ಗೆಳೆತನ

-ನಾಗಪ್ಪ.ಕೆ.ಮಾದರ

friendಬಾನಲಿ ಮೂಡಲಿ ರವಿಯ ಕಿರಣಗಳ ಸಾಲು
ನನ್ನ ಬಾಳಿಗೆ ಹೊಸ ಬೆಳಕಾಗಿ ಮಾಡು ಕಮಾಲು

ಸೂರ್ಯ ರಶ್ಮಿಯ ನೋಟಕ್ಕೆ ಮಿನುಗಲಿ ಬಾಳಿನ ಜ್ಯೋತಿ
ಉದಯಸಲಿ ಜೀವನ ಪಯಣದ ಆಶಾಕಿರಣ ಮುಕುತಿ

ಇಳಿ ಸಂಜೆಯ ಮಾತುಗಳ ನಡುವೆ ಪಯಣದಲ್ಲಿ ಕಳೆವ ಸಮಯ
ನಿನ್ನ ಪರಿಯ ಪ್ರಸ್ತಾಪವೇ ಅಷ್ಟು ಚನ್ನಾಗಿದೆ ಗೆಳೆಯ

ರಾತ್ರಿಯ ವೇಳೆಗೆ ಕಾಣುವ ನಕ್ಷತ್ರದಂತೆ ನಿನ್ನ ನಯನ
ಬೆಳಕಂತೆ ಸಾಗಲಿ ನಮ್ಮಿಬ್ಬರ ಸ್ನೇಹದ ಪಯಣ

ಮಲಗುವ ಮುನ್ನ ನಿನ್ನಯ ಸವಿನುಡಿಗಳ ತೋರಣ
ನನ್ನ ಮನಕ್ಕೆ ನೆನಪುಗಳ ಸರಮಾಲೆಯ ಹೂರಣ

ಅನುದಿನವೂ ಸಹ ಹೀಗೆ ಕುಚೇಷ್ಟೆಗಳು ನಡೆಯಲಿ
ಪ್ರೀತಿಯ ಸ್ನೇಹ ಸಂಬಂಧಗಳ ಜೊತೆ ಸಮ್ಮೀಲನವಾಗಲಿ

ಸ್ನೇಹವೂ ನೂರು ಕಾಲ ಸಾಗಲಿ ಎಂದು ಆಶಿಸುವೆ
ಚಿರಕಾಲ ನಿರಂತರವಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ

     7204473094, 7411104187.

Leave a Reply

Your email address will not be published.