ಕುರಿ ಸಾಕಾಣಿಕೆ ಮತ್ತು ಅಭಿವೃದ್ಧಿ ಮಹಾಮಂಡಳ

-ಡಾ ರಘುಪತಿ

IMG_4736ಕೃಷಿಗೆ ಕೈ ಹಚ್ಚಿದವ ಆತ್ಮಹತ್ಯೆಗೆ ಶರಣಾಗುತ್ತಿರುವ ಈ ಹೊತ್ತಿನಲ್ಲಿ ವ್ಯವಸಾಯದ ಅವಿಭಾಜ್ಯ ಅಂಗವಾಗಿರುವಆಡು-ಕುರಿ ಸಾಕಾಣಿಕೆ ಬಗ್ಗೆ ಗಮನ ಸೆಳೆಯುವ ಸ್ಥಿತಿ ಬಂದಿರುವುದು ವಿಪರ್ಯಾಸ. ನೀವು ನೋಡಿರಬಹುದು.ಆಡು ಕುರಿಗಳು ಬರಗಾಲದ ಬೆಂಗಾಡುಗಳಲ್ಲಿ, ಗುಡ್ಡ, ಬೆಟ್ಟ, ದಿಣ್ಣೆಗಳ ಬಂಜರು ಭೂಮಿಯಲ್ಲಿ ಮೇಯ್ದುಕೊಂಡು ಪ್ರಕೃತಿಯ ಕನಿಷ್ಟ ಕೊಡುಗೆಯಿಂದ, ಸರ್ಕಾರದಯಾವ ಸೌಲಭ್ಯಗಳ ನಿರೀಕ್ಷೆಯೂಇಲ್ಲದೆ ಮಾನವನ ನಾಗರೀಕತೆಯ ಉಗಮದೊಂದಿಗೆ ಬೆಳೆದುಬಂದ ಸಾಕುಪ್ರಾಣಿಗಳು.

ನೀರಾವರಿ, ರಾಸಾಯನಿಕಗೊಬ್ಬರ, ಔಷಧಿ, ಸಬ್ಸಿಡಿ- ಯಾವುದೊಂದು ಬೇಡದಆಡು-ಕುರಿಗಳು ತಳ ಸಮುದಾಯಗಳ ಆರ್ಥಿಕ ಶಕ್ತಿಯಾಗಿರೂಪುಗೊಂಡಿವೆ. ತ್ತೊಂಭತ್ತಾರು ಲಕ್ಷ ಕುರಿಗಳು, ನಲವತ್ತೆಂಟು ಲಕ್ಷ ಆಡುಗಳು ಇಂದುಕರ್ನಾಟಕದಲ್ಲಿಓಡಾಡಿಕೊಂಡು ಮೇಯುತ್ತಿವೆ. ರಾಜ್ಯದ 747 ಹೋಬಳಿಗಳಲ್ಲಿ 101 ಹೋಬಳಿಗಳನ್ನು ಬಿಟ್ಟರೆ 646 ಹೋಬಳಿಗಳಲ್ಲಿ ಕನಿಷ್ಟ 15,000 ಕ್ಕಿಂತ ಹೆಚ್ಚು ಆಡು-ಕುರಿಗಳಿವೆ. ಒಟ್ಟು146 ಕುರಿ ಸಂತೆಗಳು ಕರ್ನಾಟಕದ 23 ಜಿಲ್ಲೆಗಳಲ್ಲಿ ವಾರಕ್ಕೊಮ್ಮೆಕೂಡುತ್ತಿವೆ. ಆ ವಾರದ ಸಂತೆಗಳಲ್ಲಿ ಸರಿಸುಮಾರು 2 ಲಕ್ಷಕುರಿ ಮೇಕೆಗಳು ಕೈ ಬದಲಾಗುತ್ತಿವೆ.

ಇಂಥಆಗಾಧಆರ್ಥಿಕಶಕ್ತಿ ಸಂಪನ್ಮೂಲಗಳನ್ನು ಕಂಡ ಪರಿಸರತಜ್ಞಯಲ್ಲಪ್ಪರೆಡ್ಡಿಗಣಿಗಾರಿಕೆ ವಿರೋಧಿಆಂದೋಲನದಲ್ಲಿ ಹೇಳಿದ ಮಾತುಇಲ್ಲಿ ಮುಖ್ಯ: “ ಒಂದು ವರ್ಷಕ್ಕೆಒಂದುಆಡುಅಥವಾಕುರಿಕರ್ನಾಟಕದಆರ್ಥಿಕತೆಗೆ 16,000/- ರೂಗಳನ್ನು ಅವುಗಳ ಮಾಂಸ, ಚರ್ಮ. ಉಣ್ಣೆ, ಹಾಲು, ಗೊಬ್ಬರ, ಮರಿಗಳ ರೂಪದಲ್ಲಿ ನೀಡುತ್ತಾ ಬಂದಿವೆ. ಪರಿಸರಪರ, ಪರ್ಯಾಯಅಭಿವೃದ್ಧಿ ಮಾದರಿಯನ್ನುಆಡು-ಕುರಿ ಸಾಕಾಣಿಕೆಯಲ್ಲಿ ನಾವು ಕಂಡುಕೊಳ್ಳಬಹುದು” ಎಂದಿದ್ದರು.
ಆದರೆ ಇತ್ತೀಚಿನ ಅಭಿವೃದ್ಧಿ ಮಾದರಿಗಳು ಈ ಕಡೆ ನೋಡದೆಕುರಿ-ಆಡು ವಲಯವನ್ನುದಿವ್ಯ ನಿರ್ಲಕ್ಷ್ಯಕ್ಕೆ ಈಡುಮಾಡಿವೆ.ಕಾಡು-ಮೇಡು, ಕೆರೆ-ಕುಂಟೆ, ಗೋಮಾಳ ಎಲ್ಲವೂ ಬಲಿಷ್ಟರಿಗೆ ಬಲಿಯಾಗಿವೆ. ಚಳ್ಳಕೆರೆ ಸುತ್ತಮುತ್ತಲಿನ ಆಡು-ಕುರಿಗಳಿಗೆ ಸೀಮಿತವಾಗಿದ್ದ ಸಾವಿರಾರು ಎಕರೆಗಳ ಹುಲ್ಲುಗಾವಲು, ಆಧುನಿಕಅಭಿವೃದ್ಧಿ ಮಾಂತ್ರಿಕರಿಂದ ‘ವೇಸ್ಟ್ ಲ್ಯಾಂಡ್’ ಎನ್ನಿಸಿಕೊಂಡು ರಕ್ಷಣಾತಂತ್ರಜ್ಞಾನ ಸಂಶೋಧನಾ ಸಂಸ್ಥೆಗಳ ಪಾಲಾಗಿದೆ.ಮತ್ತೆಆಡು-ಕುರಿಕಾಯುವವನು ಮಧ್ಯವರ್ತಿಕೈಯಲ್ಲಿ ಸಿಕ್ಕು ಎಲ್ಲರಂತೆ ನರಳುತ್ತಿದ್ದಾನೆ. ಇಡೀಕರ್ನಾಟಕದಲ್ಲಿಒಂದೇಒಂದುಚರ್ಮ ಸಂಸ್ಕರಣಾಘಟಕಇಲ್ಲದೆಚರ್ಮ ಬಿಸಾಕಿದ ರೇಟಿಗೆ ಮಾರಾಟವಾಗುತ್ತಿದೆ. ವೈಜ್ಞಾನಿಕ ನೆಲೆಯಲ್ಲಿ ಆಡು-ಕುರಿಗಳ ಮಾರಾಟ ವ್ಯವಸ್ಥೆಯಿಲ್ಲ. ಆರೋಗ್ಯಕರ ಮಾಂಸಟೌನ್, ಸಿಟಿಗಳ ಗ್ರಾಹಕರಿಗೂ ಸಿಗುತ್ತಿಲ್ಲ. ಉಣ್ಣೆ ಕೇಳುವವರೇ ಇಲ್ಲ. ತುಪ್ಪಟಕತ್ತರಿಸುವುದಕ್ಕೂದುಡ್ಡುತೆರಬೇಕಾಗಿದೆ.ಇನ್ನುಆರೋಗ್ಯ ಸೇವೆ, ರೋಗನಿಯಂತ್ರಣ ಕ್ರಮಗಳು, ಆಡು-ಕುರಿಗಳನ್ನು ಉಳಿಸುವ ಕೆಲಸದಲ್ಲಿ ಸಾಕಷ್ಟು ಒದಗಿಬರುತ್ತಿಲ್ಲ.

ಇಲ್ಲಿಯವರೆಗೆ ಪಶುವೈದ್ಯಜ್ಞಾನಕುರಿಆಡು ಸಾಕಾಣಿಕೆಯತ್ತಅದರಲ್ಲೂಆರೊಗ್ಯ ಸೇವೆ, ರೋಗನಿಯಂತ್ರಣ ಕ್ರಮಗಳ ಸುತ್ತಗಿರಿಕಿ ಹೊಡೆಯುತ್ತಿದೆ.ಆಡು-ಕುರಿಗಳ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಬಗ್ಗೆ ಪಶುಪಾಲನಾ ಜ್ಞಾನ ಶಾಖೆಗಳು ಗಂಭೀರವಾಗಿ ಪರಿಗಣಿಸಿಲ್ಲ.
ಈ ಎಲ್ಲಾ ಹಿನ್ನೆಲೆಯಲ್ಲಿ ಈಗ ಅಸ್ತಿತ್ವದಲ್ಲಿದ್ದು ಕಾರ್ಯನಿರ್ವಹಿಸುತ್ತಿರುವ, ಕರ್ನಾಟಕಕುರಿ ಮತ್ತುಉಣ್ಣೆಅಭಿವೃದ್ಧಿ ನಿಗಮ ಸರ್ಕಾರಿ ವ್ಯವಸ್ಥೆಯ ಅಡಿಯಲ್ಲಿರುವ ಕಾರಣಕ್ಕೆ ಈ ಎಲ್ಲಾ ಸಮಸ್ಯೆಗಳನ್ನು ಸಮಗ್ರವಾಗಿ ನೋಡಲು, ಗ್ರಹಿಸಲು, ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಆಡು-ಕುರಿಗಾರರ ನಾಯಕತ್ವದ ಸಹಕಾರ ವ್ಯವಸ್ಥೆ ಮಾತ್ರಇದಕ್ಕೆ ಪರಿಹಾರ. ಈ ದಿಕ್ಕಿನಲ್ಲಿ ನಮಗೆ ಹೊಳೆಯುತ್ತಿರುವ ಬೆಳ್ಳಿ ಚುಕ್ಕಿ ಒಂದೇ. ಅದು ಕರ್ನಾಟಕ ಹಾಲು ಒಕ್ಕೂಟಇಂದು ಆ ಸಂಸ್ಥೆ ಏಳು ಸಾವಿರಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದ್ದು ಜಾಗತೀಕರಣದ ಈ ಕಾಲದಲ್ಲಿ ಗ್ರಾಮೀಣ ಕರ್ನಾಟಕದಲ್ಲಿ ಭರವಸೆಯ ಬೆಳಕಾಗಿದೆ.ಹಾಲು ಒಕ್ಕೂಟಕ್ಕೆ ಹೋಲಿಸಿ ನೋಡಿದರೆಕುರಿ-ಆಡು ವಲಯದಅಪಾರ ಶಕ್ತಿ ಅರ್ಥವಾಗುತ್ತದೆ. ಹಾಲು ಎಂಬ ಒಂದೇಉತ್ಪನ್ನವನ್ನು ಸಂಘಟಿಸಿದೆ ಕೆಎಂಎಫ್. ಇಲ್ಲಿ ಹಾಲು, ಮಾಂಸ, ಚರ್ಮ, ಉಣ್ಣೆ, ಗೊಬ್ಬರ ಎಂಬ ಐದು ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಮಾರಾಟದ ಸಾಧ್ಯತೆಗಳು ಅಗಾದವಾಗಿವೆ.

ಹಾಗಾಗಿ, ಪ್ರಾಥಮಿಕ ಹಂತದಲ್ಲಿಅಂದರೆ ಹಳ್ಳಿಗಳ ಮಟ್ಟದಲ್ಲ ಹದಿನೈದು ಸಾವಿರಆಡು- ಕುರಿಗಳಿಗೆ ಒಂದು ಸಹಕಾರ ಸಂಘ ಸ್ಥಾಪಿಸಿ ಅಲ್ಲಿ ಪಶುವೈದ್ಯ ಸೇವೆ, ಮಾರುಕಟ್ಟೆ ವ್ಯವಸ್ಥೆರೂಪಿಸಬೇಕಾಗಿದೆ. ಮತ್ತೆಜಿಲ್ಲಾ ಮಟ್ಟದಲ್ಲಿಆಡುಕುರಿ ವಲಯದ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಮಾರಾಟ ಇವುಗಳ ಕೇಂದ್ರಗಳನ್ನು ನಿರ್ವಹಿಸಬೇಕು.ಅಲ್ಲಿ ಆಧುನಿಕ ಕಾಲಕ್ಕೆ ತಕ್ಕಂತೆ ಮೇವು, ಮೇವಿನ ಮರಗಳ ಕುರಿತಾದ ಸಂಶೋಧನೆ, ಅಭಿವೃದ್ಧಿ, ವಿಸ್ತರಣಾ ಘಟಕಗಳು ಮುಖ್ಯವಾಗಿ ಇರಬೇಕು. ನಂತರರಾಜ್ಯಮಟ್ಟದಲ್ಲಿ ಈ ಎಲ್ಲಾ ಪ್ರತಿನಿಧಿಗಳನ್ನೊಳಗೊಂಡ ಆಡು-ಕುರಿ ಸಾಕಾಣಿಕೆದಾರರ ಸಹಕಾರಿ ಮಹಾಮಂಡಳ ಸರ್ಕಾರಕ್ಕೆ ಪರ್ಯಾಯವಾಗಿದ್ದುಕ್ಕೊಂಡು ಕೆಲಸ ನಿರ್ವಹಿಸುತ್ತಾ ಹೊಗಬೇಕು.ಅಂದಾಗ ಮಾತ್ರ ಈ ಕುರಿಆಡು ವಲಯ ಸರ್ಕಾರದಅಧಿಕಾರಿಶಾಹಿ ಬಿಗಿಹಿಡಿತದಿಂದ ಹೊರಬಂದುನೇರವಾಗಿಆಡುಕುರಿಕಾಯುವವರ ನೇತೃತ್ವದಲ್ಲಿತನ್ನಅಭಿವೃದ್ಧಿ ದಿಕ್ಕನ್ನು ಕಂಡುಕೊಳ್ಳಲು, ತಾನೇ ನಿರ್ಣಹಿಸಿದ ತನ್ನ ವಿಕಾಸದ ಹೆಜ್ಜೆಗಳ ಮೇಲೆ ನಡೆಯುತ್ತಾ ಹೋಗಲು ಸಹಕಾರಿಯಾಗುತ್ತದೆ.

ತಮ್ಮಲ್ಲಿರುವಬಹುಬೆಳೆಗಳು, ಸಿರಿಧಾನ್ಯಗಳು, ನಾಟಿತಳಿಯ ದನ-ಕರುಗಳು, ಆಡು-ಕುರಿ ಸಾಕುವ ಸಮುದಾಯಗಳನ್ನು ಆಧುನಿಕಕೃಷಿಯ ಕೆಟ್ಟಹೊಡೆತಗಳಿಗೆ ಸಿಲಿಕಿಸಲು ಬಿಟ್ಟಿಲ್ಲ. ಈ ದೇಸಿ ಸಾವಯವ ಪರಂಪರೆಯನ್ನು ಗರ್ಭೀಕರಿಸಿಕೊಂಡ ಅಭಿವೃದ್ಧಿ ಮಾದರಿಯನ್ನುಆಡು-ಕುರಿ ಸಹಕಾರ ಚಳುವಳಿಯಲ್ಲಿ ಕಾಲಿಡಲುಆರಂಭಿಸುತ್ತದೆ. ಕುರಿ ಆಡು ಸಾಕಾಣಿಕೆಯಲ್ಲಿ ಜೀವಪರ ಸಂಸ್ಕøತಿ, ಅನನ್ಯ ಜ್ಞಾನವಂತಿಕೆ, ಅಪಾರ ಆರ್ಥಿಕಶಕ್ತಿ ಅಡಗಿದೆ. ಆದ್ದರಿಂದ ಈ ಸರ್ಕಾರ ಆಡು-ಕುರಿ ಸಾಕಾಣಿಕೆದಾರರ ಸಹಕಾರಿ ‘ಫೆಡರೇಶನ್’ ಅನ್ನು ಸ್ಥಾಪಿಸುವ ತನ್ನ ನೀತಿಯನ್ನು ಈ ಸಾಲಿನ ಬಜೆಟಿನಲ್ಲಿ ಘೋಷಿಸಲಿ ಎನ್ನುವುದು ನಮ್ಮೆಲ್ಲರಒತ್ತಾಯ.

Leave a Reply

Your email address will not be published.