ಚೌಕಿನ ಪ್ರತಿಮೆಗಳೊಂದಿಗೆ

-ಗುಂಡುರಾವ್ ದೇಸಾಯಿ

chokತಡರಾತ್ರಿಯಲ್ಲಿ ಊರಿಗೆ ಕಾಲಿಟ್ಟಾಗ ನಿಶಬ್ದ ಮೌನ ಎಲ್ಲೆಲ್ಲೂ ಆವರಿಸಿತ್ತು. ಅಂದು ವಿಚಿತ್ರ ಭಾವ ನನ್ನನ್ನು ಕೆರಳಿಸಿತ್ತು, ಅಪಶಕುನದ ಲಕ್ಷಣಗಳು ಕಾಡತೊಡಗಿತು. ಏನೋ ಘಟಿಸಬಹುದಾದ ವಿದ್ಯಮಾನಗಳು ಜರುಗತ್ತಿರಬಹುದೆಂಬ ಆತಂಕ ಕಾಡತೊಡಗಿತು. ನಾನು ಅವಸರದಲ್ಲಿ ಬೇಗ ಮನೆ ಸೇರಿದರಾಯಿತು ಎಂದು ಮುನ್ನಡೆದಾಗ ನಾಯಿ ಬೊಗಳಿದತ್ತ ದೃಷ್ಠಿ ಹರಿಸಲಾಗಿ ಅಲ್ಲಿಯ ಪ್ರತಿಮೆಯೊಂದು ಮಾಯವಾಗಿತ್ತು, ಇತ್ತಿಚಿಗೆ ಎಲ್ಲೆಡೆ ಸಿ ಸಿ ಕ್ಯಾಮರಗಳನ್ನು ಅಳವಡಿಸಿರುವುದರಿಂದ ಯಾವುದೋ ದುಷ್ಕರ್ಮಿಗಳು ಮಾಡಿದ ಕೃತ್ಯಕ್ಕೆ ನಾನು ಬಲಿಯಾಗಬಹುದೆಂದು ಮುಖ ಮುಚ್ಚಿಕೊಂಡು ಕಾಲ್ಕಿತ್ತೆ. ಮುಂದಿನ ಚೌಕಿನಲ್ಲೂ ಇದೆ ಸ್ಥಿತಿ! ಅಲ್ಲಿಯ ಸಮಾಜೋದ್ಧಾರಕರ ಪ್ರತಿಮೆಯೂ ಅನಾಮತ್ತಾಗಿ ಮಾಯವಾಗಿತ್ತು, ನನ್ನ ದುಗುಡ ಹೆಚ್ಚುತ್ತಾ ಹೋಯಿತೇ ಹೊರತು ಕಡಿಮೆಯಾಗಲಿಲ್ಲ. ಮುಂದೆ ಎರಡು ಮೂರು ಚೌಕುಗಳನ್ನು ದಾಟಿದಾಗಲು ಇದೆ ಸ್ಥಿತಿ! ಅಲ್ಲಿಯ ಪ್ರತಿಮೆಗಳು ಎತ್ತಂಗಡಿಯಾಗಿವೆ?

ಕೈಕಾಲು ನಡುಗುತ ಮುಂದೆ ಚಲಿಸದಾದವು. ಸಂಧಿಗ್ಧ ಸ್ಥಿತಿಯಲ್ಲಿ ತೊಳಲಾಡುತ್ತಿದ್ದ ನನಗೆ ಸ್ವಲ್ಪ ವಿಶ್ರಾಂತಿ ಬಯಸಿ ಗಾರ್ಡನ್ ಪಕ್ಕದಲ್ಲಿದ್ದ ಬೆಂಚಿನಲ್ಲಿ ಆಸೀನನಾಗಿ ನಾಳೆ ದಿನ ಘಟಿಸಬಹುದಾದ ಘಟನೆಗಳ ಬಗ್ಗೆ ಆಲೋಚಿಸ ತೊಡಗಿದೆ. ಅಷ್ಟರಲ್ಲಿ ಉದ್ಯಾನವನದ ಕಂಪೌಂಡ ಆಚೆಯಿಂದ ಯಾರೋ ಮಾತಾಡುತ್ತಿರುವ ಸದ್ದು ಕೇಳಿ ಬಂತು. ಕುತೂಹಲದಿಂದ ಅತ್ತ ಚಿತ್ತೈಸಿದ. ಆಶ್ಚರ್ಯ ಊರಿನ ಚೌಕದಲ್ಲಿದ್ದ ಪ್ರತಿಮೆಗಳು ಒಂದೆಡೆ ಸೇರಿವೆ? ಯಾರೋ ಎತ್ತಿ ಹಾಕಿಕೊಂಡು ಬಂದು ಇಲ್ಲಿ ಜಮಾಯಿಸಿರಬೇಕೆಂದು ತಿಳಿದು ಹತ್ತಿರಕ್ಕೆ ಹೋದೆ “ಬನ್ನಿ ದೇಸಾಯಿಜಿ ಬನ್ನಿ” ಅಂದ್ವು.

ನಾನು ಮತ್ತಷ್ಟು ಅದಿರಿದೆ, ಆ ಕಂಚಿನ, ಕಲ್ಲಿನ ಮೂರ್ತಿಗಳು ಮಾತಾಡಿದ್ದನ್ನು ನೋಡಿ ಪ್ರಾಣ ಹಾರೋದಷ್ಟ ಬಾಕಿ ಉಳದಿತ್ತು. ‘ಹಾಗೆಲ್ಲ ಗಾಬರಿಗೊಳ್ಳಬೇಡಿ; ಒಂದ ಕಡೆ ನಿಂತು, ಕುಳಿತು ಬ್ಯಾಸರ ಬಂದಿತ್ತು, ಹಾಂಗ ವಾಕಿಂಗ್ ಬಂದಿದ್ದೀವಿ’ ಅಂತು ಅದರಲ್ಲಿ ಒಂದು ಪ್ರತಿಮೆ. ‘’ಜೊತಿಗೆ ನಿಮ್ಮ ಮಂದಿ ಮಾಡೋ ಲಫಂಗತನ ನೋಡಿ ಬೇಜಾರಾಗಿ ಒಂದು ನಿಧಾರ ತೆಗೆದುಕೊಳ್ಳೋಣ ಅಂತ ಚರ್ಚೆ ಮಾಡಕ ಕೂತಿವಿ, ನೀನು ಬಂದದ್ದದ್ದು ಚಲೋ ಆತು ಬನ್ನಿ” ಅಂತು ಮತ್ತೊಂದು, ಇದು ವಾಸ್ತವನ ಕನಸಾ ಅಂತ ನನ್ನ ಕಪಾಳಕ್ಕ ಹೊಡಕೊಂಡು ಖಾತ್ರಿಪಡಿಸಿಕೊಂಡೆ. ‘ಅಯ್ಯೋ ಯಾಕ ಹಾಂಗ ಕಪಾಳಕ್ಕ ಬಡಕೊಂಡು ಹಿಂಸಿಸಿಕೊಂತಿರಿ, ಕನಸಲ್ಲ ನಿಜನ ಬನ್ನಿ’ ಎಂದು ಮಗದೊಂದು. ನಾನು ಸುಧಾರಿಸಿಕೊಂಡು ‘ಇದು ಸಾಧ್ಯನ!’ ಎಂದು ದಿಗಿಲುಗೊಂಡವನಾಗಿ ಕುಳಿತೆ.

“ನಿಜಕ್ಕೂ ನಮಗ ದುಃಖ ಆಗಾಕತಾದ ದೇಶದ ಪರಿಸ್ಥಿತಿ ಕಂಡು. ಏನೆಗ್ಯಾದ ಈ ಮಂದಿಗೆ. ನಾವು ಕಂಡ ಕನಸು ಎಂತಹದು? ಆಗುತ್ತಿರುವುದೇನು? ಸ್ವಾತಂತ್ರ ಸಿಕ್ಕಿದ್ದು ಈ ಸ್ವೇಚ್ಛಾಚಾರಕ್ಕೆ ಕಾರಣವಾಯಿತೇನೋ? ನಮ್ಮ ವ್ಯರ್ಥ ಪ್ರಯತ್ನ ನೋಡಿದ್ರೆ, ದೇಶ ಪಾರತಂತ್ರ್ಯದಲ್ಲಿ ಇದ್ದಿದ್ದರೆ ಚೆನ್ನಾಗಿರತಿತ್ತು ಅನಸ್ತಿದೆ’
“ನಾವು ನೀಡಿದ ಸಂದೇಶವೇನು? ಇಲ್ಲಿ ಅವುಗಳೆಲ್ಲ ಬುಡಮೇಲಾಗುತಿರುವುದೇನು! ಏನಾಗಿದೆ ಈ ಜನಗಳಿಗೆ, ಎಲ್ಲಿ ಹೋಯಿತು ನಮ್ಮ ತತ್ವಾದರ್ಶ ಪಾಲಿಸುವ ಆ ಮಂದಿ……?’
“ಜಾತ್ಯಾತೀತ ರಾಷ್ಟ್ರ ಕನಸು ಕಂಡ ನನಗೆ ಇವತ್ತು ಅದರ ಅರ್ಥವೇ ಬುಡಮೇಲಾಗುತ್ತಿರುವಂತೆ ತೋರುತ್ತದೆ. ಇದೆಂತ ಅನ್ಯಾಯ, ಮಾನವ ಜಾತಿ ತಾನೊಂದೆ ಕುಲಂ ಅಂತ ಹೇಳಿದ ಮಾತೇನಾತು”
“ದೇಶದ ಬಗ್ಗೆ ಮಾತನಾಡುವುದೆ ಕೋಮುವಾದಿ ಭಾವನೆಯೆಂದು ಬಗೆಯುತ್ತಾ, ತಿಳುವಳಿ ಹೇಳಬೇಕಾದವರು, ಭದ್ರತೆಗೆ ದಕ್ಕೆ ಬಂದಾಗ ಧ್ವನಿ ಎತ್ತಬೇಕಾದವರು ತುಚ್ಛಿಕರಣÀದಲ್ಲಿ ತೊಡಗಿದ್ದಾರಲ್ಲ ಏನಾಗಿದೆ ಇವರ ಬುದ್ಧಿಗೆ!”
“ಹೆಣ್ಣಿನ ಮೇಲೆ ಇಷ್ಟೇಲ್ಲ ದೌರ್ಜನ್ಯ ಅತ್ಯಾಚಾರ ನಡಿಯುತ್ತಿದ್ದರೂ ಸರಕಾರ ಅವರಿಗೆ ರಕ್ಷಣೆ ನೀಡುತ್ತಿಲ್ಲವಲ್ಲ, ಮಾಧ್ಯಮಗಳೂ ಅಶ್ಲೀಲತೆ, ಅನೈತಿಕತೆಯ ಪ್ರದರ್ಶನವನ್ನೆ ಬಂಡವಾಳ ಮಾಡಿಕೊಂಡಿದ್ದರು ಕಾನೂನು ರೂಪಿಸಬೇಕಾದವರು ದೃತರಾಷ್ಟ್ರನಂತೆ ಕಣ್ಮುಚ್ಚಿ ಕುಳಿತಿರುವರಲ್ಲ, ನನಗೆ ಶಕ್ತಿ ಇದ್ದರೆ……..”
“ಹೆಣ್ಣು, ಹೊನ್ನು, ಮಣ್ಣು ಮಾಯೆ ಬೆಂಬತ್ತದಿರಿ, ಕೆರೆಗೆ ನೀರನು ಕೆರಗೆ ಚೆಲ್ಲಿ, ಆಸೆಯನ್ನು ದಿಕ್ಕರಿಸಿ, ಸಮಾನತೆಯಿಂದ ಪ್ರಾಮಾಣಿ ಬದುಕು ಸಾಕಿಸಿ ಎಂದು ಹೇಳಿದ್ದೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಹಾಗಾಯಿತು?”
ಹೀಗೆ ಒಂದೊಂದು ಪ್ರತಿಮೆ ಅವಲತ್ತುಕೊಂಡವು.

“ಮಹನೀಯರೇ ನೀವು ಹೇಳಿದ ಎಲ್ಲಾ ವಿಚಾರಗಳು ಅಕ್ಷರಶಃ ಸತ್ಯ, ಜನರಲ್ಲಿ ಸ್ವಾರ್ಥಪರತೆ ಹೆಚ್ಚುತ್ತಿದೆ, ರಾಜಕಾರಣ ಎಂಬುದು ಉದ್ಯಮವಾಗಿ ಬಿಟ್ಟಿದೆ. ಒಂದು ಸಾರಿ ಜನಪ್ರತಿನಿಧಿಯಾದರೆ ಐದಾರು ತಲೆಮಾರು ತಿನ್ನುವಷ್ಟು ಆಸ್ತಿ ಸಂಪಾದಿಸಬಹುದಾಗಿದೆ. ಹಾಗಾಗಿ ಆಡಳಿತದಲ್ಲೂ ನಿಯಂತ್ರಣ ಸಾಧ್ಯವಾಗದೆ ಭ್ರಷ್ಟಾಚಾರ ತಾಂಡವಾಡುತ್ತಿದೆ. ಜನರಿಗೆ ಅವನು ಭ್ರಷ್ಟ, ಹಾಗೆ ಹೀಗೆ ಎಂದು ಏನೆಲ್ಲ ಮಾತಾಡಿಕೊಂಡರು ಎದುರಿಗೆ ಬಂದರೆ ಹಲ್ಲುಕಿರಿಯುತ್ತ ಸಲಾಮ ಹೊಡೆದು ಸನ್ಮಾನ ಮಾಡಿ ಕಳುಹಿಸುತ್ತಾರೆ. ಪ್ರತಿಭಟನಾ ಗುಣ ನಿಂತು ಹೋಗಿದೆ. ಸಂಘಟನೆಗಳು ಇವೆಯಾದರೂ ಅವುಗಳ ಹೋರಾಟದ ಸ್ವರೂಪ ಜನರಲ್ಲಿ ಕ್ರಾಂತಿಯನ್ನು ಹೊತ್ತಿಸುವಂತಿಲ್ಲ. ಬುದ್ಧಿ ಜೀವಿಗಳಂತೂ ಮುತ್ಸದ್ದಿಗಳಾಗದೇ ಜಲಸಿ ಜೀವಿಗಳಾಗಿದ್ದಾರೆ. ರಾಜಕಾರಣಿಗಳು ಓಲೈಕೆಗಾಗಿ ಧರ್ಮ ಧರ್ಮಗಳ ಮಧ್ಯೆ ದ್ವೇಷ ಬಿತ್ತುತ್ತಿದ್ದಾರೆ. ಶಾಂತಿ-ಸ್ನೇಹದಿಂದ ಪ್ರಜೆಗಳಿದ್ದರೆ ತಲೆಗಳಲ್ಲಿ ದೂರಾಲೋಚನೆಗಳು ಹುಟ್ಟುತ್ತವೆ ಎಂಬುದು ಅವರಲ್ಲಿಯ ಚಿಂತೆ. ಹಾಗಾಗಿ ಸುಮ್ಮನಿರರು. ಇನ್ನೂ ಹೆಣ್ಣಿನ ಶೋಷಣೆಗೆ ಕೊನೆ ಇಲ್ಲ. ಲೈಂಗಿಕ ದೌರ್ಜನ್ಯ ಮೀತಿ ಮೀರುತ್ತಿದೆ. ಇವೆಕ್ಕೆಲ್ಲ ಕಾರಣವಾಗುವ ವೆಬ್ಗಳನ್ನ, ಮಾಧ್ಯಮಗಳನ್ನು ಮುಂದವರೆದ ದೇಶಗಳು ನಿಷೇಧಿಸಿದ್ದರು ನಮ್ಮವರು ಮನಸ್ಸು ಮಾಡುತ್ತಿಲ್ಲ”್ಲ ಎಂದು ಮುಂತಾಗಿ ಒದರಿದೆ

big_ambedkar102“ನಿಜ ನೀನು ಹೇಳಿದ್ದು ಖರೆ, ನೀವು ಏಕೆ ಇದರ ವಿರುದ್ಧ ಹೋರಾಡಬಾರದು ದೇಸಾಯಿ”
“ನಾನು ಹುಲುಮಾನವ, ಗಂಗಾನದಿ ಕೊಳಕಾಗುತ್ತಿದೆ ಎಂದು ಉಪಾಸ ಕುಳಿತಿದ್ದ ಸಂತನೊಬ್ಬನ ಕೂಗ ಕೇಳದೆ ಹಾಗೆ ಬಿಟ್ಟರು, ಉಪಾಸದಿಂದ ಗಂಗೆ ಪಾದ ಸೇರಿದ ಹೊರತು ವ್ಯವಸ್ಥೆ ಮಾತಾಡಿಸಲಿಲ್ಲ, ನಿಮ್ಮಾಂಶ ಸಂಭೂತರಾದ ಅಣ್ಣಾ ಹಜಾರೆಯವರು ಏನೆಲ್ಲ ಎಕ್ರಲಾಡಿದರು, ಅವರ ಹೋರಾಟವು ಠುಸ್ಸಾಯಿತು, ಅಂದ ಮೇಲೆ ಯಾರ ಕೇಳ್ತಾರ ಸ್ವಾಮಿ ಬಿದಿ ಹೆಣ ಮಾಡ್ತಾರೆ. ಗಾಳಿ ಬಂದಾಗ ತೂರಿಕೋಬೇಕು, ಎದುರು ಈಜಬಾರದು ಅಂತ ತಾವೇ ಹೇಳಿಲ್ಲವೆ?”
“ಏನಯ್ಯಾ ಇದು ಹಿಂಗಾದ್ರೆ, ನಿಜಕ್ಕೂ ಇದು ಅಸಹನೀಯ, ಮೊನ್ನೆ ಯಾವುನೋ ಕೋಟಿಗಟ್ಟಲೇ ಹಗರಣ ಮಾಡಿದ ಖದಿಮ ನನ್ನ ಜನ್ಮ ದಿನದಂದು ಬಂದು ಹಾರ ಹಾಕಿ ಪ್ರಾಮಾಣಿಕತೆ ಬಗ್ಗೆ ಮಾತನಾಡಿದ”

“ಜಾತಿ ಮಧ್ಯ ಬೆಂಕಿ ಹಚ್ಚಿ ಕಾರ್ಯ ಸಾಧಿಸುವ ಮಹನೀಯ ಬಂದು ಅಡ್ಡಬಿದ್ದು ಜಾತ್ಯಾತೀತದ ಬಗ್ಗೆ ಮಾತಾಡಿದ”
“ವೇಶ್ಯಾವಾಟಿಕೆ ಪ್ರೋತ್ಸಾಹಿಸುವ ಮಹಿಳಾ ಪ್ರತಿನಿಧಿ ಮಹಿಳಾ ರಕ್ಷಣೆ ಬಗ್ಗೆ ಮಾತಾಡಿದ್ಲು”
“ಸಾಮಾನ್ಯ ಭಕ್ತರ ಪಾದಮುಟ್ಟಸಿಕೊಳ್ಳದ ಮಠಾಧೀಶ ಕಾಂಟೇಸಾ ಕಾರಲ್ಲಿ ಬಂದು ನನ್ನ ಮೂರ್ತಿ ಅನಾವರಣ ಮಾಡಿ ಸಮಾನತೆ ದಯೆ ಬಗ್ಗೆ ಮಾತನಾಡಿದ”
“ಅದೆ ನಮ್ಮ ದೇಶದ ದೊಡ್ಡ ದುರಂತ. ಇಲ್ಲಿ ರೊಕ್ಕ ರಾಜಕೀಯ, ಜಾತಿ ಬಲ ಇದ್ದರ ಮುಗುದು ಹೋತು. ಎಲ್ಲಾ ಸಲೀಸು. ಹೆಂಗ ಬೇಕಾದ್ರೂ ಹಿಂಡಬಹುದು. ಏನಾದ್ರೂ ಮಾಡಬಹುದು. ಅಪರಾಧಿ ಎಂಬುದು ಲೋಕಕ್ಕ ಗೊತ್ತಿದ್ದರೂ ಅವನ ರಕ್ಷಣೆಗಾಗಿ ಕೋಟಿಗಟ್ಟಲೇ ಖರ್ಚು ಮಾಡ್ತಾರೆ. ಬಿಲಿಯನ್ನ ಗಟ್ಟಲೇ ಗಳಸಿದ್ರು ಅವನಿಗೆ ಬಿ.ಪಿಎಲ್ ಕಾರ್ಡ ಇರುತ್ತೆ, ಬೇರೆ ಕಡೆ ಇಂತಹ ಉದಾರತೆ ಸಾಧ್ಯನ!”
“ಇದನ್ನು ತಪ್ಪಸಾಕ ಆಗಲ್ವಾ”
“ಈ ದೇಶಕ್ಕೆ ಇಂತವರಿಂದ ಮುಕ್ತಿ ಯಾವಾಗ”
“ ನಮ್ಮ ತತ್ವಗಳು ಪಾಲನೆಯಾಗುವುದು ಯಾವಾಗ”
“ಪ್ರಳಯ ಆದಾಗ”
“ಅಂದ್ರ”
“ಪ್ರಾಮಾಣಿಕತೆ, ಸಹೃದಯತೆ ಅನ್ನೋದು ಡಿಕ್ಷನರಿಯ ಮಾತಾಗಿಯೇ ಉಳದಾದ. ತಮ್ಮಂತವರು ಮತ್ತೊಮ್ಮೆ ಹುಟ್ಟಿ ಬರಬೇಕು ಇಲ್ಲ ಪಾಪ ಹೆಚ್ಚಾಗಿ ಇದಾ ಬ್ಲಾಸ್ಟ ಆಗಬೇಕು”
“ಇಲ್ಲ, ಇದಕ್ಕ ಏನಾದ್ರೂ ಉಪಾಯ ಮಾಡಲೇಬೇಕು. ಈಗಲೇ ಇವರಿಗೆ ಬುದ್ಧಿ ಕಲಿಸಲೇಬೇಕು. ಇಲ್ಲದಿದ್ದರೆ ದೇಶಕ್ಕೆ ಉಳಿಗಾಲವೇ ಇಲ್ಲ”
“ಇವರ ಮೇಲೆ ಆಕ್ರಮಣ ಮಾಡಿಬಿಡೋಣವೇ?”
“ ಇಲ್ಲ ಇಲ್ಲ ಖಡ್ಗ ಝಳಿಪಸಲೇ ಬೇಕು?”
“ಸಂಧಾನ ನಡೆಸಲೇಬೇಕು?”
“ಬೇಡ, ಅಹಿಂಸಾ ಪರೋಮೋಧರ್ಮ, ಅಹಿಂಸೆಯಿಂದಲೇ ಅವರ ಮನವನ್ನು ಗೆಲ್ಲಬೇಕು”
“ಇಲ್ಲ ಈ ಕಾಲಕ್ಕೆ ಆಗದು”
“ನಿಮ್ಮ ಮಾತು ಒಪ್ಪಲಾಗದು”
“ಶಾಂತಿ ಶಾಂತಿ ನೀವೆ ಹೀಗೆ ಜಗಳಾಡುತ್ತ ನಡೆದರೆ ಹೇಗೆ. ಈಗ ನಿಮ್ಮಲ್ಲಿ ನಡೆಯುತ್ತಿರುವಂತೆ ದೇಶದಲ್ಲಿ ನಡೆಯುತ್ತಿದೆ, ಇದರೆ ಮಧ್ಯೆಯೆ ಎಲ್ಲಾ ವಿಷ ಚಿಂತನೆಗಳು ನಡೆದಿವೆ”
“ಈಗ ಏನು ಮಾಡಬೇಕೆಂತಿ ದೇಸಾಯಿ?”

“ಬೆಳಕು ಹರಿತಾ ಬಂತು. ಬೇಗ ನಿಮ್ಮ ಸ್ವಸ್ಥಾನದಲ್ಲಿ ನಿಂತು ಬಿಡಿ. ಇಲ್ಲಾಂದ್ರ ನಾಳೆ ಇದೆಲ್ಲೂ ಆ ಪಕ್ಷ, ಈ ಪಕ್ಷದವರ, ಆ ಧರ್ಮ ಈ ಧರ್ಮದವರ ಪಿತೂರಿ ಅಂತ ರಕ್ತ ಓಕಳಿನೇ ನಡೆಯುತ್ತೆ. ಇದರಲ್ಲಿ ಎಲ್ಲಾರು ಚಳಿಕಾಯಿಸಿ. ಬೇಳೆ ಬೇಯಿಸಿಕೊಂಡು ತಿಂದು ಸಂಭ್ರಮಿಸ್ತಾರೆ. ತೊಂದರೆಗಿಡಾಗುವವರು ಸಾಮಾನ್ಯರು. ದಯವಿಟ್ಟು ಅವಕಾಶ ಕೊಡದಿರಿ. ಅದಕ್ಕಾಗಿ ಅಲ್ಲೆ ನಿಂತು ಯೋಚನೆ ಮಾಡಿ ನಿಮ್ಮ ಶಕ್ತಿ ಕ್ರೂಢಿಕರಿಸಿ”
“ಹೇ ಸಾಧ್ಯವಿಲ್ಲ ಈಗಲೇ ಅವರ ವಿರುದ್ಧ ನಿಲ್ಲತಿವಿ”
“ಹಾಂಗೆ ನಿಂತ್ರಿ ಅನಕೊಳ್ರಿ. ಯಾವುದೊ ನಾಟಕ ಕಂಪನಿಯವರು ಅಂದಕೊಂಡು ಭಿಕ್ಷೆ ಹಾಕಿ ಹೊಗ್ತಾರೆ, ಹೆಚ್ಚಿಗೆ ಏನನೇನೋ ಮಾತಾಡಕೊದ್ರೆ ಎಲ್ಲೆ ಭಾಂ್ರತು ಅಂತ ಹುಚ್ಚಾಸ್ಪತ್ರೆ ಸೇರಸ್ತಾರೆ”

Mahatma-Gandhi“ದೇಸಾಯಿ ಹೇಳೊದು ಸರಿಯಿದೆ, ಯೋಚಿಸೋಣ, ನಡಿರಿ, ಬಾಯ್ ಬಾಯ್ ದೇಸಾಯಿ” ಅಂತ ಹೊರಟು ನಿಂತವು.
ನಾನು “ಬಾಯ್ ಬಾಯ್, ಹಾಗೆ ಕಲ್ಲಾಗ ಬೇಡಿ, ಯೋಚನೆ ಮಾಡಿ, ದುರ್ಜನರಿಗೆ ಬುದ್ಧಿಕಲಿಸಲು ಸಿದ್ದರಾಗಿ ಟಾಟ” ಎಂದೆ
“ಏನ್ರೀ ಅದು ಬಾಯ್ ಬಾಯ, ಟಾಟಾ ಅನಕತೀರ, ಯಾವುಳು ನನ್ನನ್ನು ಬಿಟ್ಟು ಕನಸಿನ್ಯಾಗ ಬರುವಾಕಿ” ಎಂದು ಧ್ವನಿ ಬಂತು ಅಡುಗೆ ಮನೆಯಿಂದ.
ಥಟ್ಟನೆ ಎಚ್ಚರಾಗಿ “ಅಯ್ಯೊ ಇದುವರೆಗೂ ಕಂಡದ್ದು ಕನಸಾ?” ಅಂತ ನಕ್ಕು, ಎದ್ದು ಪರೀಕ್ಷಿಸಲು ಚೌಕದಲ್ಲಿ ನೋಡಾಕ ಹೋದೆ.
ಪುಣ್ಯಕ್ಕ ಪ್ರತಿಮೆಗಳು ಇರೋ ಜಾಗಕ್ಕನ ಇದ್ವು. ಅವತ್ತು ಗಾಂಧಿ ಜಯಂತಿ ಅಂತ ಕಾಣುತ್ತೆ. ದುಂಬಾಲು ಬಿದ್ದು ಹಾರದ ಭಾರ ಹಾಕಕತಿದ್ರು. ಗಾಂಧಿ ಪ್ರತಿಮೆಯತ್ತ ಮುಖ ಮಾಡಿದೆ. ಅಂದೆಕೋ ಪ್ರತಿಮೆಯಲ್ಲಿ ಎಂದಿನಂತೆ ಇದ್ದ ಲವಲವಿಕೆ ಇಲ್ಲವೇನೊ ಅನಿಸಿತು.

Leave a Reply

Your email address will not be published.