ನನ್ನ ಕೈಯಲ್ಲಿದ್ದ ಆಯ್ಕೆಯನ್ನೂ ಕಸಿದುಕೋಡು ತೀರ್ಮಾನಿಸಿದಿರಲ್ಲಾ ಯಾಕೆ?”-ಅಂಬೇಡ್ಕರ್

ಗೋಪಾಲಕೃಷ್ಣ.ಆರ್

ಕೋಲಾರದ ಕಾಪಾಲಿಕಾ ತಂಡ ಪ್ರದರ್ಶಿಸಿದ ನಾಟಕ “ನನ್ನ ಅಂಬೇಡ್ಕರ್” (ರಚನೆ-ಕೋಟಿಗಾನಹಳ್ಳಿ ರಾಮಯ್ಯ)
ಬೇರೆಯದೇ ಮಣ್ಣು ಬೇರೆಯದೇ ಕತೆ ಎಂಬ ತತ್ವದಲ್ಲಿ ಉತ್ತಮ ನಾಟಕವನ್ನು ಪ್ರದರ್ಶಿಸಿತು. ಅಂಬೇಡ್ಕರ್ ಚಿಂತನೆ ಮತ್ತು ವಯಕ್ತಿಕ ಸನ್ನಿವೇಶಗಳಿಂದ ಹೆಣೆದ ಕತೆ ಇದಾಗಿದ್ದು ನಾಟಕದ ರೂಪದಲ್ಲಿ ಅದ್ಬುತವಾಗಿ ಮೂಡಿಬಂತು.

ಭಾರತದ ರಾಜಕೀಯ ಮತ್ತು ಸಾಮಾಜಿಕ ಚಿಂತನೆಗಳಲ್ಲಿ ಅಂಬೇಡ್ಕರ್ ಬಹಳ ಮುಖ್ಯ ಹೆಸರು. ಭಾರತದ ಸನ್ನಿವೇಶವನ್ನು ಇತರೆ ರಾಷ್ಟ್ರೀಯ ನಾಯಕರು ಗ್ರಹಿಸಿದ ರೀತಿ ಮತ್ತು ಅಂಬೇಡ್ಕರ್ ಗ್ರಹಿಸಿದ್ದ ರೀತಿ ಭಿನ್ನವಾಗಿತ್ತು ಎಂಬುದನ್ನು ನಾಟಕ ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ. ಇಂತಹ ವ್ಯಕ್ತಿಯನ್ನು ಸದ್ಯದ ಭಾರತೀಯ ಜನ ಅರ್ತಮಾಡಿಕೊಂಡಿರುವ ರೀತಿ ಹೇಗಿದೆ ಎಂಬ ಪ್ರಶ್ನೆ ಚರ್ಚೆಗೆ ಬರುತ್ತಾ ನಾಟಕ ಪ್ರಾರಂಭವಾಗುತ್ತದೆ.
ದಲಿತರ ಸಮಸ್ಸೆಗಳನ್ನು ನಿವಾರಿಸುವ ಸಲುವಾಗಿ ದುಡಿದಿದ್ದರಿಂದ ದಲಿತ ನಾಯಕನಾಗಿ, ಮತ್ತು ಭಾರತದ ಸಂವಿಧಾನ ಶಿಲ್ಪಿಯಾಗಿ ರಾಜಕೀಯವಲಯದಲಿ ್ಲಗುರ್ತಿಸುತ್ತಾರೆ. ಈ ಸಂಧರ್ಭದಲ್ಲಿ ಆತನ ಚಿಂತನೆಗಳು ಹಿನ್ನೆಲೆಗೆ ಹೋಗಿ ವ್ಯಕ್ತಿ ಮತ್ತಾತನ ಹೆಸರು ಮಾತ್ರ ಜನರ ಬಾಯಲ್ಲಿ ತಿರುಗಾಡುತ್ತದೆ.

ಆದರೆ ಆತನ ಕಾಳಜಿ, ದಲಿತ, ಹಿಂದುಳಿದ ವರ್ಗದಚಿಂತನೆ, ರಾಜಕೀಯ ನಿಲುವುಗಳು ಮತ್ತದಕ್ಕೆಕಾರಣ ಇತ್ಯದಿಗಳಾವೂ ಈ ವರ್ಗದಜನರಲ್ಲಿ ತಿಳವಳಿಕೆ ಮೂಡಿಸಿವೆಯೇ ಎಂಬ ಪ್ರಶ್ನೆ ಇಂದಿಗೂ ಇದೆ. ಹಾಗೆಯೇ ಪ್ರತೀ ಸಂದರ್ಭದಲ್ಲಿ ಅಂಬೇಡ್ಕರ್ ಚಿಂತನೆ ಪ್ರಧಾನ ವಾಗಿರುತ್ತದೋ ಅಥವಾ ಅಂಬೇಡ್ಕರ್ ಎನ್ನುವ ಹೆಸರು ಮುನ್ನಲೆಗೆ ಬುರುತ್ತಿರುತ್ತದೋ ಎನ್ನುವ ಮಾತೂ ಗಮನಿಸಬೇಕಾದದ್ದು. ನಾಟಕದಲ್ಲಿ ಪಾತ್ರಗಳು ಕನಸಿನಲ್ಲೋ, ಕಾಲ್ಪನಿಕವಾಗಿಯೋ ಸೃಷ್ಟಿಗೊಳ್ಳುವಲ್ಲಿ ನಾಟಕ ಕ್ರಿಯೆಗೊಳ್ಳುತ್ತದೆ. ಜ್ಯೋತಿ ಬಾ ಪುಲೆ, ರತ್ತು, ರಮಾಬಾರಿ, ಗಾಂಧೀಜಿ ಮುಂತಾದ ವ್ಯಕಿಗಳು ಇಲ್ಲಿ ಮಾತುಗಳನ್ನು ಮುಂದುವರೆಸುತ್ತಾರೆ. ಅಂಬೇಡ್ಕರ್ ಜೀವನದ ಎಲ್ಲಾ ಗಟ್ಟಗಳು ನಾಟಕದಲ್ಲಿ ಬಂದಿರುವುದು ಕಾಣಬಹುದು. ಅಂಬೇಡ್ಕರ್ನ ಬಾಲ್ಯ, ಶಿಕ್ಷಣ, ವಯಕ್ತಿಕ ನೋವುಗಳು, ದೇಶದ ಚಿಂತನೆ ಹೀಗೆ ಆಯಾ ಸಂದರ್ಭಕ್ಕೆ ಉತ್ತಮ ಕಾವ್ಯಾತ್ಮಕ ಸಂಧರ್ಭಗಳನ್ನು ನಾಟಕದಲ್ಲಿ ಕಾಣಬಹುದು

” ಬಾಲ್ಯದ ಸಂಧರ್ಭದ ಒಂದು ಸನ್ನಿವೇಶದ ಸಾರಾಂಶ ಈ ರೀತಿ ಇದೆ” ಒಂದು ಕನಸಿನಲ್ಲಿ ಅಂಭೇಡ್ಕರ್ ಮರದಲ್ಲಿರುವ ಜೋಲಿ ಹಿಡಿಯುವುದಕ್ಕೆ ಜಿಗಿದು ಜಿಗಿದು ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಳ್ಳುತ್ತಾ ಚೀರಿ ಕನಸಿನಿಂದ ಎಚ್ಚರ ಗೊಳ್ಳುತ್ತಾನೆ, ಈ ಜೋಲಿಯ ಕನಸು ಯಾಕೆ ಪದೇ ಪದೇ ಬರುತ್ತದೆ ಎಂದು ಅಂಬೇಡ್ಕರ್ ಅತ್ತೆ ಕೇಳಿದಾಗ” ನಮ್ಮ ಮನೆಯ ಮುಂದಿದ್ದ ಮರದ ಮೇಲೆ ಹತ್ತಿ ಕುಳಿತರೆ ವಾಸ್ತವ ಪ್ರಪಂಚವೇ ತಿಳಿಯದು ಮತ್ತು ಮರದ ಮೇಲಿಂದ ನಾನು ಕಾಣುವ ಪ್ರಪಂಚ ರಮ್ಯವಾಗಿದೆ, ಆದರೆ ಆ ಮರದಿಂದ ಬಿದ್ದ ತಕ್ಷಣ ಕಸದ ಕೊಪ್ಪೆಯ ಮೇಲೆ ಬೀಳುತ್ತೇನೆ ಹಾಗು ಅದೇ ನಿಜವಾದ ಪ್ರಪಂಚವೂ ಕೂಡ” ಎಂದು ಹೇಳುವಲ್ಲಿ ಭಾರತದ ರಮ್ಯ ಹಾಗೂ ಕಸದ ಕೊಪ್ಪೆಯಂತಹ ಮನಃಸ್ಥಿತಿಗಳ ರೂಪಕವಾಗಿ ಇರುವುದನ್ನು ಕಾಣಬಹುದು.

ಇಂತಹ ಹಲವಾರು ಸಂಧರ್ಭದಲ್ಲಿ ಬಹಳ ಮುಖ್ಯ ಎನಿಸುವ ಮಾತುಗಳನ್ನು ಗಮನಿಸ ಬಹುದು.” ಅಕ್ಷರಗಳನ್ನು ನಿರ್ಲಕ್ಷ್ಯ ಮಾಡುವಷ್ಟು ಅವಿವೇಕಿಗಳಾದರೆ ನಮ್ಮಜನ”, ಜಾತಿ ಎನ್ನುವ ಶಬ್ದ ಮನುಷ್ಯನನ್ನು ಎಷ್ಟು ದೂರ ಮಾಡುತ್ತದೆ” ಇಂತಹ ಮಾತುಗಳು ನಾಟಕದ ಸತ್ವವನ್ನು ಹೆಚ್ಚಿಸಿವೆ. ಕೊನೆಯ ದೃಶ್ಯ ನಾಟಕದ ಮಹತ್ತರ ದೃಶ್ಯ, ಚೌದಾರ್ ಕೆರೆಯಲ್ಲಿ ನೀರು ಕುಡಿದು ಸವರ್ಣೀಯರ ದೌಜ್ರ್ಯನ್ಯಕ್ಕೆ ಒಳಗಾದ ನಂತರ ಅದೇ ಕೆರೆ ಬಳಿ ಗಾಂಧೀಜಿ ಅಂಬೇಡ್ಕರ್ ಮುಖಾಮುಖಿ ಯಾಗುವ ಕನಸಿನ ಪರದೆ ನಿರ್ಮಾಣವಾಗುತ್ತದೆ, ಭಾರತ ಇತಿಹಾಸ ಎಂದೂ ಮರೆಯಲಾಗದಂತಹ ಎರಡು ಬಹು ಮುಖ್ಯ ಪ್ರಶ್ನೆಗಳು ಇಲ್ಲಿ ಚರ್ಚೆಗೊಳ್ಳುತ್ತವೆ 1. ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು, 2. ಹಿಂದೂ ಕೋಡ್ ಬಿಲ್ ನಿರಾಕರಣೆ. ಈ ಎರಡೂ ಪ್ರಶ್ನಗಳು ಸೂಕ್ತ ವ್ಯಕಿಗಳ ಬಳಿಯೇ ಚರ್ಚೆಗೊಳ್ಳುತ್ತವೆ ಯಾದರೂ ಉತ್ತರಗಳು ತೃಪ್ತಿ ನೀಡುವುದಿಲ್ಲ. ಗಾಂಧೀಜಿ, ನೆಹರೂ ಯಾರೂ ಸಮರ್ಥ ಉತ್ತರಗಳನ್ನು ನೀಡುವುದಿಲ್ಲ. ನಾಟಕದ ಈ ಸಂಧರ್ಭದಲ್ಲಿ ಅಂಬೇಡ್ಕರ್ ಗಾಂಧೀಜಿಯವರಿಗೆ ಹೇಳುವ ಮಾತು ” ಎಲ್ಲಾ ಸಂಧರ್ಭದಲ್ಲೂ ಆಯ್ಕೆ ನಿಮ್ಮ ಕೈಯಲ್ಲಿಯೇ ಇತ್ತು. ಆದರೆ ನನ್ನ ಕೈಯಲ್ಲಿದ್ದ ಆಯ್ಕೆಯನ್ನೂ ಕಸಿದುಕೋಡು ತೀರ್ಮಾನಿಸಿದಿರಲ್ಲಾ ಯಾಕೆ?” ಎನ್ನುವ ಉತ್ತರ ವಿಲ್ಲದ ಪ್ರಶ್ನೆ ನೋಡುಗರನ್ನು ಗಂಭೀರವಾಗಿ ಯೋಚಿಸುವಂತೆ ಮಾಡುತ್ತದೆ.

ಹೀಗೆ ನಾಟಕ ಅಂಬೇಡ್ಕರ್ ಚಿಂತನೆ ಎದುರುಗೊಂಡಂತಹ ವಿವಿಧ ಚಿಂತನೆಗಳನ್ನು ಮುಖಾಮುಖಿಯಾಗಿಸುತ್ತದೆ. ಒಂದು ವೇಳೆ ಇತಿಹಾಸದಲ್ಲಿ ಅಂತಹ ಸಂಧರ್ಭ ಬರದಿದ್ದರೆ ಇನಸಿನ ಮೂಲಕ ಆ ದೃಶ್ಯ ನಿರ್ಮಾಣವಾಗುತ್ತದೆ. ಇದು ಕಾಲ್ಪನಿಕತೆಯ ಶಕ್ತಿ.

ನಾಟಕ ಕಟ್ಟುವಿಕೆ

ಕತೆಯನ್ನು ಅಭಿನಯವಾಗಿಸುವುದು ಆ ಅಭಿನಯ ಜನರನ್ನು ಮೆಚ್ಚಿಸುವಂತದ್ದು ಸವಾಲಿನದ್ದು. ಅಂತಹ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದಂತಹ ನಾಟಕ ” ನನ್ನ ಅಂಬೇಡ್ಕರ್” ನಾಟಕದ ತಂತ್ರಗಾರಿಕೆ ಬಹಳ ಚನ್ನಾಗಿದೆ, ನಾಟಕದಲ್ಲಿ ಬಳಕೆಯಾಗಿರುವ ರೂಪಕದ ಮಾತುಗಳು, ಕಾವ್ಯಮಯ ಶೈಲಿ ನಓಡುಗರನ್ನು ಹಿಡಿದಿರುವ ಶಕ್ತಿಗಳಾಗಿವೆ. ಧ್ವನಿ ಮತ್ತು ಬೆಳಕು ಸರಳವಾಗಿ, ಸುಂದರವಾಗಿ ಮನಮೆಚ್ಚುವಂತಹ ಅಂಶ. ನಾಟಕದಲ್ಲಿ ಬರುವ ಹಾಡುಗಳು ಪ್ರಾದೇಶಿಕ ಲಯವನ್ನು ಸಮರ್ಥವಾಗಿ ಬಳಸಿಕೊಂಡಿದ್ದರಿಂದ ಅಂಬೇಡ್ಕರ್ ಈ ನೆಲದ ವ್ಯಕ್ತಿ ಅನ್ನಿಸಿಬಿಡುತ್ತದೆ. ಈ ಲೇಖನದ ಶೀರ್ಷಿಕೆಯೂ ಅಂತಹ ಹಾಡಿನ ಒಂದು ಸಾಲು “ಜಾಳು ಜಾಳಾದ ಚಾದರ ಎಂಥಾ ನೂಲು, ಎಂಥಾ ನೇಯ್ಗೆ” ಇಡೀ ಭಾರತವನ್ನು ವಿವಿಧ ಚಿಂತನೆಗಳಿಂದ ನೇಯ್ದ ನೆಲವಾಗಿ ಅದರಲ್ಲಿ ಅಂಬೇಡ್ಕರ್ ಚಿಂತನೆ ಎತ್ತಿಕಾಣುವಂತಹ ತತ್ವವಾಗಿ ಭಾರತದ ಚಾದರ ರೂಪಗೊಂಡಿದೆ ಎನ್ನುವುದನ್ನು ನಾಟಕ ಅದ್ಬುತವಾಗಿ ಕಟ್ಟಿಕೊಡುತ್ತದೆ.

Leave a Reply

Your email address will not be published.