ಕನ್ನಡಿ-2 : ಹಳ್ಳ ಹಿಡಿದ ಅಧಿಕಾರಶಾಹಿ ವರ್ಗ

ಚಿರಂತನ್. ಸಿ.

ಇತ್ತೀಚೆಗೆ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಎಸ್ .ಎಂ. ಜಾಮದಾರರವರು ನೌಕರಶಾಹಿ ಭ್ರಷ್ಟತೆಗೆ ರಾಜಕಾರಣಿಗಳೇ ಕಾರಣ ಎಂಬ ಶೀರ್ಷಿಕೆಯಡಿ ಅಂಕಣ ಬರೆದಿದ್ದಾರೆ. ಅದರಲ್ಲಿ ನಡತೆ ಸರಿಯಲ್ಲದ, ಹಾಳಾಗಿರುವ ನೌಕರಶಾಹಿಯನ್ನು ಸರಿಪಡಿಸಲು ಅವಕಾಶವಿದೆ. ಭ್ರಷ್ಟಾಚಾರ, ಜಾತೀಯತೆ, ಪಕ್ಷಪಾತದಲ್ಲಿ ಮುಳುಗಿರುವ ನೌಕರಶಾಹಿಯ ವಕ್ತಾರರಂತೆ ಎಲ್ಲ ತಪ್ಪುಗಳನ್ನು ಅಧಿಕಾರ ಚುಕ್ಕಾಣೆ ಹಿಡಿದ ರಾಜಕಾರಣಿಗಳ ಮೇಲೆ ಗೂಬೆಕೂರಿಸುವಂತಿದೆ.

chiಶಾಸನಗಳ ರಚನೆ ಶಾಸಕಾಂಗದ ಕರ್ತವ್ಯ. ಅದರ ಅನುಷ್ಠಾನ ಕಾರ್ಯಂಗದ್ದು. ಶಾಸನ ಮತ್ತು ಯೋಜೆನಗಳ ಅನುಷ್ಠಾನ ಸಫಲವಾಗದಿರುವುದು ನೌಕರಶಾಹಿಯ ವೈಪಲ್ಯವೇ ಹೊರತು ಶಾಸಕಾಂದಲ್ಲ. ಪ್ರಾಮಾಣಿಕ, ಪಾರದರ್ಶಕ, ಕಾನೂನುಬದ್ದ ಮತ್ತು ನ್ಯಾಯಸಮ್ಮತ ಆಡಳಿತ ನಿರ್ವಹಣೆಗೆ ಸಂವಿಧಾನ ಬದ್ದವಾಗಿ ಕಾರ್ಯನಿರ್ವಹಿಸಬೇಕಾದ ನೌಕರಶಾಹಿ ಅದರ ವಿರುದ್ದ ದಿಕ್ಕಿನಲ್ಲಿ ಸಾಗುತ್ತಿರುವುದು ಇಂದಿನ ವಾಸ್ತವ.

ನೌಕರಶಾಹಿಯಲ್ಲಿ ಪ್ರಮುಖವಾದ ಆಯಕಟ್ಟಿನ ವರ್ಗ ಐ.ಎ.ಎಸ್. ಜಿಲ್ಲಾಧಿಕಾರಿ ಹುದ್ದೆಯಿಂದ ಹಿಡಿದು ಮುಖ್ಯ ಕಾರ್ಯದರ್ಶಿ ಹುದ್ದೆವರೆಗೆ ಐಎಎಸ್ ಅಧಿಕಾರಿಗಳೇ ಕೆಲಸ ನಿರ್ವಹಿಸುತ್ತಾರೆ. ಉಪವಿಭಾಗಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳು ಕೂಡಾ ಐಎಎಸ್‍ಗಳೇ. ಇದರಲ್ಲಿ ನೇರವಾಗಿ ಐಎಎಸ್ ಆಗಿ ನೇಮಕಹೊಂದಿದ ಮತ್ತು ರಾಜ್ಯ ಸೇವೆಯಿಂದ ಬಡ್ತಿ ಹೊಂದಿದ ಅಧಿಕಾರಿಗಳಿದ್ದಾರೆ. ರಾಜ್ಯ ಸೇವೆಯಿಂದ ಬಡ್ತಿ ಹೊಂದುವ ಅಧಿಕಾರಿಗಳ ಸೇವಾವದಿ ಬೆರಳೆಣಿಕೆ ಇರುತ್ತದೆ. ಬಹುಪಾಲು ಐಎಎಸ್ ಅಧಿಕಾರಿಗಳು ಹೊರರಾಜ್ಯದವರು.

ಕಾರ್ಯದರ್ಶಿ ಹಂತದಲ್ಲಿ ಸರ್ಕಾರದ ನೀತಿನಿಯಮಗಳ ರೂಪಿಸುವಿಕೆ ಅನುಷ್ಠಾನ ಇವರ ಸುಪರ್ದಿಯಲ್ಲಿದೆ. ರಾಜರ ಕಾಲದಲ್ಲಿನ ಮಂತ್ರಿಗಳಂತೆ ಇವರು. ಎರಡು ಸಾವಿರ ವರ್ಷದ ಇತಿಹಾಸದ ಪುಟಗಳನ್ನು ತಿರುವಿದರೆ ಉತ್ತಮ ಕೆಲಸಕ್ಕಾಗಿ ಸ್ಥಾನ ಪಡೆದ ಉಲ್ಲೇಖಿತ ಮಂತ್ರಿಗಳು ಕೆಲವೇ ಮಂದಿ. ಇಂದು ಕೂಡ ಪರಿಸ್ಥಿತಿ ಭಿನ್ನವಿಲ್ಲ. ಆರವತ್ತು ವರ್ಷಗಳ ಸ್ವಾತಂತ್ರ್ಯಪೂರ್ವ ಕರ್ನಾಟಕದಲ್ಲಿ ನೆನಪಿಗೆ ಬರುವ ಐಎಎಸ್ ಗಳ ಸಂಖ್ಯೆ ಒಂದಂಕಿ ದಾಟುವುದಿಲ್ಲ.

ಕರ್ನಾಟಕದಲ್ಲಿ ಜೆ.ಸಿ.ಲೆನ್, ಚಿರಂಜಿವಿ ಸಿಂಗ್, ರಂಗನಾಥ್ ರಂತವರು ಕೆಲವರು ಮಾತ್ರ. ಕೃಷ್ಣ ಮೇಲ್ದಂಡೆ ಯೋಜನೆಗೆ ಕಾಯಕಲ್ಪ ನೀಡಿ ಪುರ್ನವಸತಿ ಮತ್ತು ಪುರ್ನನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದು ಇದೇ ಎಸ್.ಎಂ ಜಾಮದಾರ ಅವರು. ರಾಷ್ಟ್ರದಲ್ಲೇ ಮಾದರಿಯಾದ ಸಿಇಟಿಗೆ ಗರಿಮೆ ಮುಡಿಸಿದ್ದು ಹರೀಶಗೌಡ. ಇವರಿಬ್ಬರು ಕನ್ನಡಿಗರೆಂಬುದು ವಿಶೇಷ. ಚಿರಂಜಿವಿ ಸಿಂಗ್ ಕನ್ನಡಿಗರಾಗಿದ್ದು ವಿಶೇಷ. ಹೊರ ರಾಜ್ಯದಿಂದ ಬರುವ ಐಎಎಸ್ ಅಧಿಕಾರಿಗಳಿಗೆ ಕನ್ನಡವೆಂದರೆ ಅಲರ್ಜಿ.

ಇಲ್ಲಿನ ನೆಲ ಜಲವೆಂದರೆ ಕೆಜಿಗೆ ಎಷ್ಟು ಎಂಬ ಆಲಸ್ಯ. ಕನ್ನಡ ಓದಲು ಬರೆಯಲು ಬಾರದ ಕೆಕೆ ಮಿಶ್ರಾ ಮುಖ್ಯಕಾರ್ಯದರ್ಶಿಯಾಗಿ ನಂತರ ಮಾಹಿತಿ ಆಯೋಗದ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದು ಈ ನಾಡಿನ ಸಹಿಷ್ಣುತೆಗೆ ಸಾಕ್ಷಿ. ಕನ್ನಡಿಗರ ದೌರ್ಬಲ್ಯದ ಸಂಕೇತ. ಜಾಮದಾರ, ಬಳಿಗಾರ ಮತ್ತು ಹರೀಷಗೌಡರಂತವರಿಗೆ ನಿವೃತ್ತಿ ನಂತರ ಗಂಜಿಕೇಂದ್ರಗಳಲ್ಲಿ ಸ್ಥಾನ ಸಿಗದಿರುವುದು ಅವರ ಪ್ರಾಮಾಣಿಕತೆಗೆ ಸಾಕ್ಷಿಯಂತಿದೆ.

ಡಿಸೆಂಬರ 2013 ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಪ್ರಗತಿ ಬಗ್ಗೆ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದು ಅಂದಿನ ಮುಖ್ಯಕಾರ್ಯದರ್ಶಿ. ಸಂಬಂದಪಟ್ಟ ಅಭಿವೃದ್ದಿ ಆಯುಕ್ತರು, ಕಾರ್ಯದರ್ಶಿ ಮತ್ತು ಅಧಿಕಾರಿಗಳ ಪಟಾಲಂ ಸೇರಿತ್ತು. ಮುಖ್ಯಕಾರ್ಯದರ್ಶಿ ರೈತರಿಗೆ ಪ್ರತಿ ಎಕರೆ ಜಮೀನಿಗೆ ಹತ್ತು ಲಕ್ಷ ಪರಿಹಾರ. ಎರಡು ಎಕರೆ ಜಮೀನಿರುವ ರೈತನಿಗೆ ಇಪ್ಪತ್ತು ಲಕ್ಷ ಹಣ ಬರುತ್ತದೆ. ಎರಡು ಎಕರೆಯಲ್ಲಿ ಕಬ್ಬು ಬೆಳೆದರೆ ಎಕರೆಗೆ ಇಪ್ಪತ್ತು ಸಾವಿರದಂತೆ ನಲವತ್ತು ಸಾವಿರ ಬರುತ್ತದೆ. ಅದೆ ಇಪ್ಪತ್ತು ಲಕ್ಷ ಹಣ ಬ್ಯಾಂಕನಲ್ಲಿ ಠೇವಣಿ ಇಟ್ಟರೆ, ಎರಡು ಲಕ್ಷ ಬಡ್ಡಿ ಬರುತ್ತದೆ. ಮನೆಯಲ್ಲೆ ಕೂತರು ನೆಮ್ಮದಿ ಜೀವನ. ಎಲ್ಲ ರೈತರು ಜಮೀನು ಕೊಡಲು ಹುತಾತ್ಮರಂತೆ ಮುಂದೆ ಬರುತ್ತಾರೆ. ಇತ್ಯಾದಿ ಹಾಸ್ಯ ಚಟಾಕಿ ಹಾರಿಸುತ್ತಿದ್ದರು.

ಇವರ ಪ್ರತಿ ಹಾಸ್ಯ ಚಟಾಕಿಗೆ ಅಭಿವೃದ್ದಿ ಆಯುಕ್ತರ ಕಿಲ ಕಿಲ ನಗು ಕೊರಸ್‍ನಂತಿತು. ಇವರಿಬ್ಬರ ಸಂಭಾಷಣೆ ತೊಂಬತ್ತರ ದಶಕದ ಎನ್ ಎಸ್ ರಾವ್ ಮತ್ತು ಉಮಾಶ್ರೀ ಜೋಡಿಯಂತಿತ್ತು. ವಿಪರ್ಯಾಸವೆಂದರೆ ಕೃಷ್ಣಾ ಕೊಳ್ಳದ ರೈತರು ಎಕರೆಗೆ ಇಪ್ಪತ್ತು ಲಕ್ಷ ಕೊಟ್ಟರು ಜಮೀನು ಕೊಡಲು ಮುಂದೆ ಬರುತ್ತಿಲ್ಲ. ಮುಖ್ಯ ಕಾರ್ಯದರ್ಶಿಗೆ ರೈತರ ಬಗ್ಗೆ ಇಂತಹ ಉದಾಸೀನತೆ ಇದ್ದರೆ ಅಧೀನ ಅಧಿಕಾರಿಗಳು ಹೇಗೆತಾನೆ ರೈತರ ಪರ ಯೋಚಿಸುತ್ತಾರೆ.

ಇರುವ ಮುನ್ನೂರು ಮಂದಿ ಐ.ಎ.ಎಸ್. ಅಧಿಕಾರಿಗಳಲ್ಲಿ ದಕ್ಷರು ಪ್ರಾಮಾಣಿಕರ ಸಂಖ್ಯೆ ಒಂದಂಕಿ ದಾಟುವುದಿಲ್ಲ. ಜನ ಪ್ರತಿನಿಧಿ ಹೇಳಿದರೆ ಕಾನೂನು ಅಥವಾ ನಿಯಮಬಾಹಿರವಾಗಿದ್ದರೆ, ಕಡತದಲ್ಲಿ ಪ್ರತಿಕೂಲ ಷರಾ ಬರೆಯುವ ಎದೆಗಾರಿಕೆ ಎಷ್ಟು ಮಂದಿಗಿದೆ? ಮೈಸೂರು ಮಿನರಲ್ಸ್ ಕಂಪನಿಯು ಗಣಿ ಮತ್ತು ಗ್ರ್ಯಾನೇಟ್ ಗುತ್ತಿಗೆ ಹೊಂದಿದೆ. ಯಾವುದೇ ಗಣಿ ಗುತ್ತಿಗೆದಾರನಂತೆ ಸಾವಿರಾರು ಕೋಟಿ ಗಳಿಸಬಹುದಿತ್ತು. ಆದರೆ ಅಧಿಕಾರಿಗಳ ಅಕ್ರಮ, ಅದಕ್ಷತೆಯಿಂದ ನೂರು ಇನ್ನೂರು ಕೋಟಿಗಳಿಸಲಷ್ಟೇ ಶಕ್ತವಾಗಿದೆ. ಲಾಭ ಮಾಡುತ್ತಿದ್ದ ಮೈಸೂರು ಮಿನರಲ್ಸ್, ಎನ್.ಜಿ.ಇ.ಎಫ್ ಇಂದು ಇತಿಹಾಸ.

ಅಲ್ಲಿನ ಭೂಮಿಗಾಗಿ ರಾಜ್ಯದ ಹಿತವನ್ನೆ ಬಲಿ ಕೊಡಲು ಮುನ್ನುಡಿ ಬರೆದಿದ್ದು, ಇದೇ ಅಧಿಕಾರ ವರ್ಗ ಹೊರತು ಜನ ಪ್ರತಿನಿಧಿಗಳಲ್ಲಾ. ದೇಶದಲ್ಲೆ ಮಾದರಿಯಾಗಿ ಲಾಭಗಳಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮ ನಷ್ಟದತ್ತ ಮುಖ ಮಾಡಿದ್ದು ಇದೇ ಐ.ಎ.ಎಸ್ ಅಧಿಕಾರಿಗಳಿಂದ.
ಇದಕ್ಕೆ ಅಪವಾದವಂತೆ e-office ಮೂಲಕ ಆಡಳಿತದಲ್ಲಿ ಪಾರದರ್ಶಕತೆ ತಂದ ಪೊನ್ನುರಾಜ್, ಬೀದರ ಜಿಲ್ಲೆ ಅಭಿವೃದ್ಧಿಪಡಿಸಿದ ಹರ್ಷಗುಪ್ತ ಉಂಟು. ಉಪ ಚುನಾವಣೆಯಲ್ಲಿ ಮುಖ್ಯ ಮಂತ್ರಿ ಯಡೆಯೂರಪ್ಪರ ವಾಹನ ಜಪ್ತಿ ಮಾಡಿ, ವರ್ಗಾವಣೆಗೆ ಹೆದರದ ಮುನಿಷ್ ಮೌದ್ಗಿಲ್. ಸಿದ್ದರಾಮಯ್ಯ ರವರು ಮೂರು ದಶಕದಿಂದ ಆಪ್ತರಾದರು ಗುಲಬರ್ಗದ ಆಗ್ನೇಯ ರಸ್ತೆ ಸಾರಿಗೆ ನಿಗಮಕ್ಕೆ ವರ್ಗಾಯಿಸಿದರೂ, ವರ್ಗಾವಣೆ ರದ್ದತಿಗೆ ಪ್ರಯತ್ನಿಸದ ಅಶೋಕಾನಂದ ರಂತವರು ಮರುಭೂಮಿಯಲ್ಲಿ ಓಯಸಿಸ್‍ನಂತೆ ಕಾಣುತ್ತಾರೆ.

ದೇಶದಲ್ಲಿ ಅಭಿವೃದ್ಧಿ ಹೊಂದಿರುವ ರಾಜ್ಯಗಳೆಂದರೆ ಮಹಾರಾಷ್ಟ್ರ, ತಮಿಳನಾಡು, ಕೇರಳ ಮತ್ತು ಗುಜರಾತ್. ಇಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಬಡ್ತಿ ಮತ್ತು ನೇಮಕಾತಿಯಲ್ಲಿ ಹೆಚ್ಚಿನ ಅವಕಾಶ ನೀಡಿರುವುದು, ರಾಜ್ಯದ ಅಭಿವೃದ್ಧಿಯಲ್ಲಿ ನೆಲ-ಜಲದ ಅಭಿಮಾನ ಎದ್ದು ಕಾಣುತ್ತದೆ. ಆದರೆ ರಾಜ್ಯದಲ್ಲಿ ಅನ್ಯ ಭಾಷಿಕ ಅಧಿಕಾರಿಗಳ ಆಲಸ್ಯ ಬೇಜವಾಬ್ದಾರಿಯಿಂದ ನಿರೀಕ್ಷಿತ ಪ್ರಗತಿ ಆಗಿಲ್ಲ. ಇದಕ್ಕೆ ಕೆಲವು ಅಧಿಕಾರಿಗಳು ಅಪವಾದ.

svವಿದ್ಯುತ್ ಮತ್ತು ಕಲ್ಲಿದ್ದಲು ಖರೀದಿಯಲ್ಲಿ ಡಾಲರ್ ಲೆಕ್ಕದಲ್ಲಿ ಎಣಿಸುವ ಐ.ಎ.ಎಸ್ ಗಳುಂಟು. ಕೃಷ್ಣ ಜಲ ಭಾಗ್ಯ ನಿಗಮದ ಅಧಿಕಾರಿಯೊಬ್ಬರ ಮನೆ ಶೋಧಿಸಿದಾಗ ನೆಪ ಮಾತ್ರಕ್ಕೆ ಸಿಕ್ಕಿದ್ದು ಕೆಲವುಕೋಟಿ. ಜೊತೆಗೆ ಅಶ್ಲೀಲ ಸಿ.ಡಿ.ಗಳು. ದೋಚಿದೆಷ್ಟು, ಸಿಕ್ಕಿದೆಷ್ಟು ಎಂಬ ಬಗ್ಗೆ ಊಹಾಪೋಹಗಳದ್ದೇ ಸುದ್ದಿ. ಗೊಂದಲ ನಿವಾರಿಸುವ ದಾಷ್ಟತೆ ಕೂಡ ಮುಖ್ಯ ಕಾರ್ಯದರ್ಶಿಗೆ ಇಲ್ಲ. ವರದಿಗಳ ನೆಪದಲ್ಲೇ ಹಗರಣ ಮಬ್ಬಾಗಿಸುವ ನೌಕರ ಶಾಹಿಯ ಆಟ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ರಾಜ್ಯದ ಐ.ಎ.ಎಸ್ ಅಧಿಕಾರಿಗಳು ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ಮಾಡಿರುವ ಹೂಡಿಕೆಯನ್ನು ಮುಟ್ಟುಗೋಲು ಹಾಕಿಕೊಂಡರೆ ರಾಜ್ಯದ ಸಾಲವೆಲ್ಲ ತೀರಿಸಬಹುದೇನೊ.

ಕಳೆದ ದಶಕದಲ್ಲಿ ಅತಿ ಹೆಚ್ಚು ಸುದ್ದಿಯಾಗಿದ್ದು ಡಿನೋಟಿಪಿಕೆಶನ್ ಮತ್ತು ಗಣಿ ಹಗರಣ. ಕಡತಗಳಲ್ಲಿ ಡಿನೋಟಿಪಿಕೆಶನ್ ಮತ್ತು ಗಣಿ ಅಕ್ರಮದ ಬಗ್ಗೆ ಯಾವುದೆ ಐಎಎಸ್ ಅಧಿಕಾರಿಯು ಪ್ರತಿಕೂಲ ಷರಾ ಬರೆದಿಲ್ಲ. ಯಡಿಯೂರಪ್ಪರ ಜೊತೆಗಿದ್ದ ಅವರ ಮತ್ತು ನಗರಾಭಿವೃದ್ದಿ ಪ್ರಧಾನ ಕಾರ್ಯದರ್ಶಿಗಳಿಬ್ಬರು ಐಎಎಸ್ ಅಧಿಕಾರಿಗಳೇ. ಆದರೆ ಯಾರೊಬ್ಬರು ಕಡತದಲ್ಲಿ ಡಿನೋಟಿಪಿಕೆಶನ್ ಕಾನೂನು ಬಾಹಿರ. ನಿಯಮದಂತೆ ಮಾಡಲು ಬರುವುದಿಲ್ಲ ಎಂದು ಹೇಳುವ ಎದೆಗಾರಿಕೆ ತೋರಿಸಿದ್ದರೆ ಯಡಿಯೂರಪ್ಪ ಜೈಲಿಗೆ ಹೋಗುವುದು ತಪ್ಪುತ್ತಿತ್ತೇನೋ. ಕಡತದಲ್ಲಿ ತಪ್ಪು ಮಾಡಿದ ಅಧಿಕಾರಿಗಳು ಯಾರು ಜೈಲಿಗೆ ಹೋಗಲಿಲ್ಲ. ಅಷ್ಠರಮಟ್ಟಿಗೆ ನೌಕರಶಾಹಿ ಅದೃಷ್ಠವಂತರೆ ಸರಿ.

ನಿವೃತ್ತಿ ನಂತರವು ಅಧಿಕಾರ ಮತ್ತು ಕುರ್ಚಿಗಾಗಿ ಹಂಬಲಿಸುವ ಐ.ಎ.ಎಸ್ ವರ್ಗ ಜನ ಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ನೀತಿ ನಿಯಮ, ಕಾನೂನಿನಂತೆ ಕೆಲಸ ನಿರ್ವಹಿಸಿದರೆ ನೌಕರ ಶಾಹಿಗೆ ಇರುವ ತೊಂದರೆ ವರ್ಗಾವಣೆ ಎಂಬ ಶಿಕ್ಷೆ ಮಾತ್ರ. ವರ್ಗಾವಣೆಗೆ ಹೆದರುವುದಿಲ್ಲವೆಂದು ಐ.ಎ.ಎಸ್ ವರ್ಗ ತೀರ್ಮಾನಿಸಿದ ದಿನ ರಾಜ್ಯದಲ್ಲಿ ರಾಮರಾಜ್ಯದ ಉದಯ. ಆಡಳಿತದಲ್ಲಿ ಪಾರದರ್ಶಕತೆ ತನ್ನಿಂದ ತಾನೆ ಬರುತ್ತದೆ. ಐ.ಪಿ.ಎಸ್ ಮತ್ತು ಕೆ.ಎ.ಎಸ್‍ಗಳು ಕೂಡ ಐ.ಎ.ಎಸ್ ವರ್ಗವನ್ನು ಹಿಂಬಾಲಿಸದೇ ಅನ್ಯ ಮಾರ್ಗವಿರುವುದಿಲ್ಲ. ಆದರೆ ವರ್ಗಾವಣೆಗೆ ಹೆದರಿ ಜನ ಪ್ರತಿನಿಧಿಗಳೊಡನೆ ಬರಿ ಒಡಂಬಡಿಕೆಯಲ್ಲಾ. ಆಯ ಕಟ್ಟಿನ ಜಾಗದ ಮೇಲಿನ ಕಣ್ಣು ಮಾತ್ರ. ಆ ಎದೆಗಾರಿಕೆ ಇಂದಿನ ಐ.ಎ.ಎಸ್ ಗಳಲ್ಲಿ ನಿರೀಕ್ಷೆ ಕತ್ತಲು ಕೋಣೆಯಲ್ಲಿ ಇಲ್ಲದ ಕರಿಬೆಕ್ಕು ಹುಡುಕಿದಂತೆಯೇ ಸರಿ.

7 Responses to "ಕನ್ನಡಿ-2 : ಹಳ್ಳ ಹಿಡಿದ ಅಧಿಕಾರಶಾಹಿ ವರ್ಗ"

 1. rajaraja  February 11, 2016 at 7:13 pm

  I too have the same criticism about the officials but this certainly can’t be only against IAS officers alone as the whole bureaucracy which very much includes KAS and all other officers of the state govt down to clerical level.

  If this criticism is directed against all the officers for letting the people of Karnataka down, I am totally with you. However, the arguments in the article are very shallow and prejudiced one, yet for many other arguments I would hold the whole officialdom responsible and would condemn in the same language and in as many words.

  Indeed, the article of Mr. Jaamdhar though has been written well, that too ended up drawing simplistic conclusions without analyzing the root cause and it did not talk about what can be done about it? I think the article of Mr. Jaamdhar though well written is an incomplete one and this article presumes that few heroes can change the fate of Karnataka and doesn’t even appreciate the need for overhaul of the whole system of governance.

  Any expectation by Karnataka for better days from politicians or officers is going to remain a day dream as long as people remain mute spectators and willing collaborators. The pluralistic and honest society has to reflect why is it that it is silent about degeneration of its governance systems.

  Let me also ask, whether all other officers other than IAS officers are honest and give their heart and soul for the welfare of Karnataka? Can anyone say that more than 1% of the officers of the govt Karnataka who are Kannadigas, excluding IAS, IPS and IFS are honest? So, may argument is simple that if we look at the whole of govt of Karnataka officers and staff, around 99% are corrupt and that too shamelessly corrupt and yet they are sons and daughters of soil…

  Finally, don’t these come from same society? Why this society produces such corrupt people and selects them to be officers? It’s a larger question and needs to be debated at length…

  Reply
 2. sreedhara  February 12, 2016 at 6:30 pm

  chiranthan write up is good and it is true also. I endorse it. Local officers should get prominance in administration as in TN. It will help the people. Only few outside officers are good.

  Reply
 3. vishnu  February 14, 2016 at 9:55 am

  1.It is inappropriate to say insiders are good and outsiders are not good. There is a good and not good stock everywhere.
  2. It is required to post right persons to the right post to ensure effectiveness.
  3. Instructions to the officers of all levels and by there to all staff has to be written,simple, time bound and accountable with periodic review.
  4. Institutionalise every good work to replicate in all departments and in all regions than being done in an isolated manner.
  5. Reward those who do a good job with better postings and post ineffective ones where they fit in.

  As long as the whole hierarchy of all department is not motivated irrespective of insider or outsider and direct or promoted nothing substantial a difference could be made out.

  Reply
 4. Bhuvan R Gowda  March 22, 2016 at 6:54 pm

  ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಎಸ್ .ಎಂ. ಜಾಮದಾರರವರು ನೌಕರಶಾಹಿ ಭ್ರಷ್ಟತೆಗೆ ರಾಜಕಾರಣಿಗಳೇ ಕಾರಣ ಎಂದು ಪ್ರಸ್ತಾಪ ಮಾಡಿರುವುದನ್ನು ಪುಷ್ಟಿಕರಿಸುವಂಥ ಉದಾಹರಣೆಗಳು ಕಣ್ಣ ಮುಂದೆ ಹಾಗೆ ಬಂದು ಹೋಗುತ್ತವೆ ಅವುಗಳಲ್ಲಿ ಕೆಲವೊಂದವುಗಳನ್ನು ಪ್ರಸ್ತಾಪಿಸಲು ಇಚ್ಚಿಸುತ್ತೇನೆ. ದಷ್ಟ ಐಎಎಸ್ ಅಧಿಕಾರಿ ಶ್ರೀ ಅರವಿಂದ್ ಶ್ರೀವಾತ್ಸವ್ ರಂಥಹವರು ರೆಡ್ಡಿ ಸಹೋದರರ ಕೆಂಗಣ್ಣಿಗೆ ಬಲಿಯಾಗಿ ಬಳ್ಳಾರಿಯಿಂದ ವರ್ಗಾವಣೆಯಾಗಿ ಶಿವಪ್ಪ ಎಂಬ ಅದಕ್ಷ ಅಧಿಕಾರಿಯನ್ನು ನಿಯೋಜಿಸಿ ಮುಂದೆ ಆ ಅಧಿಕಾರಿಯು ದಿನ ನಿತ್ಯದ ಕಾರ್ಯಗಳನ್ನು ರೆಡ್ಡಿ ಸಹೋದರರ ಮನೆಯಿಂದ ಪ್ರಾರಂಭಿಸುತ್ತಿದ್ದರು ಎಂಬುದು ಅಲ್ಲಿನ ಜನರ ಮಾತು, ಅದೇ ಸಮಯದಲ್ಲಿ ಯಡಿಯೂರಪ್ಪ ಜನಾರ್ಧನ ರೆಡ್ಡಿ ಯವರ ಪುಂಡಾಟಕ್ಕೆ ಹರ್ಷಗುಪ್ತರಂಥಹ ಅಧಿಕಾರಿಯನ್ನು ಶಿವಮೊಗ್ಗದಿಂದ ಬಳ್ಳಾರಿಗೆ ಬಳ್ಳಾರಿಯಿಂದ ಮತ್ತೆಲ್ಲಿಗೋ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದಂತಹ ಸಂದರ್ಭದಲ್ಲಿ ಕುಮಾರಸ್ವಾಮಿ ಮೇಲಿನ ದ್ವೇಷಕ್ಕೆ ಅವರ ಜನ್ಮವನ್ನು ಜಾಲಾಡಲು ಹಾಸನ ಜಿಲ್ಲೆಗೆ ಒಂದು ಅಧಿಕಾರಿಗಳ ತಂಡವನ್ನು ಕಳುಹಿಸಿದ್ದು ಏನು ಸಿಗದಿದ್ದಾಗ ಅಲ್ಲಿನ ಉಪವಿಭಾಗಧಿಕಾರಿಯಾಗಿದ್ದ ದಕ್ಷ ಅಧಿಕಾರಿ ಶ್ರೀ ಕರೀಗೌಡರನ್ನು ಅಲ್ಲಿಂದ ವರ್ಗಾವಣೆ ಮಾಡಿದ್ದು ನಮ್ಮ ಮುಂದೆ ಹಸಿಯಾಗಿಯೇ ಇದೆ, ಹಾಗೆಯೇ ಈಶ್ವರಪ್ಪನವರ ಅಳಿಯ ಹಾಗು ಸಿದ್ದೆಶ್ವರರವರ ಅಳಿಯನಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಚಿನ್ನದ ಸೂರನ್ನು ಕಲ್ಪಿಸಿಕೊಟ್ಟಿದ್ದು ಮರೆಯುವಂತಿಲ್ಲ .

  Reply
 5. Bhuvan R Gowda  March 22, 2016 at 6:56 pm

  ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರ ಮಂತ್ರಿ ಮಂಡಲದ ಸಚಿವರೊಬ್ಬರು ವರ್ಗಾವಣೆಗಾಗಿ ಸುಮಾರು 70 ಶಿಫಾರಸ್ಸು ಪತ್ರಗಳನ್ನು ಮುಖ್ಯಮಂತ್ರಿ ಗೆ ನೀಡಿರುವುದನ್ನು ನಾವು ಇಲ್ಲಿ ಸ್ಮರಿಸಬಹುದು. ಮುಖ್ಯಮಂತ್ರಿಯವರಿಗೆ ನಿಜವಾಗಿಯೂ ಜನರ ಬಗ್ಗೆ ಕಾಳಜಿಯಿದ್ದರೆ ಬೆಂಗಳೂರು ನಗರ ಹಾಗು ಗ್ರಾಮಾಂತರ ಜಿಲ್ಲೆಗಳಿಗೆ ನಿಮ್ಮ ಲೇಖನದಲ್ಲಿ ತಿಳಿಸಿದಂಥಹ ವ್ಯಕ್ತಿಗಳನ್ನು ಜಿಲ್ಲಾಧಿಕಾರಿಗಳಾಗಿ ನಿಯೋಜಿಸಲಿ ಅದನ್ನು ಬಿಟ್ಟು ಮಾದ್ಯಮಗಳ ಮುಂದೆ ಜೆ ಸಿ ಬಿ ಗಳೊಂದಿಗೆ ಸರ್ಕಾರಿ ಜಮೀನುಗಳ ಒತ್ತುವರಿ ಎಂಬ ನಾಟಕವಾಡುವ ಜಿಲ್ಲಾಧಿಕಾರಿಗಳನ್ನು ನಿಯೋಜಿಸುವುದು ಬೇಡ.
  ಇನ್ನು ನಿಮ್ಮ ಲೇಖನದಲ್ಲಿ ಉಲ್ಲೇಖ ಮಾಡಿರುವ ಹಾಗೆ ಹೊರ ರಾಜ್ಯದಿಂದ ಬರುವ ಐಎಎಸ್ ಅಧಿಕಾರಿಗಳಿಗೆ ಕನ್ನಡವೆಂದರೆ ಅಲರ್ಜಿ ಇರಬಹುದು ಆದರೆ ಕೆಲವು ಕನ್ನಡೇತರ ಐಎಎಸ್ ಅಧಿಕಾರಿಗಳು ಆಡಳಿತ ಹಾಗು ರಾಜ್ಯದ ಅಭಿವೃದ್ದಿ ವಿಷಯದಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ ಉದಾಹರಣೆಗೆ ಶ್ರೀ ರಾಜೀವ್ ಚಾವ್ಲ ರವರು ಭೂ ದಾಖಲೆಗಳ ಆಧುನೀಕರಣ,ಶ್ರೀ ಪೊನ್ನು ರಾಜ್ ರವರು ಅವಸಾನದ ಹಾದಿಯಲ್ಲಿ ಇದ್ದಂಥಹ ನೆಮ್ಮದಿ ಯೋಜನೆಗೆ ಪುನರ್ಜನ್ಮ ನೀಡಿ ನಾಡಕಚೆರಿಯನ್ನು ಹುಟ್ಟು ಹಾಕಿದ್ದು, ಶ್ರೀ ಮೌದ್ಗಿಲ್ ರವರು ಸಕಾಲ ಯೋಜನೆಯ ರೂವಾರಿಯಾಗಿದ್ದು ಹೀಗೆ ಹಲವು ಉದಾಹರಣೆಗಳನ್ನು ಕಾಣಬಹುದು, ಅಭಿವೃದ್ದಿಯ ವಿಷಯದಲ್ಲಿ ನಮ್ಮ ರಾಜ್ಯದ ಐಎಎಸ್ ಅಧಿಕಾರಿ ಹೊರ ರಾಜ್ಯದ ಅಧಿಕಾರಿ ಎಂದು ವರ್ಗೀಕರಿಸುವುದು ನನ್ನ ಪ್ರಕಾರ ಸರಿಯಲ್ಲ, ಹಾಗೆಯೇ ನಮಗಿಂತ ಸ್ಪಷ್ಟವಾಗಿ ಮಾತನಾಡುವ ಹಾಗು ಬರೆಯುವ ಅಧಿಕಾರಿಗಳನ್ನು ನಾವು ಕಾಣಬಹುದು

  Reply
 6. Bhuvan R Gowda  March 23, 2016 at 5:29 pm

  ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಎಸ್ .ಎಂ. ಜಾಮದಾರರವರು ನೌಕರಶಾಹಿ ಭ್ರಷ್ಟತೆಗೆ ರಾಜಕಾರಣಿಗಳೇ ಕಾರಣ ಎಂದು ಪ್ರಸ್ತಾಪ ಮಾಡಿರುವುದನ್ನು ಪುಷ್ಟಿಕರಿಸುವಂಥ ಉದಾಹರಣೆಗಳು ಕಣ್ಣ ಮುಂದೆ ಹಾಗೆ ಬಂದು ಹೋಗುತ್ತವೆ ಅವುಗಳಲ್ಲಿ ಕೆಲವೊಂದವುಗಳನ್ನು ಪ್ರಸ್ತಾಪಿಸಲು ಇಚ್ಚಿಸುತ್ತೇನೆ. ದಷ್ಟ ಐಎಎಸ್ ಅಧಿಕಾರಿ ಶ್ರೀ ಅರವಿಂದ್ ಶ್ರೀವಾತ್ಸವ್ ರಂಥಹವರು ರೆಡ್ಡಿ ಸಹೋದರರ ಕೆಂಗಣ್ಣಿಗೆ ಬಲಿಯಾಗಿ ಬಳ್ಳಾರಿಯಿಂದ ವರ್ಗಾವಣೆಯಾಗಿ ಶಿವಪ್ಪ ಎಂಬ ಅದಕ್ಷ ಅಧಿಕಾರಿಯನ್ನು ನಿಯೋಜಿಸಿ ಮುಂದೆ ಆ ಅಧಿಕಾರಿಯು ದಿನ ನಿತ್ಯದ ಕಾರ್ಯಗಳನ್ನು ರೆಡ್ಡಿ ಸಹೋದರರ ಮನೆಯಿಂದ ಪ್ರಾರಂಭಿಸುತ್ತಿದ್ದರು ಎಂಬುದು ಅಲ್ಲಿನ ಜನರ ಮಾತು, ಅದೇ ಸಮಯದಲ್ಲಿ ಯಡಿಯೂರಪ್ಪ ಜನಾರ್ಧನ ರೆಡ್ಡಿ ಯವರ ಪುಂಡಾಟಕ್ಕೆ ಹರ್ಷಗುಪ್ತರಂಥಹ ಅಧಿಕಾರಿಯನ್ನು ಶಿವಮೊಗ್ಗದಿಂದ ಬಳ್ಳಾರಿಗೆ ಬಳ್ಳಾರಿಯಿಂದ ಮತ್ತೆಲ್ಲಿಗೋ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದಂತಹ ಸಂದರ್ಭದಲ್ಲಿ ಕುಮಾರಸ್ವಾಮಿ ಮೇಲಿನ ದ್ವೇಷಕ್ಕೆ ಅವರ ಜನ್ಮವನ್ನು ಜಾಲಾಡಲು ಹಾಸನ ಜಿಲ್ಲೆಗೆ ಒಂದು ಅಧಿಕಾರಿಗಳ ತಂಡವನ್ನು ಕಳುಹಿಸಿದ್ದು ಏನು ಸಿಗದಿದ್ದಾಗ ಅಲ್ಲಿನ ಉಪವಿಭಾಗಧಿಕಾರಿಯಾಗಿದ್ದ ದಕ್ಷ ಅಧಿಕಾರಿ ಶ್ರೀ ಕರೀಗೌಡರನ್ನು ಅಲ್ಲಿಂದ ವರ್ಗಾವಣೆ ಮಾಡಿದ್ದು ನಮ್ಮ ಮುಂದೆ ಹಸಿಯಾಗಿಯೇ ಇದೆ, ಹಾಗೆಯೇ ಈಶ್ವರಪ್ಪನವರ ಅಳಿಯ ಹಾಗು ಸಿದ್ದೆಶ್ವರರವರ ಅಳಿಯನಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಚಿನ್ನದ ಸೂರನ್ನು ಕಲ್ಪಿಸಿಕೊಟ್ಟಿದ್ದು ಮರೆಯುವಂತಿಲ್ಲ .

  Reply
 7. Bhuvan R Gowda  March 23, 2016 at 5:30 pm

  ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರ ಮಂತ್ರಿ ಮಂಡಲದ ಸಚಿವರೊಬ್ಬರು ವರ್ಗಾವಣೆಗಾಗಿ ಸುಮಾರು 70 ಶಿಫಾರಸ್ಸು ಪತ್ರಗಳನ್ನು ಮುಖ್ಯಮಂತ್ರಿ ಗೆ ನೀಡಿರುವುದನ್ನು ನಾವು ಇಲ್ಲಿ ಸ್ಮರಿಸಬಹುದು. ಮುಖ್ಯಮಂತ್ರಿಯವರಿಗೆ ನಿಜವಾಗಿಯೂ ಜನರ ಬಗ್ಗೆ ಕಾಳಜಿಯಿದ್ದರೆ ಬೆಂಗಳೂರು ನಗರ ಹಾಗು ಗ್ರಾಮಾಂತರ ಜಿಲ್ಲೆಗಳಿಗೆ ನಿಮ್ಮ ಲೇಖನದಲ್ಲಿ ತಿಳಿಸಿದಂಥಹ ವ್ಯಕ್ತಿಗಳನ್ನು ಜಿಲ್ಲಾಧಿಕಾರಿಗಳಾಗಿ ನಿಯೋಜಿಸಲಿ ಅದನ್ನು ಬಿಟ್ಟು ಮಾದ್ಯಮಗಳ ಮುಂದೆ ಜೆ ಸಿ ಬಿ ಗಳೊಂದಿಗೆ ಸರ್ಕಾರಿ ಜಮೀನುಗಳ ಒತ್ತುವರಿ ಎಂಬ ನಾಟಕವಾಡುವ
  ಜಿಲ್ಲಾಧಿಕಾರಿಗಳನ್ನು ನಿಯೋಜಿಸುವುದು ಬೇಡ
  ಇನ್ನು ನಿಮ್ಮ ಲೇಖನದಲ್ಲಿ ಉಲ್ಲೇಖ ಮಾಡಿರುವ ಹಾಗೆ ಹೊರ ರಾಜ್ಯದಿಂದ ಬರುವ ಐಎಎಸ್ ಅಧಿಕಾರಿಗಳಿಗೆ ಕನ್ನಡವೆಂದರೆ ಅಲರ್ಜಿ ಇರಬಹುದು ಆದರೆ ಕೆಲವು ಕನ್ನಡೇತರ ಐಎಎಸ್ ಅಧಿಕಾರಿಗಳು ಆಡಳಿತ ಹಾಗು ರಾಜ್ಯದ ಅಭಿವೃದ್ದಿ ವಿಷಯದಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ ಉದಾಹರಣೆಗೆ ಶ್ರೀ ರಾಜೀವ್ ಚಾವ್ಲ ರವರು ಭೂ ದಾಖಲೆಗಳ ಆಧುನೀಕರಣ, ಶ್ರೀ ಪೊನ್ನು ರಾಜ್ ರವರು ಅವಸಾನದ ಹಾದಿಯಲ್ಲಿ ಇದ್ದಂಥಹ ನೆಮ್ಮದಿ ಯೋಜನೆಗೆ ಪುನರ್ಜನ್ಮ ನೀಡಿ ನಾಡಕಚೆರಿಯನ್ನು ಹುಟ್ಟು ಹಾಕಿದ್ದು, ಶ್ರೀ ಮೌದ್ಗಿಲ್ ರವರು ಸಕಾಲ ಯೋಜನೆಯ ರೂವಾರಿಯಾಗಿದ್ದು ಹೀಗೆ ಹಲವು ಉದಾಹರಣೆಗಳನ್ನು ಕಾಣಬಹುದು, ಅಭಿವೃದ್ದಿಯ ವಿಷಯದಲ್ಲಿ ನಮ್ಮ ರಾಜ್ಯದ ಐಎಎಸ್ ಅಧಿಕಾರಿ ಹೊರ ರಾಜ್ಯದ ಅಧಿಕಾರಿ ಎಂದು ವರ್ಗೀಕರಿಸುವುದು ನನ್ನ ಪ್ರಕಾರ ಸರಿಯಲ್ಲ, ಹಾಗೆಯೇ ನಮಗಿಂತ ಸ್ಪಷ್ಟವಾಗಿ ಮಾತನಾಡುವ ಹಾಗು ಬರೆಯುವ ಅಧಿಕಾರಿಗಳನ್ನು ನಾವು ಕಾಣಬಹುದು

  Reply

Leave a Reply

Your email address will not be published.