ಕವಿಚಂದ್ರರ ಕೆಲವು ಕವಿತೆಗಳು

  - ಕವಿಚಂದ್ರ

1. ನೀರಿನರಮನೆ….!

OLYMPUS DIGITAL CAMERA

OLYMPUS DIGITAL CAMERA

ನೀರಿನರಮನೆಯಲಿ ಮೀನುಗಳು,

ನೇಣಬಿಗಿದಿವೆ ಅರಸಿಯ ಅಂಗೈಯಲಿ..!

ಅರೆಗಳಿಗೆ ಉಸಿರಾಡಿ, ಮರುಗಳಿಗೆ ಕೊಸರಾಡಿ….!

ಮುಳ್ಳಬಾಚಲು ಮುಖೇಡಿ ಭಟರ ಕರೆದು,

ನಾಲಿಗೆಯಲಿ ನಳಪಾಕ ನಡಿಸುತಿದೆ

ಅಡಿಗೆಮನೆ…..!

ಹಸಿವಿನಸುಳಿಯಲಿ ಸುಳಿದ ನೀರಿನರಮನೆ!!

 

ನೀರಿನರಮನೆಯಲಿ ಈಜು ಕಲಿತವರಿಲ್ಲ…!!

ನೀರಗುಳ್ಳೆಯ ಜೂಜ ಮರೆತವರಲ್ಲ…!

ಕಪ್ಪೆಗಳ ಕನಸಿನ ಕಣ್ಣೀರ ಹನಿಯನೆ,

ಮುತ್ತೆಂದು ಮುಡಿದವರಿವರು…!

ಪಾಚಿಗಟ್ಟಿದ ಪಲಂಗಕೆ ಕೈಚಾಚುವ ಕೀರಿಟಗಳು,,,,

ಕಿರುಚುತ್ತಲೇ ಇವೆ, ನೀಲ ತಿಮಿಂಗಲದ ರೀತಿಯಲಿ….!

ಪುಟ್ಟಜೀವ ಪುಕ್ಕಟೆಯಾಗಿ ಸಾಯುವ ಭೀತಿಯಲಿ……!!

 

ಅರಸಿಯ ಅಡಿಗೆಯಲು, ಅರಸನಗಡಿಗೆಯಲು,,,,,!

ನರಳಿದ್ದೂ ಮಾತ್ರ ಈಜಲಾಗದ ಪುಟ್ಟ ರೆಕ್ಕೆಗಳು….!!

ಈ ನೀರಿನ ಅರಮನೆಯಲಿ,,

ನಿಲ್ಲುವವರಿಗಿಂತಲೂ,, ಕೊಲ್ಲುವವರೇ ಹೆಚ್ಚು

ಅದಕೆ “ಅವರಿಗೆ” ಅಧಿಕಾರದ್ದೇಹುಚ್ಚು…!!

 

2. ಮಸಣದದಾರಿ

burial groundಮದುವೆ ಮನೆಗೆ ಮಸಣದ್ದೆದಾರಿ….!

ಬರಿಗಾಲಿಗೆ ಕಾಲುಂಗುರದ ಕುಣಿಕೆ,

ನೆತ್ತಿಯ ಮೇಲೆ ಅಕ್ಷತೆಯ ಬಿತ್ತಲು ಬಿಸಾಡಿದ ಅಕ್ಕಿ….!

ಊರ ಉಸಿರಾಟಕೆ ಹೊರಲಾಗದ ನತ್ತು..

ಅತ್ತು ಅತ್ತು ಸತ್ತ ಸಂತಸಕೆ ಮಸಣದ್ದೆದಾರಿ.!!

 

ಬೆಳಕು ಮುಡಿಯದಕಂಗಳಲಿ ಗಾಜಿನ ಜೂಜಾಟ ನಡೆದಿದೆ…!

ನೆತ್ತರವನೆ ಹೆರುವಗಾಯಗಳಿಗೆ ‘ಅವನ’   ಮನೆ ….,

ರಕ್ತದಂಗಡಿಯ ದಾಸ್ತಾನುವಾಗಿದೆ…!!

ಆಭರಣ ಹೊರಲಾಗದ ಅಮೃತ ಶಿಲೆಯ ಗೋರಿ….!

ಆತ್ಮವನೇ ಅಡವಿಟ್ಟು ಬರುತಿದೆ,

ಈ ಮದುವೆ ಮನೆಗೆ, ಮಸಣದ್ದೆದಾರಿ..!!

 

ಮುಂದೆ ಸುಡುವ ಚಿತೆಯ ಎದುರು,

ನಡೆದದ್ದೆದಾರಿ ‘ಏಳೇಹೆಜ್ಜೆ’…!

ಹಿಂತಿರುಗಿದರೆ ಹೆಜ್ಜೆಯಲೂ ಹುತ್ತ ಬೆಳೆದು,

ಪೊರೆಕಳೆಚಿದ ಮಧು ಮಂಚ…!

ಸಿಗಿದು ಸೀಳಿ ,ಬಂಗಾರದ ತಾಳಿ..!

ಹುಳಿಯಾಯಿತು ಮನದೊಳಗಿನ ತಿಳಿಹಾಲು

ಕದ್ದವನು ಮೆದ್ದವನ ದುಸುಖದ ಪಾಲು..!!

 

ಊರಹಬ್ಬಕೆಮನೆಯಹರಕೆ,

ಬಲಿಯಾಗಲುಬೆಳದಿಂಗಳಿಗೂಬಯಕೆ..!

ಒಮ್ಮೆಗರತಿ, ಮತ್ತೆಸವತಿ ,

ಸವೆದುಹೋದಶೀಲಸಂಶಯದಭೀತಿ..!

ಅಂತೂಭಯವಬೇಯಿಸಲು,

ಕೊಳ್ಳಿಇಟ್ಟಾಯಿತು…. ಸುಟ್ಟಾಯಿತು…

ಮಸಣದದಾರಿಹಿಡಿದನನ್ನಂಥಗಂಗೆಗೂಬಿಟ್ಟಾಯಿತು……!!

3. ದಾಳವಾಗಿಸುತಾಳೆ..

 

ಗೆದ್ದಲು ಹಿಡಿದ ಗೆಳತಿಯ ಹೃದಯದಲಿ.

ಮಧವೇರಿದ ಮದ್ದಾನೆ ಮರ ಬೀಳಿಸಿದೆ..

ಬಿಸಿಗಾಳಿಯ ಬೇಸಾಯಕೆ ಬೆಂಕಿ ತರಸಿ,

ನನ್ನೆ ನಾ ಸುಡುವಂತೆ ಮಾಡಿದೆ….!!

ರಪ್ಪೆ ಸವರುವ ಮುಂಗುರಳಲಿ ಮುಳ್ಳು ಬೆಳೆದು….!

ಮುಲಾಜಿಲ್ಲದೆ ಮುಗ್ಗರಿಸಿದೆ ನನ್ನಮೇಲೆ.!

ಕಣ್ಣಕೊಳದಲಿ ಈ ನೆತ್ತರವ ಹಿಡಿಯುತಾಳೆ.

ನನ್ನ ಹಸಿನೆತ್ತರದಲೂ ನವಿಲಗರಿ ಬರಿಯುತಾಳೆ…..!!

 

ಕೊಳೆತ ಕಣ್ಣಿನಲಿ ಕಂಬನಿಯ ಅಂಗಡಿ ಇಟ್ಟು.

ನನಗೆಉದಾರಿಯಾಗೇಕೊಡುತಾಳೆ…!

ಬರಿಗೈಯಭಿಕಾರಿಯಾದನನಗೆ,

ಬೊಗಷೆಯಲ್ಲೇ ಬಿಡಾರ ತುಂಬುತಾಳೆ..!

ಬೀದಿಯಲೇ ಖಾಲಿಮಾಡುತಾಳೆ…!!

ಹುತ್ತದೊಳಗೆತನ್ನಚಿತ್ತವಮುಚ್ಚಿಡುತಾ,

ಬಾಗಿಲಿಗೆನನ್ನಚಿಲಕವಾಗಿಸುತಾಳೆ.. !!

ಚಿರನಿದ್ರೆಯಲಿಚಿಂತೆಯಮಾರಲು,

ನನ್ನೇದಲ್ಲಾಳಿಯಾಗಿಸುತಾಳೆ…!

ಮೋಹದಮೋಜಿಗೆ, ಮೋಸದಜೂಜಿಗೆ

ದಾಳವಾಗಿಸುತಾಳೆ… ನನ್ನೇದಾಸನಾಗಿಸುತಾಳೆ..!!

 

4. ಜಾತಿಯತೊಗಲು

ನನ್ನ ಮೈಮೇಲೆ ಅದೆಷ್ಟು ತೊಗಲುಗಳು,

ಮೊಳೆ ಜಡಿದು ನಿಂತಿವೆ ಈಪುಟ್ಟ ಎದೆಯಮೇಲೆ…..!!

ಮರಗಟ್ಟಿದಮಡಿ, ಜಡಗಟ್ಟಿದಜಾತಿ…

ದಾರಿಬಿಟ್ಟಧರ್ಮ, ನೀತಿಬಿಟ್ಟನಿಯಮ..

ಅದೆಷ್ಟು ತೊಗಲುಗಳು…!!

ಈ ಮೈಯಮೇಲೆ……!!

 

ಬೊಗಸೆ ನೀರಲಿ ನಿಲ್ಲುವ ನೆರಳಿಗಿಲ್ಲದ,

ಬೇಲಿಕಾಯುವ ಹೂವಮುಳ್ಳಿಗಿಲ್ಲದ,

ಜಾತಿಯ ತೊಗಲೇಕೆನನಗೆ….?

ಪಟ್ಟೆನಾಮದ ಫಲಕವನೇ ಬೇಡದ,

ಶಿಲುಬೆ, ಗಡ್ಡದ ಗುಡ್ಡವನೇ ಇರದ,

ನನಗೆ ,ಜಾತಿಯತೊಗಲೇಕೆ .!?

 

ನನ್ನ ಹೆಜ್ಜೆಗುರುತು ಹೊತ್ತ ಈ ಕೆಸರಿಗೂ,

ಬೆಂಕಿಯನು ಹೊರದ ಗಾಳಿಯ ಉಸಿರಿಗೂ,

ನಕ್ಕರೆ ಚಿತೆಯಲೂ ಚಿರ ಶಾಂತಿ ಜಪಿಸುವ,

ನಾಲಿಗೆಗಿಲ್ಲದ ನಾಮಫಲಕ ನನಗೇಕೆ..?

ಜಗದ ಜಾತ್ರೆಯಲಿ ಜಾತಿಯ ಜಾನುವಾರು,

ನಾನೇ ಆಗಬೇಕೆ…..!?

 

ಕಿತ್ತೊಗೆಯಲು ಕಿತ್ತಾಡುತಿರವ ಈ ಬೆರಳಿಗೆ,

ಜಾತಿಯ ತೊಗಲು ಜಾಲಿಮರವಾಗಿದೆ…!

ನೆತ್ತರದಲಿ ನೆನೆಸುತಾ, ನೆರಳನೂ ಕತ್ತರಿಸುತಾ

ಕಸಾಯಿಖಾನೆಗೆ ಕರೆದ್ಯೊಯಬೇಕಿದೆ,,

ಈ ಜಾತಿಯ ತೊಗಲನು,,

ಜನ್ಮವೆಲ್ಲ ಕಡಿದರೂ, ಚೂರೂ,,ಚೂರಾಗದ,

ಈ ತೊಗಲನು ಕಡಿಯಬೇಕಿದೆ….!!

ಮಡಿಯಬೇಕಿದೆ….!!

.. ಕವಿಚಂದ್ರ .. ..
 (ಚಾಂದ್ಪಾಷ ಎನ್. ಎಸ್, ಕನ್ನಡ ಎಂ. ಎ .ವಿದ್ಯಾರ್ಥಿ , ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ)

One Response to "ಕವಿಚಂದ್ರರ ಕೆಲವು ಕವಿತೆಗಳು"

  1. madhu Biradar  January 10, 2017 at 12:13 pm

    ಕವಿತೆ ಚನ್ನಾಗಿವೆ ಕವಿಚಂದ್ರರೆ.
    -ಮಧು ಬಿರಾದಾರ.

    Reply

Leave a Reply

Your email address will not be published.