ಕೇಂದ್ರದ ಒತ್ತಡಕ್ಕೆ ಮಣಿದ ಚುನಾವಣಾ ಆಯೋಗ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ                                             

ತನ್ನ ಅದೀನದಲ್ಲಿರುವ ಸಿ.ಬಿ.ಐ., ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಸಂಸ್ಥೆಗಳನ್ನು ಕೇಂದ್ರ ಸರಕಾರ ತನ್ನ ಹಿತಾಸಕ್ತಿಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾಯಿತು. ಇದೀಗ ಕೇಂದ್ರಚುನಾವಣಾ ಆಯೋಗದ ಸರದಿ!

ಕೇಂದ್ರ ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆಗಳನ್ನು  ಸಹ ಹೇಗೆ ತನ್ನ ಅನುಕೂಲಕ್ಕೆ ಬಳಸಿಕೊಳ್ಳಬಹುದೆಂಬುದನ್ನು ಕೇಂದ್ರದ ಬಾಜಪ ಸರಕಾರ ಇದೀಗ ತೋರಿಸಿಕೊಟ್ಟಿದೆ. ಏಕಕಾಲಕ್ಕೆ ನಡೆಯಬೇಕಿದ್ದ ಹಿಮಾಚಲಪ್ರದೇಶ ಮತ್ತು ಗುಜರಾತ್ ರಾಜ್ಯಗಳ ವಿದಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಘೋಷಿಸುವಾಗ ಕೇವಲ ಹಿಮಾಚಲಪ್ರದೇಶದ ಚುನಾವಣೆಗೆ ದಿನಾಂಕ ನಿಗದಿ ಪಡಿಸಿದ್ದು, ಗುಜರಾತಿನ ಚುನಾವಣೆಯ ದಿನಾಂಕ ನಿಗದಿಗೊಳಿಸದೆ ಇರುವುದಕ್ಕೆ ಸಬೂಬುಗಳನ್ನು ನೀಡಿರುವ ಆಯೋಗ ತಾನು ಕೇಂದ್ರ ಸರಕಾರದ ಮರ್ಜಿಯಂತೆ ಕಾರ್ಯ ನಿರ್ವಹಿಸುತ್ತಿರುವುದನ್ನು  ಸಾಬೀತು ಪಡಿಸಿದೆ. ಹಿಂದೆಂದೂ ಚುನಾವಣಾ ಆಯೊಗ ಈ ಮಟ್ಟಿಗಿನ  ಪಕ್ಷಪಾತಿ ಧೋರಣೆಯನ್ನು  ಅನುಸರಿಸಿದ್ದನ್ನು ನಾವೆಂದೂ ಕಂಡಿರಲಿಲ್ಲ.

2012ರಲ್ಲಿ ಹಿಮಾಚಲಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಗೆ ವಿದಾನಸಭಾ ಚುನಾವಣೆಗಳು ಏಕಕಾಲದಲ್ಲಿ ನಡೆದಿದ್ದವು. ಈ ಹಿನ್ನೆಲೆಯಲ್ಲಿ ನೋಡಿದರೆ ಈ ಬಾರಿಯೂ ಆ ಎರಡೂ ರಾಜ್ಯಗಳ ಚುನಾವಣಾ ವೇಳಾ ಪಟ್ಟಿ ಒಂದೇ ಸಮಯದಲ್ಲಿ ಬಿಡುಗಡೆ ಮಾಡಬೇಕಿತ್ತು. ಆಗ ಒಂದು ರಾಜ್ಯದ ಪಲಿತಾಂಶಗಳು ಇನ್ನೊಂದು ರಾಜ್ಯದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತಿರಲಿಲ್ಲ. ಆದರೆ ಅಚ್ಚರಿ ಎಂಬಂತೆ  ಕೇಂದ್ರ ಚುನಾವಣಾ ಆಯೋಗವು ಹಿಮಾಚಲಪ್ರದೇಶಕ್ಕೆ ಮಾತ್ರ ಚುನಾವಣೆಗಳನ್ನು ಘೋಷಿಸಿ, ರಾಜಕೀಯ ಪಕ್ಷಗಳಲ್ಲಿ ಮಾತ್ರವಲ್ಲದೆ ಜನರಲ್ಲೂ ಆತಂಕ ಗೊಂದಲಗಳು ಮೂಡುವಂತೆ ಮಾಡಿದೆ. ನವೆಂಬರ್ ಒಂಭತ್ತರಂದು ಹಿಮಾಚಲ ಪ್ರದೇಶದಲ್ಲಿ ಮತದಾನ ನಡೆಯಲಿದ್ದು ಡಿಸೆಂಬರ್ ಹದಿನೆಂಟನೇ ತಾರೀಖು ಮತ ಎಣಿಕೆ ಕಾರ್ಯ ನಡೆದು ಪಲಿತಾಂಶ ಹೊರಬೀಳಲಿದೆ.

ಗುಜರಾತ್ ಚುನಾವಣೆಗೆ ದಿನಾಂಕ ನಿಗದಿಪಡಿಸದೆ ಇರುವುದಕ್ಕೆ ಆಯೋಗ ನೀಡಿದ ಕಾರಣಗಳನ್ನು  ಮಾತ್ರ  ಯಾರೂ ಒಪ್ಪಲು ಸಾದ್ಯವಿಲ್ಲದಂತವಾಗಿವೆ.  ಗುಜರಾತ್ ರಾಜ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಲವಾರು ಕಾಮಗಾರಿಗಳು ನಡೆಯುತ್ತಿದ್ದು, ಅವುಗಳಿಗೆ ನೀತಿಸಂಹಿತೆಯಿಂದ ಅಡಚಣೆ ಉಂಟಾಗಬಾರದೆಂಬ ಕಾರಣದಿಂದ ಚುನಾವಣೆಗಳ ದಿನಾಂಕವನ್ನು ಘೋಷಿಸಿಲ್ಲವೆಂದು ಆಯೋಗ ಸ್ಪಷ್ಟೀಕರಣ ನೀಡಿದೆ. ಆದರೆ ಇದಕ್ಕಿಂತಹ ಮೂರ್ಖತನದ ಸಮರ್ಥನೆ ಮತ್ತೊಂದಿಲ್ಲವೆನಿಸುತ್ತದೆ. ಯಾಕೆಂದರೆ ಕಾನೂನಿನ ಪ್ರಕಾರ ನೀತಿಸಂಹಿತೆ ಜಾರಿಯಾದ ನಂತರ ಹೊಸದಾಗಿ ಅಭಿವೃದ್ದಿ ಯೋಜನೆಗಳನ್ನು ಘೋಷಿಸಬಾರದು ಮತ್ತು ಅನುದಾನಗಳನ್ನುಬಿಡುಗಡೆ ಮಾಡಬಾರದೆಂದಿದೆಯೇ ಹೊರತು ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳನ್ನು ನಿಲ್ಲಿಸಬೇಕೆಂದೇನೂ ಇಲ್ಲ. ಇದು ಕೇಂದ್ರ ಚುನಾವಣಾಆಯೋಗಕ್ಕೆ ಗೊತ್ತಿಲ್ಲವೆಂದೇನೂಇಲ್ಲ. ಆದರೆ  ತನ್ನ ನಡೆಯನ್ನು ಸಮರ್ಥಿಸಿಕೊಳ್ಳಲು ತಕ್ಷಣಕ್ಕೆ ಸಿಕ್ಕಿದ ಒಂದು ವಿವರಣೆಯನ್ನು ಅದು ನೀಡಿದೆ ಅಷ್ಟೆ!

ದಿನಾಂಕ ಪ್ರಕಟಿಸದೆ ಇರುವ ತನ್ನ  ದೌರ್ಬಲ್ಯ ಮುಚ್ಚಿಕೊಳ್ಳಲು ಅದು ಕೇಂದ್ರ ಮೀಸಲು ಪಡೆಯ ಅಲಭ್ಯತೆ, ಸಿಬ್ಬಂದಿಯ ಕೊರತೆ ಮುಂತಾದ  ಸಮರ್ಥನೆಗಳನ್ನು ಕೊಡಲು ಹೋಗಿ ನಗೆಪಾಟಲಿಗೆ ಈಡಾಗಿದೆ, ಯಾಕೆಂದರೆ ಈ ವರ್ಷದ ಆರಂಭದಲ್ಲಿ ಐದೈದು ರಾಜ್ಯಗಳ ಚುನಾವಣೆಗಳನ್ನು ಎರಡೇ ತಿಂಗಳ ಅಂತರದೊಳಗೆ  ನಡೆಸಿದ ಚುನಾವಣಾ ಆಯೋಗಕ್ಕೆ ಹಿಮಾಚಲ ಪ್ರದೇಶದ ಚುನಾವಣೆಗಳು ಒಂದುಸವಾಲೇ ಅಲ್ಲ.

ಸೂಕ್ಷ್ಮವಾಗಿ ವಿಶ್ಲೇಷಿಸಿ ನೋಡಿದರೆ ಬಾಜಪ ಗುಜರಾತಿನಲ್ಲಿ ಈ ಬಾರಿಯ ಚುನಾವಣೆಗಳನ್ನು ಸೋಲುವ ಭೀತಿಯಲ್ಲಿದ್ದು, ಆದಷ್ಟೂ ಕಾಲ ಚುನಾವಣೆಗಳನ್ನು ಮುಂದೂಡಲು ಪ್ರಯತ್ನಿಸುತ್ತಿರುವುದು ಅರಿವಾಗುತ್ತದೆ. ಗುಜರಾತಿನಲ್ಲಿ ದಿನಾಂಕಗಳನ್ನು ನಿಗದಿ ಪಡಿಸದೆ ಇರುವುದರಿಂದ ಹಿಮಾಚಲ ಪ್ರದೇಶದಲ್ಲಿ ನೀತಿ ಸಂಹಿತೆ ಜಾರಿಯಾದರೂ ಗುಜರಾತಿನಲ್ಲಿ ನೀತಿಸಂಹಿತೆ ಜಾರಿಯೇನೂ ಆಗುವುದಿಲ್ಲ. ಇದನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲಿರುವ ಗುಜರಾತಿನ ರಾಜ್ಯಸರಕಾರ ಮತ್ತು ಕೇಂದ್ರ ಸರಕಾರ ಸರಕಾರಿ ಯಂತ್ರವನ್ನು ದುರುಪಯೋಗ ಪಡಿಸಿಕೊಂಡು ಜನಮತವನ್ನುತನ್ನಪರವಾಗಿ ಮಾಡಿಕೊಳ್ಳಲುಕಸರತ್ತು ನಡೆಸಲು  ಇದು ಸಹಾಯಕವಾಗುತ್ತದೆ.

ಇದರಲ್ಲಿ ಬಹಳ ಪ್ರಮುಖವಾಗಿ ನಾವು ಗಮನಿಸಬೇಕಾದ ಅಂಶವೆಂದರೆ ಅಕ್ಟೋಬರ್ ಹದಿನಾರನೇ ತಾರೀಖಿನಂದು ಪ್ರದಾನಮಂತ್ರಿಗಳಾದ  ನರೇಂದ್ರ ಮೋದಿಯವರು ಗುಜರಾತಿಗೆ ಬೇಟಿನೀಡಲಿದ್ದು,  ಆ ದಿನ ಅವರು ಗುಜರಾತ್ ರಾಜ್ಯಕ್ಕೆ ಸಂಬಂದಿಸಿದಂತೆ ಹಲವಾರು ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ  ಮತ್ತು ಪ್ರವಾಹಪೀಡಿತರ ಪರಿಹಾರದ ನೆಪದಲ್ಲಿ ಹಲವಾರು ಪ್ಯಾಕೇಜುಗಳನ್ನು  ಪ್ರಕಟಿಸಲಿದ್ದಾರೆಂದು ಬಾಜಪದ ಮೂಲಗಳೇ ಹೇಳುತ್ತಿವೆ. ಬಹುಶ: ಇದನ್ನೆಲ್ಲ ನೋಡಿದರೆ  ಮೋದಿಯವರ ಈ ನಡೆಗೆ ಪೂರಕವಾಗಿಯೇ ಆಯೋಗವು ಕೇಂದ್ರದ ಒತ್ತಡಕ್ಕೆ ಮಣಿದು  ಚುನಾವಣೆಯ ದಿನಾಂಕ ಘೋಷಿಸದೆ ಇರುವ ನಿದರ್ಾರಕ್ಕೆ ಬಂದಂತೆ ಕಾಣುತ್ತಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಹಿಮಾಚಲಪ್ರದೇಶದ ಚುನಾವಣಾ ದಿನಾಂಕಗಳು  ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಪಾಟೀದಾರ್ ಚಳುವಳಿಯ ನಾಯಕ  ಹಾದರ್ಿಕ್ ಪಟೇಲ್ ಮೇಲಿದ್ದ ರಾಷ್ಟ್ರದ್ವಜಕ್ಕೆ ಮತ್ತು ಇನ್ನಿತರೆ ವಿಚಾರಗಳಿಗೆ ಸಂಬಂದಿಸಿದಂತೆ ಇದ್ದ ಹಲವಾರು ಮೊಕದ್ದಮೆಗಳನ್ನು ಗುಜರಾತ್ ಸರಕಾರ ಹಿಂಪಡೆದಿದೆ. ಇಷ್ಟಲ್ಲದೆ ಊನಾ ಪ್ರಕರಣ ಮತ್ತು ಗೋರಕ್ಷಣೆಯ ನೆಪದಲ್ಲಿ  ತಮ್ಮ ಮೇಲೆ ನಡೆದ ಸವರ್ಣಿಯರ ಹಲ್ಲೆಗಳಿಂದ  ಬಾಜಪದ ಮೇಲೆ ಮುನಿಸಿಕೊಂಡಿರುವ ದಲಿತರನ್ನು ತಮ್ಮತ್ತ ಸೆಳೆಯಲು ಸಹ ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಲವು ಯೋಜನೆಗಳನ್ನು ಘೋಷಿಸಲು ತಯಾರಿ ನಡೆಸಿದ್ದು ಈ ತಿಂಗಳ ಹದಿನಾರನೆ ತಾರೀಖಿನ  ಮೋದಿಯವರ ಬೇಟಿ ಬಹಳ ಮಹತ್ವಪೂರ್ಣವಾಗಿದೆಯೆಂದು ಹೇಳಲಾಗುತ್ತಿದೆ.

ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಿ ಚುನಾವಣಾ ದಿನಾಂಕಗಳನ್ನು ಘೋಷಣೆ ಮಾಡಿಸದೆ ಇರಲು ಬಾಜಪಕ್ಕೆ ಇರುವ  ಮುಖ್ಯ ಕಾರಣ  ಅದಕ್ಕಿರುವ ಸೋಲಿನ ಬೀತಿ! ಎನ್ನಬಹುದು. ಯಾಕೆಂದರೆ ಇಪ್ಪತ್ತೆರಡುವರ್ಷಗಳ ಕಾಲ ಸತತವಾಗಿ ಆಳ್ವಿಕೆ ನಡೆಸಿರುವ ಬಾಜಪಕ್ಕೆ ಸಹಜವಾಗಿ ಕಣ್ಣಿಗೆ ರಾಚುವಂತೆ ಕಾಣುತ್ತಿದೆ. ವರ್ಷಗಳ ಹಿಂದೆ ಮೀಸಲಾತಿಗಾಗಿ ಸುದೀರ್ಘ ಕಾಲ ನಡೆದ ಪಾಟೀದಾರರ ಚಳುವಳಿಯಿಂದಾಗಿ ಪ್ರಬಲ ಪಟೇಲ್ ಸಮುದಾಯ ಬಾಜದಿಂದ ದೂರ ಸರಿದಿದೆ. ಅನಾಣ್ಯೀಕರಣ ಮತ್ತು ಜಿ.ಎಸ್.ಟಿ.ಯಂತಹ  ನಡೆಗಳು ಗುಜರಾತ್ ವರ್ತಕ ಸಮುದಾಯದ ಮೇಲೆ ಬಾರೀ ಪ್ರಮಾಣದ ಪ್ರತಿಕೂಲ ಪರಿಣಾಮಗಳನ್ನು ಬೀರಿದ್ದು ಗುಜರಾತಿನ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿಸಿಲುಕಿರುವುದು ಅಲ್ಲಿಯ ಜನರ ಜೀವನದಲ್ಲಿ ಹಲವು ದುಷ್ಪರಿಣಾಮಗಳನ್ನು ಉಂಟು ಮಾಡಿದೆ.

ಹೀಗೆ ಗುಜರಾತಿನಲ್ಲಿ ಸೋಲುವ ಭಯದಿಂದಾಗಿಯೇ ಕೇಂದ್ರ ಸರಕಾರ ಚುನಾವಣಾ ಆಯೋಗದ ಮೇಲೆ ಒತ್ತಡ ತಂದು ಚುನಾವಣಾ ದಿನಾಂಕಗಳನ್ನು ಘೋಷಿಸದಂತೆ ನೋಡಿಕೊಂಡಿದೆ. ಇದು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬಹುದಾದ ತಿರುವುಗಳನ್ನು ನೆನೆಸಿಕೊಂಡರೆ ನಮ್ಮ ಪ್ರಜಾಪ್ರಭುತ್ವದಲ್ಲಿ ಸ್ವಾಯತ್ತತೆಯಿಂದ ಕೆಲಸ ಮಾಡಬೇಕಾಗಿರುವ ಸಂಸ್ಥೆಗಳ ಭವಿಷ್ಯದ ಬಗ್ಗೆ ಆತಂಕ ಉಂಟಾಗುತ್ತದೆ.

 

Leave a Reply

Your email address will not be published.