ಖಾಸಗಿ ಕ್ರೂಢೀಕರಣ ಮತ್ತು ಪುನಶ್ಚೇತನ ಏಜೆನ್ಸಿಗಳು

ಅನು: ಶಿವಸುಂದರ್

“ಉಲ್ಬಣಗೊಳ್ಳುತ್ತಿರುವ ಜೋಡಿ ಬ್ಯಾಲೆನ್ ಶೀಟ್ ಸಮಸ್ಯೆಗೆ” (Twin Balance Sheet Problem (TBS) ಆರ್ಥಿಕ ಸರ್ವೇಕ್ಷಣೆ ಸೂಚಿಸಿರುವ ಪರಿಹಾರವು ಕೇವಲ ಒಂದು ಬ್ಯಾಂಡೇಜು ಒದಗಿಸಬಲ್ಲದಷ್ಟೆ.
.
(Twin Balance Sheet Problem (TBS) – ಜೋಡಿ ಬ್ಯಾಲೆನ್ ಶೀಟ್ ಸಮಸ್ಯೆ- ಎಂದರೆ ಬ್ಯಾಂಕುಗಳಿಂದ ದೊಡ್ಡ ಮೊತ್ತದ ಸಾಲಗಳನ್ನು ಪಡೆದುಕೊಂಡ ದೊಡ್ಡ ಕಂಪನಿಗಳು ಸಾಲ ಮರುಪಾವತಿ ಮಾಡದೇ ಇದ್ದಾಗ ಬ್ಯಾಂಕುಗಳ ಮತ್ತು ಆ ಕಂಪನಿಗಳ ಬ್ಯಾಲೆನ್ಸ್ ಶೀಟ್-ಅಯವ್ಯಯ ಪಟ್ಟಿಗಳಲ್ಲಿ ತಲೆದೋರುವ ಸಮಸ್ಯೆ. ಸಾಮಾನ್ಯವಾಗಿ ಸಾಲ ಪಡೆದುಕೊಳ್ಳುವವರ ಮರುಪಾವತಿ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳದೇ ಬ್ಯಾಂಕುಗಳು ದೊಡ್ಡ ಮೊತ್ತದ ಸಾಲಗಳನ್ನು ನೀಡಿದಾಗ ಈ ಸಮಸ್ಯೆ ಉದ್ಭವಿಸುತ್ತದೆ- ಅನುವಾದಕನ ಟಿಪ್ಪಣಿ )

RBIಉಲ್ಬಣಗೊಳ್ಳುತ್ತಿರುವ ಜೋಡಿ ಬ್ಯಾಲೆನ್ ಶೀಟ್ ಸಮಸ್ಯೆಯು ಸಾರಾಂಶದಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಸಾಲ ತೆಗೆದುಕೊಂಡ ಕಂಪನಿಗಳ ಮತ್ತು ಇಂಥಾ ಕೆಟ್ಟ ಸಾಲಗಳನ್ನು ಕೊಟ್ಟು ಅನುಭವಿಸುತ್ತಿರುವ ಬ್ಯಾಂಕುಗಳ, ಹದಗೆಡುತ್ತಿರುವ “ಹಣಕಾಸು ಒತ್ತಡ”ದ ಸಮಸ್ಯೆಯೇ ಆಗಿದೆ. ಇದರಿಂದಾಗಿ ಒಂದೆಡೆ ಸಾರ್ವಜನಿಕ ಬ್ಯಾಂಕುಗಳು ದೊಡ್ಡ ಕಂಪನಿಗಳಲ್ಲಿ ಸಿಕ್ಕಿಬಿದ್ದಿರುವ ತಮ್ಮ ದೊಡ್ಡ ಮೊತ್ತಗಳ “ಕೆಟ್ಟ ಸಾಲ”ಗಳನ್ನು (ಬ್ಯಾಂಕ್ ಪರಿಭಾಷೆಯಲ್ಲಿ-ಬ್ಯಾಡ್ ಲೋನ್- ಕೆಟ್ಟ ಸಾಲ- ಎಂದರೆ ಸಾಲದ ಶರತ್ತುಗಳಿಗೆ ತಕ್ಕಂತೆ ಮರುಪಾವತಿ ಆಗದ ಮತ್ತು ಮುಂದೆಯೂ ಮರುಪಾವತಿ ಆಗಲಾರದೆಂದು ಪರಿಗಣಿಸಲ್ಪಟ್ಟ ಸಾಲಗಳು- ಅನುವಾದಕನ ಟಿಪ್ಪಣಿ )ಸಮರ್ಥವಾಗಿ ಪುನರ್‍ರಚಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಮತ್ತೊಂದೆಡೆ ಅವುಗಳ ನಿಷ್ಕ್ರಿಯ ಸಂಪತ್ತುಗಳ (ನಾನ್ ಫರ್ಫಾಮಿಂಗ್ ಅಸೆಟ್-npa- ನಿಷ್ಕ್ರಿಯ ಸಂಪತ್ತು-ಎಂದರೆ ಪಡೆದುಕೊಂಡ ಸಾಲದ ಕಂತನ್ನಾಗಲೀ ಅಥವಾ ಅದರ ಮೇಲಿನ ಬಡ್ಡಿಯನ್ನಾಗಲೀ ಸತತವಾಗಿ ಮರುಪಾವತಿ ಮಾಡಲು ವಿಫಲವಾದ ಸಾಲಗಳು- ಅನುವಾದಕನ ಟಿಪ್ಪಣಿ) ಪ್ರಮಾಣವೂ ಹೆಚ್ಚುತ್ತಾ ವಾಣಿಜ್ಯ ಕ್ಷೇತ್ರಕ್ಕೂ ಮತ್ತು ಇತರ ಖಾಸಗಿ ಹೂಡಿಕೆಗೂ ಸಾಲವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. 2015-16ರ ಆರ್ಥಿಕ ಸರ್ವೇಕ್ಷಣ ವರದಿಯನ್ನು ರೂಪಿಸಿದವರು ಈ ಸಮಸ್ಯೆಯನ್ನು ಬಗೆಹರಿಸಲು ಒಂದು ಪ್ರಮುಖ ಶಿಫಾರಸ್ಸು ಮಾಡಿದ್ದಾರೆ. ಅದೇನೆಂದರೆ ಒಂದು ಕೇಂದ್ರೀಕೃತ -ಪಬ್ಲಿಕ ಸೆಕ್ಟರ್ ಅಸೆಟ್ ರೆಹಾಬಿಲಿಟೇಷನ್ ಏಜೆನ್ಸಿ- PARA–ಪಾರಾ- ವನ್ನು ಸ್ಥಾಪಿಸುವುದು. ಅದು ಕೆಲವು ದೊಡ್ಡ ಮತ್ತು ಕಠಿಣವಾದ ಪ್ರಕರಣಗಳನ್ನು ಕೈಗೆತ್ತಿಕೊಂಡು “ರಾಜಕಿಯವಾಗಿ ಕಠಿಣವಾದ ನಿರ್ಧಾರಗಳನ್ನು” ತೆಗೆದುಕೊಳ್ಳುವ ಮೂಲಕ ಸಾಲದ ಹೊರೆಯನ್ನು ಕಡಿಮೆ ಮಾಡುತ್ತದೆಂದು ನಿರೀಕ್ಷಿಸಲಾಗಿದೆ.

ಸಾರ್ವಜನಿಕ ಬ್ಯಾಂಕುಗಳು ಕೊಟ್ಟಿರುವ ಸಾಲಗಳಲ್ಲಿ ಆರನೇ ಒಂದು ಭಾಗ “ಒತ್ತಡ”ಕ್ಕೆ ಸಿಲುಕಿವೆ- ಒಂದೋ ಅವು ನಿಷ್ಕ್ರಿಯವಾಗಿವೆ ಅಥವಾ ಮನ್ನಾ ಆಗಲ್ಪಟ್ಟಿವೆ. ಬಹುಪಾಲು “ಒತ್ತಡಕ್ಕೆ ಸಿಲುಕಿರುವ” ಸಾಲಗಳನ್ನು “ನಿಷ್ಕ್ರಿಯ ಸಂಪತ್ತು” ಎಂದು ವರ್ಗೀಕರಿಸಲಾಗಿದೆ. ಆರ್ಥಿಕ ಸರ್ವೇಕ್ಷಣೆಯು ಪ್ರಧಾನವಾಗಿ ವಿದ್ಯುತ್ ಉತ್ಪಾದನೆ, ಉಕ್ಕು, ಮತ್ತು ದೂರಸಂಪರ್ಕದಂಥಾ ಮೂಲಸೌಕರ್ಯ ಕ್ಷೇತ್ರಗಳಲ್ಲಿ (ಇದರಲ್ಲಿ ಹೆದ್ದಾರಿ, ಬಂದರು ಮತ್ತು ನಾಗರಿಕ ವಿಮಾನ ಸೇವೆಗಳನ್ನು ಸೇರಿಸಿಕೊಳ್ಳಬೇಕು) ಲಕ್ಷಾಂತರ ಕೋಟಿ ರೂಪಾಯಿಗಳನ್ನು ಹೂಡಿರುವ ಕಂಪನಿಗಳ ಮೇಲೆ ಮಾತ್ರ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಇವುಗಳ ಬಡ್ಡಿ ವ್ಯಾಪ್ತಿ ಅನುಪಾತವು ಒಂದಕ್ಕಿಂತ ಕಡಿಮೆ! ಅಂದರೆ ಈ ಬೃಹತ್ ಕಂಪನಿಗಳು ಬ್ಯಾಂಕುಗಳಿಂದ ಮತ್ತು ವಿದೇಶಗಳಿಂದ ಪಡೆದುಕೊಂಡಿರುವ ವಾಣಿಜ್ಯ ಸಾಲಗ¼ ಕಂತುಗಳನ್ನಿರಲಿ ಅದರ ಮೇಲಿನ ಬಡ್ಡಿಯನ್ನು ಮರುಪಾವತಿ ಮಾಡುವಷ್ಟು ವರಮಾನವನ್ನೂ ಕೂಡಾ ಸಂಪಾದಿಸುತ್ತಿಲ್ಲವೆಂದರ್ಥ. ವಿದೇಶಿ ವಾಣಿಜ್ಯ ಸಾಲದ ಬಾಬತ್ತಿನಲಂತೂ ರುಪಾಯಿ ವಿನಿಮಯ ದರ ಕುಸಿತದಿಂದಾಗಿ ಈ ಕಂಪನಿಗಳು ಅಪಾರವಾದ ಹೊಡೆತವನ್ನು ಅನುಭವಿಸಿವೆ. ಅವುಗಳ ರೂಪಾಯಿ ರೂಪದ ಆಸ್ತಿ ಅಡಮಾನ ಮತ್ತು ಬಡ್ಡಿ ದರಗಳಲ್ಲಿ ದೊಡ್ಡ ಮಟ್ಟದ ಏರಿಕೆಯಾಗಿ ಬಿಟ್ಟಿದೆ. ಇದರ ಜೊತೆಗೆ ರಿಸರ್ವ್ ಬ್ಯಾಂಕು “ಹಣದುಬ್ಬರ ನಿಯಂತ್ರಣ”ವನ್ನು ಗಮನದಲ್ಲಿಟ್ಟುಕೊಂಡು ಅನುಸರಿಸುತ್ತಿರುವ ಹಣಕಾಸು ನೀತಿಯೂ ಸಹ ಅವುಗಳ ಒಟ್ಟಾರೆ ಬಡ್ಡಿ ಹೊರೆಯನ್ನು ಹೆಚ್ಚಿಸಿವೆ.

ಹಾಗೆ ನೋಡಿದಲ್ಲಿ ರಿಸರ್ವ್ ಬ್ಯಾಂಕು, ಸಾಲ ನೀಡಿದ ಬ್ಯಾಂಕುಗಳ ಹಿತಾಸಕ್ತಿಗಿಂತ ಹೆಚ್ಚಾಗಿ ಸಾಲ ಪಡೆದುಕೊಂಡ ದೊಡ್ಡ ಕಾರ್ಪೋರೇಟ್  ಕಂಪನಿಗಳ ಆಸಕ್ತಿಯನ್ನೇ ಗಮನದಲ್ಲಿಟ್ಟುಕೊಂಡಿದೆ. ಮತ್ತು ಆ ನಿಟ್ಟಿನಲ್ಲಿ ಹಲವಾರು ಬಗೆಯ “ಕಾರ್ಪೋರೇಟ್  ಸಾಲ ಪುನರರಚನಾ ಯೋಜನೆಗಳನ್ನು” ಜಾರಿಗೆ ತಂದಿದೆ. ಸಾಲ ಮರುಪಾವತಿಯ ಅವಧಿಯನ್ನು ಹಿಗ್ಗಿಸುವುದು, ಬಡ್ಡಿದರವನ್ನು ಕಡಿಮೆ ಮಾಡುವುದು, ಸಾಲಗಾರ ಕಂಪನಿಯ ಶೇರುಗಳನ್ನು ತಾನೇ ಖರೀದಿಸಿ ಬಂಡವಾಳದ ಒಂದಷ್ಟು ಸಾಲದ ಭಾಗವನ್ನು ಶೇರು ಬಂಡವಾಳವನ್ನಾಗಿ ಪರಿವರ್ತಿಸುವುದು ಹಾಗೂ ಇವುಗಳ ಜೊತೆಗೆ ಇನ್ನಷ್ಟು ಸಾಲವನ್ನು ಕೊಡªಂಥಾ ಹಲವಾರು ಯೋಜನೆಗಳನ್ನು ಒದಗಿಸಿದರೂ ಕೂಡಾ ಈ ಕಂಪನಿಗಳು ಚೇತರಿಸಿಕೊಳ್ಳುತ್ತಿಲ್ಲ. ಹೀಗಾಗಿ ಕಾರ್ಪೋರೇಟ್ ಸಾಲಗಳನ್ನು ಪುನರ್‍ರಚನೆ ಮಾಡುವ ಉದ್ದೇಶವು ಈಡೇರುತ್ತಲೇ ಇಲ್ಲ. ಇಂಥಾ ಪ್ರಸಂಗಗಳಲ್ಲ್ಲಿ ನೈತಿಕ ಮಾನದಂಡಗಳಿಗಿಂತ ಆರ್ಥಿಕ ಆಸಕ್ತಿಗಳನ್ನೇ ಪ್ರಧಾನವಾಗಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗಿದೆಯೆಂದು ಹೇಳಲಾಗುತ್ತಿದ್ದರೂ, ಈ “ಪುನರ್‍ರಚನೆಗಳು” ಸಾರ್ವಜನಿಕ ಬ್ಯಾಂಕುಗಳಿಗೆ ನಷ್ಟವನ್ನುಂಟು ಮಾಡಿ ಖಾಸಗಿ ಹೂಡಿಕೆದಾರರನ್ನು ಬಚಾವು ಮಾಡಿರುವ ಹಲವಾರು ಉದಾಹರಣೆಗಳಿವೆ.

ಹಾಗೆ ನೋಡಿದರೆ ಉದಾರೀಕರಣದ ಪ್ರಮುಖ ಕಾರ್ಯಸೂಚಿಯೇ ಮೇಲೆ ಉಲ್ಲೇಖಿಸಲಾದ ಮೂಲಭೂತ ಸೌಕರ್ಯಗಳ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಖಾಸಗಿ ಬಂಡವಾಳ ಹೂಡಿಕೆಯನ್ನು ತರುವುದಾಗಿತ್ತು. ಆದರೆ ಯಾವಾಗ ಕಾರ್ಪೋರೇಟ್  ಬಾಂಡ್ ಮಾರುಕಟ್ಟೆ (ಕಾರ್ಪೋರೇಟ್  ಬಾಂಡ್ ಮಾರುಕಟ್ಟೆಯೆಂದರೆ ಕಾರ್ಪೋರೇಟ್  ಕಂಪನಿಗಳು ತಮ್ಮ ಕಂಪನಿಯ ವಿಶ್ವಾಸಾರ್ಹತೆಯನ್ನು ಪಣವಾಗಿಟ್ಟು ಮಾರುಕಟ್ಟೆಯಲ್ಲಿ ಕ್ರೂಢೀಕರಿಸುವ ಸಾಲ. ಈ ಪ್ರಕ್ರಿಯೆಯಲ್ಲಿ ಕಂಪನಿಗಳು ನಿರ್ದಿಷ್ಟ ಮೊತ್ತದ ಬಾಂಡಗಳನ್ನು ಬಿಕರಿಗಿಡುತ್ತವೆ. ಅದನ್ನು ಕೊಳ್ಳುವವರಿಗೆ ನಿರ್ದಿಷ್ಟ ಮೊತ್ತದ ಬಡ್ಡಿಯನ್ನು ಖಾತರಿ ಪಡಿಸುತ್ತವೆ. ಬಾಂಡ್‍ಗಳ ವಿಶ್ವಾಸಾರ್ಹತೆಗಾಗಿ ಕಂಪನಿಗಳು ತಮ್ಮ ಆಸ್ತಿಪಾಸ್ತಿ ಹಾಗೂ ಇನ್ನಿತರ ಸಂಪತ್ತಿನ ಭರವಸೆಯನ್ನು ಬಾಂಡ್‍ಗಳ ಬೆನ್ನಿಗಿಡುತ್ತವೆ. ಅಂದರೆ ಒಟ್ಟಿನಲ್ಲಿ ತಮಗೆ ಬೇಕಾದ ಬಂಡವಾಳವನ್ನು ತಾವೇ ಕ್ರೂಢೀಕರಿಸಿಕೊಳ್ಳುತ್ತವೆ- ಅನುವಾದಕನ ಟಿಪ್ಪಣಿ) ಯಾಗಲೀ ಅಥವಾ ಕೊಟ್ಯಾಧಿಪತಿ ಹಣಹೂಡಿಕೆದಾರರಾಗಲೀ ಈ ಯೋಜನೆಗೆ ಬೇಕಾದ ತಮ್ಮ ಪಾಲಿನ ಹಣವನ್ನೂ ಹೂಡಲು ವಿಫಲರಾದರೋ ಆಗ ಸರ್ಕಾರವು ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್‍ಶಿಪ್- PPP) ಯೋಜನೆಗಳನ್ನು ರೂಪಿಸಿತು. ಮತ್ತು ಈ ಬೃಹತ್ ಯೋಜನೆಗಳಿಗೆ ಬೇಕಾದ ಬೃಹತ್ ಬಂಡವಾಳದ ಬಹುದೊಡ್ಡ ಪಾಲನ್ನು ಕಾರ್ಪೋರೇಟ್  ಕಂಪನಿಗಳಿಗೆ ದೀರ್ಘಾವಧಿ ಸಾಲಗಳನ್ನಾಗಿ ನೀಡಲು ಸಾರ್ವಜನಿಕ ಬ್ಯಾಂಕುಗಳ ಮೇಲೆ ಒತ್ತಡ ಹೇರಿತು. ಈ ಬಗೆಯ ಸಾಲಗಳಿಗೆ ಸಾಕಷ್ಟು “ಮರುಪಾವತಿ ರಹಿತ” ಅವಧಿಯನ್ನೂ, ನಂತರದಲ್ಲಿ “ಸುದೀರ್ಘವಾದ ಮರುಪಾವತಿಯ ಅವಧಿ”ಯನ್ನೂ ಒದಗಿಸಲಾಯಿತು. ಆದರೆ ಖಾಸಗಿ ಬ್ಯಾಂಕುಗಳು ಮಾತ್ರ ಇಂಥಾ ಯೋಜನೆಗಳಿಗೆ ಹಣಕಾಸನ್ನು ಒದಗಿಸಲು ಯಾವುದೇ ಬಗೆಯ ಆಸಕ್ತಿಯನ್ನು ತೋರಲಿಲ್ಲ.

ಹೀಗೆ ಹಿಂದಿನ ಹಲವಾರು ಕೇಂದ್ರ ಸರ್ಕಾರಗಳು ಈ ಜೋಡಿ ಬ್ಯಾಲೆನ್ಸ್ ಶೀಟ್ ಸಮಸ್ಯೆಯನ್ನು ಪೆÇೀಷಿಸಿಕೊಂಡು ಬಂದಿದ್ದು ಮಾತ್ರವಲ್ಲದೆ ಅದು “ಉಲ್ಬಣ”ಗೊಳ್ಳಲೂ ಅವಕಾಶ ನೀಡಿದ್ದರಿಂದ ಹಾಲಿ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಇದಕ್ಕೆ ಒಂದು ಪರಿಹಾರೋಪಾಯವನ್ನು ಕಂಡುಹಿಡಿಯಲೇಬೇಕಾಯಿತು.

ಆದರೆ ಇದಕ್ಕೆ -ಪಬ್ಲಿಕ ಸೆಕ್ಟರ್ ಅಸೆಟ್ ರೆಹಾಬಿಲಿಟೇಷನ್ ಏಜೆನ್ಸಿ-PARA- ಪಾರಾ- ಒಂದು ಯೋಗ್ಯ ಪರಿಹಾರವೇ? ಮೂಲಭೂತವಾಗಿ ಈ ಪಾರಾ ಮಾಡುವುದೇನು? ಅದು ಬ್ಯಾಂಕುಗಳಲ್ಲಿರುವ ದೊಡ್ಡ ಮೊತ್ತಗಳ “ಕೆಟ್ಟ ಸಾಲ”ವನ್ನು ಕೊಂಡುಕೊಂಡು ಶೇರು ಈಕ್ವಿಟಿಯಾಗಿ ಪರಿವರ್ತಿಸಿ ಮಾರುಕಟ್ಟೆಯಲ್ಲಿ ಹರಾಜು ಮಾಡುತ್ತದೆ ಅಥವಾ ಸಾಲದ ಮೊತ್ತವನ್ನು ಕಡಿಮೆ ಮಾಡುತ್ತದೆ. ಈ ಎರಡೂ ಕ್ರಮಗಳು ಆಯಾ ಕಾರ್ಪೋರೇಟ್ ಕಂಪನಿಗಳ ವಿತ್ತೀಯ ವಿಶ್ವಾಸಾರ್ಹತೆಯನ್ನು ಪುನರ್‍ಸ್ಥಾಪನೆ ಮಾಡುವ ಕ್ರಮಗಳೇ ಆಗಿವೆ. ಈ ಕ್ರಮದಿಂದಾಗಿ ಸಾರ್ವಜನಿಕ ಬ್ಯಾಂಕುಗಳ ಲೆಕ್ಕದ ಖಾತೆಯಿಂದ “ಕೆಟ್ಟ ಸಾಲ” ಗಳು ಇಲ್ಲವಾಗುವುದರಿಂದ ಸರ್ಕಾರ ಆ ಬ್ಯಾಂಕುಗಳಿಗೆ ಮತ್ತಷ್ಟು ಬಂಡವಾಳಪೂರಣ ಮಾಡಿ ಅವುಗಳ ಹಣಕಾಸು ಆರೋಗ್ಯವನ್ನು ಮರಳಿ ಹಾದಿಗೆ ತರುತ್ತದೆ. ಪಾರಾ ಗೆ ಬೇಕಿರುವ ನಿಧಿಯನ್ನು ಈ ಮೂರು ಮೂಲಗಳಿಂದ ಶೇಖರಿಸಲಾಗುತ್ತದೆ- ಸರ್ಕಾರಿ ಬಾಂಡ್‍ಗಳನ್ನು ವಿತರಿಸುವ ಮೂಲಕ, ಖಾಸಗಿ ಉದ್ಯಮಿಗಳು ಪಾರಾದ ಈಕ್ವಿಟಿ ಶೇರುಗಳನ್ನು ಕೊಂಡುಕೊಳಲು ಉತ್ತೇಜಿಸುವುದರ ಮೂಲಕ ಮತ್ತು ರಿಸರ್ವ್ ಬ್ಯಾಂಕಿನ ಮೂಲಕ.

1990ರ ದಶಕದಲ್ಲಿ ಸಂಭವಿಸಿದ ಪೂರ್ವ ಏಷಿಯಾ ಹಣಕಾಸಿನ ಬಿಕ್ಕಟ್ಟಿನ ನಂತರದಲ್ಲಿನ ಅನುಭವಗಳನ್ನು ಆಧರಿಸಿ ಪಾರಾ ವನ್ನು“ಸಾರ್ವಜನಿಕ ಸಂಪತ್ತಿನ ಪುನಶ್ಚೇತನಾ” ವಾಹಕವೆಂದು ಬಿತ್ತರಿಸಲಾಗುತ್ತಿದೆ. ಅದರ ಒಳಹೊಕ್ಕು ನೋಡಿದರೆ ಪಾರಾ ದ ಕಾರ್ಯವಿಧಾನ ವಿಷ್ಟೇ- ಬಿಕ್ಕಟ್ಟಿನಲ್ಲಿರುವಾಗ ದಕ್ಕುವ ಅಗ್ಗದ ಬೆಲೆಯಲ್ಲಿ ಈ ಕೆಟ್ಟ ಸಂಪತ್ತನ್ನು ಕೊಂಡುಕೊಳ್ಳುವುದು, ಅವುಗಳ ಹಣಕಾಸು ಸ್ವರೂಪಗ¼ನ್ನು ಮರುರಚನೆ ಮಾಡುವುದು, ಮತ್ತು ನಂತರದಲ್ಲಿ ತನ್ನ ಹಿಡಿತದಲ್ಲಿರುವ ಪಾಲನ್ನು ಅತಿ ಹೆಚ್ಚು ಬೆಲೆ ಕೊಟ್ಟು ಕೊಡುಕೊಳ್ಳುವವರಿಗೆ ಮಾರುವುದು. ಆ ರೀತಿ “ಕೆಟ್ಟ ಸಾಲ”ವನ್ನು ಕೊಳ್ಳುವವರು ಯಾರು? ಅವುಗಳು ಹೆಚ್ಚಿನ ಪಾಲು ಖಾಸಗಿ ಈಕ್ವಿಟಿ ನಿಧಿ ಸಂಸ್ಥೆಗಳೇ ಆಗಿರುತ್ತವೆ. (“ಖಾಸಗಿ ಈಕ್ವಿಟಿ ನಿಧಿ” ಎಂದರೆ ಖಾಸಗಿ ಹೂಡಿಕೆದಾರರು ಮತ್ತು ಸಾಂಸ್ಥಿಕ ಹೂಡಿಕೆದಾರರು ರಚಿಸಿಕೊಂಡಿರುವ ಒಟ್ಟು ಬಂಡವಾಳ ನಿಧಿ. ಅವನ್ನು ಆ ಸಂಸ್ಥೆಗಳು ಅತಿ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ತಮ್ಮದೇ ಆದ ವ್ಯವಹಾರ ತಂತ್ರಕ್ಕನುಸಾರವಾಗಿ ನಿರ್ದಿಷ್ಟ ಖಾಸಗಿ ಅಥವಾ ಸಾರ್ವಜನಿಕ ಕಂಪನಿಗಳಲ್ಲಿ ನೇರವಾಗಿ ಹೂಡುತ್ತಾರೆ- ಅನುವಾದಕನ ಟಿಪ್ಪಣಿ ). ಈ ಯೋಜನೆಗಳು ಸಾರ್ವಜನಿಕ ಮೂಲಭೂತ ಸೌಕರ್ಯ ಯೋಜನೆಗಳಾದ್ದರಿಂದ ಒಂದು ವೇಳೆ ತಾವೂ ವಿಫಲವಾದರೂ ತಮ್ಮನ್ನೂ ಪಾರು ಮಾಡಲಾಗುವುದೆಂದು ಅವರು ಸ್ಪಷ್ಟವಾಗಿ ಅರಿತಿರುತ್ತಾರೆ. ಆದ್ದರಿಂದಲೇ ಅವರು ಈ ಯೋಜನೆಯ ನಿಭಾವಣೆಯಲ್ಲಿ ಅತಿ ಕಡಿಮೆ ಜಾಗರೂಕತೆಯನ್ನು ತೋರಬಹುದು ಮತ್ತು ಅತ್ಯಂತ ಅಪಾಯಕಾರಿ ಕ್ರಮಗಳಿಗೆ ಕೈಹಾಕಬಹುದು. ಆ ಮೂಲಕ ಈಗಾಗಲೇ ಹಾನಿಗೊಳಗಾಗಿರುವ ಯೋಜನೆಗಳಿಗೆ ಮತ್ತಷ್ಟು ಹಾನಿಯನ್ನುಂಟುಮಾಡಿ ಅವುಗಳ ದುರಸ್ಥಿ ವೆಚ್ಚವನ್ನು ಇನ್ನಷ್ಟು ಹೆಚ್ಚಿಸಬಹುದು.

ಅರ್ಥಮಾಡಿಕೊಳ್ಳಬೇಕಾದ ವಿಷಯವೇನೆಂದರೆ ಇಂಥಾ ಯೋಜನೆಗಳ ಮೂಲ ಪ್ರವರ್ತಕರ ಅಥವಾ ವಿಜೇತ ಬಿಡ್ಡುದಾರರ ಬಂಡವಾಳವು ಹಿಂದೆ “ಹೂಡಿ”ಯಾದದ್ದು ಅಥವಾ ಮುಂದೆ ಆಗುವುದು ಅವುಗಳ ಖಾಸಗಿ ಲಾಭಕ್ಕಾಗಿಯೇ ಹೊರತು ಬೇರೇನಕ್ಕೂ ಅಲ್ಲ. ಅಲ್ಲದೆ ಈಗಾಗಲೇ ಬ್ಯಾಂಕುಗಳು ಅಪಾರ ಪ್ರಮಾಣದ ವಿದೇಶಿ ವಿನಿಮಯವನ್ನು ಸಂಗ್ರಹಿಸಿವೆ. ಅದರಲ್ಲಿ ಒಂದು ಪಾಲನ್ನು ಮಾತ್ರ ರಿಸರ್ವ ಬ್ಯಾಂಕ್ ತನ್ನ ಸಂಗ್ರಹಕ್ಕೆ ಇಟ್ಟುಕೊಂಡಿರುವುದರಿಂದ ಬ್ಯಾಂಕುಗಳ ಬಳಿ ಅಪಾರ ಪ್ರಮಾಣದ ಚಾಲ್ತಿ ನಗದು ಸಂಪತ್ತಿದೆ. ಆದ್ದರಿಂದ ಹಣಕಾಸು ಸರಬರಾಜು ಸರಾಗವಾಗಿ ಆಗಲಿದೆ. ಇತ್ತೀಚೆಗಂತೂ ಹಲವಾರು ಹಣಕಾಸೇತರ ಕಾರ್ಪೋರೇಷನ್‍ಗಳು(ನಾನ್ ಫೈನಾನ್ಷಿಯಲ್ ಕಾಕಾರ್ಪೋರೇಟ್ -ಹಣಕಾಸೇತರ ಕಾರ್ಪೋರೇಟ್  ಎಂದರೆ ಸರಕು ಮತ್ತು ಸೇವೆಗಳ ಉತ್ಪಾದನೆಗಳಲ್ಲಿ ಮಾತ್ರ ತೊಡಗಿರುವ ಮತ್ತು ಹಣಕಾಸು ವಹಿವಾಟುಗಳಲ್ಲಿ ತೊಡಗಿರ ಸಂಸ್ಥೆಗಳು- ಅನುವಾದಕನ ಟಿಪ್ಪಣಿ) ತಮ್ಮ ಹೂಡಿಕೆಗೆ ಬೇಕಿರುವ ಬಂಡವಾಳವನ್ನು ತಮ್ಮ ಅಂತರಿಕ ನಿಧಿಗಳಿಂದಲೇ ರೂಢಿಸಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿದ್ದರೂ ಸº ಹಣಕಾಸು ಲಾಭಗಳನ್ನು ಗಳಿಸಲು ವಿವಿಧ ಹಣಕಾಸು ವ್ಯವಹಾರಗಳಲ್ಲಿ ತೊಡಗಿಕೊಂಡು ಹಣಕಾಸು ಸಂಸ್ಥೆಗಳಂತೆಯೇ ವರ್ತಿಸುತ್ತಿವೆ.

ಅವುಳ ಲಾಭಗಳಿಕೆಯ ತಂತ್ರಗಳಲ್ಲಿ ಹೆಚ್ಚೆಚ್ಚು ಹಣಕಾಸು ಲಾಭವನ್ನು ತಂದುಕೊಡುವ ಅವಕಾಶಗಳನ್ನು ಅರಸುವುದೇ ಪ್ರಧಾನವಾಗುತ್ತಿದೆ ಮತ್ತು ಮೂಲಭೂತ ಸೌಕರ್ಯಗಳ ಸೃಷ್ಟಿಯಲ್ಲಿ ಹೂಡಿಕೆ ಮಾಡುವ ದೂರಗಾಮಿ ಆರ್ಥಿಕ ಉದ್ದೇಶಗಳು ಹಿನ್ನೆಲೆಗೆ ಸರಿಯುತ್ತಿದೆ. ಆದ್ದರಿಂದಲೇ ಈ “ಜೋಡಿ ಬ್ಯಾಲೆನ್ಸ್‍ಶೀಟ್ ಸಮಸ್ಯೆ”ಯ ಬೇರುಗಳು ಬಂಡವಾಳಶಾಹಿ ಕ್ರೂಢೀಕರಣ (ಕ್ಯಾಪಿಟಲಿಸ್ಟ್ ಅಕ್ಯುಮುಲೇಷನ್- ಬಂಡವಾಳಶಾಹಿ ಕ್ರೂಢೀಕರಣ- ಎಂದರೆ ಬಂಡವಾಳಶಾಹಿಗಳು ತಮ್ಮ ಬಂಡವಾಳದ ಅಡಿಪಾಯವನ್ನು ವಿಸ್ತರಿಸಿಕೊಳ್ಳಲು, ಎಂದರೆ ಇನ್ನಷ್ಟು ಬಂಡವಾಳ ಸರಕುಗಳನ್ನು, ಆಸ್ತಿಗಳನ್ನು ಪಡೆದುಕೊಳ್ಳಲು ತಮ್ಮ ಲಾಭದ ಪಾಲೊಂದನ್ನು ಹೂಡಿಕೆ ಮಾಡುವುದು-ಅನುವಾದಕನ ಟಿಪ್ಪಣಿ)ದಲ್ಲಿ ಹಣಕಾಸು ವಹಿವಾಟಿನ ಮೂಲಕ ಪಡೆಯುವ ಲಾಭದ ತೂಕ ಹೆಚ್ಚಾಗುತ್ತಿರುವುದರಲ್ಲಿದೆ ಎಂಬುದರಲ್ಲಿ ಸಂಶಯವಿಲ್ಲ. ಹೀಗಾಗಿ ಸಮಸ್ಯೆಗೆ ಪಾರಾ (PARA) ಯಾವುದೇ ದೂರಗಾಮಿ ಪರಿಹಾರವನ್ನು ನೀಡುವುದಿಲ್ಲ. ಬದಲಿಗೆ ಅದು ಹೆಚ್ಚೆಂದರೆ ಒಂದು ರೀತಿಯ ಬ್ಯಾಂಡೇಜನ್ನು ಒದಗಿಸಬಹುದಷ್ಟೆ.

ಕೃಪೆ: Economic and Political Weekly;      February 25, 2017. Vol 52, No. 8

Leave a Reply

Your email address will not be published.