ಅಲೆಮಾರಿಗಳ ಅಸ್ಥಿತ್ವದ ಸ್ಥಿತ್ಯಂತರಗಳು

ಕಳಕೇಶ ಡಿ ಗುಡ್ಲಾನೂರ

ಕಳಕೇಶ ಡಿ ಗುಡ್ಲಾನೂರ

ಕಳಕೇಶ ಡಿ ಗುಡ್ಲಾನೂರ

ನಾಡಿನ ನಾನಾ ಮೂಲೆಗಳಿಂದ ಸಾಗಿಬರುವ ಸಾಲು ಸಾಲು ಜನರು ಹಾಳು ಹೊಲಗಳ ತುಂಬಾ ತಮ್ಮ ತಾಪತ್ರಯಗಳ ತಾಡುಪತ್ರೆಯನ್ನು ಬಿಗಿದು ‘ಗೂಡು ಕಟ್ಟುವ ಗುಬ್ಬಿಯ ಹಾಗೇ’ ಪುಟ್ಟ ಪುಟ್ಟ ಟೆಂಟ್ ಹಾಕಿಕೊಳ್ಳುತ್ತಾರೆ ಅಲೆದಾಟ ಅವಮಾನ ಅತಂತ್ರತೆಯ ಮೂರು ಕಲ್ಲುಗಳೇ ಒಲೆಗಳಾಗಿ ಮಾರ್ಪಡುತ್ತವೆ ಇಲ್ಲಿ. ಕಲ್ಲಿನೊಲೆಯ ಮೇಲೆ ಕುತು ಕುತು ಕುದಿ ಯುವ ಸಾರಿನಂತೆ ಅವರ ಬದುಕು ಕೂಡ!
ವರ್ಷದುದ್ದಕ್ಕೂ ದಿಕ್ಕು ದಿಕ್ಕು ತಿರುಗುವ ದಿಕ್ಕೇಡಿಗಳು ದು:ಖ ಮುಕ್ತರಾಗಲು ಮುಖದ ಮೇಲೆ ಮೊಹರಂ ಹಬ್ಬದ ಮಂದಹಾಸದ ಮುದ್ರೆ ಒತ್ತಿಕೊಂಡು ಎರಡು ವರ್ಷಕೊಮ್ಮೆ ‘ಹಿಂಡನಗಲಿದ ಜಿಂಕೆ ದುಂಡು ಸೇರುವ ಹಾಗೇ’ ಅಲೆಮಾರಿಗಳು ಹೈದರಾಬಾದ್ ಕರ್ನಾಟಕದ ಕೊಪ್ಪಳ ಜಿಲ್ಲೆಯ ಕುದುರೆಮೋತಿಗೆ ದೌಡಾಯಿಸುತ್ತಾರೆ.
ಕುದುರೆಮೋತಿ ಅಂದ ತಕ್ಷಣ ಬಂಡಾಯದ ಬಿಳಿ ತೆಲೆಗಳು ಕುದುರೆಮೋತಿ ಸ್ವಾಮಿ 1986 ರಲ್ಲಿ ಹುಸೇನ್‍ಬೀ ಹಾಗೂ ಪಾರಮ್ಮ ಎಂಬ ಇರ್ವ ಮಹಿಳೆಯರನ್ನು ಬಿದಿಯ ಮೇಲೆ ಬೆತ್ತಲೆ ಮೆರೆಸಿದ ‘ನಗ್ನ’ಸತ್ಯವನ್ನು ಕಡುಕೋಪದಿಂದ ಮೆಲಕುಹಾಕುತ್ತಾರೆ ‘ಬೆತ್ತಲೆ ಮೆರೆಸಿದ ಬಿದಿಯ ಮೇಲೆ ಮೋಹರಂನ ಭಕ್ತಿಯ ಹುಡಿ ಹಾರುತಿದೆ ಇಂದು! ಮತಿಯ ಕಲಹಗಳೇ ಹೆಚ್ಚುತ್ತಿರುವ ಆಧುನಿಕ ಸಂದರ್ಭದಲ್ಲಿ ಮೋಹರಂ ತನ್ನ ದುರಂತದ ಛಾಯೆಯನ್ನು ಕಳೆದು ಹಬ್ಬವಾಗಿ ಮಾರ್ಪಟ್ಟಿದ್ದು ಮಾತ್ರವಲ್ಲ ಮತ-ಪಂಥದ ಕಟ್ಟು ಮೀರಿ ಹಿಂದೂ-ಮುಸ್ಲಿಂರ ಮಧುರ ಬಾಂಧವ್ಯದ ಬೆಸುಗೆಯಾಗಿರುವುದು ಗಮನಾರ್ಹ ಸಂಗತಿ.

DSC_2711

ಅಲಾಹಿದೇವರು ಕೆಂಡ ಹಾಯದ, ಗುಂಡು-ತುಂಡುಗಳ ಹಾವಳಿಯೂ ಅಷ್ಟಕಷ್ಟೇ ಇರುವ ಕುದರಿಮೋತಿಯ ಜನಪದಿಯ ಮೋಹರಂಗೆ ಹೊಟ್ಟೆಪಾಡಿಗಾಗಿ ದೇಶಾಂತರ ಹೋದ ಹಗಲುವೇಷದಾರರು,ಸುಡಗಾಡಸಿದ್ದರು, ಶಿಂಧೊಳ್ಳರು, ಹಾವಾಡಿಗರು, ಜಾತಿಗಾರರು, ರಾಮಕುಂಡಡಿಯವರು, ದುರ್‍ಮುರ್ಗೇರ್, ಗೊಂದಲಿಗರು, ಚೆನ್ನದಾಸರು, ಬೇಡ/ಬುಡ್ಗ ಜಂಗಮರು ಮುಂತಾದ ಅಲೆಮಾರಿ ಜನಾಂಗದವರು ರಾಜ್ಯದ ವಿವಿಧ ಮೂಲೆಗಳಿಂದಷ್ಟೇ ಅಲ್ಲ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳನಾಡು ಉತ್ತರಪ್ರದೇಶ ಹಾಗೂ ಇತರ ರಾಜ್ಯಗಳ ಸರಹದ್ದಿನಿಂದ ಮೋಹರಂ ನೆಪದಲ್ಲಿ ಸಮಾವೇಶಗೊಳ್ಳುತ್ತಾರೆ.
ಮದುವೆ,ಮಗುವಿನ ನಾಮಕರಣ ಇನ್ನಿತರ ಶುಭ ಕಾರ್ಯಗಳನ್ನು ಇಲ್ಲಿಯೇ ನೆರೆವೇರಿಸುತ್ತಾರೆ ಆಸ್ತಿ ತಕರಾರು ಆಂತರಿಕ ತಿಕ್ಕಾಟ ವ್ಯಾಜ್ಯಗಳನ್ನು ‘ಲಾ’ಓದದ ಲಾಯರ್‍ಗಳು ನಡೆಸುವ ಕುಲಪಂಚಾಯತಿಯ ಮೂಲಕ ಪರಿಹರಿಸಿಕೊಳ್ಳುತ್ತಾರೆ. ಏನಿದು ಕುಲಪಂಚಾಯತಿ?

ಪ್ರಜಾಪ್ರಭುತ್ವ ವ್ಯವಸ್ಥೆಯ ಈ ದೇಶದಲ್ಲಿ ಪ್ರತಿಯೊಬ್ಬ ಪ್ರಜೆ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು ಉಲ್ಲಂಘಿಸಿದರೆ ದಂಡಸಹಿತ ಶಿಕ್ಷೆ ಖಚಿತ. ಆದರೆ ಇದೇ ಪ್ರಜಾಪ್ರಭುತ್ವ ವ್ಯವಸ್ಥೆಯ ಆಚೆ ಜಾತಿ-ಜನಾಂಗದ ಕಟ್ಟುಪಾಡುಗಳಲ್ಲಿ ರೂಪಿತವಾದ ಕಠಿಣ ನಿಯಮ ಪರಿಪಾಲಿಸುವ ಮತ್ತು ಅವುಗಳಡಿಯಲ್ಲಿಯೇ ತಾವೇ ಸಮಾಜದ ನ್ಯಾಯ ನಿರ್ಣಯ ಪರಿಹರಿಸಿಕೊಳ್ಳುವ ವಿಧಾನ ಮಾತ್ರ ಆಧುನಿಕ ಸಮಾಜವನ್ನು ನಾಚಿಸುವಂತಿದೆ. ಅಲೆಮಾರಿ ಸಮುದಾಯದಲ್ಲಿ ಯಾವುದೇ ತಪ್ಪುಗಳು ನಡೆದರು ಅವುಗಳನ್ನು 2 ವರ್ಷಕೊಮ್ಮೆ ನಡೆಯುವ ಕುಲಪಂಚಾಯತಿಯಲ್ಲಿ ಸಮಾಜದ ಸಮಸ್ತರೆಲ್ಲರೂ ಒಂದಡೆ ಸೇರಿ ನ್ಯಾಯ ಬಗೆಹರಿಸಿಕೊಳ್ಳುತ್ತಾರೆ. ಕುಟುಂಬದ ಯಾವುದೇ ಜಗಳವಿರಲಿ ಪೋಲಿಸ್‍ಠಾಣೆ ಕೋರ್ಟ್ ಕಛೇರಿಯ ಕಟ್ಟೆ ಹತ್ತುವಂತಿಲ್ಲ. ಐವರುಸರಪಂಚರು , ಹತ್ತಾರು ಮಹಾಂತರು (ವಾಲಿಕಾರ) ಹೇಳಿದಂತೆ ಎಲ್ಲರೂ ಕೇಳಬೇಕು.

DSC_2829 ಕುಲಪಂಚಾಯತಿಗೆ ಡಂಗುರಸಾರುವುದು ಪಂಚಾಯತಿ ನಡೆದಾಗ ಯಾರಾದ್ರು ಗಲಾಟೆ ಮಾಡಿದ್ರೆ ಕೈಕೋಲಿನಿಂದ ಜನರನ್ನು ನಿಯಂತ್ರಿಸುವ ವಾಲಿಕಾರನೇ ಅಲೆಮಾರಿಗಳ ಪಾಲಿನ ಪೋಲಿಸ್! 20 ಸಾವಿರಕ್ಕೂ ಅಧಿಕ ಅಲೆಮಾರಿಗಳು ಪಾಲ್ಗೊಳ್ಳುವ ಕುಲಪಂಚಾಯತಿಯಲ್ಲಿ ಯಾವುದೇ ಶುಲ್ಕವಿಲ್ಲ, ಅಪರಾಧಿಯ ಆರ್ಥಿಕ ಸ್ಥಿತಿಯ ಮೇಲೆ ದಂಡ ವಿಧಿಸುವ ನಿಯಮ ಚಾಲ್ತಿಯಿದೆ, ಕಡಿಮೆ ಎಂದರೆ 500 ರೂಪಾಯಿ ದಂಡವಿಧಿಸಲಾಗುತ್ತದೆ ತೀರಾ ಕರಾರುವಕ್ಕಾಗಿ ಪಾರದರ್ಶಕವಾಗಿ ನೊಂದವರಿಗೆ ನ್ಯಾಯಕೊಡಿಸಿ ಅಗಲಿದವರನ್ನು ಒಗ್ಗೂಡಿಸುವ ಈ ಕುಲಪಂಚಾಯತಿಗೆ ಎಲ್ಲಿಲ್ಲದ ಗೌರವ ಇಲ್ಲಿನ ತೀರ್ಪೆಂದರೆ ಸರ್ವೋಚ್ಛನ್ಯಾಯಾಲಯದ ತೀರ್ಪಿನಂತೆ ಈ ತೀರ್ಪಿಗೆ ತಡೆಯಾಜ್ಞೆಯೂ ಇಲ್ಲ ಮೇಲ್ಮನವಿಯೂ ಇಲ್ಲ, 21 ಶತಮಾನದಲ್ಲಿಯೂ ಸಹ ತಮ್ಮ ತಲೆಮಾರುಗಳ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವುದು ಹೆಮ್ಮಯ ಸಂಗತಿ.
ಅಲೆಮಾರಿಗಳು ವರ್ಷಪೂರ್ತಿ ಅರ್ಧಹೊಟ್ಟೆ ತಂಗುಳನ್ನ ಉಂಡರು ಮೊಹರಂಗೊಮ್ಮೆ ಊರಿಗೆಲ್ಲ ಊಟಹಾಕಿ ದಾಸೋಹ ಸಂಸ್ಕøತಿಗೆ ಜೀವಂತ ಸಾಕ್ಷಿಯಾಗುತ್ತಾರೆ. ಬೇಡುವ ಕೈಗಳು ನೀಡುವ ಕೈಗಳಾಗಿ ರೂಪಾಂತರಗೊಳ್ಳುವುದು ವರ್ಷಕೊಂದುದಿನ ಮಾತ್ರ! ಜೊತೆಗೆ ಅವರಿಗೆ ಸ್ವಂತ ಊರು-ಸೂರು ಯಾವುದು ಇಲ್ಲ ತಮ್ಮ ಕಲೆ ಪ್ರದರ್ಶಿಸುವ ಊರನ್ನೇ ತಮ್ಮೂರೆಂದು ಅಲ್ಲಿನ ಜನರನ್ನೇ ತಮ್ಮ ಹಡೆದಪ್ಪ ,ಹಡೆದವ್ವ ನೆಂದು ಹೇಳಿ ಹಿರಿಹಿರಿ ಹಿಗ್ಗುತ್ತಾರೆ. ಅಷ್ಟೇಅಲ್ಲ “ ಹಳ್ಯಾಗ ರೊಟ್ಯಾಗ ರೊಟ್ಟಿ ಕೊಡ್ತಾರ ,ಹಿಡಿ ಕಾಳು-ಬ್ಯಾಳಿ ನಿಡ್ತಾರ ಆದ್ರ ಈ ಪ್ಯಾಟಿ ಪಂಡಿತರು ನಮ್ ಮ್ಯಾಲೆ ತಾವು ಪಿಹೆಚ್‍ಡಿ ಪಡಿತಾರೆ ವಿನ: ನಮ್ಗ ನಯಾಪೈಸ್ ಲಾಭ ಆಗಿಲ್ಲ” ಎಂಬುದು ಸುಡುಬಿಸಿಲಿನಲ್ಲಿ ಬರಿಗಾಲಿನಲ್ಲಿ ನಿಂತವರ ಒಡಲನುಡಿ.

DSC_2836

ಬೇಟೆಯಾಡಿ ‘ಬ್ಯಾಟಿ’ ಮಾಡ್ತರೆ ವಿನ: ತಮ್ಮ ಮಕ್ಳು ಕಲ್ಯಾಕ ಪಾಟಿ-ಪೆನ್ಸಿಲ್ ಕೊಡಿಸುವ ಪರಿಪಾಟಲು ಅವರೊಳಗೆ ಚಿಗುರೊಡೆದಿಲ್ಲ. ಅಕ್ಷರಲೋಕದ ಕನಸುಗಾರಿಕೆಯೂ ಸಹ ಅವರಿಗಿಲ್ಲ ಬಹುತೇಕ ವರ್ತಮಾನದ ತಲ್ಲಣಗಳು ಅವರ ಕನಸುಗಳನ್ನು ಸುಟ್ಟುಹಾಕಿರ ಬಹುದೇ? ಇದರಿಂದ ಅವರಲ್ಲಿ ಮೂಡನಂಬಿಕೆ ತಾಂಡವವಾಡುತ್ತಿದೆ. ಆಧುನಿಕ ಜಗತ್ತಿನ ತಂತ್ರಜ್ಞಾನ ಭರಾಟೆಗೆ ಬಸವಳಿದ ಅಲೆಮಾರಿಗಳ ಕಲೆಗಳು ಅಳಿವಿನಂಚಿಗಿವೆ ಅವರಲ್ಲಿನ ಅಪಾರ ಜನಪದ ಸಂಪತ್ತು, ಹಾಡುಗಾರಿಕೆ,ಕಥನಶೈಲಿ,ವೇಷಭೂಷಣಗಳು , ನಶಿಸಿಹೋಗುವ ಸಾಧ್ಯತೆಗಳು ಹೆಚ್ಚಿವೆಯಾದ್ದರಿಂದ ಅವುಗಳನ್ನು ಉಳಿಸಿ ಬೆಳಸುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಅಲೆಮಾರಿ ಪ್ರಾಧಿಕಾರಗಳು, ಅಕಾಡಮಿಗಳು ಅಧ್ಯಯನ ಕೇಂದ್ರಗಳು ಇನ್ನೂ ಹೆಚ್ಚು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿದೆ

DSC_2858

 

ನಗರೀಕರಣದ ತೆಕ್ಕೆಗೆ ಬೀಳದ ನೆಲದ ನೈಜ ಸಂಸ್ಕøತಿಯ ವಾರಸುದಾರರಾದ ಅಲೆಮಾರಿಗಳ ಆಚರಣೆಗಳು ಆ ಸಂಸ್ಕøತಿ ಮೂಲಾಂಶಗಳನ್ನು ಉಳಸಿಕೊಂಡಿರಬಹುದಾದ ಸಾಧ್ಯತೆಗಳನ್ನು, ಸವಾಲುಗಳನ್ನು, ಸಮಸ್ಯೆಗಳನ್ನು ಸಂಕೀರ್ಣತೆಗಳನ್ನು ಸ್ಥಿತ್ಯಂತರಗಳನ್ನು ಈ ಸಮುದಾಯದ ಎದೆಯಾಳಕ್ಕಿಳಿದು ಪರಿಶೋಧಿಸಿ ಪುನ: ರಚಿನೆಗೊಂಡು ಅವರ ಬದುಕು ಬದಲಿಸುವ ಕಾಲ ಬೇಗ ಬರಬೇಕಿದೆ.

12 Responses to "ಅಲೆಮಾರಿಗಳ ಅಸ್ಥಿತ್ವದ ಸ್ಥಿತ್ಯಂತರಗಳು"

 1. ರುದ್ರೇಶ್ ಪಾಟೀಲ  October 24, 2015 at 3:55 pm

  ಮಂಗಳನಲ್ಲಿ ಜೀವಿಗಳ ಅಸ್ತಿತ್ವವನ್ನು ಹುಡುಕಾಡುತ್ತಿರುವ ಮಾನವನಿಗೆ ತನ್ನದೇ ಗ್ರಹದಲ್ಲಿ
  ಅಸ್ತಿತ್ವದಲ್ಲಿರುವ ಮಾನವರ ಬಗ್ಗೆ ಅವರ ಏಳಿಗೆ ಬಗ್ಗೆ ಕಿಂಚಿತ್ತೂ ಆಸಕ್ತಿ ಇಲ್ಲದ್ದು ವಿಪರ್ಯಾಸವೇ ಸರಿ.
  ನಿಮ್ಮ ಲೇಖನ ನಿಜಕ್ಕೂ ಚೇತೋಹಾರಿ.

  Reply
 2. mmhebbal  October 24, 2015 at 4:45 pm

  ಅತಿಯಾದ ತಂತ್ರಜ್ಞಾನ ಸೆಳುವಿಗೆ ಸಿಲುಕಿದ ಯುವ ಪೀಳಿಗೆ
  ಶ್ರಮಿಕ, ತಳಸಮುದಾಯದವರ ನಂಬಿಗೆ, ಸಂಸ್ಕೃತಿ ಕುರಿತ
  ಲೇಖನ ಹಾಗೂ ಗುಬ್ಬಿಗೂಡಿನಂತ ಟೆಂಟ್ಗಳು ಸ್ಥಳನಾಮ,
  ಐತಿಹ್ಯದ ಪರಿಚಯವಾಯಿತು.ಈ ನಂಬಿಗೆಯು ಮಕ್ಕಳ
  ಭವಿಷ್ಯಕ್ಕೆ ಎರವಾಗಿರುವುದು ವಿಪರ್ಯಾಸ.

  Reply
 3. ಮಂಜುನಾಥ ಮುಧೋಳ  October 24, 2015 at 6:46 pm

  ಒಳ್ಳೆಯ ಲೇಖನ ಸರ್ ಚೆನ್ನಾಗಿ ಬರದಿದ್ದಿರಾ

  Reply
 4. Manjunath Dollin  October 24, 2015 at 7:10 pm

  ಕುದರಿಮೋತಿ ಮೋಹರಂ ಕನ್ನಡ ನಾಡಿನ ಭಾವೈಕ್ಯದ ಕೇಂದ್ರಗಳಲ್ಲಿ ಒಂದು,ಕಳಕೇಶರ ಲೇಖನ ಚೆನ್ನಾಗಿದೆ

  Reply
 5. Rajendra.shetttar  October 24, 2015 at 10:32 pm

  ಆತ್ಮೀಯ ಕಳಕೇಶ ತಮ್ಮ ಬರಹಗಳು ಚೆನ್ನಾಗಿದೆ . ಧನ್ಯವಾದಗಳು.ತಮ್ಮ ರಾಜೇಂದ್ರ.ಸಿ.ಆರ್.ಪಿ.

  Reply
 6. Kirankumar  October 25, 2015 at 6:34 am

  Nice written sir super

  Reply
 7. ashok hosamani  October 25, 2015 at 12:37 pm

  Sir nimma lekhana tumba chennagi mudi bandide avara badukinali aksharada deepa ಅಲ್ಲೊಂದಿತ್ತು ಕಟ್ಟೆ
  ಸೋಮಾರಿಗಳ ಕಟಕಟೆ
  ತರಹೇವಾರಿ ಟಾಕ್
  ಟೀಕ್ ಟಾಕ್ ಆಗಿ ಬಂದ್ಬಿಟ್
  ಬಾಯಿ ಬಾಯಿ ಬಡ್ಕೊಂಬಿಟ್
  ದೇಶದ ಉದ್ಧಾರ ಊರ ಮಂದಿಗೆ ಬಿಟ್
  ರಾಷ್ಟ್ರೀಯ ಹಬ್ಬಗಳಲಿ
  ಥೇಟ್ ನೇತಾರರಂತೆ ಫೋಟೋಗೆ ಪೋಜ್ ಕೊಟ್
  ಜಾತ್ರೆ ಹಬ್ಬಗಳಲಿ
  ಊರ ತುಂಬ ಕಟೌಟ್
  ಭಾವಿ ನಾಯಕರಂತೆ ಬಿಂಬಿಸಿಕೊಂಡ್ಬಿಟ್
  ಪುಢಾರಿಗಳಿಗೆ ಹೆಂಡ ಸಾರಾಯಿ ಕುಡ್ಸಿಬಿಟ್
  ಆಟಗಳಿಗೆ ಹೆಣದ ಗೂಟಗಳಿಗೆ
  ಬಿಡಿಗಾಸು ಸುರಿದ್ ಬಿಟ್
  ದಾನ ಶೂರರೆನಿಸಿಕಂಡರು
  ನಮ್ಮ ಕಟ್ಟೆಯ ಭಾವಿ ನಾಯಕರುbelagabekide.phd maduva janarige arivagilla nimma kelasakke hats off.

  Reply
 8. ಪಂಪಾರಡ್ಡಿ ಅರಳಹಳ್ಳಿ  October 25, 2015 at 11:35 pm

  ಒಳ್ಳೆ ಲೇಖನ. ಅಕಾಡೆಮಿ, ಪ್ರಾಧಿಕಾರಗಳು ಯಾರ ಪಾಲಿಗೆ ಇವೆ ಎನ್ನುವುದಕ್ಕೆ ಈ ಲೇಖನವೆ ಸಾಕ್ಷಿ. ಆದ್ದರಿಂದ ಅಕ್ಷರ ಜ್ಞಾನವಿಲ್ಲದ ಅನೇಕ ಅಲೆಮಾರಿ ಜನಾಂಗಗಳಿಗೆ ತಮ್ಮ ಹಕ್ಕುಗಳ ಕುರಿತು ಸೂಕ್ತ ತಿಳಿವಳಿಕೆ ನೀಡುವವರ್ಯಾರು?.

  Reply
 9. Basavaraj Tuggali  October 27, 2015 at 10:33 pm

  olleya lekhana all the best …

  Reply
 10. M. B. Nelajeri  October 30, 2015 at 7:25 am

  The place which you mentioned in the article is nearest to my village and now I feel myself a lot of ignorance and irresponsibility towards such people is not so good so what you did it is really nice you made the people to do good things to them through ur. writings. Civilisation is nothing but better all the people. Thank u behalf of nomads

  Reply
  • M. B. Nelajeri  October 30, 2015 at 9:23 am

   It is an critical note to civilized society. Civilisation is nothing but better the people. Thank u behalf of nomads.

   Reply
 11. A S Prabhakar  November 3, 2015 at 10:25 pm

  Dear kalakesh u r article is really good. Keep going.

  Reply

Leave a Reply

Your email address will not be published.