಾನದ ಗುರಿ ಕಲ್ಯಾಣ ರಾಜ್ಯದ ಪರಿಕಲ್ಪನೆ-ಆದ್ರೆ ಜಾಗತಿಕರಣ ಬಂದ ನಂತರ 160 ಸೇÉವೆಗಳನ್ನು ಖಾಸಗೀಕರಣಗೋಳಿಸುವ ಮೂಲಕ ಬಡತನ ನಿರುದ್ಯೋಗ ಹೆಚ್ಚುತ್ತಲೇ ಇದೆ.ಅರಣ್ಯನಾಶ, ಪರಿಸರನಾಶ –ಇದು ಜಾಗತೀಕರಣದ ಇನೋಂದು ಮುಖ. ಬಹುರಾಷ್ಟ್ರೀಯ ಕಂಪನಿಗಳ ವಿಸ್ತರಣೆಯಿಂದ ನೆಲ-ಜಲ-ಗಾಳಿ-ಪ್ರಕೃತಿ ಎಲ್ಲವೂ ಮಲೀನ.
ಪುರಾತನ ಅಮಲಿನಲ್ಲಿ ನರಳುತ್ತಿರುವ ಈ ದೇಶಕ್ಕೆ ರೈತನಾಗಲಿ, ನಮ್ಮ ಸರ್ಕಾರವೇ ಆಗಲಿ,ಮಹಿಳೆಯರೇ ಆಗಲಿ, ಗ್ರಾಮೀಣ ಪ್ರತಿಭೆಗಳೇ ಆಗಲಿ ಈ ಸ್ಪರ್ದೆಗೆ ಸಲ್ಲುವವರಲ್ಲ.

ಜಾಗತೀಕರಣ ಮತ್ತು ಮಹಿಳೆ
ಇಲ್ಲಿ ನಾನು ನೇರವಾಗಿ ಜಾಗತೀಕರಣ ಮತ್ತು ಮಹಿಳೆ ವಿಷಯಕ್ಕೆ ಬರಬೇಕಾಗಿದೆ. ಜಾಗತೀಕರಣ ತೂಗುಗತ್ತಿ,ಕೈಗಾರಿಕೆ,ಕೃಷಿ, ರೈತರು, ಬ್ಯಾಂಕ ಶಿಕ್ಷಣ,ಆರೋಗ್ಯ ಮಾಧ್ಯಮಗಳ ಮೆಲೂ ತನ್ನ ಕಬಂಧ ಬಾಹುಗಳನ್ನು ಚಾಚಿದೆ.ಆದ್ರೆ ವಿಶೇµವಾಗಿ Àಮಹಿಳೆಯರ ಮೇಲೆ ಯಾವ ರೀತಿ ಪರಿಣಾಮ ಬೀರಿದೆ? ಅಥವಾ ಸಂಬಂಧ ಹೊಂದಿದೆ ಎನ್ನುವದು ಇಲ್ಲಿ ಪ್ರಸ್ತುತ

1. ಜಾಗತಿಕರಣದಲ್ಲಿ ದುಡಿಯುವ ಮಹಿಳೆ-
2. ಜಾಗತೀಕರಣದಲ್ಲಿ ಗ್ರಾಮೀಣ ಮಹಿಳೆ-
3. ಜಾಗತೀಕರಣದಲ್ಲಿ ಮಹಿಳೆ ಮತ್ತು ಮಾದ್ಯಮ
ಹೀಗೆ 3 ಹಂತದಲ್ಲಿ ನಾನು ವಿಷಯವನ್ನು ಮಂಡಿಸುತ್ತೆನೆ.
ಜಾಗತಿಕರಣದಿಂದ ,ಮಾಹಿತಿ ತಂತ್ರಜ್ಞಾನದ ಪರಸ್ಪರ ಸಹಕಾರದಿಂದ ಇಡೀ ವಿಶ್ವದಲ್ಲೇ ನಡೆಯುವ ಪ್ರತಿಯೊಂದು ವಿಷಯವನ್ನು ಕುಳಿತಲ್ಲೇ ತಿಳಿದುಕೋಳ್ಳಬಹುದು. ಹಾಗಾಗಿ ಮಹಿಳೆಯರೇನು ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಪುರುಷ ಪ್ರಾಭಲ್ಯ ಕ್ಷೇತ್ರಗಳಿಗೂ ದಾಪುಗಾಲು ಹಾಕುತ್ತಿದ್ದಾರೆ ಉದಾ;-ಕಳೆದ ವರ್ಷವಷ್ಟೇ ಕ್ಷಿಪಣಿ ಯೋಜನೆಯಲ್ಲಿ ಮೊಟ್ಟ ಮೊದಲು ಮಹಿಳೆಯಾಗಿ 48 ವರ್ಷದ ಚಸ್ಸಿ ಥಾಮಸ ಅಮೇರಿಕಾ, ಚೀನಾ, ರಷ್ಯಾದಂತ ರಾಷ್ಟ್ರಗಳ ಸಾಲಿಗೆ ಭಾರತವನ್ನು ಸೇರಿಸಲು ಸಜ್ಜಾಗಿದ್ದಾರೆ. ಮಹಿಳೆಯರಲ್ಲಿ ಆರ್ಥಿಕ ಕ್ಷೇತ್ರ ಶಿಕ್ಷಣ,ಮಾಧ್ಯಮಗಳಲ್ಲಿ ಜಾಗ್ರತೆ ಮೂಡಿಸುವಲ್ಲಿ ಜಾಗತೀಕರಣ ಪ್ರಬಾವ ಬೀರಿದೆ. ಆದರೆ ಜಾಗತೀಕರಣವೋಂದೇ ಅದಕ್ಕೆ ಕಾರಣವಲ್ಲ. ಯಾಕೆಂದರೆ ಜಾಗತೀಕರಣದ ಸಂಧಿಗ್ದತೆಯಲ್ಲಿ ವ್ಯಾಪಾರ,ವಹಿವಾಟು, ಮುಕ್ತ ಮಾರುಕಟ್ಟೆ ವಿಶ್ವ ದೃಷ್ಟಿಕೋನದ ಭರಾಟೆಯಲ್ಲಿ ಮಹಿಳೆಯ ಸ್ಥಿತಿ ಬಗ್ಗೆ ಅವಲೋಕಿಸುವಷ್ಟು ಸಮಯವೇ ಯಾರಿಗೂ ಇಲ್ಲ, ವ್ಯವಧಾನವೂ ಇಲ್ಲ.ಜಾಗತೀಕರಣ ನೀತಿ ರೂಪಗೊಂಡಿದ್ದು ಸಾಮ್ರಾಜ್ಯಶಾಹಿಗಳ ಹಿತಾಸಕ್ತಿಯಲ್ಲಿ, ಶಿಕ್ಷಣವನ್ನು ಒಂದು ವ್ಯಾಪಾರದ ವಸ್ತುವನ್ನಾಗಿಸುವಲ್ಲಿ. ಹಾಗಾಗಿ 100 ಕೋಟಿ ಬಂಡವಾಳ ಹೂಡಬಲ್ಲ ಕೈಗಾರಿಕೋದ್ಯಮಿಗಳಿಗೆ ವಿಶ್ವವಿದ್ಯಾಲಯ ಮಾರುತ್ತಿರುವದು. ಇಂತಹ ಶಿಕ್ಷಣನೀತಿಯಡಿ ಮಹಿಳೆಯರ ಪರಿÀಸ್ಥಿತಿ ಹೇಗಿರಬಹುದು? ಅಜ್ಞಾನದ ಅಂಧಕಾರಕ್ಕೆ ತಳ್ಳುತ್ತಿದೆಯೇ? ಶಿಕ್ಷಣ ಕ್ಷೇತ್ರದಲ್ಲಿ 75% ರಷ್ಟು ಮಹಿಳೆಯರೇ ಮಕ್ಕಳನ್ನು ಸತ್ಪ್ರಜೆಗಳನ್ನಾಗಿಸುವ ಜವಾಬ್ದಾರಿ ಅವರ ಪಾಲಾಗಿದೆ. ಇದರ ಜೊತೆ ಹೋಸಶಿಕ್ಷಣ ನೀತಿಗೆ ಹೆಚ್ಚುವರಿ ಹೊರೆಯೂ ಇದೆ. ಆದ್ರೆ ಕುಸಿಯುತ್ತಿರುವ ಆರ್ಥಿಕತೆಯನ್ನು ರಕ್ಷಿಸುವ ಹೆಸರಿನಲ್ಲಿ ಹುದ್ದೆಗಳನ್ನು ಕಡಿತ ಗೊಳಿಸಲಾಗುತ್ತಿದೆ. ಇದಕ್ಕೆ ಬಲಿಪಶು ಮಹಿಳಾ ಉದ್ಯೋಗಸ್ತರು.

ಇನ್ನು ಸಣ್ಣ ಪುಟ್ಟ ಕೈಗಾರಿಕೆಗಳಲ್ಲಿ ಕೆಲಸ ಮಾಟುವ ಮಹಿಳೆಯರ ಪಾಡಂತೂ ಹೇಳ ತೀರದು. ಸಣ್ಣ ಕೈಗಾರಿಕೆಗಳು ಲಕ್ಷಾಂತರ ಸಂಖ್ಯೆ ಮುಚ್ಚಿ ಹೊಗಿದ್ದು ಸಾವಿರಾರು ಸ್ತ್ರೀಯರ ಬದುಕಿಗೆ ಮಾರಕವಾಗಿದೆ.
ಭಾರತ ವಿಶ್ವ ವಾಣಿಜ್ಯ ಸಂಸ್ಥೆಯನ್ನು ಪ್ರವೆಶಿಸಿದ ಮೇಲೆ 5 ಲಕ್ಷ ಕಾರ್ಖಾನೆಗಳು ಮುಚ್ಚಿ ಹೋಗಿದ್ದು 18 ಕೋಟಿ ವಿದ್ಯಾವಂತರು ನಿರುದ್ಯೋಗಿಗಳಾಗಿದ್ದಾರೆ.
ಗ್ರಾಮೀಣ ಮಹಿಳೆಯರು ಮೊದಲು ನಿರ್ಲಕ್ಷಿತರು, ಜಾಗತೀಕರಣದಲ್ಲಿ ಸ್ಪರ್ಧೆಯಲ್ಲಿ ಇನ್ನೂ ನಿರ್ಲಕ್ಷಿತರು. ಜಾಗತೀಕರಣವು ತಂದೋಡ್ಡುವ ಖಾಸಗೀಕರಣವು ಹಳ್ಳಿಗಳಲ್ಲಿ ಪ್ರವೇಶಿಸಿದ್ದು ಕೆಟ್ಟ ರಾಜಕೀಯ , ಗಂಡಸರನ್ನು ಕುಡುಕರನ್ನಾಗಿಸಿ ಅವರ ಹೆಂಡಿರನ್ನು ಅನಾಥರನ್ನಾಗಿgಸಿದೆ. ನಿಜವಾದ ಹಳ್ಳಿಗಳು ತಮ್ಮ ಅಸ್ಥಿತ್ವವನ್ನು ಕಳೆದುಕೊಂಡಿವೆ. ಕೃಷಿ, ಹೈನುಗಾರಿಕೆಯನ್ನು ಅವಲಂಬಿಸಿದ್ದ ಕುಟುಂಬÀಗಳು ತತ್ತರಿಸಿ ಬಡತನ, ಪುರುಷರ ಸಾಲ, ದಿವಾಳಿತನ ಆತ್ಮಹತ್ಯೆಗಳಿಂದಾಗಿ ಮಕ್ಕಳನ್ನು ಸಾಕುವ ಜವಾಬ್ದಾರಿ ಬಡ ರೈತ ಹೆಣ್ಣುಮಕ್ಕಳಿಗೆ. ಕುಟುಂಬದೊಂದಿಗೆ ಅವರಿಗೆ ಸಿಗಬೇಕಾದ ಭದ್ರತೆಯೂ ಇಲ್ಲ.
ಗ್ರಾಮೀಣ ಆರ್ಥಿಕತೆ ಸುಧಾರಣೆಗಾಗಿ ಕಂಡುಬರುವ ಸುಧಾರಣೆಗಳು ಮಹಿಳೆಯರ ಸ್ವಾವಲಂಬನೆಗೆ ಮಾರಕವಾಗಿ ಪರಿಣಮಿಸುತ್ತಿವೆ.ಸ್ತ್ರೀಶಕ್ತಿ,ಸ್ವಸಹಯ ಗುಂಪುಗಳುಉತ್ತಮ ಸಾಧನವಾದರೂ ಪುರುಷ ಸಮಾಜದ ಚೌಕಟ್ಟಿನೊಳಗೆ ನಲುಗುತ್ತಿರುವುದು ಸ್ಪಷ್ಟವಾಗಿದೆ.ಸ್ತ್ರೀಯರ ಉಳಿತಾಯ ಪುರುಷರ ಲೇವಾದೇವಿ ವ್ಯವಹಾರಕ್ಕೆ ಬಂಡವಾಳವಾಗಿದೆ.ಆಳುವ ವರ್ಗದ ಅಧಿಕಾರದ ವಿಕೇಂದ್ರಕರಣ ಪ್ರಕ್ರಿಯೆಯಲ್ಲಿ ಸಹ ಮಹಿಳೆಯರು ಪುರುಷರ ಕೈಗೊಂಬೆಯಾಗಿದ್ದು,ಕಟುವಾಸ್ತವ.
ಇನ್ನು ಗ್ರಾಮೀಣ ಭಾಗದ ವಿದ್ಯಾವಂತರಿಗೆ ವಿದ್ದೆಗೆ ತಕ್ಕ ಗೌರವಾನ್ವಿತ ಉದ್ಯೋಗ ಗ್ರಾಮದಲ್ಲಿ ಇಲ್ಲವಾಗಿದೆ. ಪಟ್ಟಣದಲ್ಲಿ ಉದ್ಯೋಗ ಹೊಂದಿ ಗ್ರಾಮದಲ್ಲಿ ಇರಲಾರರು. ಕಾರಣ ಮೂಲಭೂತ ಸೌಕರ್ಯಗಳ ಕೊರತೆ, ಓದಿದ ಹೆಣ್ಣು ಮಕ್ಕಳು ಗ್ರಾಮೀಣ ವರಗಳಿಗೆ ಮದುವೆಯಾಗಲು ಹಿಂದೇಟು ಹಾಕುವುದು,ಆಧುನಿಕತೆಯ ಸವಲತ್ತುಗಳು ನಗರದತ್ತ ಆಕರ್ಷಿತರಾಗಲು ಇನ್ನೊಂದು ಕಾರಣ. ಹಾಗಾಗಿ ಗ್ರಾಮದಿಂದ ಪಟ್ಟಣಕ್ಕೆ ವಲಸೆ ಪ್ರಾರಂಭವಾಗಿವೆ. ಭಾರತದ ಗ್ರಾಮಗಳು ಹಳ್ಳಿಗಳಾಗಿಯೇ ಉಳಿದಿವೆ.

ಸ್ತ್ರೀ-ಪುರುಷರ ನಡುವೆ ಏರ್ಪÀಟ್ಟಿರುವ ವೃತ್ತಿ ಪ್ರತ್ಯೇಕತೆ ಭಡ್ತಿಯ ಅವಕಾಶದಿಂದ ವಂಚಿತರಾಗಿ ಒಂದೇವೃತ್ತಿಯಲ್ಲಿರುವುದು, ಅಲ್ಪ ಕೂಲಿಗೂ ಕಾರ್ಮಿಕರಾಗಿ ಅಪಾರ ಸಂಖೆಯಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಜಾಗತೀಕರಣ ಉತ್ತರಿಸಬಹುದೇ?
ಅಗತ್ಯವಿದ್ದಾಗ ನೇಮಕಗೊಳ್ಳುವ, ಬೇಡವಾದಾಗ ಹೊರದೂಡುವ ಶಿಕ್ಷಿತ ಮಹಿಳಾ ವರ್ಗಕ್ಕÉ (ಸೆಲ್ಸಗರ್ಲ ಹೆಸರಿನಲ್ಲಿ) ಪರಿಹಾರವಿದೆಯೇ? “ಬಡತನ ಎಲ್ಲವನ್ನು ಮಾರಿದರೆ ಹಣ ಎಲ್ಲವನ್ನು ಖರೀದಿಸುತ್ತದೆ.”
ಉದ್ಯೋಗಂ ಪುರುಷ ಲಕ್ಷಣಂ ಎಂದು ಸಾರುತ್ತಾ ಈ ಪುರುಷ ಪ್ರಧಾನ ಸಮಾಜ ಮಹಿಳೆಯರಿಗೆ ಉದ್ಯೋಗ ನಿರಾಕರಿಸಿತ್ತು. ಹಾಗಂತ ಮಹಿಳೆಯರು ಸುಖ-ಭೋಗಿಗಳಾಗಿ ವಿಶ್ರಾಂತ ಜೀವನ ನಡೆಸುತ್ತಾ ಇದ್ರು ಅಂತಲ್ಲ.ಹಗಲಿರುಳು ಗಾಣದೆತ್ತಿನಂತೆ ದುಡಿತಿದ್ರು.ಆದರೆ ಮನೆಯಲ್ಲಿ ಅನುತ್ಪಾದಿತ ವಲಯದಲ್ಲಿ ಬಿಡಿಕಾಸಿನ ಕೂಲಿಯಿಲ್ಲದೇ ! ಸಮಾಜ ಕೈಗಾರಿಕರಣಗೋಂಡ ನಂತರ ಉದ್ಯೋಗಸ್ಥ ಮಹಿಳೆಯರ ತಂಡೇ ಜನ್ಮ ತಳೆಯಿತು. ವಿದ್ಯಾವಂತರು ಶಿಕ್ಷಣ ಕ್ಷೇತ್ರ, ವೈದ್ಯಕೀಯ, ಇಂಜನೀಯರಿಂಗ, ಬ್ಯಾಂಕಿಂಗ ವಿಮೆ,ಪೈಲಟ್ ಮುಂತಾದ ಕ್ಷೆತ್ರಗಳಲ್ಲಿ ಹೋದ್ರೆ ಅನಕ್ಷರಸ್ತರು,ಕಾರ್ಖಾನೆಗಳಲ್ಲಿ ವಿಶಿಷ್ಟವಾಗಿ ಸಿಧ್ದ ಉಡುಪು ಇಲೆಕ್ಟ್ರಾನಿಕ್ ಸಲಕರಣೆಗಳ ತಯಾರಿಕಾ ಘಟÀಕಗ¼ಲ್ಲಿ ಸೇರಿದರು. ಇನ್ನು ಬಡವರು ಅಸಂಘಟಿತ ವಲಯಗಳಾದ ಮನೆ-ಕೂಲಿ, ಗಾರೆ ಕೆಲಸ,ಕೃಷಿ ಕೂಲಿ ಇಂಥಾ ಕಡೆ ಸೇರಿದ್ರು.

ಇನ್ನು ಅಸಂಘಟಿತ ವಲಯದಲ್ಲಿ (ಕೃಷಿ,ಗಾರೆ,ಮನೆಕೆಲಸ) ಸ್ಥಿತಿ ಶೋಚನೀಯ. ಅಗ್ಗದ ಕೂಲಿ,ಸಮಾಜಿಕ ಭದ್ರತೆಇಲ್ಲ,ವೈದೈಕೀಯ ಸೌಲಭ್ಯವಿಲ್ಲ.ಪ್ರಾಣಹಾನಿಗೆ ಪರಿಹಾರವಿಲ್ಲ. ಗುಡಿಗಾರಿಕೆಗಳು ಹೊರಗಿನಿಂದ ಬರುತ್ತಿರುವ ಸಾಮಗ್ರಿಗÀಳಿಂದ ಪೈಪೋಟಿ ಮಾಡಲಾಗದೇ ನೆಲ ಕಚ್ಚಿವೆ. ಜಾಗತೀಕರಣ ಇವರ ಕೈ ತುತ್ತನ್ನು ಕಸಿದು ಕೊಂಡಿದೆ. ಹೀಗೆ ಜಾಗತೀಕರಣದ ಕರಿನೆರಳು ದುಡಿಯುವ ನಾರಿಯರ ಮೇಲಂತೂ ಗಧಾ ಪ್ರಹಾರ ಮಾಡಿದೆ.
ಇಂದಿನ ಜಾಗತೀಕರಣ ಯುಗದಲ್ಲಿ ಮಾರುಕಟ್ಟೆಯಲ್ಲಿ ಉದ್ಯಮವಾಗಿ ಎಲ್ಲ ವಸ್ತುವಿನ ಮಾರ್ಕೆಟ ಕುದುರಿಸುವ ಪ್ರಭಲ ಸಾಧನ ಮಹಿಳೆ. ದೊಡ್ಡ ರಾಜೋಪಚಾರ ಮಾಡುವಲ್ಲಿ ಅಗ್ಗದ ವಸ್ತು ಮಹಿಳೆ.ವಿದೇಶಿ ಉತ್ಪಾದಿತ ವಸ್ತುಗಳಿಗೆ ರೂಪದರ್ಶಿ ಮಹಿಳೆ-ಇದನ್ನು ಹೆಮ್ಮೆಯ ಸಂಗತಿ ಎನ್ನುವಂತೆ ಬಿಂಬಿಸುವುದು. ಇದು ಜಾಗತೀಕರಣದಿಂದ ನಮ್ಮ ಸಂಸ್ಕ್ರತಿಯ ನಾಶಕ್ಕೆ ಕಾರಣ.

ಇಂದು ಮಾದ್ಯಮಗಳ ಯುಗ ಆದ್ರೆ ಮಹಿಳೆಯನ್ನು ಗೃಹಿಣಿಯಾಗಿ, ಗ್ರಾಹಕರಾಗಿ ಮಾದಕತೆಯ ಸಂಕೇತವಾಗಿ ಬಿಂಬಿಸುತ್ತವೆ. ಮಹಿಳೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೋಳ್ಳುವ, ದಬ್ಬಾಳಿಕೆಯ ವಿರುಧ್ಧ ಸಿಡಿದೇಳುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನ್ಯಾಯೋಜಿತ ತಿರ್ಮಾನಗಳನ್ನು ತೆಗೆದು ಕೋಳ್ಳುವ ದಿಟ್ಟ ಹೆಣ್ಣನ್ನಾಗಿ ಚಿತ್ರಿಸುವುದು ಅತ್ಯಂತ ವಿರಳ.
ಜಾಹಿರಾತುಗಳಂತೂ ದೇವರೇ ಬಲ್ಲ.-ಸಿಗರೇಟ, ಸೋಪ್‍ನಿಂದ ಹಿಡಿದು ಬನಿಯನ್ ಬ್ಲೇಡವರೆಗೂ ಹೆಣ್ಣು ರೂಪದರ್ಶಿಯಾಗುತ್ತಾಳೆ. ಯಾವದೇ ಜಾಹಿರಾತಿರಲಿ, ಹೆಣ್ಣಿನ ಅಂಗಾಂಗ ಪ್ರದರ್ಶನವಿಲ್ಲದೇ ಇಲ್ಲವೇ ಇಲ್ಲ. ಅದು ಹೋಟ್ಟೆಪಾಡಿಗಾಗಿ , ದುಡ್ಡಿಗಾಗಿ ಎನ್ನುವುದು ಸಮರ್ಥನೆ ಬೇರೆ. ಟಿ.ವಿ.ಧಾರಾವಾಹಿಗಳಲ್ಲಿ ಘಟವಾಣಿ ಅತ್ತೆ ಇಲ್ಲಾ ಅಳಮುಂಜಿ ಸೊಸೆ, ಬಿಟ್ರೆ ಟೈಪ ಮಾಡಿದ ಪಾತ್ರಗಳನ್ನು ಬಿಟ್ರೆ ಬೇರೆಯಿಲ್ಲ.

ಇಂದು ಮನೆಮಂದಿಯಲ್ಲ ಒಟ್ಟಾಗಿ ಕುಳಿತು ನೋಡುವ ಸಿನಿಮಾ ಧಾರಾವಾಹಿ,ಇದೆಯೇ? ರಿಮೋಟ್ ಕೈಯಲ್ಲೇ ಹಿಡಿದು ಗುಟ್ಟಾಗಿ ಕುಳಿತು ನೋಡಬೇಕು. ನೈಜ ಸೌಂದರ್ಯದ ಬೆಲೆ ಕಡಿಮೆ ಯಾಗಿ ತೆಳ್ಳಗೆ, ಬೆಳ್ಳಗೆ ರಕ್ತಕಾರುವಂತಿದ್ದರೂ ಕೇವಲ ದೇಹದ ಅಳತೆ ನಗ್ನತೆ ಇದೇ ಅಪೆಕ್ಷಣೀಯವಾದಾಗ ಮಾಡಲಿಂಗ್ ನಡತೆ,ವೈಶ್ಯಾವೃತ್ತಿ ಬಹು ಹತ್ತಿರದ ಸಂಬಂಧ ಏರ್ಪಟ್ಟಿತು.ಅವರನ್ನು ಸಂಶಯದಿಂದ ನೋಡುತ್ತಿದ್ದ ಸಮಾಜ ಮೆಚ್ಚುಗೆಯ ಕಣ್ಣಿಂದ ನೋಡುತ್ತಿದೆ.
ಬದಲಾದ ಜಾಗತೀಕರಣ ಪರಿಸ್ಥಿತಿಯಲ್ಲಿ ಮಹಿಳೆಗೆ ಕಾನೂನು ಸಲಹೆ, ವೈದ್ಯಕೀಯ ಸಲಹೆ, ಉದ್ಯೋಗ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿಯ ಅಗತ್ಯತೆ ಇದೆ ಇದನ್ನು ಮಾಧ್ಯಮಗಳು ಈಡೇರಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕು. ಮಹಿಳಾ ಸಂಬಂಧಿ ಸಮಸ್ಸೆಗಳನ್ನು ಬಿಂಬಿಸಿ ದೊಡ್ಡದಾಗಿ ಬಿಂಬಿಸುವ ಬದಲು ಅದಕ್ಕೆ ಪರಿಹಾರೋಪಾಯಗಳನ್ನು ಸೂಚಿಸಿ ಧೈರ್ಯ ತುಂಬುವಂತೆ ಮಾಡುವುದು ಮಾಧ್ಯಮಗಳ ಕರ್ತವ್ಯ.ಈಗ ಎಲ್ಲೆಡೆ ಜಾಗತೀಕರಣದ ಭರಾಟೆಯಲ್ಲಿ ಅದರದೇಮಾತು, ಲಾಭ,ನಷ್ಟ,ಒಳಿತು-ಕೆಡುಕು ಹೀಗೆ ಒಂದಲಲಾ ಒಂದು ಮಾತು ,ಚರ್ಚೆ,ವಿಚಾರ,ಮಂಥನ ಕಾರ್ಯಕ್ರಮಗಳು .ಅದರೆ ಇದೆಲ್ಲಾ ನಡೆಯುತ್ತಿರುವುದು ನಗರಗಳಲ್ಲಿ,ಕಬಳಿಸುತ್ತಿರುವುದು ಹಳ್ಳಿಗಳನ್ನು, ಹಳ್ಳಿಯ ಕಸುಬುಗಳನ್ನು ಮತ್ತು ಭೂಮಿಯನ್ನು.

ನಮ್ಮಸಂಸ್ಕøತಿ,ಊಟ,ಬಟ್ಟೆ,ಮಾತು, ಶೈಲಿ ಎಲ್ಲವೂಬದಲಾಗಿದೆ. ಪ್ರಪಂಚ ಚಿಕ್ಕದಾಯ್ತು, ಮೆಟ್ರೋ ಸಿಟಿಯಿಂದ ಪ್ರಾರಂಭವಾಗಿ ಶಹರ ಪಟ್ಟಣಗಳನ್ನು ದಾಟಿ ಹಳ್ಳಿಗೆ ಕಾಲಿಟ್ಟಿದೆ ಈ ರಾಕ್ಷಸ. ವಿದೇಶಿಮಾಲ್ ಎಲ್ಲೆಲ್ಲೂ ಪ್ರವೇಶಿಸಿದೆ. ದೇಶಿ ಶಾಸ್ತ್ರೀಯ ಕುಂಬಾರಿಕೆ, ಚಮ್ಮಾರಿಕೆ, ಹೂಗಾರರು, ಚಿನಿವಾರರು ಹೇಳ ಹೆಸರಿಲ್ಲದ ಹಾಗೆ ಹೋಗುತ್ತಿದೆ. ಕಾಲಕ್ಕೆ ತಕ್ಕಂತೆ ಬದಲಾಗಬೇಕು , ಖಂಡಿತ ನಿಜ.ಹಿಂದೆ ಟೈಪಿಸ್ಟ್ ಆಗಿಕೆಲಸ ಮಾದುತ್ತಿರುವವನು ಈಗಲೂ ಅದರಲ್ಲೇ ಅನ್ನ ಕಾಣ್ತೇನೆ ಅಂದರೆ ಹಾಸ್ಯಾಸ್ಪದವಾಗುತ್ತದೆ. ಈಗ ಅದರ ಬದಲು ಕಂಪ್ಯೂಟರ ಕಲಿಯುವ ಅನಿವಾರ್ಯತೆ ಇದೆ. ಒಂದು ಕಡೆಯಿಂದ ಬದಲಾಗುವ ಅವಕಾಶ ಜಾಗತೀಕರನ ಕಲ್ಪಿಸಿದೆ. ಆದ್ರೆ ಆಬದಲಾವಣೆಗೆ ನಾವು ತೆರಬೇಕಾದ ದಂಡ ತುಂಬಾದುಬಾರಿಯಾಗಿದೆ.ಬದಲಾವಣೆಯ ಗಾಳಿ ಬರಲಿ,ನಮ್ಮ ತನವನ್ನು ಹೊತ್ತುತರಲಿ.

Leave a Reply

Your email address will not be published.